ಭದ್ರಾವತಿಯಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆ
Team Udayavani, Jan 21, 2022, 9:48 PM IST
ಭದ್ರಾವತಿ: ತಾಲೂಕಿನಲ್ಲಿ ಗುರುವಾರ 120 ಕೊರೊನಾ ಪ್ರಕರಣ ದಾಖಲಾಗಿದ್ದು ಗ್ರಾಮೀಣ ಪ್ರದೇಶಗಳಿಗಿಂತ ನಗರ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಿದೆ. ಮತ್ತೋರ್ವ ನ್ಯಾಯಾ ಧೀಶರಿಗೆ ಸೋಂಕು: ಬುಧವಾರ ಓರ್ವ ಮಹಿಳಾ ನ್ಯಾಯಾಧಿಧೀಶರು ಸೇರಿದಂತೆ15 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಕಂಡುಬಂದಿತ್ತು, ಗುರುವಾರ ಆರೋಗ್ಯ ಇಲಾಖೆ ನಡೆಸಿದ ತಪಾಸಣೆಯಿಂದಾಗಿ ಇದೇ ನ್ಯಾಯಾಲಯದ ಪುರುಷ ನ್ಯಾಯಾಧಿಧೀಶರು, ಓರ್ವ ಶಿರಸ್ತೇದಾರ್, ಶೀಘ್ರ ಲಿಪಿಗಾರರು ಸೇರಿದಂತೆ ಮತ್ತೆ ಹಲವು ನ್ಯಾಯಾಲಯದ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ಅವರೆಲ್ಲರನ್ನೂ ಹೋಂ ಐಸೋಲೇಷನ್‌ಗೆ ಒಳಪಡಿಸಲಾಗಿದೆ.
ನ್ಯಾಯಾಲಯದಲ್ಲಿ ಸೋಂಕಿತರ ಸಂಖ್ಯೆ ಏರುತ್ತಿರುವುದು ಸಿಬ್ಬಂದಿಗಳಲ್ಲಿ ಹಾಗೂ ವಕೀಲರಲ್ಲಿ ಆತಂಕ ಹೆಚ್ಚಿಸಿದ್ದು, ಉತ್ಛ ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಸ್ಥಿತಿ ಹತೋಟಿಗೆ ಬರುವ ಕೆಲ ಕಾಲ ನ್ಯಾಯಾಲ ಯವನ್ನು ಸೀಲ್ ಡೌನ್ ಮಾಡಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದಾರೆ. ತಾಲೂಕಿನಲ್ಲಿ ಶಾಲಾ- ಕಾಲೇಜುಗಳಲ್ಲಿ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದರ ಕುರಿತು ಪತ್ರಿಕೆಯು ತಹಶೀಲ್ದಾರ್ ಪ್ರದೀಪ್ ಅವರನ್ನು ಸಂಪರ್ಕಿಸಿದಾಗ ಉತ್ತರಿಸಿದ ಅವರು, ರಾಜ್ಯದೆಲ್ಲೆಡೆಯಂತೆ ಭದ್ರಾವತಿಯಲ್ಲಿ ಸಹ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.
ಆದರೆ ನಾವು ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಿದರೆ ಪಾಸಿಟಿವ್ ಪ್ರಕರಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪರೀಕ್ಷೆ ಕಡಿಮೆಗೊಳಿಸುತ್ತಿದ್ದೇವೆ ಎಂದರು. ಬಿಆರ್‌ಪಿಯಲ್ಲಿರುವ ಪಿಯು ಕಾಲೇಜಿನಲ್ಲಿ ಪಾಸಿಟಿವ್ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಆ ಕಾಲೇಜಿಗೆ ಶುಕ್ರವಾರದಿಂದ ಒಂದು ವಾರ ರಜೆ ನೀಡುವಂತೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ