ಜಯಚಾಮರಾಜೇಂದ್ರ ಆಸ್ಪತ್ರೆಯ ತೀವ್ರ ನಿಗಾ ಘಟಕ ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

Team Udayavani, Aug 9, 2022, 3:56 PM IST

16

ತೀರ್ಥಹಳ್ಳಿ: ತಾಲೂಕಿನ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದ ಕೊರತೆಯಿತ್ತು. ಶಸ್ತ್ರಚಿಕಿತ್ಸಾ ಕೊಠಡಿಯು ಮಳೆಯಿಂದ ಸೋರುತ್ತಿದ್ದು ಈ  ಕೊಠಡಿ ಸೋರದಂತೆ ಮೇಲ್ಛಾವಣಿ ಶೀಟ್‌ಗಳನ್ನು ಅಳವಡಿಸಿಲಾಗಿದ್ದು, ಇವೆರಡನ್ನೂ ಮಂಗಳವಾರ ಗೃಹಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇದೊಂದು ಸಂತೋಷದ ವಿಚಾರ. ಸಾರ್ವಜನಿಕ ಆಸ್ಪತ್ರೆಯ ಬಹಳ ದೊಡ್ಡ ಪರಿವರ್ತನೆಗೆ ಹಣ ಬಿಡುಗಡೆ ಮಾಡಿಸುವ ಮತ್ತು ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ತೀರ್ಥಹಳ್ಳಿಯಲ್ಲಿ ಜನರಿಗೆ ಸಮಸ್ಯೆ ಆಗುತ್ತಿರುವುದು ಎರಡು ವಿಭಾಗದಲ್ಲಿ, ಒಂದು ತಾಲೂಕು ಕಛೇರಿ, ಇನ್ನೊಂದು ಸರ್ಕಾರಿ ಆಸ್ಪತ್ರೆ. ಇವೆರಡೂ ತಮ್ಮ ವಿಶೇಷ ಆದ್ಯತೆಯಾಗಿದೆ.  ಹಾಗಾಗಿ ಆಸ್ಪತ್ರೆಗೆ ಮತ್ತು ತಾಲೂಕು ಕಛೇರಿಗೆ ಏನೆಲ್ಲಾ ಸೌಲಭ್ಯಗಳು ಬೇಕೋ ಅದನ್ನೆಲ್ಲ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಆಸ್ಪತ್ರೆಯ ಸಿಬ್ಬಂದಿಗಳು, ವೈದ್ಯರುಗಳು ಉತ್ತಮವಾಗಿ ಸೇವಾ ಮನೋಭಾವದಿಂದ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗೆ ಬೇಕಾದ ಸಲಕರಣೆಗಳು ಮತ್ತು ಉಪಕರಣಗಳು ಅವರ ಕೈ ಬಲಪಡಿಸಲು ಅವಶ್ಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಕೋವಿಡ್ ಸಮಯದಲ್ಲಿ ತುಂಬಾ ತೊಂದರೆ ಆಗಿದೆ. ಆಕ್ಸಿಜನ್ ಪ್ಲಾಂಟಿನ ಕಾಮಗಾರಿ ಪ್ರಾರಂಭವಾಗಿದೆ. ಈ ಆಸ್ಪತ್ರೆಯಲ್ಲಿ ಸೋರದೆ ಇರುವ ಜಾಗವನ್ನು ಹುಡುಕಬೇಕಾಗಿತ್ತು. ಅಂತಹ ಸ್ಥಿತಿಯಲ್ಲಿ ಆಸ್ಪತ್ರೆಯ ಮೇಲ್ಚಾವಣಿಯಿತ್ತು. ತನ್ನ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಇದನ್ನೆಲ್ಲವನ್ನೂ ನೀಗಿಸುತ್ತಿದ್ದೇನೆ ಎಂದು ಹೇಳಿದರು.

ಆಸ್ಪತ್ರೆ ಸ್ವಚ್ಛವಾಗಿರಬೇಕು. ಹಾಗಾಗಿ ಈ ಒಂದು ಸುಸಜ್ಜಿತವಾದ ಮೇಲ್ಛಾವಣಿಯನ್ನು ನಿರ್ಮಿಸಿದ್ದೇವೆ. ಅಷ್ಟೇ ಅಲ್ಲದೆ 1.50 ಕೋಟಿ ವೆಚ್ಚದಲ್ಲಿ 25 ಬೆಡ್‌ನ ಐಸಿಯು ತೀವ್ರ ನಿಗಾ ಘಟಕ ಕೂಡ ಉದ್ಘಾಟನೆ ಮಾಡಲಾಗಿದೆ. ಒಂದು ತಾಲೂಕು ಮಟ್ಟದ ಆಸ್ಪತ್ರೆ ಏನೆಲ್ಲಾ ಸೌಲಭ್ಯಗಳನ್ನು ಹೊಂದಬೇಕೋ ಅದೆಲ್ಲವನ್ನೂ ಈ ತಾಲೂಕಿನ ಆಸ್ಪತ್ರೆ ಹೊಂದಿರಬೇಕು ಎಂಬುದು ನನ್ನ ಆಸೆ ಎಂದರು.

ಬಡವರು, ದಲಿತರು, ಕೂಲಿ ಕಾರ್ಮಿಕರಿಗೆ ತಾಲೂಕು ಸಮಸ್ತ ಜನರಿಗೆ ಅನುಕೂಲವಾಗುವಂತೆ ಏನೆಲ್ಲಾ ಆಗಬೇಕೋ ಅದನ್ನೆಲ್ಲ ನಾನು ಈ ಸ್ಥಾನದಲ್ಲಿ ಇದ್ದಾಗ ಮಾಡುತ್ತಿದ್ದೇನೆ. ಆಸ್ಪತ್ರೆಗೆ ಇನ್ನಷ್ಟು ಸೌಲಭ್ಯಗಳು ಬೇಕಾಗಿದೆ. ಇನ್ನು ಏನೆಲ್ಲಾ ವ್ಯವಸ್ಥೆ ಬೇಕೋ ಅದನ್ನು ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇಂದು ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗುತ್ತಿದೆ. ಅದೇ ರೀತಿಯಲ್ಲಿ ಸರ್ಕಾರಿ ಆಸ್ಪತ್ರೆಯು ಉತ್ತಮ ದರ್ಜೆಗೇರಿ ಜನರಿಗೆ ಈ ಭರವಸೆ ಮೂಡಬೇಕು. ತಾಯಿ -ಮಕ್ಕಳ ಆಸ್ಪತ್ರೆ ಕೂಡ ತಾಲೂಕಿಗೆ ಬೇಕು ಅದನ್ನು ಮಂಜೂರು ಮಾಡಿಸಲು ನಾನೀಗ ಮುಂದಾಗಿದ್ದೇನೆ ಇದರ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಇನ್ನು ಆಸ್ಪತ್ರೆಯ ಸಿಬ್ಬಂದಿಗೆ ಮತ್ತು ವೈದ್ಯರುಗಳಿಗೆ ಉಳಿದುಕೊಳ್ಳಲು ಸುಸಜ್ಜಿತವಾದ ಕಟ್ಟಡ ನಿರ್ಮಿಸಿ ಕೊಟ್ಟು ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಗಲು ರಾತ್ರಿ ಸೇವೆ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ತಯಾರಿ ನಡೆಯುತ್ತಿದೆ. ಈ ನಿಟ್ಟನಲ್ಲಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ ಎಂದರು.

ಕೋವಿಡ್ ಸಂದರ್ಭದಲ್ಲಿ ಹಗಲಿರುಳು ನಿರಂತರ ಶ್ರಮ ಹಾಕಿದ ವೈದ್ಯಾಧಿಕಾರಿಗಳ ತಂಡ, ನರ್ಸ್ ಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪ. ಪಂ. ಅಧ್ಯಕ್ಷೆ ಶಬನಂ, ಜಯಪ್ರಕಾಶ್ ಶೆಟ್ಟಿ, ಡಾ. ನಾರಾಯಣ ಸ್ವಾಮಿ, ಡಾ. ಗಣೇಶ ಭಟ್, ಬಾಳೇಬೈಲು ರಾಘವೇಂದ್ರ, ನಾಗರಾಜ್ ಶೆಟ್ಟಿ, ಸಂದೇಶ್ ಜವಳಿ, ಡಾ. ನಟರಾಜ್, ಬಾಳೇಬೈಲು ಸಂತೋಷ್ ಶೆಟ್ಟಿ, ಸಂತೋಷ್ ದೇವಾಡಿಗ, ಪ. ಪಂ. ಸದಸ್ಯರೆಲ್ಲರೂ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪರಿಚಯ; ಯುವಕನಿಂದ ಲೈಂಗಿಕ ದೌರ್ಜನ್ಯ

ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪರಿಚಯ; ಯುವಕನಿಂದ ಲೈಂಗಿಕ ದೌರ್ಜನ್ಯ

ಉಚ್ಚಿಲ: ವರದಕ್ಷಿಣೆ ಕಿರುಕುಳ, ಕೊಲೆ ಯತ್ನ

ಉಚ್ಚಿಲ: ವರದಕ್ಷಿಣೆ ಕಿರುಕುಳ, ಕೊಲೆ ಯತ್ನ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ರ್‍ಯಾಂಕಿಂಗ್‌: 5ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ ಕೌರ್‌

ರ್‍ಯಾಂಕಿಂಗ್‌: 5ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ ಕೌರ್‌

ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌: 9ನೇ ಸ್ಥಾನದಲ್ಲಿ ಲಕ್ಷ್ಯ ಸೇನ್‌

ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌: 9ನೇ ಸ್ಥಾನದಲ್ಲಿ ಲಕ್ಷ್ಯ ಸೇನ್‌

ಭಾರತ-ಪಾಕ್‌ ಟೆಸ್ಟ್‌ ಸರಣಿ: ತಟಸ್ಥ ತಾಣ: ಇಂಗ್ಲೆಂಡ್‌ ಕೊಡುಗೆ

ಭಾರತ-ಪಾಕ್‌ ಟೆಸ್ಟ್‌ ಸರಣಿ: ತಟಸ್ಥ ತಾಣ: ಇಂಗ್ಲೆಂಡ್‌ ಕೊಡುಗೆ

ಪುರುಷರ ಹಾಕಿ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ; ಸ್ಪೇನ್​ ವಿರುದ್ಧ ಭಾರತದ ಮೊದಲ ಪಂದ್ಯ

ಪುರುಷರ ಹಾಕಿ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ; ಸ್ಪೇನ್​ ವಿರುದ್ಧ ಭಾರತದ ಮೊದಲ ಪಂದ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿಎಫ್ಐ ನಿಷೇಧಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಆರಗ ಜ್ಞಾನೇಂದ್ರ

ಪಿಎಫ್ಐ ನಿಷೇಧಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಆರಗ ಜ್ಞಾನೇಂದ್ರ

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ

ತೀರ್ಥಹಳ್ಳಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

1-dsadasw

ಶಿಕಾರಿಪುರ: ಹನ್ನೊಂದು ತಿಂಗಳ ಮಗು ತೊಟ್ಟಿಯಲ್ಲಿ ಬಿದ್ದು ಸಾವು

aane

ಶಿವಮೊಗ್ಗದಲ್ಲಿ ವಿದ್ಯುತ್ ತಗುಲಿ ಎರಡು ಕಾಡಾನೆ ಸಾವು: ಕರೆಂಟ್ ಕೊಟ್ಟಾತ ಅಧಿಕಾರಿಗಳ ವಶಕ್ಕೆ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪರಿಚಯ; ಯುವಕನಿಂದ ಲೈಂಗಿಕ ದೌರ್ಜನ್ಯ

ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪರಿಚಯ; ಯುವಕನಿಂದ ಲೈಂಗಿಕ ದೌರ್ಜನ್ಯ

ಉಚ್ಚಿಲ: ವರದಕ್ಷಿಣೆ ಕಿರುಕುಳ, ಕೊಲೆ ಯತ್ನ

ಉಚ್ಚಿಲ: ವರದಕ್ಷಿಣೆ ಕಿರುಕುಳ, ಕೊಲೆ ಯತ್ನ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ರ್‍ಯಾಂಕಿಂಗ್‌: 5ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ ಕೌರ್‌

ರ್‍ಯಾಂಕಿಂಗ್‌: 5ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ ಕೌರ್‌

ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌: 9ನೇ ಸ್ಥಾನದಲ್ಲಿ ಲಕ್ಷ್ಯ ಸೇನ್‌

ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌: 9ನೇ ಸ್ಥಾನದಲ್ಲಿ ಲಕ್ಷ್ಯ ಸೇನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.