ಅಂತರ್‌ ಜಿಲ್ಲಾ ಬಸ್‌ ಸಂಚಾರ ಪುನರಾರಂಭ


Team Udayavani, May 20, 2020, 6:58 AM IST

ಅಂತರ್‌ ಜಿಲ್ಲಾ ಬಸ್‌ ಸಂಚಾರ ಪುನರಾರಂಭ

ಶಿವಮೊಗ್ಗ: ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಅಂತರ ಜಿಲ್ಲಾ ಬಸ್‌ ಸಂಚಾರ ಪುನಾರಂಭವಾಗಿದೆ. ಶಿವಮೊಗ್ಗ ಬಸ್‌ ನಿಲ್ದಾಣದಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಬಸ್ಸುಗಳು ತೆರಳುತ್ತಿವೆ. ಇನ್ನು, ಬಸ್‌ ಹತ್ತುವ ಪ್ರಯಾಣಿಕರು ಕಡ್ಡಾಯವಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಿದೆ.

ಬೆಂಗಳೂರು, ಹುಬ್ಬಳ್ಳಿ, ಹರಿಹರ, ಶೃಂಗೇರಿ, ಚಿಕ್ಕಮಗಳೂರು, ಚಿತ್ರದುರ್ಗಕ್ಕೆ ಶಿವಮೊಗ್ಗ  ದಿಂದ ಬಸ್‌ ಸಂಚಾರ ಆರಂಭವಾಗಿದೆ. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಬಸ್‌ ಸಂಚಾರ ಶುರುವಾಗಿದೆ. ಬೆಂಗಳೂರಿನ ಕಡೆಗೆ ಹೆಚ್ಚು ಪ್ರಯಾಣಿಕರಿದ್ದಾರೆ. ಹಾಗಾಗಿ ಬೆಂಗಳೂರಿಗೆ ಹೆಚ್ಚಿನ ಬಸ್ಸುಗಳು ತೆರಳುತ್ತಿವೆ. ಮೊದಲಿನಿಂತೆ ಎಲ್ಲೆಂದರಲ್ಲಿ ಬಸ್ಸುಗಳನ್ನು ನಿಲ್ಲಿಸುವುದಿಲ್ಲ. ಬೆಂಗಳೂರಿಗೆ ಹೊರಡುವ ಬಸ್ಸುಗಳು ಕಡೂರು, ಬೀರೂರು ಸೇರಿದಂತೆ ಬೇರೆಲ್ಲೂ ಸ್ಟಾಪ್‌ ಕೊಡುವುದಿಲ್ಲ. ನೇರವಾಗಿ ಬೆಂಗಳೂರಿಗೆ ತೆರಳಲಿವೆ. ಮತ್ತೂಂದೆಡೆ ದಾವಣಗೆರೆಗೆ ಬಸ್ಸುಗಳಿಲ್ಲ. ಹರಿಹರಕ್ಕೆ ಮಾತ್ರ ತೆರಳಲಿವೆ. ಊಟ, ತಿಂಡಿ, ಕಾಫಿಗೆ ಎಂದು ಸ್ಟಾಪ್‌ ಕೊಡುವುದಿಲ್ಲ. ಶಿವಮೊಗ್ಗದಿಂದ ಬೆಂಗಳೂರಿಗೆ ಹೆಚ್ಚು ಬಸ್ಸುಗಳು ತೆರಳುತ್ತಿವೆ. ಆದರೆ ರಾಜ್ಯ ಸರ್ಕಾರ ಸಂಜೆ 7 ಗಂಟೆ ಬಳಿಕ ಯಾವುದೇ ಬಸ್ಸುಗಳು ಸಂಚಾರ ಮಾಡುವಂತಿಲ್ಲ ಎಂದು ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕಡೆಗೆ ಮಧ್ಯಾಹ್ನ 12.30ಕ್ಕೆ ಕೊನೆಯ ಬಸ್‌ ಹೊರಡಲಿದೆ ಎಂದು ಕೆಎಸ್‌ಆರ್‌ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸತೀಶ್‌ ತಿಳಿಸಿದ್ದಾರೆ. ಈ ನಿಯಮದ ಕಾರಣ ಮೊದಲ ಹಂತದಲ್ಲಿ ನಿಗದಿತ ಮಾರ್ಗಗಳು ಹೊರತು ಬೇರೆ ಮಾರ್ಗಗಳಿಗೆ ಬಸ್‌ ಪ್ರಯಾಣ ಆರಂಭಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಿದೆ. ಇಲ್ಲವಾದಲ್ಲಿ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವುದಿಲ್ಲ. ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿಲ್ಲಬೇಕು. ಬಸ್‌ ಹತ್ತುವ ಮೊದಲು ಥರ್ಮಲ್‌ ಟೆಸ್ಟ್‌ ನಡೆಸಲಾಗುತ್ತದೆ. ಕೈಗಳಿಗೆ ಸ್ಯಾನಿಟೈಸರ್‌ ಹಾಕಲಾಗುತ್ತದೆ. ಅಲ್ಲದೆ ಪ್ರಯಾಣಿಕರ ವಿಳಾಸ, ಫೋನ್‌ ನಂಬರ್‌ ಸೇರಿದಂತೆ ಅಗತ್ಯ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಬಸ್ಸಿನಲ್ಲಿ ಮೂವರು ಕೂರುವ ಸೀಟ್‌ನಲ್ಲಿ ಇಬ್ಬರು, ಇಬ್ಬರು ಕೂರುವ ಸೀಟ್‌ನಲ್ಲಿ ಒಬ್ಬರು ಮಾತ್ರ ಕುಳಿತು ಪ್ರಯಾಣಿಸಬೇಕಿದೆ. ಹಾಗಾಗಿ ಪ್ರತಿ ಬಸ್‌ಗೆ ಕೇವಲ 30 ಪ್ರಯಾಣಿಕರನ್ನಷ್ಟೇ ಹತ್ತಿಸಲಾಗುತ್ತಿದೆ.

ಬಸ್‌ ಡ್ರೈವರ್‌ ಮತ್ತು ಕಂಡಕ್ಟರ್‌ಗಳು ಮಾಸ್ಕ್, ಗ್ಲೌಸ್‌ಗಳನ್ನು ತೊಡುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಚಾಲಕ, ಕಂಡಕ್ಟರ್‌ಗಳೆಲ್ಲ ಮಾಸ್ಕ್, ಗ್ಲೌಸ್‌ ತೊಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ.

ಟಾಪ್ ನ್ಯೂಸ್

hgfjghgfds

ಗೋಲ್ಡನ್ ಸ್ಟಾರ್ ನಟನೆಯ ‘ಸಖತ್’ ಚಿತ್ರದ ಟೀಸರ್ ಬಿಡುಗಡೆ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಚಿಕ್ಕಬಳ್ಳಾಪುರ ಭಾರೀ ಮಳೆ : ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ಚಿಕ್ಕಬಳ್ಳಾಪುರ ಭಾರೀ ಮಳೆ: ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

dks

ಸಿದ್ದರಾಮಯ್ಯ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ?;ಬಿಜೆಪಿ ಪ್ರಶ್ನೆ

ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ ಗೆದ್ದವರಿಗೆ ಟ್ರೋಪಿ, ನೋವು ನಿವಾರಕ ಮುಲಾಮ್ ಬಹುಮಾನ

ಕಾರ್ಕಳ: ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ: ಗೆದ್ದವರಿಗೆ ಟ್ರೋಫಿ,ನೋವು ನಿವಾರಕ ಮುಲಾಮ್

655-aaa

3 ಹೆಣ್ಣು ಹೆತ್ತಿದ್ದಕ್ಕೆ ಕಿರುಕುಳ : ಮಕ್ಕಳೊಂದಿಗೆ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sagara news

ಸಾಲುಮರಗಳ ಕಡಿತಲೆಗೆ ಆಕ್ಷೇಪ ಸಲ್ಲ

25fine

ಮಾಹಿತಿ ಕೊಡದ ಎಸಿಗೆ ಐದು ಸಾವಿರ ರೂ. ದಂಡ

ಬಿಜೆಪಿ ಆಡಳಿತದಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದರಾಮಯ್ಯ

ಬಿಜೆಪಿ ಆಡಳಿತದಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದರಾಮಯ್ಯ

ಶಂಕಿತ ಉಗ್ರ ಸದ್ದಾಂ ಹುಸೇನ್‌ ಪತ್ನಿ ಸೆರೆ

ಶಂಕಿತ ಉಗ್ರ ಸದ್ದಾಂ ಹುಸೇನ್‌ ಪತ್ನಿ ಸೆರೆ

shivamogga news

ಭಟ್ಕಳದ ಶಂಕಿತ ಉಗ್ರ ಸದ್ದಾಂ ಹುಸೇನ್ ಪತ್ನಿ ಶಾಹಿರಾ ಬಂಧನ

MUST WATCH

udayavani youtube

ಉಕ್ಕಿ ಹರಿಯುತ್ತಿದೆ ಚಿಕ್ಕಬಳ್ಳಾಪುರದ ರಂಗಧಾಮ ಕೆರೆ..!

udayavani youtube

ಕೆರೆಯ ಮೇಲೆ ಆಂಬ್ಯುಲೆನ್ಸ್ ಹೋಗಲು ಸಹಾಯ ಮಾಡಿದ ಸಾರ್ವಜನಿಕರು

udayavani youtube

ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

ಹೊಸ ಸೇರ್ಪಡೆ

hgfjghgfds

ಗೋಲ್ಡನ್ ಸ್ಟಾರ್ ನಟನೆಯ ‘ಸಖತ್’ ಚಿತ್ರದ ಟೀಸರ್ ಬಿಡುಗಡೆ

15folk

ಜಾನಪದ ಶೈಲಿಯಲಿ ಒಡ್ಡೋಲಗದ ಆಮಂತ್ರಣ

gudibande news

ನೀರಿನಲ್ಲಿ ಸಿಲುಕಿಕೊಂಡಿದ್ದ ಆಂಬ್ಯುಲೆನ್ಸ್ ತಳ್ಳಿ ಮಾನವೀಯತೆ ಮೆರೆದ ಸಾರ್ವಜನಿಕರು

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.