
Shivamogga: VISL ಫ್ಯಾಕ್ಟರಿ ಬಳಿ ಬೋನಿಗೆ ಬಿದ್ದ ಚಿರತೆ ಮರಿ… ತಾಯಿ ಚಿರತೆ ಇರುವ ಶಂಕೆ
Team Udayavani, Sep 27, 2023, 12:19 PM IST

ಶಿವಮೊಗ್ಗ: ಕೆಲ ತಿಂಗಳುಗಳಿಂದ ಭದ್ರಾವತಿ ವಿಐಎಸ್ಎಲ್ ಫ್ಯಾಕ್ಟರಿಯಲ್ಲಿ ಬಳಿ ಚಿರತೆಯೊಂದು ಕಾಣಿಸಿಕೊಳ್ಳುತ್ತಿದ್ದು ಇದೀಗ ಚಿರತೆ ಮರಿಯೊಂದು ಬುಧವಾರ ಬೆಳಗ್ಗೆ ಬೋನಿಗೆ ಬಿದ್ದಿದೆ.
ವಿಐಎಸ್ಎಲ್ ಕಾರ್ಖಾನೆ ಆವರಣದೊಳಗೆ ಆಗಾಗ ಚಿರತೆ ಕಾಣಿಸಿಕೊಂಡು ಕಾರ್ಮಿಕರಲ್ಲಿ ಭೀತಿ ಮೂಡಿಸುತಿತ್ತು. ಎರಡು ತಿಂಗಳ ಹಿಂದೆ ವೇಯಿಂಗ್ ಬ್ರಿಡ್ಜ್ ಬಳಿ ಚಿರತೆ ಕಾಣಿಸಿಕೊಂಡಿತ್ತು. ಇದನ್ನು ಕಾರ್ಮಿಕರು ವಿಡಿಯೋ ಮಾಡಿದ್ದರು. ಅರಣ್ಯ ಇಲಾಖೆ ಚಿರತೆ ಹಿಡಿಯಲು ಒಂದೂವರೆ ತಿಂಗಳ ಹಿಂದೆ ಬೋನು ಇರಿಸಲಾಗಿತ್ತು. ಬುಧವಾರ ಪೀಕಾಕ್ ಯಾರ್ಡ್ ಬಳಿ ಇರಿಸಿದ್ದ ಬೋನಿಗೆ ಎರಡು ವರ್ಷದೊಳಗಿನ ಮರಿ ಚಿರತೆಯೊಂದು ಬಿದ್ದಿದೆ ಎಂದು ಆರ್ ಎಫ್ಒ ಸ್ಪಷ್ಪಪಡಿಸಿದ್ದಾರೆ.
ಮರಿ ಚಿರತೆ ಬೋನಿಗೆ ಬಿದ್ದಿದ್ದು ತಾಯಿ ಚಿರತೆ ಇರುವ ಶಂಕೆ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ: CM Siddaramaiah: ವ್ಯವಸಾಯಕ್ಕೆಂದು ಸಾಲ ಮಾಡಿ ಅದ್ದೂರಿ ಮದುವೆ ಮಾಡುವುದು ನಿಲ್ಲಿಸಿ: ಸಿಎಂ
ಟಾಪ್ ನ್ಯೂಸ್
