ಬಿಎಸ್ ವೈ ಮತ್ತೆ ಸಿಎಂ ಆಗಲಿ; ಅಭಿಮಾನಿಗಳಿಂದ ಶಿವಮೊಗ್ಗದಲ್ಲಿ ಹೋಮ, ಹವನ
Team Udayavani, Jul 17, 2019, 3:48 PM IST
ಶಿವಮೊಗ್ಗ:ಭಾರತೀಯ ಜನತಾ ಪಕ್ಷ ಅಧಿಕಾರಕ್ಕೇರುವ ಮೂಲಕ ಬಿಎಸ್ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಶಿವಮೊಗ್ಗ ಜಿಲ್ಲಾ ಅರ್ಚಕರ ಸಂಘದಿಂದ ಜಯಾದಿ ಹಾಗೂ ನವಗ್ರಹ ಹೋಮ ನಡೆಯಿತು.
ಬುಧವಾರ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಬಿಎಸ್ ಯಡಿಯೂರಪ್ಪ ಅಭಿಮಾನಿ ಬಳಗ, ಬಿಎಸ್ ವೈ ಪುತ್ರಿ ಎಸ್.ವೈ.ಅರುಣಾದೇವಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.
ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರದ ಆವರಣದಲ್ಲಿರುವ ನಿಜಲಿಂಗಪ್ಪ ಸಭಾಂಗಣದಲ್ಲಿ ಹೋಮ, ಹವನ ನಡೆಯಿತು.