Udayavni Special

ಲಾಕ್‌ಡೌನ್‌ ಯಶಸ್ವಿ


Team Udayavani, Jul 13, 2020, 3:54 PM IST

ಲಾಕ್‌ಡೌನ್‌ ಯಶಸ್ವಿ

ಶಿವಮೊಗ್ಗ: ಸಂಡೇ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಬ್ಯಾರಿಕೇಡ್‌ ಹಾಕುವ ಮೂಲಕ ವಾಹನ ಸಂಚಾರ ತಡೆಗಟ್ಟುವಲ್ಲಿ ಪೊಲೀಸ್‌ ಇಲಾಖೆ ಯಶಸ್ವಿಯಾಗಿದೆ. ಉಳಿದಂತೆ ಗಲ್ಲಿ- ರಸ್ತೆಗಳಲ್ಲಿ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರ ಓಡಾಟ ಕಂಡುಬಂದಿತು.

ಅಶೋಕ ಸರ್ಕಲ್‌: ಸದಾ ಜನ ಮತ್ತು ವಾಹನ ದಟ್ಟಣೆ ಇರುವ ಸರ್ಕಲ್‌ ಇದು. ಕಳೆದ ಭಾನುವಾರದ ಹಾಗೆ ಬಸ್ಸುಗಳು ರಸ್ತೆಗಿಳಿದಿರಲಿಲ್ಲ. ವಾಹನ ಸಂಖ್ಯೆಯೂ ವಿರಳವಾಗಿತ್ತು. ಬಸ್‌ ನಿಲ್ದಾಣದ ಮುಂದಿನ ಅಂಗಡಿಗಳು, ಹೊಟೇಲ್‌ ಗಳು ಬಂದ್‌ ಆಗಿದ್ದವು. ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದರು.

ಎನ್‌.ಟಿ. ರೋಡ್‌ ಮತ್ತು ಸಾಗರ ರಸ್ತೆ : ಅಶೋಕ ಸರ್ಕಲ್‌ಗೆ ಹೊಂದಿಕೊಂಡಂತೆ ಇರುವ ಎನ್‌.ಟಿ. ರಸ್ತೆ ಮತ್ತು ಸಾಗರ ರಸ್ತೆಯಲ್ಲೂ ವಾಹನಗಳ ಸಂಖ್ಯೆ ಕಡಿಮೆ ಇತ್ತು. ಈ ರಸ್ತೆಯಲ್ಲೂ ಅಂಗಡಿ, ಹೊಟೇಲ್‌ಗ‌ಳು ಬಂದ್‌ ಆಗಿದ್ದರಿಂದ ಜನ ಸಂಚಾರವೂ ಕಡಿಮೆ ಇತ್ತು.

ಬಿ.ಎಚ್‌. ರೋಡ್‌ ಸೈಲೆಂಟ್‌: ಕಳೆದ ಭಾನುವಾರಕ್ಕೆ ಹೋಲಿಸಿದರೆ ಶಿವಮೊಗ್ಗದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿತ್ತು. ಆದರೆ ರಸ್ತೆಯ ಕೆಲವು ಕಡೆ ಪೊಲೀಸ್‌ ಬ್ಯಾರಿಕೇಡ್‌ ಕಂಡು ಜನರು ಹಿಂತಿರುಗುತ್ತಿದ್ದರು.

ಗಾಂಧಿಬಜಾರ್‌ನಲ್ಲೂ ಜನ ಸಂಚಾರ: ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ  ಬಜಾರ್‌ನಲ್ಲಿ ಜನ ಮತ್ತು ವಾಹನ ಸಂಚಾರವಿತ್ತು. ತರಕಾರಿ ಖರೀದಿಗೆ, ಅಗತ್ಯ ವಸ್ತುಗಳ ಖರೀದಿಗೆ ಜನರು ಬರುತ್ತಿದ್ದರು. ಮತ್ತೂಂದೆಡೆ ಶಿವಪ್ಪ ನಾಯಕ ಹೂವಿನ ಮಾರುಕಟ್ಟೆಯಲ್ಲಿ ಕೆಲವು ವ್ಯಾಪಾರಿಗಳು ಹೂವು ಮತ್ತು ಹಾರ ಮಾರಾಟ ಮಾಡುತ್ತಿದ್ದರು.

ಅಮೀರ್‌ ಅಹಮದ್‌ ಸರ್ಕಲ್‌ ಬಂದ್‌: ಪ್ರಮುಖ ಸರ್ಕಲ್‌ನಲ್ಲಿ ಸಂಪೂರ್ಣ ಬ್ಯಾರಿಕೇಡ್‌ ಹಾಕಲಾಗಿತ್ತು. ಸರ್ಕಲ್‌ ಸುತ್ತಲೂ ಬ್ಯಾರಿಕೇಡ್‌ ಹಾಕಲಾಗಿದ್ದು ಯಾವುದೇ ಮಾರ್ಗದಿಂದ ಬಂದರೂ ಸರ್ಕಲ್‌ಗೆ ಬರಲು ಸಾಧ್ಯವಿರಲಿಲ್ಲ.

ನೆಹರೂ ರಸ್ತೆ, ಗೋಪಿ ಸರ್ಕಲ್‌: ನೆಹರೂ ರಸ್ತೆಯಲ್ಲಿ ಎಲ್ಲ ಅಂಗಡಿಗಳು ಬಂದ್‌ ಆಗಿದ್ದವು. ಹಾಲು ಮಾರಾಟ ಮಳಿಗೆ ಮತ್ತು ಮೆಡಿಕಲ್‌ ಶಾಪ್‌ಗ್ಳನ್ನು ಮಾತ್ರ ಓಪನ್‌ ಮಾಡಲಾಗಿತ್ತು. ಉಳಿದಂತೆ ವಾಹನ ಸಂಚಾರ ಕಡಿಮೆ ಇತ್ತು. ಅಲ್ಲದೆ ಗೋಪಿ ಸರ್ಕಲ್‌ನಲ್ಲೂ ಬ್ಯಾರಿಕೇಡ್‌ ಹಾಕಲಾಗಿತ್ತು.

ದುರ್ಗಿಗುಡಿ, ಜೈಲ್‌ ರೋಡ್‌: ನಗರದಾದ್ಯಂತ ಜನ ಸಂಚಾರ ಕಡಿಮೆ ಇತ್ತು. ಆದರೆ ದುರ್ಗಿಗುಡಿ ಮತ್ತು ಜೈಲ್‌ ರೋಡ್‌ನ‌ಲ್ಲಿ ಜನ ಸಂಚಾರ ಹೆಚ್ಚಿತ್ತು. ಜೈಲ್‌ ರಸ್ತೆಯಲ್ಲಿ ಪ್ರತಿ ಭಾನುವಾರದಂತೆಯೇ ಭಾನುವಾರ ಕೂಡ ಜನ ಮತ್ತು ವಾಹನ ದಟ್ಟಣೆ ಇತ್ತು. ಉಳಿದಂತೆ ನಗರದ ಕುವೆಂಪು ರಸ್ತೆಯಲ್ಲಿ ಜನ ಸಂಚಾರ ಕಂಡುಬಂದಿತು. ಆಸ್ಪತ್ರೆಗಳು ಇರುವ ಕಾರಣ ಇಲ್ಲಿ ಜನ ಮತ್ತು ವಾಹನಗಳ ಓಡಾಟವಿತ್ತು. ಸವಳಂಗ ರಸ್ತೆಯಲ್ಲೂ ವಾಹನಗಳ ಸಂಚಾರ ಕಡಿಮೆಯಾಗಿತ್ತು.

ವಿನೋಬನಗರ ನೂರು ಅಡಿ ರಸ್ತೆಯ ಲಕ್ಷ್ಮೀ ಟಾಕೀಸ್‌ ಸಮೀಪ ಜನ ಸಂಚಾರ ಹೆಚ್ಚಿತ್ತು. ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಅನಗತ್ಯವಾಗಿ ಓಡಾಡುವವರನ್ನು ವಾಪಸ್‌ ಕಳುಹಿಸುತ್ತಿದ್ದ ಕಂಡುಬಂತು.

ಟಾಪ್ ನ್ಯೂಸ್

ಕರಾವಳಿಯಲ್ಲಿ ಭಾರೀ ಮಳೆ; ಸಂಚಾರಕ್ಕೆ ತೊಂದರೆ

ಕರಾವಳಿಯಲ್ಲಿ ಭಾರೀ ಮಳೆ; ಸಂಚಾರಕ್ಕೆ ತೊಂದರೆ

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

ಪ್ರಾಚ್ಯವಸ್ತು ಸಂರಕ್ಷಣೆಗೆ ವಿಶ್ವದರ್ಜೆಯ ತಂತ್ರಜ್ಞಾನ

ಪ್ರಾಚ್ಯವಸ್ತು ಸಂರಕ್ಷಣೆಗೆ ವಿಶ್ವದರ್ಜೆಯ ತಂತ್ರಜ್ಞಾನ

cmಮನೆ ಬಾಗಿಲಿಗೆ ಜನಸೇವಕ; ಉನ್ನತ ಅಧಿಕಾರಿಗಳ ಭೇಟಿ, ಸಮಸ್ಯೆಗೆ ಪರಿಹಾರ

ಮನೆ ಬಾಗಿಲಿಗೆ ಜನಸೇವಕ; ಉನ್ನತ ಅಧಿಕಾರಿಗಳ ಭೇಟಿ, ಸಮಸ್ಯೆಗೆ ಪರಿಹಾರ

ಪ್ರವಾಸಕ್ಕೆ ರಜೆ ಇಂಬು; ಕರಾವಳಿಯ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನಸಂದಣಿ

ಪ್ರವಾಸಕ್ಕೆ ರಜೆ ಇಂಬು; ಕರಾವಳಿಯ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನಸಂದಣಿ

ಉಗ್ರರ ದಾಳಿಗೆ ಮತ್ತಿಬ್ಬರು ಬಲಿ; ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರ ಅಟ್ಟಹಾಸ

ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರ ಅಟ್ಟಹಾಸ; ಉಗ್ರರ ದಾಳಿಗೆ ಮತ್ತಿಬ್ಬರು ಬಲಿ

ಉಗ್ರರಿಂದ 200 ಮಂದಿಯ ಹಿಟ್‌ ಲಿಸ್ಟ್‌!

ಉಗ್ರರಿಂದ 200 ಮಂದಿಯ ಹಿಟ್‌ ಲಿಸ್ಟ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nayi

ಸಿಸಿ ಕ್ಯಾಮರಾ, ಸಾಮಾಜಿಕ ಜಾಲತಾಣಗಳಿಂದ ನಾಯಿಮರಿ ಪತ್ತೆ!

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ವಿಜೃಂಭಣೆಯ ವಿಜಯ ದಶಮಿ ಮೆರವಣಿಗೆ

ವಿಜೃಂಭಣೆಯ ವಿಜಯ ದಶಮಿ ಮೆರವಣಿಗೆ

shivamogga news

ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆಗೆ ನಿರ್ಧಾರ

12

ಗೋ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಎಂ.ಎಸ್. ಕಾಳಿಂಗರಾಜ್

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಕರಾವಳಿಯಲ್ಲಿ ಭಾರೀ ಮಳೆ; ಸಂಚಾರಕ್ಕೆ ತೊಂದರೆ

ಕರಾವಳಿಯಲ್ಲಿ ಭಾರೀ ಮಳೆ; ಸಂಚಾರಕ್ಕೆ ತೊಂದರೆ

ಗಾಂಧಿ, ಮೋದಿ ಚಿಂತನೆ ಕುಕ್ಕೆಯಿಂದ ಈಡೇರುತ್ತಿದೆ: ನಳಿನ್‌ ಕುಮಾರ್‌

ಗಾಂಧಿ, ಮೋದಿ ಚಿಂತನೆ ಕುಕ್ಕೆಯಿಂದ ಈಡೇರುತ್ತಿದೆ: ನಳಿನ್‌ ಕುಮಾರ್‌

ಎರಡು ಕೋಟಿ ಮಂದಿ ಕೋವಿಡ್‌ ಲಸಿಕೆ ಪೂರ್ಣ

ಎರಡು ಕೋಟಿ ಮಂದಿ ಕೋವಿಡ್‌ ಲಸಿಕೆ ಪೂರ್ಣ

ಕಾಂಗ್ರೆಸ್‌, ದೇಶದ್ರೋಹಿಗಳಿಗೆ ಜಾಗವಿಲ್ಲ: ಸಂಸದೆ ಪ್ರಜ್ಞಾ ಠಾಕೂರ್‌

ಕಾಂಗ್ರೆಸ್‌, ದೇಶದ್ರೋಹಿಗಳಿಗೆ ಜಾಗವಿಲ್ಲ: ಸಂಸದೆ ಪ್ರಜ್ಞಾ ಠಾಕೂರ್‌

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.