MUDA Scam; ಮುಖ್ಯಮಂತ್ರಿಗೆ ರಾಜೀನಾಮೆ ಕೊಡುವ ಅನಿವಾರ್ಯತೆ ಬಂದಿದೆ: ಬಿ.ವೈ.ರಾಘವೇಂದ್ರ

Team Udayavani, Aug 9, 2024, 1:13 PM IST

B. Y. Raghavendra

ಶಿವಮೊಗ್ಗ: ಪಾದಯಾತ್ರೆಯಲ್ಲಿ ದಿನ ದಿನ ಸಂಖ್ಯೆ ಹೆಚ್ಚಾಗುತ್ತದೆ. ಉತ್ತಮ ಸ್ಪಂದನೆ ಸಿಗುತ್ತಿದೆ. ಮುಡಾದಲ್ಲಿ ಮುಖ್ಯಮಂತ್ರಿ ಕುಟುಂಬ ಸೈಟ್ ಪಡೆದಿದೆ. 4-5 ಸಾವಿರ ಕೋಟಿ ಹಗರಣ ನಡೆದಿದೆ. ಮುಖ್ಯಮಂತ್ರಿ ಬಗ್ಗೆ ಗೌರವ ಇದೆ. ಅವರ ಮೇಲೆ ಆರೋಪ ಬಂದಿದೆ. ಧಮಕಿ ಹಾಕುವ ಕೆಲಸ ಕಾಂಗ್ರೆಸ್ ನವರು ಮಾಡ್ತಿದ್ದಾರೆ. ಮುಖ್ಯಮಂತ್ರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ‌ಕೊಡುವ ಪ್ರಸಂಗ ಬರುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶುಕ್ರವಾರ (ಆ.09) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ. ಇತಿಹಾಸದಲ್ಲಿ ಒಂದು ವಿರೋಧ ಪಕ್ಷದ ವಿರುದ್ಧ ಒಂದು ಆಡಳಿತ ಪಕ್ಷ ಸಮಾವೇಶವನ್ನು ಮಾಡುತ್ತಿದೆ. ಒಂದು ಆಡಳಿತ ಪಕ್ಷವಾಗಿ ಅಭಿವೃದ್ಧಿ ಮಾಡಲು ಅವಕಾಶ ಕೊಟ್ಟು ವಿರೋಧ ಪಕ್ಷವಾಗಿ ಕೆಲಸ ನಾವು ಮಾಡುತ್ತಿದ್ದೇವೆ. ಜನ ಸ್ಪಂದನೆ ನೋಡಿದರೆ ಮುಖ್ಯಮಂತ್ರಿ ರಾಜೀನಾಮೆ ಕೊಡುವ ಅನಿವಾರ್ಯತೆ ಬರುತ್ತದೆ ಎಂದರು.

ಹಾಸನದಲ್ಲಿ ಪ್ರೀತಮ್ ಗೌಡ ಹಾಗೂ ಹೆಚ್ ಡಿ ಕೆ ಬೆಂಬಲಿಗರ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು, ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲಿ ವ್ಯತ್ಯಾಸವಿರುತ್ತದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿಯವರು ಒಂದಾಗಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದೇವೆ. ಈ ರೀತಿಯ ಸಣ್ಣ ಪುಟ್ಟ ಸಮಸ್ಯೆಗಳು ಬಂದಾಗ ಕುಳಿತು ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದರು.

ವಕ್ಪ್ ಆಸ್ತಿ ವಿಚಾರವಾಗಿ ಮಾತನಾಡಿ, ಅನೇಕ ವರ್ಷಗಳಿಂದ ಸ್ವಾತಂತ್ರ್ಯ ನಂತರ ವಕ್ಫ್ ಸಮಿತಿ ರಚನೆ ಮಾಡಿದ್ದರು. ವಕ್ಪ್ ಆಸ್ತಿ ಬಗ್ಗೆ ಸುಪ್ರೀಂ ಕೋರ್ಟ್ ಸಹ ಪ್ರಶ್ನೆ ಮಾಡುವ ಅವಕಾಶ ಇಲ್ಲ. ಅಂತಹ ಅಧಿಕಾರ ಕಾಂಗ್ರೆಸ್ ಕೊಟ್ಟಿತ್ತು. ವಕ್ಫ್ ನಲ್ಲಿ ಮಹಿಳೆಯರಿಗೆ ಅವಕಾಶ ಮಾಡಿಕೊಡಬೇಕು. ವಕ್ಫ್ ಆಸ್ತಿ 1.5 ಲಕ್ಷ ಎಕರೆಯಿಂದ 9 ಲಕ್ಷ ಎಕರೆಗೆ ಏರಿಕೆ ಆಗಿದೆ. ಬಡವರಿಗೂ ನ್ಯಾಯ ಸಿಗುವ ಕೆಲಸ ಆಗಬೇಕು ಎಂದರು.

ಬೀಗ ಹಾಕಿದರೆ ಕಾಂಗ್ರೆಸ್‌ ಕಾರಣ

ಶಿವಮೊಗ್ಗ ವಿಮಾನ ನಿಲ್ದಾಣ ನೈಟ್ ಲ್ಯಾಂಡಿಂಗ್ ಕಾಮಗಾರಿ‌ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರಾಘವೇಂದ್ರ, ಸರಕಾರ ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ ಬಿಲ್ ಬಿಡುಗಡೆ ಮಾಡಿಲ್ಲ. ಹೀಗಾಗಿ ಕಾಮಗಾರಿ ವಿಳಂಬವಾಗುತ್ತಿದೆ. ನಾಳೆ ಶಿವಮೊಗ್ಗ ಏರ್ ಪೋರ್ಟ್ ಗೆ ಬೀಗ ಹಾಕುವ ಪರಿಸ್ಥಿತಿ ಬಂದರೆ ಅದಕ್ಕೆ ‌ಕಾಂಗ್ರೆಸ್ ಸರಕಾರ ಕಾರಣವಾಗುತ್ತದೆ. ಕಾಂಗ್ರೆಸ್‌ ನವರು ಆರೋಪ ಮಾಡುವ ಪ್ರಮೇಯವೇ ಇಲ್ಲ. 99 ರಷ್ಟು ಕೆಲಸಗಳು ಮುಗಿದು ಹೋಗಿವೆ. ಕೇವಲ ಒಂದು ಪರ್ಸೆಂಟ್ ನಷ್ಟು ಮಾತ್ರ ಬಾಕಿ ಉಳಿದಿತ್ತು. ಅದಕ್ಕೆ ಒಂದೂವರೆ ವರ್ಷ ತೆಗೆದುಕೊಂಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ನೈಟ್ ಲ್ಯಾಂಡ್ ಗೆ ಒಪ್ಪಿಗೆ ಕೊಟ್ಟಿದೆ. ದೇವರ ದಯೆಯಿಂದ ನಾನು ಕೇಂದ್ರ ಸರ್ಕಾರದಿಂದ ಕ್ಲಿಯರೆನ್ಸ್ ಕೊಡಿಸಿದ್ದೇನೆ ಎಂದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿಮಾನ ಹಾರಾಟವಾಗಿದೆ ಎಂಬ ಮಧು ಬಂಗಾರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರಿಗೆ ನಾಚಿಕೆ ಆಗಬೇಕು. ಇದನ್ನು ಬಿಟ್ಟು ಬೇರೆ ಏನು ಹೇಳುವುದಕ್ಕೆ ಆಗುವುದಿಲ್ಲ. ಆ ತರಹದ ಮಾತುಗಳಿಗೆ ಉತ್ತರ ಕೊಡಲು ನನಗೆ ನಾಚಿಕೆ ಆಗುತ್ತಿದೆ ಎಂದರು.

ಬೈಂದೂರಿಗೆ ವಿಮಾನ ನಿಲ್ದಾಣ ಮಾಡಲು ಜಾಗ ಮೀಸಲಿಟ್ಟಿದ್ದೇವೆ. ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಪತ್ರದ ಮೂಲಕ ತಿಳಿಸಿದ್ದೇನೆ. ಅವರು ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಕೇಂದ್ರ ಸರಕಾರ ವಿಮಾನ ನಿಲ್ದಾಣ ನಿರ್ಮಿಸಲು ಸಿದ್ಧವಿದೆ. ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬರಬೇಕು ಎಂಬ ಅಪೇಕ್ಷೆಯಿದೆ. ಒಂದು ಅದಕ್ಕೆ ಬೇಕಾದ ಎಲ್ಲಾ ಪ್ರಪೋಸಲ್ ಸಿದ್ಧವಾಗಿದೆ ಎಂದರು.

ಟಾಪ್ ನ್ಯೂಸ್

2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ

2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ

6

Kanguva Movie: ಸೂರ್ಯ ಪ್ಯಾನ್‌ ಇಂಡಿಯಾ ʼಕಂಗುವʼ ಹೊಸ ರಿಲೀಸ್‌ ಡೇಟ್‌ ಔಟ್

dandeli

Dandeli: ನಗರದಲ್ಲಿ ಸರಣಿ ಕಳ್ಳತನ… ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು, ಪೊಲೀಸರ ಭೇಟಿ

Shimoga: ವಿವಾದಿತ ಫ್ಲೆಕ್ಸ್ ಹಾಗು ಖಡ್ಗ ತೆರವು ಮಾಡಿದ ಪೊಲೀಸರು

Shimoga: ವಿವಾದಿತ ಫ್ಲೆಕ್ಸ್ ಹಾಗು ಖಡ್ಗ ತೆರವು ಮಾಡಿದ ಪೊಲೀಸರು

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dandeli

Dandeli: ನಗರದಲ್ಲಿ ಸರಣಿ ಕಳ್ಳತನ… ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು, ಪೊಲೀಸರ ಭೇಟಿ

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್

Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ

2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ

6

Kanguva Movie: ಸೂರ್ಯ ಪ್ಯಾನ್‌ ಇಂಡಿಯಾ ʼಕಂಗುವʼ ಹೊಸ ರಿಲೀಸ್‌ ಡೇಟ್‌ ಔಟ್

dandeli

Dandeli: ನಗರದಲ್ಲಿ ಸರಣಿ ಕಳ್ಳತನ… ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು, ಪೊಲೀಸರ ಭೇಟಿ

Shimoga: ವಿವಾದಿತ ಫ್ಲೆಕ್ಸ್ ಹಾಗು ಖಡ್ಗ ತೆರವು ಮಾಡಿದ ಪೊಲೀಸರು

Shimoga: ವಿವಾದಿತ ಫ್ಲೆಕ್ಸ್ ಹಾಗು ಖಡ್ಗ ತೆರವು ಮಾಡಿದ ಪೊಲೀಸರು

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.