ಬೇಕಿದೆ ಗಾಂಜಾ ಹಾವಳಿಗೆ ಕಡಿವಾಣ

Team Udayavani, Apr 10, 2021, 8:48 PM IST

ಬಚವಹಗ್ಗ

ಶಿವಮೊಗ್ಗ: ಎಷ್ಟೇ ದೂರುಗಳು ದಾಖಲಾದರೂ, ಶಿಕ್ಷೆಯಾದರೂ ಮಲೆನಾಡಿನ ಗಾಂಜಾ ಬೆಳೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಈಚೆಗೆ ಕಾಲೇಜು ಸುತ್ತಮುತ್ತ ಗಾಂಜಾ ಆರೋಪಿಗಳು ಪತ್ತೆಯಾಗುತ್ತಿರುವುದು ಇದಕ್ಕೆ ಪುಷ್ಠಿ ನೀಡಿದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ಕಾಲೇಜು ಸಿಬ್ಬಂದಿ ಮೊರೆ ಹೋಗುತ್ತಿದೆ.

ಈವರೆಗೆ ಪತ್ತೆಯಾಗಿರುವ ಗಾಂಜಾ ಮಾರಾಟ ಆರೋಪಿಗಳು ಬಹುತೇಕ ಯುವಕರೇ ಆಗಿದ್ದಾರೆ. ಇವರು ಟಾರ್ಗೆಟ್‌ ಮಾಡುತ್ತಿರುವುದು ಸಹ ಯುವಕರನ್ನೇ. ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ ಕಿಡಿಗೇಡಿಗಳು ಯಾವುದೇ ಪರಿಶ್ರಮ ಇಲ್ಲದೇ ಅಪಾರ ಹಣ ಗಳಿಸುವ ಗಾಂಜಾ ಮಾರಾಟ ದಂಧೆಗೆ ಮುಂದಾಗುತ್ತಿದ್ದಾರೆ. ಶಿವಮೊಗ್ಗದಲ್ಲಿ ಗಾಂಜಾ ಮಾರಾಟ ಹೊರತುಪಡಿಸಿದರೆ ಬೇರೆ ಯಾವುದೇ ಮಾದಕ ವಸ್ತುಗಳ ಮಾರಾಟ ಪ್ರಕರಣ ಈವರೆಗೆ ಪತ್ತೆಯಾಗಿಲ್ಲ. ಮಾದಕ ವಸ್ತುಗಳ ಸೇವನೆಗೆ ಮುಂದಾದ ಯುವಕರು ವರ್ಷದ ಹಿಂದೆ ಪೊಲೀಸರ ಮೇಲೆ ಹಲ್ಲೆ ಮಾಡಿದನ್ನು ಇಲ್ಲಿ ಮರೆಯುವಂತಿಲ್ಲ.

ರಾತ್ರೋರಾತ್ರಿ ವಾಹನಗಳಿಗೆ ಬೆಂಕಿ ಹಚ್ಚುವುದು, ಗಲಾಟೆ ಮಾಡುವುದು ಇತರೆ ಪ್ರಕರಣಗಳಲ್ಲಿ ಇಂತಹ ಗಾಂಜಾ ವ್ಯಸನಿಗಳು ಮುಂದಿದ್ದಾರೆ. ಅಬಕಾರಿ ಮತ್ತು ಪೊಲೀಸ್‌ ಇಲಾಖೆ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಗಾಂಜಾ ಬೆಳೆಯುವುದು ನಿಲ್ಲಿಸಲು ಆಗಿಲ್ಲ. ಬಗರ್‌ ಹುಕುಂ ಜಮೀನುಗಳನ್ನೇ ಆಶ್ರಯಿಸಿರುವ ಇಂತಹ ಕಿಡಿಗೇಡಿಗಳು ಹಣದಾಸೆ ತೋರಿಸಿ ಗಾಂಜಾ ಬಿತ್ತುತ್ತಾರೆ. ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುತ್ತಾರೆ. ಅಬಕಾರಿ ಇಲಾಖೆ ಡ್ರೋಣ್‌ ಸರ್ವೇ ಮೂಲಕ ಕೆಲ ಕೇಸುಗಳನ್ನು ಪತ್ತೆಹಚ್ಚಲು ಯಶಸ್ವಿಯಾಗಿತ್ತು.

ಆದರೂ ಸಂಪೂರ್ಣ ನಿಂತಿಲ್ಲ. ಈಚೆಗೆ ಇಂತಹ ಕೇಸುಗಳಲ್ಲಿ ಶಿಕ್ಷೆಯಾಗುವಂತೆಯೂ ನೋಡಿಕೊಳ್ಳಲಾಗುತ್ತಿದೆ. ಹಣದಾಸೆಗೆ ಕೆಲ ರೈತರು ಮೋಸ ಹೋಗುತ್ತಿದ್ದಾರೆ. ಇಲ್ಲಿ ಬೆಳೆದ ಗಾಂಜಾ ಸುಲಭವಾಗಿ ಪೂರೈಕೆಯಾಗುತ್ತಿದೆ. ಈ ಜಾಲದ ಮೊದಲ ಬಲಿಯೇ ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ಈ ಜಾಲದಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ತಪ್ಪಿಸಲು ಪೊಲೀಸರು ಕಾಲೇಜು ಸಿಬ್ಬಂದಿಯನ್ನೇ ಮಾಹಿತಿದಾರರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಏನಿದು ಪಿಸಿಒ: ಕಾಲೇಜು ಮಟ್ಟದಲ್ಲಿ ಗಾಂಜಾ ಮಾರಾಟ, ಸೇವನೆ, ಗಲಾಟೆ ಇತರೆ ಅಕ್ರಮ ಚಟುವಟಿಕೆಗಳ ಮಾಹಿತಿ ಪಡೆಯಲು ಕಾಲೇಜು ಪ್ರಾಧ್ಯಾಪಕರು, ಅಧ್ಯಾಪಕರು, ಸಿಬ್ಬಂದಿಯನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇವರನ್ನು ಪೊಲೀಸ್‌ ಸಮನ್ವಯಾ ಧಿಕಾರಿ (ಪೊಲೀಸ್‌ ಕೋಆರ್ಡಿನೇಷನ್‌ ಆμàಸರ್) ಎಂದು ಕರೆಯಲಾಗುತ್ತದೆ. ಕಾಲೇಜು ಆಡಳಿತ ಮಂಡಳಿ ತಿಳಿಸಿದ ಸಿಬ್ಬಂದಿ ಇದರ ಮಾಹಿತಿದಾರರಾಗಿರುತ್ತಾರೆ. ಅವರು ಕಾಲಕಾಲಕ್ಕೆ ಪೊಲೀಸರಿಗೆ ಮಾಹಿತಿ ಒದಗಿಸುತ್ತಾರೆ.

ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಏನಾದರೂ ಬದಲಾವಣೆ ಕಂಡುಬಂದರೆ, ಅನುಮಾನಾಸ್ಪಾದ ವ್ಯಕ್ತಿಗಳು ಕಾಲೇಜು ಆವರಣದಲ್ಲಿ ಕಾಣಿಸಿಕೊಂಡರೆ ಅವರ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗುತ್ತದೆ. ಅವರ ಮೇಲೆ ನಿಗಾ ಇಟ್ಟು ಪೊಲೀಸರು ತಪ್ಪು ಕಂಡುಬಂದರೆ ಬಂಧಿಸುತ್ತಾರೆ.

-ಶರತ್‌ ಭದ್ರಾವತಿ

ಟಾಪ್ ನ್ಯೂಸ್

ಅನುದಾನದ ಕೊರತೆ: ಚೇತರಿಕೆ ಕಾಣದ ಸ್ಟಡಿ ಸರ್ಕಲ್‌

ಅನುದಾನದ ಕೊರತೆ: ಚೇತರಿಕೆ ಕಾಣದ ಸ್ಟಡಿ ಸರ್ಕಲ್‌

ಪಾದೂರು ತೈಲಾಗಾರ ವಿಸ್ತರಣೆಗೆ 6,000 ಕೋ.ರೂ.: ಶಾಸಕ ಲಾಲಾಜಿ ಆರ್‌. ಮೆಂಡನ್‌

ಪಾದೂರು ತೈಲಾಗಾರ ವಿಸ್ತರಣೆಗೆ 6,000 ಕೋ.ರೂ.: ಶಾಸಕ ಲಾಲಾಜಿ ಆರ್‌. ಮೆಂಡನ್‌

ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

ಸಚಿವ ಸಂಪುಟ ವಿಸ್ತರಣೆ: ಈಗ ಯಾರಿಗೂ ಬೇಡ ಸ್ಥಾನ!

ಸಚಿವ ಸಂಪುಟ ವಿಸ್ತರಣೆ: ಈಗ ಯಾರಿಗೂ ಬೇಡ ಸ್ಥಾನ!

ಗೋಧ್ರಾ ರೈಲು ಹತ್ಯಾಕಾಂಡದ ರೂವಾರಿ ರಫೀಕ್‌ಗೆ ಜೀವಾವಧಿ ಶಿಕ್ಷೆ

ಗೋಧ್ರಾ ರೈಲು ಹತ್ಯಾಕಾಂಡದ ರೂವಾರಿ ರಫೀಕ್‌ಗೆ ಜೀವಾವಧಿ ಶಿಕ್ಷೆ

ಎನ್‌ಡಿಎ ಅಭ್ಯರ್ಥಿಗೆ ಪಟ್ಟ? ಆ. 16ಕ್ಕೆ ಉಪರಾಷ್ಟ್ರಪತಿ ಚುನಾವಣೆ; ಬಿಜೆಪಿ ಬಳಿ 395 ಮತ

ಎನ್‌ಡಿಎ ಅಭ್ಯರ್ಥಿಗೆ ಪಟ್ಟ? ಆ. 16ಕ್ಕೆ ಉಪರಾಷ್ಟ್ರಪತಿ ಚುನಾವಣೆ; ಬಿಜೆಪಿ ಬಳಿ 395 ಮತ

ಆರ್ಥಿಕ ಕುಸಿತ: ಭಾರತಕ್ಕಿಂತ ಅಮೆರಿಕದಲ್ಲೇ ಹೆಚ್ಚು ಉದ್ಯೋಗ ನಷ್ಟ

ಆರ್ಥಿಕ ಕುಸಿತ: ಭಾರತಕ್ಕಿಂತ ಅಮೆರಿಕದಲ್ಲೇ ಹೆಚ್ಚು ಉದ್ಯೋಗ ನಷ್ಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೆಹಲಿ ಮಾದರಿಯಲ್ಲಿ ಪೌರ ಕಾರ್ಮಿಕರಿಗೆ ಜೀವನ ಭದ್ರತೆ ; ಕೆ.ದಿವಾಕರ್ ಆಗ್ರಹ

ದೆಹಲಿ ಮಾದರಿಯಲ್ಲಿ ಪೌರ ಕಾರ್ಮಿಕರಿಗೆ ಜೀವನ ಭದ್ರತೆ ; ಕೆ.ದಿವಾಕರ್ ಆಗ್ರಹ

9protection

ಸೊರಬ: ಬಾವಿಗೆ ಬಿದ್ದ ಎಮ್ಮೆಯ ರಕ್ಷಣೆ

ತಿಂಗಳಾದರೂ ಮೌಲ್ಯಮಾಪನ ಆರಂಭವಾಗಿಲ್ಲ

ತಿಂಗಳಾದರೂ ಮೌಲ್ಯಮಾಪನ ಆರಂಭವಾಗಿಲ್ಲ

1-dsfsffsf

ನಿವೃತ್ತಿ ದಿನ ಚಾಲಕನಿಗೆ ತಾವೆ ವಾಹನ ಚಲಾಯಿಸಿ ಮನೆಗೆ ಬಿಟ್ಟು ಬಂದ ಆರ್ ಟಿ ಓ

1-dsfsdfsdf

ಸಾಗರ: ಹಲ್ಕೆ ಮುಪ್ಪಾನೆ ಲಾಂಚ್ ಪುನರಾರಂಭ

MUST WATCH

udayavani youtube

ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ವಿಟ್ಲದ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ…

udayavani youtube

ಕೊಪ್ಪಳ : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಎಸ್ಪಿ

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

ಹೊಸ ಸೇರ್ಪಡೆ

ಅನುದಾನದ ಕೊರತೆ: ಚೇತರಿಕೆ ಕಾಣದ ಸ್ಟಡಿ ಸರ್ಕಲ್‌

ಅನುದಾನದ ಕೊರತೆ: ಚೇತರಿಕೆ ಕಾಣದ ಸ್ಟಡಿ ಸರ್ಕಲ್‌

ಪಾದೂರು ತೈಲಾಗಾರ ವಿಸ್ತರಣೆಗೆ 6,000 ಕೋ.ರೂ.: ಶಾಸಕ ಲಾಲಾಜಿ ಆರ್‌. ಮೆಂಡನ್‌

ಪಾದೂರು ತೈಲಾಗಾರ ವಿಸ್ತರಣೆಗೆ 6,000 ಕೋ.ರೂ.: ಶಾಸಕ ಲಾಲಾಜಿ ಆರ್‌. ಮೆಂಡನ್‌

ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

ಸಚಿವ ಸಂಪುಟ ವಿಸ್ತರಣೆ: ಈಗ ಯಾರಿಗೂ ಬೇಡ ಸ್ಥಾನ!

ಸಚಿವ ಸಂಪುಟ ವಿಸ್ತರಣೆ: ಈಗ ಯಾರಿಗೂ ಬೇಡ ಸ್ಥಾನ!

ಗೋಧ್ರಾ ರೈಲು ಹತ್ಯಾಕಾಂಡದ ರೂವಾರಿ ರಫೀಕ್‌ಗೆ ಜೀವಾವಧಿ ಶಿಕ್ಷೆ

ಗೋಧ್ರಾ ರೈಲು ಹತ್ಯಾಕಾಂಡದ ರೂವಾರಿ ರಫೀಕ್‌ಗೆ ಜೀವಾವಧಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.