ಸೆಪ್ಟೆಂಬರ್ ಏಳಕ್ಕೆ ಪ್ರಧಾನಿ ಮೋದಿ ಬೆಂಗಳೂರಿಗೆ
Team Udayavani, Aug 31, 2019, 12:32 PM IST
ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೆಪ್ಟೆಂಬರ್ ಏಳರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದ ಹೆಲಿಪ್ಯಾಡ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜಭವನದಲ್ಲಿ ಈಗಾಗಲೇ ಚರ್ಚೆಯಾಗಿದೆ.. ಅನುಮತಿ ದೊರಕಬೇಕಿದೆ. ಪ್ರವಾಹದ ಹಾನಿ ಕುರಿತು ಬ್ಲೂ ಪ್ರಿಂಟ್, ಪ್ರೇಸೆಂಟೇಶನ್ ಮೂಲಕ ಪ್ರಧಾನಿಗೆ ಮನವರಿಕೆ ಮಾಡಲಾಗುವುದು. ಕೇಂದ್ರ ತಂಡ ವರದಿ ನೀಡಿದ ಬಳಿಕ ಪರಿಹಾರ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಡಿಕೆಶಿವಕುಮಾರ್ ಅವರ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರರಿಸಿದ ಯಡಿಯೂರಪ್ಪ, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದರು.
ಯಡಿಯೂರಪ್ಪ ಕಾರವಾರ ಪ್ರವಾಸ ರದ್ದು: ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಕಾರವಾರ ಪ್ರವಾಸ ರದ್ದಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಫ್ಟರ್ ಲ್ಯಾಂಡಿಂಗ್ ಕಷ್ಟವಾಗುವ ಹಿನ್ನೆಲೆ ಕಾರವಾರ ಪ್ರವಾಸ ರದ್ದು ಮಾಡಿದ್ದು ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ಸಿಎಂ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.