Udayavni Special

ಸರ್ಕಾರ ರೈತರ ಕಷ್ಟ ಅರ್ಥ ಮಾಡಿಕೊಳ್ಳಲಿ

Team Udayavani, Nov 10, 2020, 7:30 PM IST

ಸರ್ಕಾರ ರೈತರ ಕಷ್ಟ ಅರ್ಥ ಮಾಡಿಕೊಳ್ಳಲಿ

ತೀರ್ಥಹಳ್ಳಿ: ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ರೈತರ ಕಷ್ಟದ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಈ ಮರಣ ಶಾಸನದಿಂದ ರೈತರು ನೆಮ್ಮದಿಯಿಂದ ನಿದ್ರೆ ಮಾಡುವಂತಿಲ್ಲ. ಇಂತಹ ಸರ್ಕಾರಗಳು ಇರಬಾರದು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಕಸ್ತೂರಿ ರಂಗನ್‌ ವರದಿ ವಿರೋಧಿಸಿ ಹಿರಿಯ ಸಹಕಾರಿ ಮುಖಂಡ ಆರ್‌.ಎಂ.ಮಂಜುನಾಥ ಗೌಡರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈಗಿನ ಮುಖ್ಯಮಂತ್ರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ರೈತಪರ ಮುಖ್ಯಮಂತ್ರಿಯಿದ್ದಿದ್ದರೆ ಅದು ಬಂಗಾರಪ್ಪ, ಸಿದ್ದರಾಮಯ್ಯ ಮಾತ್ರ. ಯಡಿಯೂರಪ್ಪನವರೇನಿದ್ದರೂ ಮಠಗಳ ಪರ ಎಂದು ಲೇವಡಿ ಮಾಡಿದರು .

ಯಡಿಯೂರಪ್ಪ ಡೋಂಗಿ ರೈತ. ಪ್ರವಾಹ ಬಂದಾಗ ಶಿಕಾರಿಪುರದಲ್ಲಿ ಠಿಕಾಣಿ ಹೂಡಿದ್ದರೆ, ಇತ್ತ ಇವರ ಮಂತ್ರಿಮಂಡಲದ ಪ್ರಭಾವಿ ಮಂತ್ರಿ ಗೋವಿಂದ ಕಾರಜೋಳ ನನಗೆ ವಯಸ್ಸಾಗಿದೆ. ಕೋವಿಡ್ ಬರುತ್ತದೆ ಎಂದು ಹೇಳುತ್ತಾ ಉಪಚುನಾವಣೆಯಲ್ಲಿ ಕೈಬೀಸುತ್ತಾರೆ.ವಯಸ್ಸಾದರೆ ರಾಜೀನಾಮೆ ನೀಡಿ ಯುವಕರಿಗೆ ಅವಕಾಶ ಮಾಡಿಕೊಡಲಿ. ಕೇರಳದಲ್ಲಿ ತರಕಾರಿಗೆ ಬೆಂಬಲ ಬೆಲೆ ಕೊಡುತ್ತಿದ್ದಾರೆ. ಆದರೆ ನಮ್ಮಲ್ಲಿ ಸರ್ಕಾರಿ ನೌಕರರಿಗೂ ಸಂಬಳ ಕೊಡಲು ದುಡ್ಡಿಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್‌. ಅಶೋಕ್‌ ಮಾತನಾಡಿ, ಪಶ್ಚಿಮ ಘಟ್ಟ, ಮಲೆನಾಡು ಬಿಕ್ಕಟ್ಟಿನತ್ತ ಸಾಗುತ್ತಿದೆ. ಬಡವರು, ರೈತರು ಅಸುರಕ್ಷಿತರಾಗಿದ್ದಾರೆ. ಯಾವಾಗ ಯಾವ ಯೋಜನೆ ಜಾರಿಯಾಗುತ್ತದೆ ಎಂಬ ಆತಂಕ ಕಾಡುತ್ತಿದೆ. ಮಲೆನಾಡಿನ ಶಾಸಕರು-ಸಂಸದರಿಗೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು.

ಆರ್‌.ಎಂ. ಮಂಜುನಾಥ ಗೌಡ ಮಾತನಾಡಿ, ಕಸ್ತೂರಿ ರಂಗನ್‌ ವರದಿ ರೈತರಿಗೆ ಮಾರಕವಾಗಿದೆ. ಬಿದರಗೋಡು ರಾಮಮಂದಿರದಿಂದ ಆರಂಭ ಮಾಡಿದ ಪಾದಯಾತ್ರೆ ತೀರ್ಥಹಳ್ಳಿ ರಾಮೇಶ್ವರನ ಕ್ಷೇತ್ರಕ್ಕೆ ಬಂದು ಅಂತ್ಯವಾಗಿದೆ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಈ ಪಾದಯಾತ್ರೆ ಮನವಿ ಅರ್ಪಿಸುವುದಕ್ಕೆ ಮಾತ್ರ ಸೀಮಿತವಲ್ಲ. ಜನರನ್ನು ಜಾಗೃತಿಗೊಳಿಸುವಂತಹ ಹೋರಾಟ ಮತ್ತು ಮಾಹಿತಿ ಕೊಡುವ ಕಾರ್ಯಗಾರವಾಗಿತ್ತು. ಆ ದಿಸೆಯಲ್ಲೇ ಹೋರಾಟ ಮುಂದುವರಿಯುತ್ತದೆ ಎಂದರು.

ಡಿಸಿಸಿ ಬ್ಯಾಂಕ್‌ ಲಾಭದಲ್ಲಿರುವುದು ನನ್ನ ತಪಸ್ಸು ಹಾಗೂ ಸಾಧನೆ. ರೈತರು, ಖಾಸಗಿ ಲೇವಾದೇವಿ ಹಾಗೂ ಮಂಡಿಗಳಿಗೆ ಹೋಗಬಾರದು ಎನ್ನುವ ಕಾರಣಕ್ಕೆ ಸಹಕಾರಿ ಕ್ಷೇತ್ರದಿಂದಲೇ ಸಾಲ ದೊರಕುವಂತೆ ಮಾಡಲು ಡಿಸಿಸಿ ಬ್ಯಾಂಕ್‌ ಅಧ್ಯಕ್ಷನಾಗಬೇಕೆಂದು ಕನಸು ಕಂಡೆ. ಹತ್ತು ವರ್ಷಗಳ ನಂತರ ನಾನು ಡಿಸಿಸಿ ಬ್ಯಾಂಕ್‌ ಅಧ್ಯಕ್ಷನಾಗಲು ಸಾಧ್ಯವಾಯಿತು. ಅಂದು ಒಬ್ಬೊಬ್ಬ ರೈತನಿಗೆ ಐದು ಸಾವಿರ ರೂ. ಸಾಲ ನೀಡಲಾಗುತ್ತಿತ್ತು. ಅಂದು ಡಿಸಿಸಿ ಬ್ಯಾಂಕ್‌ 21 ಕೋಟಿ ಸಾಲವನ್ನು 6 ಸಾವಿರ ರೈತರಿಗೆ ನೀಡುತ್ತಿತ್ತು. ಇಂದು ನಾಲ್ಕು ಸಾವಿರ ಡಿಸಿಸಿ ಬ್ಯಾಂಕ್‌ ಗ್ರಾಹಕರಿದ್ದಾರೆ ಎಂದರು.

ಮಲೆನಾಡು ಥೈಲ್ಯಾಂಡ್‌ ಆಗಬಾರದು. ಮಲೆನಾಡು ಮಳೆನಾಡಾಗಿ ತೀರ್ಥಹಳ್ಳಿಯ ಅದ್ಭುತ ಸಂಸ್ಕೃತಿಯನ್ನು ಬೆಳೆಸುವಂತಾಗಬೇಕು. ಜೈ ಶ್ರೀರಾಮ್‌ ಎಂದ ಕೂಡಲೇ ಸಂಸ್ಕೃತಿಯಲ್ಲ. ಕೋಮುವಾದದ ಹೆಸರಿನಲ್ಲಿ ದೇಶ ಆಳುವ ದಿನ ಮುಗಿದು ಹೋಯಿತು ಎಂದರು.

ಸಮಾರೋಪ ಸಮಾರಂಭದಲ್ಲಿ, ಕಲ್ಕುಳಿ ವಿಠಲ ಹೆಗ್ಡೆ, ಹಿರಿಯ ಸಹಕಾರಿ ಎಚ್‌.ಎನ್‌. ವಿಜಯದೇವ್‌, ಪ್ರಗತಿಪರ ಹೋರಾಟಗಾರ ಕಲ್ಲಾಳ ಶ್ರೀಧರ್‌, ರಾಜ್ಯ ಜನಶಕ್ತಿ ಪ್ರಧಾನ ಕಾರ್ಯದರ್ಶಿ ಕೆ.ಎಲ್‌. ಅಶೋಕ್‌, ಎಪಿಎಂಸಿ ಅಧ್ಯಕ್ಷ ದುಗ್ಗಪ್ಪ ಗೌಡ, ಜೆಡಿಎಸ್‌ ತಾಲೂಕು ಅಧ್ಯಕ್ಷ ಸುಂದರೇಶ್‌ ಮತ್ತಿತರರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅನೈತಿಕ ಸಂಬಂಧ: ‘ವಿಸ್ಮಯ’ ಸಿನಿಮಾ ಪ್ರೇರಣೆಯಿಂದ ಪ್ರಿಯಕರನ ಜತೆಗೂಡಿ ಪತಿಯನ್ನು ಕೊಂದ ಪತ್ನಿ

ಅನೈತಿಕ ಸಂಬಂಧ: ‘ವಿಸ್ಮಯ’ ಸಿನಿಮಾ ಪ್ರೇರಣೆಯಿಂದ ಪ್ರಿಯಕರನ ಜತೆಗೂಡಿ ಪತಿಯನ್ನು ಕೊಂದ ಪತ್ನಿ

Spinch

ಹೃದಯ ಸಂಬಂಧಿ ಖಾಯಿಲೆಗೂ ಮದ್ದು; ಬಸಳೆ ಎಂಬ ಬೆರಗೂ, ಬೆಡಗೂ

ಸಚಿವ ಬಿ.ಸಿ.ಪಾಟೀಲ್ ರಾಜೀನಾಮೆ ನೀಡಲಿ : ಶಿವರಾಜ ತಂಗಡಗಿ ಆಗ್ರಹ

ಸಚಿವ ಬಿ.ಸಿ.ಪಾಟೀಲ್ ರಾಜೀನಾಮೆ ನೀಡಲಿ : ಶಿವರಾಜ ತಂಗಡಗಿ ಆಗ್ರಹ

ಹೈದರಾಬಾದ್ ನಗರಪಾಲಿಕೆ ಫಲಿತಾಂಶ: ಆಡಳಿತಾರೂಢ ಟಿಆರ್ ಎಸ್ ಗೆ ಭರ್ಜರಿ ಮುನ್ನಡೆ

ಹೈದರಾಬಾದ್ ನಗರಪಾಲಿಕೆ ಫಲಿತಾಂಶ: ಆಡಳಿತಾರೂಢ ಟಿಆರ್ ಎಸ್ ಗೆ ಭರ್ಜರಿ ಮುನ್ನಡೆ

ಸೀರೆಯ ಉಡುಗೆ; ಪ್ರಾಂತೀಯ ಸಾಂಪ್ರದಾಯಿಕ ಉಡುಗೆ

ಸೀರೆಯ ಉಡುಗೆ; ಪ್ರಾಂತೀಯ ಸಾಂಪ್ರದಾಯಿಕ ಉಡುಗೆ

ಇಂಡೋ-ಆಸೀಸ್ ಟಿ20 ಸಮರ: ಟಾಸ್ ಗೆದ್ದ ಫಿಂಚ್ ಕೊಹ್ಲಿ, ನಟರಾಜನ್ ಪದಾರ್ಪಣೆ

ಇಂಡೋ-ಆಸೀಸ್ ಟಿ20 ಸಮರ: ಟಾಸ್ ಗೆದ್ದ ಫಿಂಚ್, ನಟರಾಜನ್ ಪದಾರ್ಪಣೆ

ಅರೆಬೆಂದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವಪತ್ತೆ: ಬೇರೆಡೆ ಕೊಲೆ ಮಾಡಿ ತಂದು ಸುಟ್ಟಿರುವ ಶಂಕೆ

ಅರೆಬೆಂದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವಪತ್ತೆ: ಬೇರೆಡೆ ಕೊಲೆ ಮಾಡಿ ತಂದು ಸುಟ್ಟಿರುವ ಶಂಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿವಮೊಗ್ಗ ಗಲಭೆ ಪ್ರಕರಣ: 62 ಜನರ ಬಂಧನ, ಡಿ.5ರವರೆಗೆ ಕರ್ಫ್ಯೂ ಮುಂದುವರಿಕೆ

ಶಿವಮೊಗ್ಗ ಗಲಭೆ ಪ್ರಕರಣ: 62 ಜನರ ಬಂಧನ, ಡಿ.5ರವರೆಗೆ ಕರ್ಫ್ಯೂ ಮುಂದುವರಿಕೆ

ಶಿವಮೊಗ್ಗದಲ್ಲಿ ಮುಸಲ್ಮಾನ್ ಗೂಂಡಾಗಿರಿ ನಡೆಯಲ್ಲ: ಈಶ್ವರಪ್ಪ ಕೆಂಡಾಮಂಡಲ

ಶಿವಮೊಗ್ಗದಲ್ಲಿ ಮುಸಲ್ಮಾನ್ ಗೂಂಡಾಗಿರಿ ನಡೆಯಲ್ಲ: ಈಶ್ವರಪ್ಪ ಕೆಂಡಾಮಂಡಲ

ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗ ನಗರ: ಅಂಗಡಿ ಮುಂಗಟ್ಟುಗಳು ಬಂದ್, ಪೊಲೀಸ್ ಬಂದೋಬಸ್ತ್

ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗ ನಗರ: ಅಂಗಡಿ ಮುಂಗಟ್ಟುಗಳು ಬಂದ್, ಪೊಲೀಸ್ ಬಂದೋಬಸ್ತ್

ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ!

ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ!

ಶಿವಮೊಗ್ಗದಲ್ಲಿ ಮುಂದುವರಿದ ಗಲಾಟೆ: ಹಲವೆಡೆ ವಾಹನಗಳು ಜಖಂ! ಸ್ಥಳಕ್ಕೆ ಐಜಿಪಿ ಭೇಟಿ

ಶಿವಮೊಗ್ಗದಲ್ಲಿ ಮುಂದುವರಿದ ಗಲಾಟೆ: ಹಲವೆಡೆ ವಾಹನಗಳು ಜಖಂ! ಸ್ಥಳಕ್ಕೆ ಐಜಿಪಿ ಭೇಟಿ

MUST WATCH

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಉಗ್ರಪರ ಗೋಡೆ ಬರಹ ಪ್ರಕರಣದ ಆರೋಪಿಗಳ ಶೀಘ್ರ ಬಂಧನ: ಗೃಹ ಸಚಿವ ಬೊಮ್ಮಾಯಿ

udayavani youtube

Meal of Bakasur | ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | FishCampus

udayavani youtube

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ

udayavani youtube

ಸರಕಾರ ನಿಮ್ಮ ಜೊತೆಯಿದೆ: ಮೀನುಗಾರರ ಕುಟುಂಬಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಯ

ಹೊಸ ಸೇರ್ಪಡೆ

ರೈತ ವಿರೋಧಿ ಕಾಯ್ದೆ  ಪ್ರತಿ ಸುಟ್ಟು ಪ್ರತಿಭಟನೆ

ರೈತ ವಿರೋಧಿ ಕಾಯ್ದೆ ಪ್ರತಿ ಸುಟ್ಟು ಪ್ರತಿಭಟನೆ

ಅನೈತಿಕ ಸಂಬಂಧ: ‘ವಿಸ್ಮಯ’ ಸಿನಿಮಾ ಪ್ರೇರಣೆಯಿಂದ ಪ್ರಿಯಕರನ ಜತೆಗೂಡಿ ಪತಿಯನ್ನು ಕೊಂದ ಪತ್ನಿ

ಅನೈತಿಕ ಸಂಬಂಧ: ‘ವಿಸ್ಮಯ’ ಸಿನಿಮಾ ಪ್ರೇರಣೆಯಿಂದ ಪ್ರಿಯಕರನ ಜತೆಗೂಡಿ ಪತಿಯನ್ನು ಕೊಂದ ಪತ್ನಿ

ಪರಿಶುದ್ಧತೆ ಗೊಂದಲ-ಜೇನುಪೇಟೆಯಲ್ಲಿ ಕೋಲಾಹಲ

ಪರಿಶುದ್ಧತೆ ಗೊಂದಲ-ಜೇನುಪೇಟೆಯಲ್ಲಿ ಕೋಲಾಹಲ

Spinch

ಹೃದಯ ಸಂಬಂಧಿ ಖಾಯಿಲೆಗೂ ಮದ್ದು; ಬಸಳೆ ಎಂಬ ಬೆರಗೂ, ಬೆಡಗೂ

ಕನಕದಾಸರು ಸರಳ ಬದುಕಿನ ಸಂದೇಶ ವಾಹಕರು

ಕನಕದಾಸರು ಸರಳ ಬದುಕಿನ ಸಂದೇಶ ವಾಹಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.