ನೆರೆ ಸಂತ್ರಸ್ತರಿಗೆ ಮನಮಿಡಿದ ಪೆಟ್ರೋಲ್ ಪಂಪ್ ನ “ಕರುಣೆಯ ಗೋಡೆ”

Team Udayavani, Aug 23, 2019, 6:00 PM IST

ಶಿವಮೊಗ್ಗ : ಮಳೆಯ ಅಬ್ಬರ ತಗ್ಗಿದೆ. ಆದರೆ ತಮ್ಮ ಮನೆ,ನೆಲೆ,ಕೆಲವರು ತಮ್ಮ ಆತ್ಮೀಯರ ಮನವನ್ನು ಕಳೆದುಕೊಂಡು ದು:ಖದಲ್ಲಿ ನಲುಗುತ್ತಿರುವ ಆಕ್ರಂದನ ಮಾತ್ರ  ತಗ್ಗಿಲ್ಲ,ಮಳೆಯಿಂದ ಆದ ನಷ್ಟ ಪರಿಹಾರಕ್ಕೆ ನೂರಾರು ಜನ-ಮನಗಳು,ಸಂಘ ಸಂಸ್ಥೆಗಳು ಸರ್ಕಾರದ ಜೊತೆಗೂಡಿ ನೊಂದ ಬದುಕಿಗೆ ಆಸರೆ ಆಗಿದ್ದಾರೆ. ಆಗುತ್ತಿದ್ದಾರೆ.

ಶಿವಮೊಗ್ಗದಲ್ಲಿರುವ ನವರತ್ನ ಫೂಯಲ್ಸ್‌ ಎನ್ನುವ ಪೆಟ್ರೋಲ್ ಪಂಪ್ ನೆರೆ ಸಂತ್ರಸ್ತರ ಬಾಳಿಗೆ ನೆರೆವಾಗಲು ವಿಶಿಷ್ಟ್ಯವಾದ ಕಾಯಕಲ್ಪವನ್ನು ಮಾಡುತ್ತಿದೆ. ಅವಿನಾಶ್ ಎನ್ನುವವರು ನೆರೆ ಸಂತ್ರಸ್ತರಿಗೆ ತಮ್ಮಿಂದಾಗುವ ಸಹಾಯವನ್ನು ಮಾಡಲು ಹೊರಟಾಗ  ಇದಕ್ಕಾಗಿ ಒಂದು ತರೆದ ದೊಡ್ಡ ಕವಾಟನ್ನು ತಮ್ಮ ಪಟ್ರೋಲ್ ಪಂಪ್ ಆವರಣದಲ್ಲಿ ಇಡುತ್ತಾರೆ.ಅದರ ಪಕ್ಕದಲ್ಲೇ ರೆಫ್ರಿಜರೇಟರ್‌ ಅನ್ನು ಸಹ ಇಟ್ಟು ಬಿಡುತ್ತಾರೆ. “ಕರುಣೆಯ ಗೋಡೆ” ಅನ್ನುವ ಪರಿಕಲ್ಪನೆಯಲ್ಲಿ ದೊಡ್ಡ ಕವಾಟಿನಲ್ಲಿ ನೆರೆ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳನ್ನು ಸಂಗ್ರಹ ಮಾಡಲು ಪ್ರಾರಂಭಿಸುತ್ತಾರೆ.

ಇಂಥ ವಿನೂತನ ಪ್ರಯತ್ನಕ್ಕೆ ಸ್ಥಳೀಯ ಜನರಿಂದ ಹಾಗೂ ಪೆಟ್ರೋಲ್ ಹಾಕಲು ಬರುವ ಗ್ರಾಹಕರೆಲ್ಲರ ಸಹಕಾರ ದೂರಕುತ್ತದೆ.ಮಗನ ಈ ಕಾರ್ಯಕ್ಕೆ ತಾಯಿ ನವರತ್ನ ಜೊತೆಯಾಗಿದ್ದಾರೆ. “ ನನ್ನ ಮಗನಿಗೆ ಪ್ರವಾಹ ಪೀಡಿತರಿಗೆ ತನ್ನ ಕೈಲಾಗುವ ಸಹಾಯ ಮಾಡುವ ಯೋಚನೆ ಇತ್ತು. ಆ ಸಂದರ್ಭದಲ್ಲಿ ನಮ್ಮ ಪೆಟ್ರೋಲ್ ಪಂಪ್  ಬಳಿ ಈ ರೀತಿಯ ಒಂದು ಕವಾಟನ್ನು ಇಟ್ಟು  ಅದರ ಮೂಲಕ ನೆರೆ ಸಂತ್ರಸ್ತರಿಗೆ ಜನರಿಂದ ಸಿಗುವ ಸೌಲಭ್ಯಗಳನ್ನು ಕೊಡುವ ಯೋಚನೆ ಬಂದು ಅದನೀಗ ಮಾಡುತ್ತಿದ್ದೇವೆ,ಇಲ್ಲಿಗೆ ಯಾರೂ ಬಂದು ಬೇಕಾದರೂ ತಮ್ಮ ನೆರವನ್ನು ನೀಡಬಹುದು”. ಎಂದು ಹೇಳುತ್ತಾರೆ ನವರತ್ನ.

ಫಲಾನುಭವಿ ಮಹಿಳೆಯೊಬ್ಬಳು ಎ.ಎನ್. ಐ  ಜೊತೆ ಮಾತಾಡುತ್ತಾ ನಮ್ಮ ಬಳಿ ಹೆಚ್ಚು ಆಹಾರವಿಲ್ಲ, ನಾನು ಇಲ್ಲಿಗೆ ಬಂದು ತಿನ್ನಲು ಬ್ರೆಡ್ ಹಾಗೂ ಬಟ್ಟೆ ತೆಗೆದುಕೊಂಡು ಹೋದೆ. ಇವರ ಈ ಕಾರ್ಯ ನಮ್ಮಂತಹ ಆಶಕ್ತರಿಗೆ ನಿಜಕ್ಕೂ ತುಂಬಾ ದೊಡ್ಡ ಸಹಾಯ ಎಂದು ಶ್ಲಾಘಿಸಿದರು.

ಸದ್ಯ ಅವಿನಾಶ್ ರವರ ಪೆಟ್ರೋಲ್ ಪಂಪ್ ನಲ್ಲಿರುವ ಕವಾಟಿನಲ್ಲಿ ಅಗತ್ಯವಾದ ವಸ್ತುಗಳ ಜಮಾವಣೆಯಾಗಿದ್ದು ಜನ ಸಾಮಾನ್ಯರಿಂದ ಇವರ ನೆರವಿಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಸಂತ್ರಸ್ತರು ಇದರ ನೆರವನ್ನು ಪಡೆದುಕೊಳ್ಳುತ್ತಿದ್ದಾರೆ.

ಕರುಣೆಯ ಗೋಡೆಯಲ್ಲಿ ಪ್ರತಿನಿತ್ಯ ಆಹಾರ, ದಿನಸಿ, ಅಡುಗೆ ಸಾಮಾನು, ಬಟ್ಟೆ, ಪುಸ್ತಕ, ಬ್ಯಾಗ್‌, ಗೊಂಬೆ, ಶೂ, ಛತ್ರಿ, ಬೆಡ್‌ಶೀಟ್‌, ಟವೆಲ್‌  ಸೇರಿದಂತೆ ಮತ್ತಿತರೆ ವಸ್ತುಗಳನ್ನಿಡಲು ಆಸಕ್ತಿ ಇರುವವರು 98868-09000, 98869-43538ಗೆ ಸಂಪರ್ಕಿಸಲು ಕೋರಿದೆ.

Shivamogga: Petrol pump owner Avinash & his mother have have installed a shelf at their pump to collect & distribute food, clothes & other materials for the flood-affected people in the district. The shelf has been named “People’s wall”. #Karnataka pic.twitter.com/BYRTltsfFt

— ANI (@ANI) August 22, 2019

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ