ಆಸ್ತಿ ತೆರಿಗೆ ಪಾವತಿ ಗೊಂದಲ ನಿವಾರಣೆ

ತೆರಿಗೆ ಪಾವತಿ ವ್ಯವಸ್ಥೆಯ ಸದುಪಯೋಗಕ್ಕೆ ಕರೆ

Team Udayavani, Aug 6, 2019, 2:51 PM IST

sm-tdy-1

ಶಿವಮೊಗ್ಗ: ಇಡಿಸಿ ಯಂತ್ರಗಳನ್ನು ಶಾಸಕ ಕೆ.ಎಸ್‌. ಈಶ್ವರಪ್ಪ ಬಿಲ್ ಕಲೆಕ್ಟರ್‌ಗಳಿಗೆ ಹಸ್ತಾಂತರಿಸಿದರು.

ಶಿವಮೊಗ್ಗ:ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಲು ಡಿಜಿಟಲ್ ಪಾವತಿ ವ್ಯವಸ್ಥೆ (ಎಲೆಕ್ಟ್ರಾನಿಕ್‌ ಡೆಬಿಟ್ ಕಲೆಕ್ಷನ್‌) ಆರಂಭಿಸಿರುವುದರಿಂದ ಆಸ್ತಿ ತೆರಿಗೆ ಪಾವತಿಯಲ್ಲಿರುವ ಹಲವಾರು ಗೊಂದಲಗಳು ನಿವಾರಣೆಯಾಗಲಿವೆ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಅವರು ತಿಳಿಸಿದರು.

ಅವರು ಸೋಮವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಎಲೆಕ್ಟ್ರಾನಿಕ್‌ ಡೆಬಿಟ್ ಕಲೆಕ್ಷನ್‌ (ಇಡಿಸಿ) ಯಂತ್ರಗಳನ್ನು ಬಿಲ್ ಕಲೆಕ್ಟರ್‌ಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ತಂತ್ರಜ್ಞಾನದ ಬಳಕೆ ಮೂಲಕ ಸಾರ್ವಜನಿಕರು ತೆರಿಗೆಯನ್ನು ಸುಲಭವಾಗಿ ಪಾವತಿಸುವ ವಿಧಾನ ಇದಾಗಿದ್ದು, ರಾಜ್ಯದ ಕೆಲವೇ ಮಹಾನಗರ ಪಾಲಿಕೆಯಲ್ಲಿ ಈ ಸೌಲಭ್ಯ ಲಭ್ಯವಿದೆ. ಇಡಿಸಿ ಸೌಲಭ್ಯದಿಂದಾಗಿ ಆಸ್ತಿ ತೆರಿಗೆ ಸಂಗ್ರಹ ಸುಲಭವಾಗಲಿದ್ದು, ತೆರಿಗೆದಾರರು ತಾವು ಇರುವ ಸ್ಥಳದಲ್ಲಿಯೇ ತೆರಿಗೆಯನ್ನು ಪಾವತಿಸಬಹುದಾಗಿದೆ. ಅವರು ಪಾವತಿಸಿದ ಮೊತ್ತ ಅದೇ ದಿನ ಖಾತೆಗೆ ಜಮಾ ಆಗಲಿದ್ದು, ಪಾಲಿಕೆ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಸಾಧ್ಯವಾಗಲಿದೆ ಎಂದು ಹೇಳಿದರು.

ಎಚ್‌ಡಿಎಫ್‌ಸಿ ಬ್ಯಾಂಕ್‌ ಸಹಯೋಗದೊಂದಿಗೆ ಈ ಕಾರ್ಯಯೋಜನೆ ಜಾರಿಗೆ ತರಲಾಗಿದೆ. ಇನ್ನು ಮುಂದೆ ಬಿಲ್ ಕಲೆಕ್ಟರ್‌ಗಳು ಮನೆಗಳಿಗೆ ಭೇಟಿ ನೀಡಿ ಈ ಡಿಜಿಟಲ್ ಯಂತ್ರದ ಸಹಾಯದಿಂದ ಡಿಡಿ, ಚೆಕ್‌ ಅಥವಾ ಎಟಿಎಂ, ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ಮೂಲಕ ಆಸ್ತಿ ತೆರಿಗೆಯನ್ನು ಪಡೆಯಲು ಸಾಧ್ಯವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ಕಾರ್ಯವಿಧಾನ: ಇಡಿಸಿ ಆಂಡ್ರಾಯಿಡ್‌ ಆಧಾರಿತ ಯಂತ್ರವಾಗಿದ್ದು, ಆಸ್ತಿ ಐಡಿ ಆಧಾರದಲ್ಲಿ ಡಿಮಾಂಡ್‌ ನೋಟ್ ಇದರಲ್ಲಿ ಸಿದ್ಧಪಡಿಸಿ ಆಸ್ತಿ ತೆರಿಗೆಯನ್ನು ಪಾವತಿಸ ಬಹುದಾಗಿದೆ. ಈ ವ್ಯವಸ್ಥೆಯಲ್ಲಿ ಆಯುಕ್ತರು ತೆರಿಗೆ ಸಂಗ್ರಹದ ರಿಯಲ್ ಟೈಮ್‌ ಪ್ರಗತಿಯನ್ನು ಪರಿಶೀಲಿಸಬಹುದಾಗಿದೆ.

ಮುಂದಿನ ದಿನಗಳಲ್ಲಿ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಆರೋಗ್ಯ ಇನ್ಸ್‌ಪೆಕ್ಟರ್‌ಗಳಿಗೆ ನೀಡಲಾಗುತ್ತಿದ್ದು, ಪ್ಲಾಸ್ಟಿಕ್‌ ಬಳಕೆ, ನೈರ್ಮಲ್ಯ ಕಾಪಾಡದಿರುವುದು ಇತ್ಯಾದಿ ಪ್ರಕರಣಗಳಲ್ಲಿ ಸ್ಥಳದಲ್ಲಿಯೇ ದಂಡ ವಸೂಲಾತಿ ಮಾಡಲು ಹಾಗೂ ಬಾಡಿಗೆ ಸಂಗ್ರಹ ಕಾರ್ಯಕ್ಕೆ ಬಳಸಲು ಉದ್ದೇಶಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ಮಾಹಿತಿ ನೀಡಿದರು.

ಮೇಯರ್‌ ಲತಾ ಗಣೇಶ್‌, ಉಪ ಮೇಯರ್‌ ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಧಿಕಾರಿ ಅಶೋಕ್‌ ಮತ್ತಿತರರು ಇದ್ದರು.

ಟಾಪ್ ನ್ಯೂಸ್

bumrah

ನಾಯಕತ್ವದ ಜವಾಬ್ದಾರಿ ನೀಡಿದರೆ ಸಂತೋಷ: ಜಸ್ಪ್ರೀತ್ ಬುಮ್ರಾ

ಹೊಸ ಸೌರಮಂಡಲ ಪತ್ತೆ ಹಚ್ಚಿದ ಖಗೋಳ ಸಂಶೋಧಕರೆನಿಸಿರುವ  ಟಾಮ್‌ ಜಾಕೋಬ್ಸ್

ಹೊಸ ಸೌರಮಂಡಲ ಪತ್ತೆ ಹಚ್ಚಿದ ಖಗೋಳ ಸಂಶೋಧಕರೆನಿಸಿರುವ  ಟಾಮ್‌ ಜಾಕೋಬ್ಸ್

astrology today uv

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

thumb 1

ಮಾರ್ಚ್ ನಲ್ಲಿ 12-14ರ ವಯಸ್ಸಿನ ಮಕ್ಕಳಿಗೆ ಲಸಿಕೆ?

ಕೃತಕ ಚಂದ್ರನ ಸೃಷ್ಟಿಸಿದ ಚೀನ

ಕೃತಕ ಚಂದ್ರನ ಸೃಷ್ಟಿಸಿದ ಚೀನ

ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!

ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗಾಹುತಿಯಾದ ದನದ ಕೊಟ್ಟಿಗೆ: ಸಾವಿರಾರು ರೂ. ಒಣ ಹುಲ್ಲು ಭಸ್ಮ

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗಾಹುತಿಯಾದ ದನದ ಕೊಟ್ಟಿಗೆ: ಸಾವಿರಾರು ರೂ. ಒಣ ಹುಲ್ಲು ಭಸ್ಮ

ಬಾಲಕಿಯರ ವಸತಿ ನಿಲಯಕ್ಕೆ ಶಾಸಕರ ದಿಢೀರ್ ಭೇಟಿ

ಬಾಲಕಿಯರ ವಸತಿ ನಿಲಯಕ್ಕೆ ಶಾಸಕರ ದಿಢೀರ್ ಭೇಟಿ

ಸಾಗರದಲ್ಲಿ ಆಕ್ಸಿಜನ್‌ ಸಹಿತ 100ಕ್ಕೂ ಹೆಚ್ಚು ಬೆಡ್‌ ಸಿದ್ಧ : ಹಾಲಪ್ಪ ಹರತಾಳು

ಸಾಗರದಲ್ಲಿ ಆಕ್ಸಿಜನ್‌ ಸಹಿತ 100ಕ್ಕೂ ಹೆಚ್ಚು ಬೆಡ್‌ ಸಿದ್ಧ : ಹಾಲಪ್ಪ ಹರತಾಳು

17cow

ಅಪಘಾತ ತಡೆಗೆ ಬೀಡಾಡಿ ದನಗಳಿಗೆ, ವಿದ್ಯುತ್ ಕಂಬಕ್ಕೆ ರೇಡಿಯಂ ಸ್ಟಿಕ್ಕರ್ ಬಳಕೆ

ಅರಣ್ಯ ರಕ್ಷಕ ಸಿಬ್ಬಂದಿ ಸಂಬಳ ಕೇವಲ 11 ಸಾವಿರ! ಜೀವನ ನಡೆಸುವುದೇ ದುಸ್ತರ

ಅರಣ್ಯ ರಕ್ಷಕ ಸಿಬ್ಬಂದಿ ಸಂಬಳ ಕೇವಲ 11 ಸಾವಿರ! ಜೀವನ ನಡೆಸುವುದೇ ದುಸ್ತರ

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

bumrah

ನಾಯಕತ್ವದ ಜವಾಬ್ದಾರಿ ನೀಡಿದರೆ ಸಂತೋಷ: ಜಸ್ಪ್ರೀತ್ ಬುಮ್ರಾ

ಹೊಸ ಸೌರಮಂಡಲ ಪತ್ತೆ ಹಚ್ಚಿದ ಖಗೋಳ ಸಂಶೋಧಕರೆನಿಸಿರುವ  ಟಾಮ್‌ ಜಾಕೋಬ್ಸ್

ಹೊಸ ಸೌರಮಂಡಲ ಪತ್ತೆ ಹಚ್ಚಿದ ಖಗೋಳ ಸಂಶೋಧಕರೆನಿಸಿರುವ  ಟಾಮ್‌ ಜಾಕೋಬ್ಸ್

astrology today uv

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

thumb 1

ಮಾರ್ಚ್ ನಲ್ಲಿ 12-14ರ ವಯಸ್ಸಿನ ಮಕ್ಕಳಿಗೆ ಲಸಿಕೆ?

ಕೃತಕ ಚಂದ್ರನ ಸೃಷ್ಟಿಸಿದ ಚೀನ

ಕೃತಕ ಚಂದ್ರನ ಸೃಷ್ಟಿಸಿದ ಚೀನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.