Udayavni Special

ಸಾಗರ ಮಾರಿಕಾಂಬಾ ಜಾತ್ರೆ ಶುರು

ಭಕ್ತರಿಂದ ದೇವಿಯ ಮಡಿಲು ತುಂಬುವ ಸೇವೆ 9 ದಿನಗಳ ಕಾಲ ಅದ್ಧೂರಿ ಜಾತ್ರೆ ವಿವಿಧ ಕಾರ್ಯಕ್ರಮ

Team Udayavani, Feb 19, 2020, 1:20 PM IST

19-February-12

ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಹಾಗೂ ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದ ಮಾರಿಕಾಂಬಾ ದೇವಿಯ ಜಾತ್ರೆಯು ಮಂಗಳವಾರದಿಂದ ಪ್ರಾರಂಭಗೊಂಡಿತು. ಜನಸಾಗರದ ನಡುವೆ ಪ್ರಾರಂಭಗೊಂಡಿರುವ ಜಾತ್ರೆಯು ಮುಂದಿನ 9 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

ಮಂಗಳವಾರ ಬೆಳಗ್ಗೆ 3 ಗಂಟೆಗೆ ಮಹಾಗಣಪತಿ ದೇವಾಲಯದಲ್ಲಿ ದೇವಿಯ ತಾಳಿ ಮತ್ತು   ರಣಗಳಿಗೆ ಪೂಜೆ ಸಲ್ಲಿಸಿ, ಅರ್ಚಕ ರಮೇಶ್‌ ಭಟ್ಟರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ನಂತರ ಮಂಗಳವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಮಂಗಳದ್ರವ್ಯಗಳನ್ನು ತರಲಾಯಿತು. ಮೆರವಣಿಗೆಯಲ್ಲಿ ಕೇರಳದ ಕಲಾತಂಡದವರು ಚಂಡೆವಾದನ ನಡೆಸಿಕೊಟ್ಟರು. ದೇವಿಯ ತವರು ಮನೆಯಲ್ಲಿ ಉತ್ಸವಮೂರ್ತಿಗೆ ಆಭರಣ ತೊಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಹಿಂದಿನ ವರ್ಷಗಳಿಗಿಂತ ಹೆಚ್ಚು ಜನಸ್ತೋಮ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಳಗಿನ ಜಾವದಿಂದಲೇ ಜನರು ದೇವಿಯ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದರು. ಮಾರಿಕಾಂಬಾ ದೇವಸ್ಥಾನದಿಂದ ಪೊಲೀಸ್‌ ಠಾಣೆಯ ಚಾಮರಾಜಪೇಟೆ ವೃತ್ತವನ್ನು ದಾಟಿ ಸೇವಾ ಸಾಗರ ಶಾಲೆಯನ್ನು ತಲುಪಿದ ಸರದಿ ಸಾಲಿನಲ್ಲಿ ಜನರು ಶಾಂತಿಯಿಂದ ನಿಂತು ಅಮ್ಮನವರ ದರ್ಶನ ಪಡೆದರು. ಈ ಭಕ್ತಾದಿಗಳಿಗೆ ವಿವಿಧ ಸಂಘ- ಸ್ಥೆಗಳ ಸದಸ್ಯರು ಪಾನಕ, ಕುಡಿಯುವ ನೀರು ಒದಗಿಸುವ ಮೂಲಕ ಅಮ್ಮನವರ ಸೇವೆ ಮಾಡಿದ್ದು ವಿಶೇಷವಾಗಿತ್ತು.

ಕೌಂಟರ್‌ ಮೂಲಕ ಸೇವೆ: ದೇವಿಗೆ ಹರಕೆ ಸಲ್ಲಿಸುವವರಿಗಾಗಿ ಪ್ರತ್ಯೇಕ ಕೌಂಟರ್‌ ಗಳನ್ನು ವ್ಯವಸ್ಥಾಪಕ ಸಮಿತಿ ನಿರ್ಮಿಸಿತ್ತು. ಉಡಿಸೇವೆ, ತುಲಾಭಾರ ಹಾಗೂ ಕುಂಕುಮಾರ್ಚನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ದೇವಿ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರಿಗೆ ಸುಲಭವಾಗಿ ದರ್ಶನ ಸಿಗಲಿ ಎನ್ನುವ ಕಾರಣಕ್ಕೆ ವ್ಯವಸ್ಥಾಪಕ ಸಮಿತಿ ಒಂದು ಸಾವಿರ ರೂ. ಮುಖಬೆಲೆಯ ವಿಶೇಷ ಪಾಸ್‌ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ದರ್ಶನ ಪಡೆದವರಿಗೆ ವ್ಯವಸ್ಥಾಪಕ ಸಮಿತಿ ಗಡಿಯಾರ, ಸ್ಟೀಲ್‌ ತಟ್ಟೆ, ಪ್ರಸಾದ ನೀಡುವ ಜೊತೆಗೆ, ತಕ್ಷಣ ದರ್ಶನ ಅವಕಾಶ ಕಲ್ಪಿಸಿದ್ದರೂ ಈ ಸರದಿ ಸಾಲು ಸಹ ಮಾರಿಕಾಂಬಾ ದೇವಸ್ಥಾನದಿಂದ ಬಿ.ಎಚ್‌.ರಸ್ತೆಯವರೆಗೆ ಇತ್ತು. ಜನರು ಬಿಸಿಲನ್ನು ಸಹ ಗಮನಿಸದೆ ಅಮ್ಮನ ದರ್ಶನಕ್ಕೆ ಕಾಯುತ್ತಿದ್ದರು.

ಸ್ನೇಹಿತರಿಂದ ಊಟದ ವ್ಯವಸ್ಥೆ:  ಪ್ರತಿಬಾರಿಯಂತೆ ಈ ಬಾರಿ ಸಹ ಸ್ನೇಹಿತರು ಎಂಬ ಹೆಸರಿನ ಸಂಸ್ಥೆ ಜಾತ್ರೆಗೆ ಬರುವ ಭಕ್ತಾದಿಗಳಿಗೆ 19ರಿಂದ ದೇವಸ್ಥಾನ ಪಕ್ಕದ ನಗರಸಭೆ ಕಾಂಪ್ಲೆಕ್ಸ್‌ನಲ್ಲಿ ಉಚಿತ ಭೋಜನ ವ್ಯವಸ್ಥೆ ಮಾಡಿದೆ. ಜೊತೆಗೆ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಮಾರ್ಕೆಟ್‌ ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಜಾತ್ರಾ ಯಶಸ್ಸಿಗೆ ಕೆಲಸ ಮಾಡುವವರಿಗೆ ಮತ್ತು ಬರುವ ಭಕ್ತಾದಿಗಳಿಗೆ ಉಚಿತ ಊಟ ಹಾಗೂ ಉಪಹಾರದ ವ್ಯವಸ್ಥೆ
ಸಹ ಮಾಡಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ವ್ಯವಸ್ಥಾಪಕ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಚಾಲನಾ ಸಮಿತಿ, ಸಮಿತಿ ಸದಸ್ಯರು ಅಮ್ಮನವರ ದರ್ಶನಕ್ಕೆ ಬರುವವರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ನಿಗಾ ವಹಿಸಿದ್ದರೆ ಆರಕ್ಷಕ ಸಿಬ್ಬಂದಿಗಳ ಜೊತೆ ಗೃಹರಕ್ಷಕದಳ, ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ತಂಡ ಭಕ್ತಾದಿಗಳು ಸುಲಭವಾಗಿ ದೇವಿ ದರ್ಶನ ಮಾಡಲು ಸಹಕಾರ ನೀಡಿದ್ದು ಗಮನ ಸೆಳೆಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sm-tdy-1

ಹಾಪ್‌ಕಾಮ್ಸ್‌ ಮಳಿಗೆ ತೆರೆಯಲು ಸೂಚನೆ

ಲಾಕ್‌ಡೌನ್‌; ಔಷಧ ಅಭಾವ ಸಾಧ್ಯತೆ

ಲಾಕ್‌ಡೌನ್‌; ಔಷಧ ಅಭಾವ ಸಾಧ್ಯತೆ

ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ದುಷ್ಕರ್ಮಿಗಳು: ಓರ್ವನ ಸೆರೆ

ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ದುಷ್ಕರ್ಮಿಗಳು: ಓರ್ವನ ಸೆರೆ

ಪ್ರಾಣಿಗಳಿಗೂ ಈಗ ಕೋವಿಡ್ 19 ಸಂಕಷ್ಟ

ಪ್ರಾಣಿಗಳಿಗೂ ಈಗ ಕೋವಿಡ್ 19 ಸಂಕಷ್ಟ

ಲಾಕ್ ಡೌನ್ ಆದೇಶ ಉಲ್ಲಂಘಿಸಿ ನಮಾಜ್: ಲಾಕ್ ಮಾಡಿದ ಪೊಲೀಸರು

ಲಾಕ್ ಡೌನ್ ಆದೇಶ ಉಲ್ಲಂಘಿಸಿ ನಮಾಜ್: ಲಾಕ್ ಮಾಡಿದ ಪೊಲೀಸರು

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ  ಆರಂಭ

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ ಆರಂಭ