Udayavni Special

ಮುಂದುವರಿದ ಸಹ್ಯಾದ್ರಿ ಕ್ಯಾಂಪಸ್‌ ಉಳಿಸಿ ಅಭಿಯಾನ


Team Udayavani, May 1, 2021, 6:13 PM IST

ಮುಂದುವರಿದ ಸಹ್ಯಾದ್ರಿ ಕ್ಯಾಂಪಸ್‌ ಉಳಿಸಿ ಅಭಿಯಾನ

ಶಿವಮೊಗ್ಗ: ಸಹ್ಯಾದ್ರಿ ಕ್ಯಾಂಪಸ್‌ ಉಳಿಸಿ ಅಭಿಯಾನ ಮುಂದುವರೆದಿದ್ದು, ಇದಕ್ಕಾಗಿ ಕಾಲೇಜ್‌ನ ಹಳೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ.

ಸಹ್ಯಾದ್ರಿ ಕಾಲೇಜಿನ 18.4 ಎಕರೆ ಜಾಗವನ್ನು ಖಾಸಗಿಯವರಿಗೆ ನೀಡಲು ಹೊರಟಿರುವುದನ್ನು ಖಂಡಿಸಿ ಮತ್ತು ಯೋಜನೆ ವಿರೋ ಧಿಸಿ ಕುವೆಂಪು ವಿವಿ ಕುಲಪತಿಗೆ ಇ -ಮೇಲ್‌ ಮಾಡುವ ಮೂಲಕ ಕಾಲೇಜಿನ ಹಳೆಯ ವಿದ್ಯಾರ್ಥಿಗಳೆಲ್ಲರೂ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಖೇಲೋ ಇಂಡಿಯಾ ಹಾಗೂ ಸಾಯ್‌ ಸಂಸ್ಥೆಗೆ ಜಾಗ ನೀಡಲು ನಮ್ಮ ವಿರೋಧವಿದೆ. ಇದರಿಂದ ನಮ್ಮ ಕ್ಯಾಂಪಸ್‌ನ್ನು ನಾವು ಕಳೆದುಕೊಳ್ಳುತ್ತೇವೆ. ಹಾಗಾಗಿ ನೀವು ಈ ಪ್ರಾಜೆಕ್ಟ್ಗೆ ಒಪ್ಪಿಗೆ ಸೂಚಿಸಬಾರದು ಎಂದು ಈ ಮೂಲಕ ಮನವಿ ಮಾಡುತ್ತೇವೆ ಎಂಬ ಇ-ಮೇಲ್‌ ಸಂದೇಶವನ್ನು ಹಳೆಯ ವಿದ್ಯಾರ್ಥಿಗಳು ಈಗಾಗಲೇ ಕುವೆಂಪು ವಿವಿ ಕುಲಪತಿಗೆ ಕಳುಹಿಸುತ್ತಿದ್ದಾರೆ. ಇದಲ್ಲದೇ, ಟ್ವಿಟರ್‌ ಮೂಲಕವೂ ಕೂಡ ಹಳೆ ವಿದ್ಯಾರ್ಥಿಗಳು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದರ ಜೊತೆಗೆ ಮೇ 1 ರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಹಳೆಯ ವಿದ್ಯಾರ್ಥಿಗಳು ಮತ್ತು ಈ ಚಳವಳಿಯನ್ನು ಬೆಂಬಲಿಸುವವರು ತಮ್ಮ ವಾಟ್ಸಾಪ್‌, ಫೇಸ್‌ ಬುಕ್‌, ಡಿಪಿ ಮತ್ತು ಸ್ಟೇಟಸ್‌ ಗಳಲ್ಲಿ ಸಹ್ಯಾದ್ರಿ ಕ್ಯಾಂಪಸ್‌ ಉಳಿಸಿ ಇಮೇಜ್‌ ಅನ್ನು ಅಳವಡಿಸಿಕೊಳ್ಳಲು ಕರೆ ನೀಡಲಾಗಿದೆ.

ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ವಿಶೇಷ ಕ್ರೀಡಾ ತರಬೇತಿ ಕೇಂದ್ರ ಮಂಜೂರಾಗಿರುವುದು ಸ್ವಾಗತವಾದರೂ, ಸಹ್ಯಾದ್ರಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಇದನ್ನು ಸ್ಥಾಪಿಸುವುದು ಬೇಡ, ಇದರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಇದಕ್ಕಾಗಿ ಬೇರೆ ಕಡೆ ಜಾಗವನ್ನು ಗುರುತಿಸಿ ಅಲ್ಲೇ ಆರಂಭಿಸಲಿ. ಕ್ಯಾಂಪಸ್‌ ಉಳಿಸಲು ಎಲ್ಲರೂ ಸಹಕಾರ ನೀಡಬೇಕೆಂದು ಸಹ್ಯಾದ್ರಿ ಕಾಲೇಜ್‌ನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ. ಗುರುಮೂರ್ತಿ ಅವರು ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಮೀಸಲು ಮಿತಿ ವಿವಾದ: ರಾಜ್ಯ ಸರಕಾರಗಳಿಗೇ ಸಿಗಲಿ ಅಧಿಕಾರ

ಮೀಸಲು ಮಿತಿ ವಿವಾದ: ರಾಜ್ಯ ಸರಕಾರಗಳಿಗೇ ಸಿಗಲಿ ಅಧಿಕಾರ

ಪಂಚ ಸಚಿವರು ಫುಲ್‌ ಬ್ಯುಸಿ

ಪಂಚ ಸಚಿವರು ಫುಲ್‌ ಬ್ಯುಸಿ

ನಂಬಿಕೆಯ ಬೀಜದಿಂದ ಬದುಕು ಬೆಳೆಯುತ್ತದೆ!

ನಂಬಿಕೆಯ ಬೀಜದಿಂದ ಬದುಕು ಬೆಳೆಯುತ್ತದೆ!

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

yytyyt

2ನೇ ಮೀರಜ್‌ ಖ್ಯಾತಿ ಬಾಗಲಕೋಟೆಯಲ್ಲಿ ಆಕ್ಸಿಜನ್‌ ಆತಂಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-22

ಆಮ್ಲಜನಕ ಲಭ್ಯತೆ ಸಮಸ್ಯೆ; ಶಾಸಕ ಹಾಲಪ್ಪ ಆತಂಕ

6-21

ಕೆಲ ಅಸಮಾಧಾನದ ಮಧ್ಯೆಯೂ ಜನಪರ ಕೆಲಸದ ಸಂತೃಪ್ತಿ ಇದೆ : ಹಕ್ರೆ

fytyrtyr

ಲಾರಿ ಢಿಕ್ಕಿ : ಸ್ಥಳದಲ್ಲೇ ವ್ಯಕ್ತಿ ಸಾವು

ಮೆಗ್ಗಾನ್ ಆಸ್ಪತ್ರೆಯಲ್ಲೂ ಆಕ್ಸಿಜನ್ ಬೆಡ್ ಅಭಾವ, ಬೋರ್ಡ್ ನೋಡಿ ಸೋಂಕಿತರಲ್ಲಿ ಆತಂಕ

ಮೆಗ್ಗಾನ್ ಆಸ್ಪತ್ರೆಯಲ್ಲೂ ಆಕ್ಸಿಜನ್ ಬೆಡ್ ಅಭಾವ, ಬೋರ್ಡ್ ನೋಡಿ ಸೋಂಕಿತರಲ್ಲಿ ಆತಂಕ

ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆಗೆ ಶೆಟ್ಟರ್ ಭೇಟಿ: ಆಕ್ಸಿಜನ್ ಉತ್ಪಾದನೆ ಕುರಿತಂತೆ ಚರ್ಚೆ

ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆಗೆ ಶೆಟ್ಟರ್ ಭೇಟಿ: ಆಕ್ಸಿಜನ್ ಉತ್ಪಾದನೆ ಕುರಿತಂತೆ ಚರ್ಚೆ

MUST WATCH

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

udayavani youtube

ಅಮಾಸೆ ಗಿರಾಕಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಡಿ ಕೆ ಶಿವಕುಮಾರ್​ ಗರಂ..!

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

ಹೊಸ ಸೇರ್ಪಡೆ

ಮುಂಬಯಿ: ಸೋಂಕಿಗೆ 11 ಮಕ್ಕಳು ಸಾವು

ಮುಂಬಯಿ: ಸೋಂಕಿಗೆ 11 ಮಕ್ಕಳು ಸಾವು

ಸಚಿವರ ಜತೆ ಚರ್ಚಿಸಿ ತೀರ್ಮಾನ:  ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಸಚಿವರ ಜತೆ ಚರ್ಚಿಸಿ ತೀರ್ಮಾನ:  ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಕರಾವಳಿ ಅಭಿವೃದ್ಧಿ ವಿಷನ್‌ ಗ್ರೂಪ್‌ ರಚನೆ

ಕರಾವಳಿ ಅಭಿವೃದ್ಧಿ ವಿಷನ್‌ ಗ್ರೂಪ್‌ ರಚನೆ

ಸರಕಾರದ ಯೋಜನೆ ಲಾಭ ಬೇಕೆಂದರೆ ಆಧಾರ್‌ ಕಡ್ಡಾಯ

ಸರಕಾರದ ಯೋಜನೆ ಲಾಭ ಬೇಕೆಂದರೆ ಆಧಾರ್‌ ಕಡ್ಡಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.