ಖಾತ್ರಿ: ಪ್ರಗತಿ ಸಾಧಿಸದಿದ್ದರೆ ಕ್ರಮ

ಮಳೆ ನೆಪ ಹೇಳಿ ಕಾಮಗಾರಿ ನಿಲ್ಲಿಸಬೇಡಿ ಪಿಡಿಒಗಳು ಗುರಿ ತಲುಪಲಿ

Team Udayavani, Jun 11, 2020, 3:35 PM IST

11-June-13

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಶಿವಮೊಗ್ಗ: ಮಳೆ ನೆಪ ಮಾಡಿ ಬಡವರಿಗೆ ಕೆಲಸ ನೀಡದಿದ್ದರೆ ಅಂತಹ ತಾಂತ್ರಿಕ ಸಹಾಯಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಎಚ್ಚರಿಕೆ ನೀಡಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ನಡೆದ ಅಂತರ್ಜಲ ಕಾಮಗಾರಿ ಹಾಗೂ ಮಹಾತ್ಮಗಾಂಧಿ  ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ತಿಂಗಳಲ್ಲಿ ಪಿಡಿಒಗಳು ನರೇಗಾ ಕೆಲಸದಲ್ಲಿ ಪ್ರಗತಿ ಸಾಧಿ ಸದಿದ್ದರೆ ಕ್ರಮ ನಿಶ್ಚಿತ. ಮಳೆಗಾಲದ ನೆಪದಲ್ಲಿ ಸಾಧನೆ ಕಡಿಮೆ ಮಾಡಬಾರದು. ಹೀಗಾಗಿ ಏನೇನು ಸಾಧ್ಯವೋ ಹುಡುಕಿ ಕೆಲಸ ನೀಡುವಂತೆ ಸೂಚಿಸಿದರು. ಯಾವೊಬ್ಬ ಬಡವನೂ ಕೆಲಸವಿಲ್ಲದೆ ಪರದಾಡಬಾರದು. ಕಾಮಗಾರಿ ಏನೇನು ಮಾಡಿಸಬೇಕೋ ಅದು ಈ ತಿಂಗಳ ನಡೆಯುತ್ತಿದೆ. ಅದೇ ರೀತಿ ಮುಂದಿನ ತಿಂಗಳಲ್ಲಿ ಯಾವ ಕಾಮಗಾರಿ ಕೈಗೊಳ್ಳಬೇಕು ಎಂಬುದನ್ನು ಈಗಲೇ ಪಟ್ಟಿ ಮಾಡಿ ಸಿಇಒ ಜೊತೆ ಚರ್ಚಿಸಿ. ನೀವೇ ಕೆಲಸವನ್ನು ಆಯ್ಕೆ ಮಾಡಿಕೊಂಡಲ್ಲಿ ಗುರಿ ನಿಗದಿ ಪಡಿಸುವುದಿಲ್ಲ ಎಂದರು.

ಖಾತ್ರಿ ಯೋಜನೆಗಾಗಿ ಒಟ್ಟು 1 ಲಕ್ಷ ಕೋಟಿ ಅನುದಾನ ಬಿಡುಗಡೆ ಆಗಿದೆ. ಮೆಟೀರಿಯಲ್‌, ಲೇಬರ್‌ ಹಣ ಬಿಡುಗಡೆ ಆಗಿದೆ. ಈ ಬಾರಿ ಯಾವುದೂ ಬಾಕಿ ಇಲ್ಲ. ಹಣ ಖಾತೆಗೆ ಬರುತ್ತಿದೆ. ಹಾಗಾಗಿ ಕಾಮಗಾರಿಗಳ ಗುರಿ ಸಿದ್ಧಪಡಿಸಿಕೊಳ್ಳಿ. ಈ ಬಾರಿ ನಡೆದ ಕಾಮಗಾರಿಯಲ್ಲಿ 10 ಗ್ರಾಮ ಪಂಚಾಯತ್‌ ಗಳ ಕಾಮಗಾರಿ ಮೆಚ್ಚಿಕೊಳ್ಳಬಹುದಾಗಿದೆ. ಆದರೆ ಉಳಿದ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಕೆಲಸ ಸಮಾಧಾನಕರವಾಗಿಲ್ಲ ಎಂದರು.

ಅಂತರ್ಜಲ ಮತ್ತು ನರೆಗಾ ಯೋಜನೆಯಲ್ಲಿ ಶಿವಮೊಗ್ಗ ಪೈಲೆಟ್‌ ಪ್ರಾಜೆಕ್ಟ್ ಆಗಿದ್ದು ಇತರೆ ಜಿಲ್ಲೆಗಳಿಗೆ ರಾಜ್ಯದಲ್ಲೇ ಶಿವಮೊಗ್ಗ ಮಾದರಿಯಾಗಬೇಕು. ಹೀಗಾಗಿ ಮುಂದಿನ ದಿನಗಳಲ್ಲಿ ಗುರಿ ನಿಗದಿಪಡಿಸಿಕೊಂಡು ಕಾಮಗಾರಿ ಕೈಗೊಳ್ಳಿ. ಪ್ರತಿ ತಿಂಗಳು ಸಭೆ ನಡೆಸಿ ಪ್ರಗತಿ ಪರಿಶೀಲಿಸಲಾಗುವುದು ಎಂದರು. ಕೆಲವು ಪಿಡಿಒಗಳಲ್ಲಿ ಕಾಮಗಾರಿ ಬಗ್ಗೆ ಅಸಡ್ಡೆ ಇದೆ. ಈ ಅಸಡ್ಡೆ ಸಲ್ಲದು. ಹಾಗಾಗಿ ಪ್ರತಿ ತಿಂಗಳು ಈ ಕಾಮಗಾರಿ ಕುರಿತು ಸಭೆ ನಡೆಸಬೇಕೆಂದರು.ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್‌. ಕುಮಾರ್‌, ಉಪಾಧ್ಯಕ್ಷೆ ವೇದಾ ವಿಜಯ್‌ ಕುಮಾರ್‌, ಜಿಪಂ ಸಿಇಒ ಎಂ.ಎಲ್‌. ವೈಶಾಲಿ ಮೊದಲಾದವರಿದ್ದರು

ಟಾಪ್ ನ್ಯೂಸ್

Imran Tahir played a blinder for World Giants

ಇಮ್ರಾನ್ ತಾಹಿರ್ ಸ್ಪೋಟಕ ಬ್ಯಾಟಿಂಗ್

1death

ಸಾಗರ: 5 ವರ್ಷದ ಮಗು ಹೃದಯಾಘಾತದಿಂದ ಸಾವು

covid-19

24 ಗಂಟೆ ಅವಧಿಯಲ್ಲಿ ದೇಶದಲ್ಲಿ 3.33 ಲಕ್ಷ ಹೊಸ ಕೋವಿಡ್ ಪ್ರಕರಣಗಳು ಪತ್ತೆ

pranaya raja srinath

ಪ್ರಣಯ ರಾಜನ ಕನಸಿನ ಕೂಸು ‘ಆರ್ಟ್‌ ಎನ್‌ ಯು’

ಕಪ್ಪಿ ಕುಲದಾರ‍್ನ ಕಟ್ಟಿ ಹಾಕಲಿಲ್ಲಾ ಅಂದ್ರ ಕಷ್ಟ್ ಐತಿ!

ಕಪ್ಪಿ ಕುಲದಾರ‍್ನ ಕಟ್ಟಿ ಹಾಕಲಿಲ್ಲಾ ಅಂದ್ರ ಕಷ್ಟ್ ಐತಿ!

ಎಂಜಿನಿಯರ್‌ ನಿಂದ ಬ್ಯಾಂಕ್‌ ದರೋಡೆ! ಸಾಲ ತೀರಿಸಲು ಕೃತ್ಯವೆಸಗಿ ಪೊಲೀಸರ ಅತಿಥಿಯಾದ!

ಎಂಜಿನಿಯರ್‌ ನಿಂದ ಬ್ಯಾಂಕ್‌ ದರೋಡೆ!

ಟೀಂ ಇಂಡಿಯಾ ಹಾರಾಟಕ್ಕೆ ಉಡುಗಿಹೋದ ಉಗಾಂಡ: ಅ.19 ಹುಡುಗರಿಗೆ 326 ರನ್ ಅಂತರದ ಜಯ

ಟೀಂ ಇಂಡಿಯಾ ಹಾರಾಟಕ್ಕೆ ಉಡುಗಿಹೋದ ಉಗಾಂಡ: ಅ.19 ಹುಡುಗರಿಗೆ 326 ರನ್ ಅಂತರದ ಜಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3praksh

ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಕಣ್ಮರೆ: ಮುಂದುವರೆದ ಶೋಧ ಕಾರ್ಯ

1death

ಸಾಗರ: 5 ವರ್ಷದ ಮಗು ಹೃದಯಾಘಾತದಿಂದ ಸಾವು

ಚವಬಗಜಹಗಗ

ಕಲಾ ಮಾಧ್ಯಮದ ಹಿಂದಿದೆ ಸಮಾಜ ಜಾಗೃತಿಯ ಆಶಯ

ದತಯಯಜಯಹಗ

ಸೊರಬ ಮಾರ್ಗವಾಗಿ ರೈಲ್ವೆ ಸಂಪರ್ಕಕ್ಕೆ ಒತ್ತಾಯ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರುನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರಿನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

3praksh

ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಕಣ್ಮರೆ: ಮುಂದುವರೆದ ಶೋಧ ಕಾರ್ಯ

ಸಂಸ್ಥೆಯು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿ: ಡಾ| ಕವಿತಾ ಚೌತ್ಮೋಲ್‌

ಸಂಸ್ಥೆಯು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿ: ಡಾ| ಕವಿತಾ ಚೌತ್ಮೋಲ್‌

Imran Tahir played a blinder for World Giants

ಇಮ್ರಾನ್ ತಾಹಿರ್ ಸ್ಪೋಟಕ ಬ್ಯಾಟಿಂಗ್

2covid

ಪರೀಕ್ಷೆ ಮಾಡಿಸದಾಕೆಗೆ ಕೊರೊನಾ ಪಾಸಿಟಿವ್‌!

1death

ಸಾಗರ: 5 ವರ್ಷದ ಮಗು ಹೃದಯಾಘಾತದಿಂದ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.