ವಾಕಿಂಗ್‌ ಮಾಡಿದವರಿಗೆ ಎಸ್ಪಿ – ಡಿಸಿ ಕ್ಲಾಸ್‌!

Team Udayavani, Apr 24, 2020, 4:46 PM IST

24-April-28

ಶಿವಮೊಗ್ಗ: ವಾಕಿಂಗ್‌ ಬಂದವರಿಗೆ ಎಸ್‌ಪಿ, ಡಿಸಿ ತರಾಟೆಗೆ ತೆಗೆದುಕೊಂಡರು.

ಶಿವಮೊಗ್ಗ: ಇದು ಕೊನೆಯ ವಾರ್ನಿಂಗ್‌. ನಾಳೆಯಿಂದ ಮತ್ತೇನಾದರೂ ವಾಕಿಂಗ್‌, ಜಾಗಿಂಗ್‌, ಸೈಕ್ಲಿಂಗ್‌ ಹೆಸರಿನಲ್ಲಿ ಬೀದಿ ಸುತ್ತಲು ಬಂದರೆ ಬೇರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲಾಕ್‌ಡೌನ್‌ ಕ್ರಮದ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್‌ ಗುರುವಾರ ಖಡಕ್‌ ಸೂಚನೆ ನೀಡಿದರು.

ಗುರುವಾರ ಬೆಳಗ್ಗೆ ನೆಹರೂ ಕ್ರೀಡಾಂಗಣದ ಬಳಿ ವಾಕಿಂಗ್‌ಗೆ ಬಂದಿದ್ದ ಎಲ್ಲರನ್ನೂ ಒಂದೆಡೆ ಸೇರಿಸಿ ಅವರಿಗೆ ಅತ್ಯಂತ ಗೌರವದಿಂದಲೇ ಚಹಾ, ಬಿಸ್ಕೆಟ್‌
ಹಾಗೂ ಕುಡಿಯುವ ನೀರನ್ನು ನೀಡಿ ಇದು ಕಟ್ಟ ಕಡೆಯ ಆದೇಶ. ನಿಮ್ಮೆಲ್ಲರ ಹೆಸರು, ವಿಳಾಸ ಹಾಗೂ ಮೊಬೈಲ್‌ ನಂಬರ್‌ ಸಂಗ್ರಹಿಸಲಾಗುತ್ತದೆ ಎಂದರು. ಶಿವಮೊಗ್ಗ ನೆಹರೂ ಒಳ ಕ್ರೀಡಾಂಗಣದ ಬಳಿ ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದು, ಬೆಳಗಿನ ವಾಕಿಂಗ್‌ ಹೆಸರಿನಲ್ಲಿ ಬಂದಿದ್ದವರನೆಲ್ಲಾ ಒಂದೆಡೆ ಸೇರಿಸಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಅವರೊಂದಿಗೆ ಸಭೆ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿಗಳು ಲಾಕ್‌ ಡೌನ್‌ ವ್ಯವಸ್ಥೆಯ ಅರ್ಥವನ್ನು ತಿಳಿದುಕೊಳ್ಳಿ. ಜೀವ ಇದ್ದರೆ ಒಳ್ಳೆಯದು. ಬೀದಿ ಸುತ್ತಿ ಮನೆ ಮನೆಗೆ ಕೊರೊನಾ ತೆಗೆದುಕೊಂಡು ಹೋಗಬೇಡಿ ಎಂದರು.  ಇದೇ ಸಂದರ್ಭದಲ್ಲಿ ಇವರಿಗೆಲ್ಲ ಥರ್ಮಲ್‌ ಟೆಸ್ಟಿಂಗ್‌ ಮಾಡಿ ತಪಾಸಣೆ ನಡೆಸಲಾಗುವುದು. ಇದು ಕಡೆಯ ಸೂಚನೆ ಎಂದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಇದು ಕೊನೆಯ ಎಚ್ಚರಿಕೆ. ಅಂತರ್ಜಾಲದಲ್ಲಿ ಮಾಹಿತಿ ಪಡೆದುಕೊಳ್ಳಿ. ಕೋವಿಡ್ ಬಂದಿರುವ ಸ್ಥಳದಲ್ಲಿ ನಿರ್ಬಂಧ ಹೇಗಿದೆ ನೋಡಿ. ಇದು ನಮ್ಮ ಜಿಲ್ಲೆಗೆ ಬರಬಾರದು ಎಂದು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ನೀವು ಮನೆಯಲ್ಲಿದ್ದರೆ ಸಾಕು ಎಂದರು. ಸಾಮಾಜಿಕ ಅಂತರ ಕಾಪಾಡಿಕೊಂಡು ವಾಕ್‌ ಮಾಡಲು ಅವಕಾಶ ಮಾಡಿಕೊಟ್ಟರೆ ನೀವು ಇಷ್ಟೊಂದು ಜನ ವಾಕ್‌ ಮಾಡುತ್ತಿದ್ದೀರಿ. ನಮಗೆ ಬೇರೆ ಕೆಲಸಗಳು ಇವೆ. ನಿಮಗೆ ಎಷ್ಟು ಅಂತ ಎಚ್ಚರಿಕೆ ನೀಡೋದು. ಇದೇ ಕೊನೆ ಎಚ್ಚರಿಕೆ ಎಂದು ಡಿಸಿ ಹೇಳಿದರು. ಮೊದಲಿಗೆ ಇವರಿಗೆಲ್ಲಾ ಟೀ, ಬಿಸ್ಕತ್‌ ನೀಡಲಾಯಿತು. ಇವರದೆಲ್ಲಾ ಹೆಸರು ವಿಳಾಸ ಹಾಗೂ ಫೋನ್‌ ನಂಬರ್‌ ಬರೆದುಕೊಂಡು ಬಿಟ್ಟು ಕಳುಹಿಸಲಾಯಿತು.

ಟಾಪ್ ನ್ಯೂಸ್

PSI ನೇಮಕಾತಿ ಅಕ್ರಮ : ಅಮಾನತುಗೊಂಡ DYSP ಮಲ್ಲಿಕಾರ್ಜುನ್ ಸಾಲಿ ಸೇರಿ ಐವರಿಗೆ ಜೈಲೇ ಗತಿ

ಪಿಎಸ್ಐ ನೇಮಕಾತಿ ಅಕ್ರಮ : ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ ಸೇರಿ ಐವರಿಗೆ ಜೈಲೇ ಗತಿ

ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಿದರೆ ಸ್ವಾಗತ: ಡಿ.ಕೆ.ಸುರೇಶ್‌

ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಿದರೆ ಸ್ವಾಗತ: ಡಿ.ಕೆ.ಸುರೇಶ್‌

“ಕೆಜಿಎಫ್-2′ ಮೆಚ್ಚಿದ ಸ್ಟಾರ್‌ ನಿರ್ದೇಶಕ ಶಂಕರ್‌

“ಕೆಜಿಎಫ್-2′ ಮೆಚ್ಚಿದ ಸ್ಟಾರ್‌ ನಿರ್ದೇಶಕ ಶಂಕರ್‌

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಹಿನ್ನೆಲೆ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

1-aasdad

ಆಡಳಿತಕ್ಕೆ ಚುರುಕು ಮುಟ್ಟಿಸಬೇಕು, ಜನರಿಗೆ ಯೋಜನೆಗಳು ತಲುಪಬೇಕು : ಸಿಎಂ

1-asdasdas

ಟ್ರಯಲ್ಸ್ ವೇಳೆ ರೆಫ್ರಿ ಮೇಲೆ ಹಲ್ಲೆ: ಕುಸ್ತಿಪಟು ಸತೇಂದರ್ ಮಲಿಕ್ ಗೆ ಜೀವಾವಧಿ ನಿಷೇಧ

ಕುಂದಾಪುರ: ವೃದ್ಧೆಯ ಸರ ಕಳವುಗೈದ ಆರೋಪಿ ಬಂಧನ

ಕುಂದಾಪುರ: ವೃದ್ಧೆಯ ಸರ ಕಳವುಗೈದ ಆರೋಪಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾಗರ: ಹೊಟ್ಟೆಯೊಳಗಿದ್ದ ಏಳು ಕೆಜಿಯ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

ಸಾಗರ: ಹೊಟ್ಟೆಯೊಳಗಿದ್ದ ಏಳು ಕೆಜಿಯ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

selvamani

ಶಿಕ್ಷಕರ ಹುದ್ದೆ ನೇಮಕ ಪರೀಕ್ಷೆಗೆ ಸಕಲ ಸಿದ್ಧತೆ: ಡಾ| ಸೆಲ್ವಮಣಿ

truck

ಅಕ್ರಮ ಮರಳು ಸಾಗಾಟ: ಲಾರಿ ವಶಕ್ಕೆ

shivamogga

ಅತಿವೃಷ್ಟಿ ಅಪಾಯ ಎದುರಿಸಲು ಸಜ್ಜಾಗಿ

buffalo

ಕಾರು ಗುದ್ದಿ ಏಳು ಎಮ್ಮೆ ಸಾವು

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

ಹೊಸ ಸೇರ್ಪಡೆ

PSI ನೇಮಕಾತಿ ಅಕ್ರಮ : ಅಮಾನತುಗೊಂಡ DYSP ಮಲ್ಲಿಕಾರ್ಜುನ್ ಸಾಲಿ ಸೇರಿ ಐವರಿಗೆ ಜೈಲೇ ಗತಿ

ಪಿಎಸ್ಐ ನೇಮಕಾತಿ ಅಕ್ರಮ : ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ ಸೇರಿ ಐವರಿಗೆ ಜೈಲೇ ಗತಿ

ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಿದರೆ ಸ್ವಾಗತ: ಡಿ.ಕೆ.ಸುರೇಶ್‌

ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಿದರೆ ಸ್ವಾಗತ: ಡಿ.ಕೆ.ಸುರೇಶ್‌

“ಕೆಜಿಎಫ್-2′ ಮೆಚ್ಚಿದ ಸ್ಟಾರ್‌ ನಿರ್ದೇಶಕ ಶಂಕರ್‌

“ಕೆಜಿಎಫ್-2′ ಮೆಚ್ಚಿದ ಸ್ಟಾರ್‌ ನಿರ್ದೇಶಕ ಶಂಕರ್‌

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಹಿನ್ನೆಲೆ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

ಅರಣ್ಯ ಭೂಮಿ ಅತಿಕ್ರಮಣದಾರರ ಮೇಲೆ ಅರಣ್ಯ ಇಲಾಖೆಯ ನಿರಂತರ ದೌರ್ಜನ್ಯ : ಆರೋಪ

ಅರಣ್ಯ ಭೂಮಿ ಅತಿಕ್ರಮಣದಾರರ ಮೇಲೆ ಅರಣ್ಯ ಇಲಾಖೆಯ ನಿರಂತರ ದೌರ್ಜನ್ಯ : ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.