ಪಾಲಿಕೆ ಚುನಾವಣೆಗೆ ರೋಚಕ ಟ್ವಿಸ್ಟ್‌

ತಮ್ಮ ವಿರುದ್ಧ ದಾಖಲಾದ ದೂರುಗಳಿಂದ ಮೇಯರ್‌ ಸ್ಥಾನದ ಆಕಾಂಕ್ಷಿಗಳಿಗೆ ಭ್ರಮ ನಿರಸನ

Team Udayavani, Jan 24, 2020, 1:32 PM IST

ಶಿವಮೊಗ್ಗ: ಮಹಾನಗರ ಪಾಲಿಕೆ ಚುನಾವಣೆ ರೋಚಕ ಟ್ವಿಸ್ಟ್‌ ಪಡೆದಿದ್ದು, ಮೀಸಲಾತಿ ಸಂಬಂಧ ಇಬ್ಬರು ಮೇಯರ್‌ ಆಕಾಂಕ್ಷಿಗಳ ವಿರುದ್ಧ ದಾಖಲಾಗಿರುವ ದೂರುಗಳು ಪಟ್ಟದ ಆಸೆಯಲ್ಲಿದ್ದ ಆಕಾಂಕ್ಷಿಗಳಿಗೆ ಭ್ರಮ ನಿರಸನ ಮೂಡಿಸಿವೆ.

ಮೇಯರ್‌ ಆಕಾಂಕ್ಷಿಗಳಾದ ಸುವರ್ಣ ಶಂಕರ್‌ ಮೀಸಲಾತಿ ಕಳೆದುಕೊಂಡಿದ್ದಾರೆ. ಅನಿತಾ
ರವಿಶಂಕರ್‌ ಭವಿಷ್ಯ ಡೋಲಾಯಮಾನವಾಗಿದೆ. 35 ವಾರ್ಡ್‌ಗಳ ಪಾಲಿಕೆಯಲ್ಲಿ 20 ಸ್ಥಾನ
ಪಡೆಯುವ ಮೂಲಕ ಬಿಜೆಪಿ ಅಧಿಕಾರಕ್ಕೇರಿತ್ತು. ಮೊದಲ ಅವ ಧಿಯಲ್ಲಿ ಎಸ್‌ಸಿ ಮಹಿಳಾ
ಮೀಸಲಾತಿಯಲ್ಲಿ ಲತಾ ಗಣೇಶ್‌, ಸಾಮಾನ್ಯ ಮೀಸಲಾತಿಯಲ್ಲಿ ಚನ್ನಬಸಪ್ಪ ಉಪ ಮೇಯರ್‌ ಆಗಿ ಆಯ್ಕೆಯಾಗಿದ್ದರು. ಎರಡನೇ ಅವಧಿಗೆ ಬಿಸಿಎಂ “ಬಿ’ ಮಹಿಳೆಗೆ ಮೀಸಲಾತಿ ನಿಗದಿಯಾಗಿದ್ದು, ಬಿಜೆಪಿಯ ಇಬ್ಬರು ಆಕಾಂಕ್ಷಿಗಳು ಕಣದಲ್ಲಿದ್ದರು.

9ನೇ ವಾರ್ಡಿನ ಸುವರ್ಣ ಶಂಕರ್‌, 7ನೇ ವಾರ್ಡಿನಿಂದ ಗೆದ್ದ ಅನಿತಾ ರವಿಶಂಕರ್‌ ಮೇಯರ್‌
ಸ್ಥಾನಕ್ಕೆ ತೀವ್ರ ಪೈಪೋಟಿ ಒಡ್ಡಿದ್ದರು. ಮೂರು ಬಾರಿ ಗೆದ್ದ ಸುವರ್ಣ ಶಂಕರ್‌, ಮೊದಲನೇ ಬಾರಿ ಗೆದ್ದಿರುವ ಅನಿತಾ ರವಿಶಂಕರ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಬದಲಾದ ಸನ್ನಿವೇಶದಲ್ಲಿ ಇಬ್ಬರ ಮೀಸಲಾತಿ ವಿಷಯ ಈಗ ಉಪ ವಿಭಾಗಾಧಿಕಾರಿ ಕಚೇರಿ ಮೆಟ್ಟಿಲೇರಿದೆ.

ಸುವರ್ಣ ಶಂಕರ್‌ ಕಣದಿಂದ ಔಟ್‌: ಅನಿತಾ ರವಿಶಂಕರ್‌ ಅವರು ತೆರಿಗೆದಾರರಾಗಿದ್ದು
ಅವರು ಜಾತಿ ಪ್ರಮಾಣ ಪತ್ರಕ್ಕೆ ಅರ್ಹರಲ್ಲ ಎಂದು ಖಾಸಗಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ಅದೇ ರೀತಿ ಸುವರ್ಣ ಶಂಕರ್‌ ಅವರು ಸಾಮಾನ್ಯ ಮೀಸಲಾತಿಯಲ್ಲಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದು ಅವರು ಕೂಡ ತೆರಿಗೆದಾರರಾಗಿದ್ದಾರೆ. ಅವರಿಗೆ ಬಿಸಿಎಂ “ಬಿ’ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ದೂರು ದಾಖಲಾಗಿತ್ತು. ಎರಡೂ ದೂರುಗಳ ವಿಚಾರಣೆ ನಡೆಸಿರುವ ಅಧಿ ಕಾರಿಗಳು ಸುವರ್ಣ ಶಂಕರ್‌ ಅವರ ಈಚೆಗೆ ಪಡೆದಿರುವ ಜಾತಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದ್ದಾರೆ.

ಇದರಿಂದ ಅವರ ಮೇಯರ್‌ ಆಸೆ ಗಗನ ಕುಸುಮವಾದಾಂತಾಗಿದೆ. ಅಧಿಕಾರಿಗಳ ಪ್ರಕಾರ ಸುವರ್ಣ ಶಂಕರ್‌ ಅವರು ಸಾಮಾನ್ಯ ಮೀಸಲಾತಿಯಲ್ಲಿ ಗೆದ್ದಿರುವ ಕಾರಣ ಅವರು
ಈಗ ಬಿಸಿಎಂ “ಬಿ’ ಪ್ರಮಾಣ ಪತ್ರಕ್ಕೆ ಅರ್ಹರಾಗುವುದಿಲ್ಲ ಎಂದು ಮೂಲಗಳು
ಸ್ಪಷ್ಟಪಡಿಸಿವೆ. ಇನ್ನು ಅನಿತಾ ರವಿಶಂಕರ್‌ ಅವರು ಬಿಸಿಎಂ “ಬಿ’ ಮೀಸಲಾತಿಯಲ್ಲೇ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಅವರ ವಿರುದ್ಧದ ದೂರು ಮಾನ್ಯವಾಗಿಲ್ಲ. ಈ ಹಂತದಲ್ಲಿ ಅವರ ಮೀಸಲಾತಿ ರದ್ದು ಮಾಡಲು ಬರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಜಾತಿ ಪ್ರಮಾಣ ಪತ್ರಕ್ಕೆ ಅರ್ಹತೆಗಳು
ಸಂಬಂಧಿ ಸಿದ ವ್ಯಕ್ತಿ, ಅವರ ಕುಟುಂಬಸ್ಥರು ಯಾರೂ ಆದಾಯ ತೆರಿಗೆ, ಮಾರಾಟ ತೆರಿಗೆ
ಹಾಗೂ ವೃತ್ತಿ ತೆರಿಗೆ ಪಾವತಿದಾರರಾಗಿರಬಾರದು. ಒಟ್ಟು ಕುಟುಂಬದ ಹಿಡುವಳಿ ಮಿತಿ 8 ಹೆಕ್ಟೇರ್‌ ಗಿಂತ ಜಾಸ್ತಿ ಇರಬಾರದು.

ಬಿಜೆಪಿ ಪಾಳಯದಲ್ಲಿ ಆತಂಕ
ಮೇಯರ್‌ ಆಕಾಂಕ್ಷಿಗಳ ವಿರುದ್ಧ ದಾಖಲಾಗಿರುವ ದೂರು ಮಾನ್ಯಗೊಂಡರೆ ಇಬ್ಬರೂ ಸಹ
ಕಣದಿಂದ ಹಿಂದುಳಿಯಬೇಕಾಗುತ್ತದೆ. ಆಗ ಮೇಯರ್‌ ಸ್ಥಾನ ಅನಾಯಾಸವಾಗಿ ಕಾಂಗ್ರೆಸ್‌ ಪಾಲಾಗಾಲಿದೆ. ಈಗಾಗಲೇ ಸುವರ್ಣ ಶಂಕರ್‌ ಜಾತಿ ಪ್ರಮಾಣ ಪತ್ರ ರದ್ದಾಗಿದ್ದು, ಅನಿತಾ
ರವಿಶಂಕರ್‌ ಮೀಸಲಾತಿಯನ್ನು ಚುನಾವಣಾ ಆಯೋಗದಲ್ಲಷ್ಟೇ ಪ್ರಶ್ನಿಸಲು ಸಾಧ್ಯವಿದೆ. ಒಂದು ವೇಳೆ ಚುನಾವಣಾ ಆಯೋಗ ದೂರು ಸ್ವೀಕಾರ ಮಾಡಿದರೆ ತೀರ್ಪು ಬರುವವರೆಗೂ ಚುನಾವಣೆ ಮುಂದೂಡಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಮೇಯರ್‌ ಸ್ಥಾನ ಕಾಂಗ್ರೆಸ್‌ ಪಾಲಾಗಲಿದೆ.

„ಶರತ್‌ ಭದ್ರಾವತಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...