Udayavni Special

ಪೊಲೀಸರಿಂದ ಪಾಠ; ಕೆಲವರ ಪೇಚಾಟ!

Team Udayavani, May 11, 2021, 9:55 PM IST

11-20

ಶಿವಮೊಗ್ಗ: ಕೊರೊನಾ ಕಟ್ಟಿಹಾಕಲು ಸೋಮವಾರದಿಂದ ರಾಜ್ಯಾದ್ಯಂತ ಜಾರಿಯಾದ ಕೊರೊನಾ ಕರ್ಫ್ಯೂ ಕಠಿಣ ನಿಯಮಗಳನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಡಳಿತ ಮುಂದಾಗಿದ್ದು, ಅನಗತ್ಯವಾಗಿ ಮನೆಯಿಂದ ಹೊರಬಂದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಅಗತ್ಯ ಹಾಗೂ ತುರ್ತುಸೇವೆ ಹೊರತುಪಡಿಸಿ ಮಿಕ್ಕೆಲ್ಲ ವ್ಯಾಪಾರ ವಹಿವಾಟಿಗೆ 14 ದಿನಗಳ ಕಾಲ ನಿರ್ಬಂಧ ಹಾಕಲಾಗಿದೆ.

ಅನಗತ್ಯವಾಗಿ ಮನೆಯಿಂದ ಹೊರ ಬರುವವರಿಗೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿದ್ದರೂ ಕೂಡ ಕೆಲವರು ಮಾರ್ಗಸೂಚಿ ಉಲ್ಲಂಘಿಸಿರುವುದು ನಡೆದಿದೆ. ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಚಾಟಿ ಬೀಸಿದ್ದಾರೆ.

ಪೊಲೀಸ್‌ ಸರ್ಪಗಾವಲು: ಬೆಳಿಗ್ಗೆಯೇ ಶಿವಮೊಗ್ಗ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಿಗೆ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಬಸ್‌ ಸ್ಟ್ಯಾಂಡ್‌ ವೃತ್ತ, ಹಾಲ್ಕೊಳ ವೃತ್ತ, ಎಎ ವೃತ್ತ, ಶಿವಪ್ಪ ನಾಯಕ ವೃತ್ತ, ಹೊಳೆಬಸ್‌ಸ್ಟಾಪ್‌, ಮಹಾವೀರ ವೃತ್ತ, ಗೋಪಿ ವೃತ್ತ, ಲಕ್ಷ್ಮೀ ಟಾಕೀಸ್‌, ಪೊಲೀಸ್‌ ಚೌಕಿ, ಶಿವಮೂರ್ತಿ ಸರ್ಕಲ್‌ ಸೇರಿದಂತೆ ನಗರದ ವಿವಿಧೆಡೆ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ಹಲವು ವಾಹನ ಸೀಜ್‌: ಅನಗತ್ಯ ವಾಗಿ ರಸ್ತೆಗೆ ಬಂದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆಯಲ್ಲದೆ ಆಸ್ಪತ್ರೆ, ಔಷಧ ಖರೀದಿ ಮತ್ತಿತರ ತುರ್ತು ಸಂದರ್ಭದಲ್ಲಿ ಮಾತ್ರ ವಾಹನ ಬಳಕೆಗೆ ಅವಕಾಶ ನೀಡಲಾಗಿದೆ. ಆದರೆ ಕೆಲವರು ದಿನಸಿ, ಔಷಧಿ ಖರೀದಿ, ಆಸ್ಪತ್ರೆಗೆ ಹೋಗಬೇಕು ಹೀಗೆ ಕುಂಟು ನೆಪ ಇಟ್ಟುಕೊಂಡು ಕಾರು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದು ಕಂಡುಬಂತು. ಇಂಥವರನ್ನು ತಡೆದು ವಿಚಾರಣೆ ನಡೆಸಿದ ಪೊಲೀಸರು ವಾಹನಗಳನ್ನು ಸೀಜ್‌ ಮಾಡುವ ಮೂಲಕ ಅನಗತ್ಯವಾಗಿ ರಸ್ತೆಗಿಳಿದವರಿಗೆ, ನಿಯಮ ಉಲ್ಲಂಘಿಸುವವರಿಗೆ ಮೊದಲ ದಿನವೇ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಆಟೋರಿಕ್ಷಾ, ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ಬೆಳಿಗ್ಗೆ 11ರ ನಂತರ ಪಾಸ್‌ ಹೊಂದಿದವರಿಗೆ ಮಾತ್ರ ಸಂಚಾರಕ್ಕೆ ಅವಕಾಶವಿತ್ತು. ಆದರೂ ಕೂಡ ಕೆಲವರು ನಿಯಮ ಪಾಲನೆ ಮಾಡದೆ ರಸ್ತೆಯಲ್ಲಿ ದ್ವಿಚಕ್ರ ಹಾಗೂ ಕಾರುಗಳಲ್ಲಿ ಸಂಚಾರ ಮಾಡುತ್ತಿರುವುದು ಕಂಡುಬಂತು. ಕೆಲವೆಡೆ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಶಿವಮೊಗ್ಗ ನಗರದ ಪ್ರಮುಖ ವ್ಯಾಪಾರ ಪ್ರದೇಶಗಳಾದ ಗಾಂಧಿ ಬಜಾರ್‌, ಬಿ.ಎಚ್‌. ರಸ್ತೆ, ನೆಹರು ರಸ್ತೆ, ಸವಳಂಗ ರಸ್ತೆ, ದುರ್ಗಿಗುಡಿ, ಜೈಲು ರಸ್ತೆ, ಕುವೆಂಪು ರಸ್ತೆ, ಗಾರ್ಡನ್‌ ಏರಿಯಾ, ಶಂಕರ ಮಠ ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ಕಡೆ ವ್ಯಾಪಾರ-ವಹಿವಾಟು ಬಂದ್‌ ಮಾಡಲಾಗಿತ್ತು. ಲಾಕ್‌ಡೌನ್‌ ಗೆ ವರ್ತಕರಿಂದ ಬೆಂಬಲ ದೊರಕಿತು. ಅಂಚೆ ಕಚೇರಿ, ದೂರವಾಣಿ, ಬ್ಯಾಂಕ್‌, ಮೆಸ್ಕಾಂ, ಆಸ್ಪತ್ರೆಗಳು ಕಾರ್ಯ ನಿರ್ವಹಿಸಿದವು.

ಹೋಟೆಲ್‌ ಗಳಲ್ಲಿ ಪಾರ್ಸೆಲ್‌ ಗೆ ಮಾತ್ರ ಅವಕಾಶ ನೀಡಲಾಗಿತ್ತು. ಕೋವಿಡ್‌ -19 ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲು ಉದ್ದೇಶಿಸಿದ್ದರೆ, ಮಾರ್ಗಸೂಚಿ  ಧಿಕ್ಕರಿಸುವ ಪ್ರಕರಣಗಳೂ ಹೆಚ್ಚುತ್ತಿವೆ. ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲೆಯಲ್ಲಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕಿದೆ.

ಟಾಪ್ ನ್ಯೂಸ್

ಕರಡು ನಿರ್ಣಯದಲ್ಲಿ ಮಾನ್ಯತೆ ನೀಡದ ಹಿನ್ನೆಲೆ : ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಕರಡು ನಿರ್ಣಯದಲ್ಲಿ ಮಾನ್ಯತೆ ನೀಡದ ಹಿನ್ನೆಲೆ : ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಇದನ್ನೂ ಓದಿ  ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಇದನ್ನೂ ಓದಿ ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ನಿವೃತ್ತ IAS ಅಧಿಕಾರಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-20

ಮುಂಗಾರು ಮಳೆ ಅಬ್ಬರ-ನದಿಗಳಲ್ಲಿ ಉಬ್ಬರ

19-19

ಜೋಗ ಜಲಪಾತದ ಸೊಬಗು, ವೀಕ್ಷಿಸಲಾಗದ ಕೊರಗು

ಸಲಹಾ ಶುಲ್ಕ ಶ್ರೀಧರಾಶ್ರಮದ ಹುಂಡಿಗೆ!: ಯುವ ವೈದ್ಯ ಡಾ| ಅಭಿಷೇಕ್‌ರಿಂದ ವಿಶಿಷ್ಟ ಕಾರ್ಯ

ಸಲಹಾ ಶುಲ್ಕ ಶ್ರೀಧರಾಶ್ರಮದ ಹುಂಡಿಗೆ!: ಯುವ ವೈದ್ಯ ಡಾ| ಅಭಿಷೇಕ್‌ರಿಂದ ವಿಶಿಷ್ಟ ಕಾರ್ಯ

18-20

ಆನ್‌ಲೈನ್‌ ಕೋರ್ಸ್‌: ಕುವೆಂಪು ವಿವಿಗೆ ಅನುಮತಿ

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

MUST WATCH

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

udayavani youtube

ಸಾಮಾಜಿಕ ಅಂತರವಿಲ್ಲದೆ ಶಿಕ್ಷಕರಿಗೆ ಲಸಿಕಾ ಅಭಿಯಾನ

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

ಹೊಸ ಸೇರ್ಪಡೆ

desiswara

ಸ್ನೇಹಿತನನ್ನು ರಕ್ಷಿಸಿದ  ಬುದ್ಧಿವಂತ ಮೊಲ

ಕರಡು ನಿರ್ಣಯದಲ್ಲಿ ಮಾನ್ಯತೆ ನೀಡದ ಹಿನ್ನೆಲೆ : ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಕರಡು ನಿರ್ಣಯದಲ್ಲಿ ಮಾನ್ಯತೆ ನೀಡದ ಹಿನ್ನೆಲೆ : ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

The floating library

ತೇಲುವ ಗ್ರಂಥಾಲಯದೊಳಗೆ  ವಿಶಾಲ ಜಗತ್ತಿನ ದರ್ಶನ

desiswara

ಒಂದು ಗುಂಗಿನ ಒಳಗೆ  ಒಂದಲ್ಲ; ನೂರಾರು ಸ್ವರಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.