Udayavni Special

ಬೆಲೆ ಏರಿಕೆ ಖಂಡಿಸಿ ವಿನೂತನ ಪ್ರತಿಭಟನೆ

ಸಿಲಿಂಡರ್‌ಗೆ ಹೂವಿನ ಮಾಲೆ ಹಾಕಿ ಬೋಂಡಾ-ಹಪ್ಪಳ ಕರಿದ ಪ್ರತಿಭಟನಾಕಾರರು

Team Udayavani, Mar 7, 2021, 7:00 PM IST

Shivamogga Congress protest

ಶಿವಮೊಗ್ಗ: ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ವಿರೋಧಿ ಸಿ ಶನಿವಾರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌. ಎಸ್‌. ಸುಂದರೇಶ್‌ ನೇತೃತ್ವದಲ್ಲಿ ಶಿವಪ್ಪನಾಯಕ ಪ್ರತಿಮೆ ಪಕ್ಕದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸ್ಥಳದಲ್ಲಿ ಸಿಲಿಂಡರ್‌ಗೆ ಹೂವಿನ ಮಾಲೆ ಹಾಕಿ ಪಕ್ಕದಲ್ಲಿ 3 ಸೌದೆ ಒಲೆಯಲ್ಲಿ ಬೋಂಡ ಹಾಗೂ ಹಪ್ಪಳ ಕರಿದು ಮತ್ತು ಟೀ ಮಾಡಿಕೊಂಡು ಪ್ರತಿಭಟನಾಕಾರರು ಸೇವಿಸಿ ವಿನೂತನ ಪ್ರತಿಭಟನೆ ನಡೆಸಿದರು. ತಾತ್ಕಾಲಿಕವಾಗಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎನ್ನುವ ಸರ್ಕಾರದ ವರದಿಯ ಜೊತೆ ಜೊತೆಗೆ ಎರಡನೇ ಹಂತದ ಕೊರೊನಾ ಭಾರೀ ವೇಗದಲ್ಲಿ ಹರಡುತ್ತಿದೆ ಎಂದು ಸರ್ಕಾರವೇ ಆತಂಕಗೊಂಡಿರುವ ಸಂದರ್ಭದಲ್ಲಿ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ದಿನನಿತ್ಯ ಊಟ ಮಾಡಲು ಪರಿದಾಡುವಂತಹ ಕಷ್ಟಕರ ಪರಿಸ್ಥಿತಿ ಉಂಟಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

2 ವಾರಗಳ ಹಿಂದಷ್ಟೇ ಗ್ಯಾಸ್‌ ದರ ದಿಢೀರನೆ 50 ರೂ. ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿದ್ದರು. ಒಂದು ವಾರದಲ್ಲಿ 2 ಬಾರಿ ದರ ಏರಿಕೆಯಿಂದಾಗಿ ಗ್ರಾಹಕರಿಗೆ ಶಾಕ್‌ ನೀಡಿ ಈಗ ಗ್ಯಾಸ್‌ ದರ 880 ರೂ.ಗೆ ತಲುಪಿದೆ. ಬಡ ಜನತೆ ಕೊಳ್ಳಲಾರದಪರಿಸ್ಥಿತಿಗೆ ತಲುಪಿದ್ದಾರೆ. ಸಿಲಿಂಡರ್‌ಗೆ ಸಬ್ಸಿಡಿ ನೀಡುತ್ತಿದ್ದ ಕೇಂದ್ರ ಸರ್ಕಾರ 6 ತಿಂಗಳಿನಿಂದ ನಿಲ್ಲಿಸಿದೆ. ಆದರೆ ದರ ಏರಿಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂದು ಆರೋಪಿಸಿದರು.  ಕಳೆದ 1 ತಿಂಗಳಿನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕೈಗೆ ನಿಲುಕದಷ್ಟು ಏರಿಕೆಯಾಗಿದೆ. ಈಗಾಗಲೇ ಪೆಟ್ರೋಲ್‌ ಲೀ.100 ರೂ.ಮುಟ್ಟಿದೆ. ಇದರಿಂದಾಗಿ ವಾಹನ ಸವಾರರಿಗೆ, ಲಾರಿ, ಬಸ್‌, ಟ್ಯಾಕ್ಸಿ ಮಾಲೀಕರಿಗೆ ದರದ ಬಿಸಿ ತಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್‌ ಮತ್ತು ಡೀಸೆಲ್‌ಗೆ ವಿ ಧಿಸಿರುವ ತೆರಿಗೆ ರದ್ದು ಪಡಿಸಬೇಕು ಅಥವಾ ಕಡಿತ ಮಾಡಬೇಕು ಎಂದು ಒತ್ತಾಯಿಸಿದರು.

ಅಗತ್ಯ ವಸ್ತುಗಳಾದ ಅಡುಗೆ ಎಣ್ಣೆ, ಬೇಳೆಕಾಳುಗಳು, ತರಕಾರಿ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಶ್ರೀಸಾಮಾನ್ಯರು ಆತಂಕಗೊಂಡಿದ್ದಾರೆ ಮತ್ತು ಅರೆಹೊಟ್ಟೆಯಲ್ಲಿ ಮಲಗುವ ಪರಿಸ್ಥಿತಿ ಉಂಟಾಗಿದೆ. ಒಟ್ಟಾರೆ ಬಿಜೆಪಿಯವರ ಸಾಧನೆ ಬಡವರ ಪಾಲಿಗೆ ಆತಂಕಕಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌. ಎಸ್‌. ಸುಂದರೇಶ್‌, ಪಾಲಿಕೆ ಸದಸ್ಯರಾದ ಎಚ್‌.ಸಿ. ಯೋಗೇಶ್‌, ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ, ಮುಖಂಡರಾದ ಇಸ್ಮಾಯಿಲ್‌ಖಾನ್‌, ಎಲ್‌.  ರಾಮೇಗೌಡ, ಎಸ್‌.ಪಿ. ಶೇಷಾದ್ರಿ, ಎನ್‌. ರಮೇಶ್‌, ವೈ.ಎಚ್‌. ನಾಗರಾಜ್‌, ವಿಶ್ವನಾಥ ಕಾಶಿ, ವಿಜಯಲಕ್ಷಿ¾à ಪಾಟೀಲ್‌, ಸಿ.ಎಸ್‌. ಚಂದ್ರಭೂಪಾಲ್‌, ಎನ್‌.ಡಿ. ಪ್ರವೀಣ್‌ ಕುಮಾರ್‌, ಚಂದನ್‌, ಸೌಗಂ ಧಿಕ, ಎಚ್‌.ಪಿ. ಗಿರೀಶ್‌ ಇನ್ನಿತರರು ಇದ್ದರು.

ಟಾಪ್ ನ್ಯೂಸ್

ಭಾರತದಲ್ಲಿ ಬಿಡುಗಡೆಗೊಂಡಿದೆ ಪೊಕೊ ಎಂ 2 ರಿಲೋಡೆಡ್ ಸ್ಮಾರ್ಟ್ ಫೋನ್ ..!

fgfg

ನಿಮ್ಮ ಜಿಲ್ಲೆಯ ಕೋವಿಡ್ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಿ : ಸಚಿವರಿಗೆ ಸಿಎಂ ಪತ್ರ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

್ಗಗ್ದಸ

ಅಸಹಾಯಕರಾಗಿದ್ದೇವೆ, ಬೆಡ್-ಆಕ್ಸಿಜನ್ ಇಲ್ಲ, ಮುನ್ನೆಚ್ಚರಿಕೆಯಿಂದ ಇರಿ : ವೈದ್ಯೆ ಕಣ್ಣೀರು

utuytruyt

‘ರಣಧೀರ’ ಚಿತ್ರದ ಪೋಸ್ಟರ್ ಡಿಸೈನರ್ ಕೋವಿಡ್‍ನಿಂದ ಸಾವು

ಸೋಂಕಿಗೆ ತುತ್ತಾಗಿರುವ ಜನರನ್ನು ರಕ್ಷಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ : ಹೆಚ್ ಡಿಕೆ

ಸೋಂಕಿಗೆ ತುತ್ತಾಗಿರುವ ಜನರನ್ನು ರಕ್ಷಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ : ಹೆಚ್ ಡಿಕೆ

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

huliyaru 12th Ward

ಹುಳಿಯಾರು 12ನೇ ವಾರ್ಡ್‌ ಸದಸ್ಯರೇ ಇತ್ತ ನೋಡಿ!

utuytruyt

‘ರಣಧೀರ’ ಚಿತ್ರದ ಪೋಸ್ಟರ್ ಡಿಸೈನರ್ ಕೋವಿಡ್‍ನಿಂದ ಸಾವು

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

ACX

ನಗರ ವ್ಯಾಪಿಗೆ ವಾರ ಪೂರ್ತಿ ಕುಡಿವ ನೀರು ಪೂರೈಕೆ

MUST WATCH

udayavani youtube

ತಮಿಳುನಾಡಿನ ಅಪ್ಪಟ ರೇಷ್ಮೆ, ಕೃಷ್ಣ ನೂರಿನ ಜಯಲಕ್ಷ್ಮಿಯಲ್ಲಿ

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

ಹೊಸ ಸೇರ್ಪಡೆ

ಭಾರತದಲ್ಲಿ ಬಿಡುಗಡೆಗೊಂಡಿದೆ ಪೊಕೊ ಎಂ 2 ರಿಲೋಡೆಡ್ ಸ್ಮಾರ್ಟ್ ಫೋನ್ ..!

fgfg

ನಿಮ್ಮ ಜಿಲ್ಲೆಯ ಕೋವಿಡ್ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಿ : ಸಚಿವರಿಗೆ ಸಿಎಂ ಪತ್ರ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

huliyaru 12th Ward

ಹುಳಿಯಾರು 12ನೇ ವಾರ್ಡ್‌ ಸದಸ್ಯರೇ ಇತ್ತ ನೋಡಿ!

್ಗಗ್ದಸ

ಅಸಹಾಯಕರಾಗಿದ್ದೇವೆ, ಬೆಡ್-ಆಕ್ಸಿಜನ್ ಇಲ್ಲ, ಮುನ್ನೆಚ್ಚರಿಕೆಯಿಂದ ಇರಿ : ವೈದ್ಯೆ ಕಣ್ಣೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.