ನೈಸರ್ಗಿಕ ಆಹಾರೋತ್ಪನ್ನ ಬೆಳೆಯಿರಿ

ಕೃಷಿಯಲ್ಲಿ ರಸಗೊಬ್ಬರಗಳ ಅತಿಯಾದ ಬಳಕೆ ಬೇಡ: ಡಾ| ಎಸ್‌.ಪಿ. ನಟರಾಜು ಕರೆ

Team Udayavani, Jan 19, 2020, 4:13 PM IST

ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ಇಲಾಖೆ, ಸಹಯೋಗದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ, ದಕ್ಷಿಣ ಅರೆ ಮಲೆನಾಡು ವಲಯ-07 ರ ಸಮುದಾಯ ಸಹಾಯಕರು ಮತ್ತು ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಮುಂಗಾರೋತ್ತರ ಕಾರ್ಯಗಾರವನ್ನು ಶುಕ್ರವಾರ ನವುಲೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ವಿಸ್ತರಣಾ ನಿರ್ದೇಶಕ ಡಾ| ಎಸ್‌.ಪಿ.ನಟರಾಜು, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ನಮ್ಮ ಪೂರ್ವಿಕರ ಕಾಲದಿಂದಲೂ ಮಾಡುತ್ತಿದ್ದ ಕೃಷಿಯಾಗಿದ್ದು, ಕಾಲ ಕಳೆದಂತೆ ಜನಸಂಖ್ಯೆಗೆ ಅನುಗುಣವಾಗಿ ಕೃಷಿಯಲ್ಲಿ ತಳಿಯ ಆವಿಷ್ಕಾರ- ಸಂಶೋಧನೆಗಳು ನಡೆದು ಆಹಾರ, ಹಣ್ಣು ಹಾಗೂ ಹಾಲಿನ ಉತ್ಪಾದನೆ ಹೆಚ್ಚಾಗಿದೆ.

ಇದರಿಂದ ಕೃಷಿಯು ನೈಸರ್ಗಿಕವಾಗಿ ಉಳಿಯದೆ ಹೇರಳವಾದ
ರಸಗೊಬ್ಬರಗಳ ಬಳಕೆಯಿಂದ ಕೃತಕ ಕೃಷಿಯಾಗಿ ಮಾರ್ಪಟ್ಟಿದೆ. ಇದರ ಪರಿಣಾಮವಾಗಿ ವಾತಾವರಣದಲ್ಲಿ ವ್ಯತ್ಯಾಸ ಉಂಟಾಗಿ ಬೆಳೆಗಳ ಮೇಲೆ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳುಂಟಾಗಿವೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಂಡಂತೆ ಕೃಷಿಯಲ್ಲಿ ನೈಸರ್ಗಿಕ ಪರಿಕರಗಳನ್ನು ಉಪಯೋಗಿಸಿಕೊಂಡು ಕೃಷಿ ಮಾಡುವುದರಿಂದ ಕೃಷಿ ವೆಚ್ಚ
ಕಡಿಮೆಯಾಗಿ ನೈಸರ್ಗಿಕ ಆಹಾರ ಉತ್ಪನ್ನಗಳನ್ನು ಬೆಳೆಯಬಹುದಾಗಿದೆಯೆಂದು ಹೇಳಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ| ಯೋಗೀಶ್‌ ಎಚ್‌.
ಆರ್‌. ಮಾತನಾಡಿ, ತೋಟಗಾರಿಕಾ ಬೆಳೆಗಳಲ್ಲಿ ಅಂತರ ಬೆಳೆಗಳನ್ನು ಬೆಳೆಯುವುದರಿಂದ ಕಳೆ ನಿಯಂತ್ರಣ ಹಾಗೂ ತೋಟಗಾರಿಕಾ ಬೆಳೆಗಳಾದ ತೆಂಗು, ಅಡಕೆಯಲ್ಲಿ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವುದರಿಂದ ಕೀಟ- ರೋಗಗಳ ಹತೋಟಿ ಮಾಡಬಹುದಾಗಿದೆ ಎಂದು ಹೇಳಿದರು. ರೈತರು ಸ್ವಯಂ ಪ್ರೇರಿತವಾಗಿ ತಯಾರಿಸಿಕೊಂಡ ಅಕ್ಕಿಯ ಗಂಜಿಯನ್ನು ಉಪಯೋಗಿಸಿ ತೆಂಗಿನಲ್ಲಿ ಕಂಡುಬರುವ ಕೀಟ ಬಾಧೆಯನ್ನು ಹತೋಟಿಗೆ ತರುತ್ತಾರೆ. ಅದೇ ರೀತಿ ಅಂತರ ಬೆಳೆಗಳನ್ನು ಬೆಳೆಯಲು ಸಲಹೆ ನೀಡಿದರು. ರೈತರ ಆದಾಯ ದ್ವಿಗುಣ ಮಾಡಬೇಕಾಗಿದ್ದು, ಜಮೀನಿನಲ್ಲೇ ಸಿಗುವ ಔಷ ಧೀಯ ಎಲೆಗಳು, ಸಗಣಿ ಹಾಗೂ ಗಂಜಲ ಉಪಯೋಗಿಸಿಕೊಂಡು ಖರ್ಚು ಕಡಿಮೆ ಮಾಡಿ ಪರಿಸರದಲ್ಲಿ ಸಮತೋಲನತೆ ಕಾಪಾಡಬೇಕಾಗಿದೆ ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಗಣೇಶ್‌ಮಾತನಾಡಿ, ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿದ್ದು ಮಣ್ಣು ಮತ್ತು ಆಹಾರ ಪದಾರ್ಥಗಳು ವಿಷಯುಕ್ತವಾಗಿವೆ. ಇದರಿಂದ ದೂರ ಉಳಿಯಲು ರೈತರು ಸಮಗ್ರ ಕೃಷಿಯಲ್ಲಿ ಸಾವಯವ ಕೃಷಿ, ನೈಸರ್ಗಿಕ ಕೃಷಿ ಅಳವಡಿಸಕೊಳ್ಳಬೇಕೆಂದು ತಿಳಿಸಿದರು.

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯ ವಲಯ-7 ಕ್ಕೆ
ಒಳಪಡುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ 14 ಸಮುದಾಯ ಸಹಾಯಕರು, 38 ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕಾರ್ಯವಾಹಿ ಸಂಶೋಧನಾ ಯೋಜನಾ ತಂಡದ ವಿಜ್ಞಾನಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು  ರ್ಯವಾಹಿ
ಸಂಶೋಧನಾ ಯೋಜನಾ ಸಭೆಯ ಮುಖ್ಯಸ್ಥರಾದ ಡಾ| ಎಚ್‌. ಕೆ.
ವೀರಣ್ಣ ಸ್ವಾಗತಿಸಿ, ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೃಷಿ ತೋಟಗಾರಿಕಾ ವಿವಿ ಡೀನ್‌ (ಕೃಷಿ) ಡಾ| ಚಿದಾನಂದಪ್ಪ ಎಚ್‌. ಎಂ. ಅವರು ಮಣ್ಣಿನ ಆರೋಗ್ಯ, ಫಲವತ್ತತೆ ಮತ್ತು ಭೌತಿಕ ಹಾಗೂ ಜೈವಿಕ ಗುಣಧರ್ಮಗಳ ಮಹತ್ವವನ್ನು ಹೇಳಿ,
ಯೋಜನೆಯ ಯಶಸ್ಸಿಗೆ ದಿಧೀರ್ಘಾವಧಿಯ ಸಂಶೋಧನೆ ಅಗತ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಒಆರ್‌ಪಿ
ತಂಡದ ಸದಸ್ಯ ಕುಮಾರ್‌ ನಾಯು ಇತರರಿದ್ದರು. ಡಾ| ಶಿಲ್ಪ ಎಚ್‌.ಡಿ. ಕಾರ್ಯಕ್ರಮ ನಿರೂಪಿಸಿದರು. ಡಾ| ಪ್ರಶಾಂತ್‌ ಕೆ. ಎಂ. ವಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌-ಜನವರಿ ತಿಂಗಳ ಅವಧಿಯಲ್ಲಿ ದೇಶದ ಚಾಲ್ತಿ ಖಾತೆ ಕೊರತೆ(ಸಿಎಡಿ)ಯ ಮೇಲೆ ಚಿನ್ನದ ಆಮದು ಶೇ.9ರಷ್ಟು ಕುಸಿದು ಸುಮಾರು...

  • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

  • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

  • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

  • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...