ವಾರಾಂತ್ಯಕರ್ಫ್ಯೂ: ಸಂಪೂರ್ಣ ಸ್ಥಬ್ದ
Team Udayavani, Jan 9, 2022, 5:07 PM IST
ಶಿವಮೊಗ್ಗ: ಕೊರೊನಾ ಮೂರನೇ ಅಲೆ ಹಾಗೂಓಮಿಕ್ರಾನ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿಸರಕಾರ ಜಾರಿಗೊಳಿಸಿದ ವೀಕೆಂಡ್ ಕರ್ಫ್ಯೂ ಜಿಲ್ಲೆಯಲ್ಲಿಶುಕ್ರವಾರ ರಾತ್ರಿ 10 ಗಂಟೆಯಿಂದಲೇ ಆರಂಭಗೊಂಡಿದ್ದುಶನಿವಾರ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲವೂಸ್ತಬ್ಧಗೊಂಡಿದ್ದವು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸರ್ಕಾರದಕೋವಿಡ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿಜಾರಿಗೊಳಿಸಲು ಮುಂದಾಗಿದ್ದರಿಂದ ಜನರಿಗೆ ಸ್ವಲ್ಪ ಬಿಸಿತಟ್ಟಿದೆ. ಅಗತ್ಯ ಸೇವೆ ಹೊರತು ಪಡಿಸಿ, ಸಾರಿಗೆ ಹಾಗೂಎಲ್ಲಾ ಬಗೆಯ ವ್ಯಾಪಾರ ವಹಿವಾಟುಗಳು ಬಹುತೇಕಬಂದ್ ಆಗಿದ್ದವು. ಇನ್ನು ಕೆಲವೆಡೆ ಯಥಾಸ್ಥಿತಿ ಪರಿಸ್ಥಿತಿಯೂಕಂಡು ಬಂತು.
ಶಿವಮೊಗ್ಗ ನಗರದಲ್ಲಿ ಬೆಳಗ್ಗೆ ಯಿಂದ ಜನ ಸಂಚಾರಹಾಗೂ ವಾಹನ ಓಡಾಟದಲ್ಲಿ ಕೊಂಚ ರಿಲೀಫ್ ಇತ್ತಾದರೂ,ಆನಂತರ ಪೊಲೀಸರು ರಸ್ತೆಗಳಿದು ಜನರ ಓಡಾಟ ಹಾಗೂವಾಹನ ಸಂಚಾರಕ್ಕೆ ತಡೆಒಡ್ಡಿದರು. ಬಳಿಕ ನಗರದಲ್ಲಿಬಹುತೇಕ ಸೆಮಿ ಲಾಕ್‌ಡೌನ್ ಸ್ಥಿತಿ ನಿರ್ಮಾಣವಾಯಿತು.