ಶಿವಮೊಗ್ಗದಲ್ಲಿ ಹೋಂ ಐಸೋಲೇಷನ್ ಹೆಚ್ಚಳ
Team Udayavani, Jan 20, 2022, 3:05 PM IST
ಶಿವಮೊಗ್ಗ: ಕೋವಿಡ್ ಮೂರನೇ ಅಲೆ ತಜ್ಞರ ಲೆಕ್ಕಾಚಾರವನ್ನೇತಲೆಕೆಳಗಾಗಿಸಿದೆ. ಮಕ್ಕಳಿಗೆ, ವೃದ್ಧರಿಗೆ ತೊಂದರೆ ಕೊಡಬಹುದುಎಂದು ಭಾವಿಸಲಾಗಿತ್ತಾದರೂ ಸಾಮಾನ್ಯ ಶೀತ, ಜ್ವರ ಲಕ್ಷಣಗಳಿಂದಸೌಮ್ಯ ಸ್ವಭಾವಕ್ಕೆ ತಿರುಗಿದೆ. ಹೀಗಾಗಿ ಹೋಂ ಐಸೋಲೇಷನ್‌ಗೆಒಳಗಾಗುತ್ತಿರುವವರ ಪ್ರಮಾಣ ಶೇ.95ಕ್ಕೂ ಹೆಚ್ಚಿದೆ.
ಇಂದಿನಿಂದಕೋವಿಡ್ ರೋಗಿಗಳಿಗೆ ಔಷಧ ಕಿಟ್ ವಿತರಣೆ ನಡೆಯಲಿದೆ.ಹೋಂ ಐಸೋಲೇಷನ್ ಹೆಚ್ಚಾಗುತ್ತಿದ್ದಂತೆ ಆರೋಗ್ಯ ತಪಾಸಣೆವಿಧಾನದಲ್ಲಿ ಜಿಲ್ಲಾಡಳಿತ ಬದಲಾವಣೆ ಮಾಡಿಕೊಂಡಿದೆ.ಮನೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕಿಟ್‌ವಿತರಣೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಮನೆ ಮನೆಗೆ ಆರೋಗ್ಯಸಹಾಯಕರು, ವೈದ್ಯರು, ಆಶಾ ಕಾರ್ಯಕರ್ತೆಯರು ಭೇಟಿನೀಡಿ ಆರೋಗ್ಯ ತಪಾಸಣೆ ಮಾಡಲಿದ್ದಾರೆ.
ರೋಗ ಲಕ್ಷಣಗಳುಉಲ್ಬಣಗೊಂಡಿದ್ದರೆ ಅಲ್ಲೇ ಪರಿಹಾರ ಸೂಚಿಸಲಿದ್ದಾರೆ.ಪಾಸಿಟಿವ್ ದೃಢಪಡುತ್ತಿದ್ದಂತೆ ಅವರ ವಿವರವನ್ನು ಸಂಬಂಧಪಟ್ಟತಾಲೂಕುಗಳಿಗೆ ರವಾನೆ ಮಾಡಲಾಗುತ್ತಿದೆ. ನಂತರ ಅವರಿಗೆಏಳುದಿನದ ಕ್ವಾರಂಟೈನ್ ಸೂಚಿಸಲಾಗಿದ್ದು, ಬೇಗ ಗುಣಮುಖಆದವರನ್ನು ಮುಂಚಿತವಾಗಿಯೇ ಡಿಸಾcರ್ಜ್ ಮಾಡಲಾಗುತ್ತಿದೆ.ಪ್ರತಿದಿನ ರೋಗಿಗಳ ಟೆಲಿಫೋನ್ ಸಂವಾದ ನಡೆಸಿ ಆರೋಗ್ಯವಿಚಾರಿಸಲಾಗುತ್ತಿದೆ. ಜತೆಗೆ ಅರೋಗ್ಯ ಇಲಾಖೆ ಸಿಬ್ಬಂದಿ ಮನೆಒಳಗೆ ಹೋಗದೆ ಆರೋಗ್ಯ ವಿಚಾರಿಸಿಕೊಂಡು ಬರುತ್ತಿದ್ದಾರೆ.