ಕೇಂದ್ರ ಸರ್ಕಾರ ವಜಾಗೊಳಿಸಿ: ಸುಂದರೇಶ್‌


Team Udayavani, Jul 23, 2021, 6:52 PM IST

23-18

ಶಿವಮೊಗ್ಗ: ಪೆಗಾಸಸ್‌ ತಂತ್ರಾಂಶದ ಮೂಲಕ ಇಡೀ ದೇಶದಲ್ಲಿ ಬೇಹುಗಾರಿಕೆ ನಡೆಸಿ ಅ ಧಿಕಾರಕ್ಕೆ ಬಂದ ಕೇಂದ್ರ ಸರ್ಕಾರವನ್ನು ರಾಷ್ಟಪತಿಗಳು ಕೂಡಲೇ ವಜಾ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಗಾಸಸ್‌ ಎಂಬುದು ಇಸ್ರೇಲ್‌ ಕಂಪೆನಿ ರಚಿಸಿದ ತಂತ್ರಾಂಶವಾಗಿದ್ದು, ಇದನ್ನು ದೇಶಗಳು ಭಯೋತ್ಪಾದನೆ ನಿಗ್ರಹ ಮತ್ತು ದೇಶ ರಕ್ಷಣೆಗಾಗಿ ಉಪಯೋಗಿಸುತ್ತವೆ. ಭಾರತ ಕೂಡ ಇದೇ ಉದ್ದೇಶಕ್ಕೆ ಇದನ್ನು ಖರೀದಿಸಿ ದುರ್ಬಳಕೆ ಮಾಡಿಕೊಂಡಿದೆ. ಇದೊಂದು ಹೀನಾಯ ಕೃತ್ಯವಾಗಿದ್ದು, ಇದಕ್ಕೆ ಕಾರಣಕರ್ತರಾದ ಮೋದಿ ಹಾಗೂ ಅಮಿತ್‌ ಶಾ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಕರ್ನಾಟಕವೂ ಸೇರಿದಂತೆ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳು ಅಧಿ ಕಾರದಲ್ಲಿರುವ ರಾಜ್ಯಗಳ ಪ್ರಮುಖ ನಾಯಕರು, ಕಾಂಗ್ರೆಸ್‌ ರಾಷ್ಟಾಧ್ಯಕ್ಷರು, ಸುಪ್ರೀಂ ಕೋರ್ಟ್‌ ನ್ಯಾಯಾ ಧೀಶರು, ಚುನಾವಣಾ ಆಯುಕ್ತರು, ನಾಡಿನ ಪ್ರಮುಖ ಪತ್ರಕರ್ತರು ಸೇರಿದಂತೆ ತಮಗೆ ಆಗದ ವ್ಯಕ್ತಿಗಳ ಚಲನವಲನಗಳ ಬಗ್ಗೆ ನಿಗಾ ಇರಿಸಲು ಫೋನ್‌ ಗಳನ್ನು ಕದ್ದಾಲಿಕೆ ಮಾಡಿ, ಬ್ಲಾಕ್‌ವೆುàಲ್‌ ತಂತ್ರಗಾರಿಕೆ ಅನುಸರಿಸಿ ಅ ಧಿಕಾರಕ್ಕೆ ಬಂದಿದ್ದಾರೆ. ಇದರಿಂದ ಮೋದಿ ಅವರ ಅಸಲಿ ಮುಖವಾಡ ಜಗಜ್ಜಾಹೀರಾಗಿದೆ ಎಂದರು.

ಸುಪ್ರೀಂಕೋರ್ಟ್‌ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂ ಧಿ, ಸೋನಿಯಾ ಗಾಂಧಿ , ಪ್ರಿಯಾಂಕಾ ಗಾಂಧಿ , ತೃಣಮೂಲ ಕಾಂಗ್ರೆಸ್‌ ಅ ಧಿನಾಯಕಿ ಮಮತಾ ಬ್ಯಾನರ್ಜಿ, ಅಭಿಷೇಕ್‌ ಬ್ಯಾನರ್ಜಿ, ಸುಬೇಂದು ಅ ಧಿಕಾರಿ, ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್‌ ಕಿಶೋರ್‌, ವಿಶ್ವ ಹಿಂದೂ ಪರಿಷತ್‌ ಅಂತಾರಾಷ್ಟಿಯ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ತೊಗಾಡಿಯಾ, ಸಿದ್ದರಾಮಯ್ಯ (ಆಪ್ತ ಸಹಾಯಕ), ಹಾಲಿ ಸಿಎಂ ಯಡಿಯೂರಪ್ಪ ಸೇರಿದಂತೆ ತಮ್ಮನ್ನು ವಿರೋಧಿ ಸಿದವರನ್ನು ಹಣಿಯಲು ಪೆಗಾಸಸ್‌ ಬೇಹುಗಾರಿಕೆ ಅಸ್ತ ಪ್ರಯೋಗ ಮಾಡಿದ್ದಾರೆ ಎಂದರು.

ಇದರಿಂದ ಜೆಡಿಎಸ್‌ -ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಪತನಕ್ಕೂ ಕಾರಣವಾಯಿತು. ಅಲ್ಲದೆ, ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಪ್ರಮುಖ ನಾಯಕರನ್ನು ಈ ತಂತ್ರಾಂಶದ ಮೂಲಕ ಬೇಹುಗಾರಿಕೆ ನಡೆಸಿ ಬ್ಲಾಕ್‌ವೆುಲ್‌ ತಂತ್ರ ಪ್ರಯೋಗಿಸಿ ಅವರನ್ನು ಸೆಳೆದು ಅ ಧಿಕಾರ ಗ್ರಹಣ ಮಾಡಿದ್ದಾರೆಯೇ ವಿನಹ ಸಮರ್ಪಕ ಜನಾದೇಶದಿಂದ ಅಲ್ಲ ಎಂದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಇದೇ ತಂತ್ರಗಾರಿಕೆ ಬಳಸಿದ್ದಾರೆ ಎಂದು ಆಪಾದಿಸಿದರು. ಕೇಂದ್ರ ಸರ್ಕಾರದ ಈ ಬೇಹುಗಾರಿಕೆ ಕೃತ್ಯವನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಂದ ಸೂಕ್ತ ತನಿಖೆ ನಡೆಸಬೇಕು. ಪ್ರಪಂಚದೆದುರು ಭಾರತ ತಲೆ ತಗ್ಗಿಸುವಂತೆ ಮಾಡಿದ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಆರ್‌. ಪ್ರಸನ್ನಕುಮಾರ್‌, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯ ಎಚ್‌.ಸಿ. ಯೋಗೀಶ್‌, ಪ್ರಮುಖರಾದ ವಿಶ್ವನಾಥ್‌ ಕಾಶಿ, ನಾಗರಾಜ್‌, ಎನ್‌.ಡಿ. ಪ್ರವೀಣ್‌ ಕುಮಾರ್‌, ಚಂದನ್‌, ಆಕಾಶ್‌ ಮತ್ತಿತರರು ಇದ್ದರು.

ಟಾಪ್ ನ್ಯೂಸ್

ಬಾಲಿವುಡ್‌ ಹಾಡಿನ ಮೂಲಕ ಮನ ಗೆದ್ದ ಆಫ್ರಿಕನ್‌ ಅಣ್ಣ-ತಂಗಿ

1-gfdfdg

ಆರ್.ಅಶ್ವಿನ್ ಅಪೂರ್ವ, ಅಸಾಧಾರಣ ಸಾಧನೆ: ಕೋಚ್ ದ್ರಾವಿಡ್ ಶ್ಲಾಘನೆ

ರಾಜ್ಯದಲ್ಲಿ 257ಮಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆ: ಐವರು ಸಾವು

ರಾಜ್ಯದಲ್ಲಿ 257ಮಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆ: ಐವರು ಸಾವು

ಕೊಟ್ಟಿಗೆಹಾರ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ, ಗ್ರಾಮಸ್ಥರು, ಅಧಿಕಾರಿಗಳಿಂದ ಹುಡುಕಾಟ

ಕೊಟ್ಟಿಗೆಹಾರ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ, ಗ್ರಾಮಸ್ಥರು, ಅಧಿಕಾರಿಗಳಿಂದ ಹುಡುಕಾಟ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ಪ್ರಕರಣ ; ಇಬ್ಬರ ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ

ಕುಣಿಗಲ್: ನೀರಿನಲ್ಲಿ ನಾಲ್ವರು ಕೊಚ್ಚಿಹೋದ ಪ್ರಕರಣ; 2 ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ

1-ffsdf

ಸಂಸದೆಯರೊಂದಿಗಿನ ಟ್ವೀಟ್ ವೈರಲ್: ಶಶಿ ತರೂರ್ ಕ್ಷಮೆ ಕೇಳಿದ್ದೇಕೆ ?

ಶಿವಸೇನೆಯ ನಾಯಕ, ಸಂಸದ ಸಂಜಯ್‌ ರಾವತ್‌ ಪುತ್ರಿಯ ಅದ್ಧೂರಿ ಮದುವೆ

ಶಿವಸೇನೆಯ ನಾಯಕ, ಸಂಸದ ಸಂಜಯ್‌ ರಾವತ್‌ ಪುತ್ರಿಯ ಅದ್ದೂರಿ ಮದುವೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪವಿಭಾಗೀಯ ಮಟ್ಟದ ಕಚೇರಿ ರದ್ದು ಚರ್ಚೆ ಅಗತ್ಯ: ಬಿಎಸ್‌ವೈ

ಉಪವಿಭಾಗೀಯ ಮಟ್ಟದ ಕಚೇರಿ ರದ್ದು ಚರ್ಚೆ ಅಗತ್ಯ: ಬಿಎಸ್‌ವೈ

“ಬಿಜೆಪಿ ಸರ್ಕಾರದಿಂದ ಜನ ವಿರೋಧಿ ನೀತಿ’

“ಬಿಜೆಪಿ ಸರ್ಕಾರದಿಂದ ಜನ ವಿರೋಧಿ ನೀತಿ’

25clean

ಶೌಚಾಲಯ ಸ್ವಚ್ಛಗೊಳಿಸಿದ ಬಿಇಒ ತಳವಾರ

1ddsd

ತೀರ್ಥಹಳ್ಳಿ: ಸರ್ಕಾರಿ ರಜೆಯಲ್ಲಿ ಹಂಚು ಸಾಗಾಟ; ಅಧಿಕಾರಿಗಳು ಗಮನಿಸಲಿ!

ಅಧಿಕಾರಶಾಹಿಯಿಂದ ವ್ಯಕ್ತಿ ಸ್ವಾತಂತ್ರ್ಯ ನಾಶ

ಅಧಿಕಾರಶಾಹಿಯಿಂದ ವ್ಯಕ್ತಿ ಸ್ವಾತಂತ್ರ್ಯ ನಾಶ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ಬಾಲಿವುಡ್‌ ಹಾಡಿನ ಮೂಲಕ ಮನ ಗೆದ್ದ ಆಫ್ರಿಕನ್‌ ಅಣ್ಣ-ತಂಗಿ

1-gfdfdg

ಆರ್.ಅಶ್ವಿನ್ ಅಪೂರ್ವ, ಅಸಾಧಾರಣ ಸಾಧನೆ: ಕೋಚ್ ದ್ರಾವಿಡ್ ಶ್ಲಾಘನೆ

ರಾಜ್ಯದಲ್ಲಿ 257ಮಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆ: ಐವರು ಸಾವು

ರಾಜ್ಯದಲ್ಲಿ 257ಮಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆ: ಐವರು ಸಾವು

ಕೊಟ್ಟಿಗೆಹಾರ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ, ಗ್ರಾಮಸ್ಥರು, ಅಧಿಕಾರಿಗಳಿಂದ ಹುಡುಕಾಟ

ಕೊಟ್ಟಿಗೆಹಾರ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ, ಗ್ರಾಮಸ್ಥರು, ಅಧಿಕಾರಿಗಳಿಂದ ಹುಡುಕಾಟ

ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ 7 ಕೋವಿಡ್ ಪ್ರಕರಣ ಪತ್ತೆ

ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ 7 ಕೋವಿಡ್ ಪ್ರಕರಣ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.