ಸರಳ ದಸರಾ ಆಚರಣೆಗೆ ನಿರ್ಧಾರ


Team Udayavani, Oct 16, 2020, 6:57 PM IST

sm-tdy-1

ಭದ್ರಾವತಿ: ಕೋವಿಡ್ ಕಾರಣ ಈ ಬಾರಿ ಮೆರವಣಿಗೆ ಇಲ್ಲದೆ ಒಂಬತ್ತು ದಿನಗಳ ಕಾಲ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಲಾಗುವುದು ಎಂದು ಪೌರಾಯುಕ್ತ ಮನೋಹರ್‌ ಹೇಳಿದರು.

ಮಂಗಳವಾರ ನಗರಸಭೆಯ ಸರ್‌.ಎಂ.ವಿ. ಸಭಾಂಗಣದಲ್ಲಿ ನಗರದ ವಿವಿಧ ದೇವಾಲಯಗಳ ಸಮಿತಿ ಮತ್ತು ಅಧಿಕಾರಿಗಳ ಸಭೆಯಲ್ಲಿಮಾತನಾಡಿದ ಅವರು, ಅ. 17 ರಂದುಬೆಳಗ್ಗೆ 10.30 ಕ್ಕೆ ಗ್ರಾಮ ದೇವತೆಹಳದಮ್ಮ ದೇವಾಲಯದಲ್ಲಿ ನಿವೃತ್ತ

ಸೈನಿಕರು, ಕೋವಿಡ್ ವಾರಿಯರ್5 ಮಂದಿ ಸೇರಿದಂತೆ ಶ್ರೀದೇವತೆಗೆ ಮತ್ತು ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ. ಸಂಗಮೇಶ್ವರ್‌ ಚಾಲನೆ ನೀಡಲಿದ್ದಾರೆ.  ಹಳೇನಗರದ ಕನಕ ಮಂಟಪಮೈದಾನದಲ್ಲಿ ಅ. 26 ರಂದು ಸಂಜೆ 6 ಗಂಟೆಗೆ ನಡೆಯುವ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಗ್ರಾಮ ದೇವತೆಗಳಾದ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ, ಹಳದಮ್ಮ, ಕಾಳಿಕಾಂಬ ದೇವರುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಿಜಯ ದಶಮಿಯಂದು ನಡೆಯುತ್ತಿದ್ದ ದೇವಾನುದೇವತೆಗಳ ಮೆರವಣಿಗೆ ಮತ್ತು ಸಾಂಸ್ಕೃತಿಕ ಮೇಳಗಳನ್ನು ಕೋವಿಡ್ ನಿಮಿತ್ತ ಈ ವರ್ಷ ರದ್ದುಪಡಿಸಲಾಗಿದೆ. ಜನರಲ್ಲಿ ಕೋವಿಡ್ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ 9ದಿನಗಳ ಕಾಲ ಜಾಥಾನಡಿಗೆ, ಅನುಭವ-ಅನಿಸಿಕೆಗಳ ಜೊತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಬನ್ನಿಮುಡಿಯುವ ಸ್ಥಳಕ್ಕೆ ಕೇವಲ ಪ್ರಮುಖ 100 ಜನರಿಗೆ ಮಾತ್ರ ಪಾಸ್‌ ನೀಡುವ ಮೂಲಕ ಅವಕಾಶ ಕಲ್ಪಿಸಲಾಗುವುದು ಎಂದರು.

ಕಂದಾಯಾಧಿಕಾರಿ ರಾಜಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಇಇ ಶ್ರೀರಂಗರಾಜಪುರಿ, ಲೆಕ್ಕಾಧಿಕಾರಿ ಮಹಮ್ಮದ್‌ ಅಲಿ ಇದ್ದರು. ಸಭೆಯಲ್ಲಿ ನರಸಿಂಹಾಚಾರ್‌,ಶ್ರೀನಿವಾಸ್‌, ಕೃಷ್ಣಪ್ಪ, ಬಿ.ಕೆ. ಶ್ರೀನಾಥ್‌, ಹಾ. ರಾಮಪ್ಪ, ರಮಾಕಾಂತ್‌, ಸಂತೋಷ್‌ಕುಮಾರ್‌, ಮಂಜು, ಎನ್‌. ಕೃಷ್ಣಮೂರ್ತಿ ಮತ್ತಿತರರು ಇದ್ದರು.

ಗೋಮಾಳ ಒತ್ತುವರಿ: ಕ್ರಮಕ್ಕೆ  ಆಗ್ರಹ

ಸಾಗರ: ತಾಲೂಕಿನ ಕಸಬಾ ಹೋಬಳಿ ನಾಡಕಲಸಿಗ್ರಾಪಂ ವ್ಯಾಪ್ತಿಯ ಬಾಳಗೋಡು ಗ್ರಾಮದ ಸೊಪ್ಪಿನ ಬೆಟ್ಟ ಅತಿಕ್ರಮಣ ಮಾಡುತ್ತಿರುವುದು ಹಾಗೂ ಸರ್ಕಾರಿ ಗೋಮಾಳ ಒತ್ತುವರಿ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಬಾಳಗೋಡು ಗ್ರಾಮಸ್ಥರು ಉಪ ವಿಭಾಗಾ ಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು.

ಬಾಳಗೋಡು ಗ್ರಾಮದ ಸರ್ವೇ ನಂ. 5ರಲ್ಲಿ 136.17 ಎಕರೆ ಸರ್ಕಾರಿ ಸೊಪ್ಪಿನ ಬೆಟ್ಟ ಪ್ರದೇಶವಿದ್ದು,ಅದನ್ನು ಗ್ರಾಮಸ್ಥರಾದ ನಾವು ಲಾಗಾಯ್ತಿನಿಂದ ಸಂರಕ್ಷಣೆ ಮಾಡಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಪಕ್ಕದ ಗ್ರಾಮದ ಕೆಲವರು ಸೊಪ್ಪಿನ ಬೆಟ್ಟವನ್ನು ಒತ್ತುವರಿ ಮಾಡಿ ಅಲ್ಲಿರುವ ಮರಗಿಡಗಳನ್ನು ಕಡಿದು ಕೃಷಿ ಮಾಡುತ್ತಿದ್ದಾರೆ. ನೈಸರ್ಗಿಕವಾದ ಸೊಪ್ಪಿನ ಬೆಟ್ಟವನ್ನು ನಾಶ ಮಾಡುತ್ತಿರುವ ಅತಿಕ್ರಮಣದಾರರು ಭೂಕಬಳಿಕೆ ಮಾಡುತ್ತಿದ್ದಾರೆ.ಸೊಪ್ಪಿನ ಬೆಟ್ಟವು ಸರ್ಕಾರಿ ಜಾಗವಾಗಿದ್ದು ಗ್ರಾಮಸ್ಥರ  ಹಕ್ಕಿನ ಆಸ್ತಿಯಾಗಿದೆ. ಕಂದಾಯ ಇಲಾಖೆ ಸೊಪ್ಪಿನಬೆಟ್ಟ ರಕ್ಷಣೆ ಮಾಡುವ ನಿಟ್ಟಿನಲ್ಲಿ ಅತಿಕ್ರಮಣವನ್ನು ತೆರವುಗೊಳಿಸಿ ಒತ್ತುವರಿದಾರರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಗ್ರಾಮಸ್ಥರಾದ ಶಿವಕುಮಾರ್‌, ದಾನಶೇಖರ ಗೌಡ, ಮೋಹನ್‌ ಗೌಡ, ದೇವರಾಜ್‌ ಗೌಡ, ಶೇಖರಪ್ಪ ಬಾಳಗೋಡು, ಅಮೃತೇಶ್ವರ, ಶಶಿಧರ ಗೌಡ, ರಾಜಶೇಖರ್‌, ಪುಟ್ಟರಾಜ್‌, ಪ್ರವೀಣ್‌, ರಮೇಶ್‌, ನ್ಯಾಯವಾದಿ ಕೆ.ವಿ. ಪ್ರವೀಣಕುಮಾರ್‌ ಇನ್ನಿತರರು ಇದ್ದರು.

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sagara news

ಅಕ್ರಮ ಗೋವು ಕಳ್ಳತನ: ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

incident held at sagara

ಬಸ್ಸಿಗೆ ಕಾಯುತ್ತಿದ್ದವರಿಗೆ ಢಿಕ್ಕಿ ಹೊಡೆದ ಕಾರು: ಚಾಲಕ ಸಾವು, ಉಳಿದವರ ಸ್ಥಿತಿ ಗಂಭೀರ

23smg7a

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಗೆ ಕುವೆಂಪು ವಿವಿ ಉಪನ್ಯಾಸಕರು

sagara news

ಸಾಲುಮರಗಳ ಕಡಿತಲೆಗೆ ಆಕ್ಷೇಪ ಸಲ್ಲ

25fine

ಮಾಹಿತಿ ಕೊಡದ ಎಸಿಗೆ ಐದು ಸಾವಿರ ರೂ. ದಂಡ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.