Udayavni Special

ಕುಡಿವ ನೀರಿನ ಸಮಸ್ಯೆ ಪರಿಹರಿಸಿ


Team Udayavani, Dec 1, 2020, 5:10 PM IST

ಕುಡಿವ ನೀರಿನ ಸಮಸ್ಯೆ ಪರಿಹರಿಸಿ

ಶಿವಮೊಗ್ಗ: ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳುವ ಕುರಿತಂತೆ ಪಾಲಿಕೆ ಮೇಯರ್‌ ಸುವರ್ಣ ಶಂಕರ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರು ಪಕ್ಷಬೇಧ ಮರೆತು ಆಗ್ರಹಿಸಿದರು.

ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯವೈಖರಿ ಬಗ್ಗೆ ಪಾಲಿಕೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಒಂದು ವಾರದೊಳಗೆ ನೀರಿನಸಮಸ್ಯೆ ಸರಿಪಡಿಸಬೇಕು. ಇಲ್ಲದಿದ್ದರೆ ಇಲಾಖೆಯಾದರೂ ಏಕೆ ಬೇಕು ಎಂದು ಪ್ರಶ್ನಿಸಿದರು.

ಉಪಮೇಯರ್‌ ಸುರೇಖಾ ಮುರಳಿಧರ್‌ ನೀರು ಸರಬರಾಜು ಮತ್ತು ಅಧಿಕಾರಿಗಳ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿ, ಅನುದಾನ ಸೌಲಭ್ಯ ಸಮರ್ಪಕವಾಗಿಕಲ್ಪಿಸಿದ್ದರೂ ನೀರು ಪೂರೈಕೆಯಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಪಾಲಿಕೆ ಆಡಳಿತಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಚ್‌.ಸಿ. ಯೋಗೀಶ್‌ ಮಾತನಾಡಿ, ಹಬ್ಬದ ಸಂದರ್ಭದಲ್ಲೇ ಸಮರ್ಪಕವಾಗಿ ನೀರುಪೂರೈಕೆ ಮಾಡಿಲ್ಲ. ಬೇಜವಾಬ್ದಾರಿಯಿಂದ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಸದಸ್ಯರಾದ ನಾಗರಾಜ್‌ ಕಂಕಾರಿ, ಆರ್‌.ಸಿ. ನಾಯ್ಕ, ಯಮುನಾ ರಂಗೇಗೌಡ, ಇ.ವಿಶ್ವಾಸ್‌ ಮೊದಲಾದವರು ನೀರಿನ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಡಳಿತ ಪಕ್ಷದ ನಾಯಕ ಎಸ್‌.ಎನ್‌. ಚನ್ನಬಸಪ್ಪ ಮಾತನಾಡಿ, ಅಧಿಕಾರಿಗಳುಜವಾಬ್ದಾರಿಯಿಂದ ಕೆಲಸ ಮಾಡಬೇಕು. ನೀರು, ವಿದ್ಯುತ್‌ ಪೂರೈಕೆಯಲ್ಲಿವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗೆ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಸೂಚಿಸಿದರು. ಸುರೇಖಾ ಮುರಳೀಧರ್‌ ಒಂದು ವಾರದೊಳಗೆ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಹೊರಟು ಹೋಗಿ ಎಂದರು.

ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದ ಮೇಯರ್‌ ಸುವರ್ಣ ಶಂಕರ್‌, ಡಿ.10 ರಂದು ನೀರಿನ ಸಮಸ್ಯೆ ಕುರಿತಾಗಿವಿಶೇಷ ಸಭೆ ಕರೆಯುವುದಾಗಿ ತಿಳಿಸಿದರು. ವಿಧಾನ ಪರಿಷತ್‌ ಸದಸ್ಯ ಆರ್‌ .ಪ್ರಸನ್ನಕುಮಾರ್‌ ಮಾತನಾಡಿ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಹೆಸರಲ್ಲಿ ನಗರವನ್ನು ಹಾಳು ಮಾಡಲಾಗುತ್ತಿದೆ. ಪಾಲಿಕೆ ಆಡಳಿತ ಬಿಗಿಯಿಲ್ಲದ ಕಾರಣ ಕಾಮಗಾರಿಗಳು ಕಳಪೆಯಾಗಿ ಸರ್ಕಾರದ ಹಣ ಪೋಲಾಗುತ್ತಿದೆ ಎಂದು ದೂರಿದರು.

ಈ ವೇಳೆ ಆಡಳಿತ ಪಕ್ಷದ ನಾಯಕ ಎಸ್‌. ಎನ್‌.ಚನ್ನಬಸಪ್ಪ, ಬಿಜೆಪಿ ಆಡಳಿತದಲ್ಲಿಶಿವಮೊಗ್ಗದ ಚಿತ್ರಣ ಬದಲಿಸಲಾಗುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಗುಣಮಟ್ಟದ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು. ಕಸವನ್ನು ತುಂಗಾನಾಲೆಗೆ ಹಾಕಲಾಗುತ್ತಿದೆ ಎಂದು ಆರ್‌ .ಪ್ರಸನ್ನಕುಮಾರ್‌ ಹೇಳಿದ್ದು, ಕಸ ತೆಗೆಸದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ನೀರು ಪೂರೈಕೆ, ವಿದ್ಯುತ್‌, ಸ್ಮಾರ್ಟ್‌ಸಿಟಿ ಕಾಮಗಾರಿ ಕುರಿತಾಗಿ ವ್ಯಾಪಕ ಚರ್ಚೆ ನಡೆದು ಮಧ್ಯಾಹ್ನದ ನಂತರವೂ ಸಭೆ ಮುಂದುವರಿದಿತ್ತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

horoscope

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಸಾಮಾಜಿಕವಾಗಿ ಜನಾನುರಾಗ ಲಭಿಸಲಿದೆ!

ದೇಶದಲ್ಲಿಂದು 72ನೇ ಗಣರಾಜ್ಯೋತ್ಸವ ಸಂಭ್ರಮ

LIVE ದೇಶದಲ್ಲಿಂದು 72ನೇ ಗಣರಾಜ್ಯೋತ್ಸವ ಸಂಭ್ರಮ; ಶುಭ ಹಾರೈಸಿದ ರಾಷ್ಟ್ರಪತಿ, ಪ್ರಧಾನಿ

ಸಾಧನೆಯ ವೈದ್ಯ ಡಾ| ಬಿ.ಎಂ. ಹೆಗ್ಡೆ

ಸಾಧನೆಯ ವೈದ್ಯ ಡಾ| ಬಿ.ಎಂ. ಹೆಗ್ಡೆ

Untitled-5

ಶೌರ್ಯ ಪ್ರಶಸ್ತಿ ಗೌರವಧನ : ಎರಡು ವರ್ಷಗಳಿಂದ ಚಿಕ್ಕಾಸೂ ಇಲ್ಲ !

102 ಸಾಧಕರ ಮುಕುಟಕ್ಕೆ ಪದ್ಮಶ್ರೀ ಕಿರೀಟ

102 ಸಾಧಕರ ಮುಕುಟಕ್ಕೆ ಪದ್ಮಶ್ರೀ ಕಿರೀಟ

ಗಣತಂತ್ರ ಭಾರತ

ಗಣತಂತ್ರ ಭಾರತ

ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್‌ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರ

ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್‌ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುಣಸೋಡು ಸ್ಫೋಟ ಪ್ರಕರಣ :ಕಲ್ಲುಕ್ವಾರಿ ಮಾಲೀಕ ಸೇರಿ ನಾಲ್ವರನ್ನು ಬಂಧಿಸಿದ ಪೊಲೀಸರು

ಹುಣಸೋಡು ಸ್ಫೋಟ ಪ್ರಕರಣ :ಕ್ರಷರ್ ಮಾಲೀಕ ಸೇರಿ ನಾಲ್ವರನ್ನು ಬಂಧಿಸಿದ ಪೊಲೀಸರು

25-30

ಕನ್ನಡ ಸಾಹಿತ್ಯಕ್ಕಿದೆ ತನ್ನದೇ ಆದ ಗಟ್ಟಿತನ

25-29

ಭಾಷೆ-ಗಡಿ ತಂಟೆಗೆ ಬಂದ್ರೆ ಸಹಿಸಲ್ಲ : ಈಶ್ವರಪ್ಪ

ಹುಣಸೋಡು ಸ್ಪೋಟದ ಸ್ಥಳದಲ್ಲಿ10 ಕ್ಕೂ ಹೆಚ್ಚು ಕಡೆ ಜೀವಂತ ಜಿಲೆಟಿನ್ ಕಡ್ಡಿ ಪತ್ತೆ!

ಹುಣಸೋಡು ಸ್ಪೋಟದ ಸ್ಥಳದಲ್ಲಿ10 ಕ್ಕೂ ಹೆಚ್ಚು ಕಡೆ ಜೀವಂತ ಜಿಲೆಟಿನ್ ಕಡ್ಡಿ ಪತ್ತೆ!

Shivamogga

ಕಾಂಗ್ರೆಸ್‌ನಿಂದ ರಸ್ತೆತಡೆ-ಪ್ರತಿಭಟನೆ

MUST WATCH

udayavani youtube

ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ

udayavani youtube

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

ಹೊಸ ಸೇರ್ಪಡೆ

horoscope

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಸಾಮಾಜಿಕವಾಗಿ ಜನಾನುರಾಗ ಲಭಿಸಲಿದೆ!

ದೇಶದಲ್ಲಿಂದು 72ನೇ ಗಣರಾಜ್ಯೋತ್ಸವ ಸಂಭ್ರಮ

LIVE ದೇಶದಲ್ಲಿಂದು 72ನೇ ಗಣರಾಜ್ಯೋತ್ಸವ ಸಂಭ್ರಮ; ಶುಭ ಹಾರೈಸಿದ ರಾಷ್ಟ್ರಪತಿ, ಪ್ರಧಾನಿ

ಸಾಧನೆಯ ವೈದ್ಯ ಡಾ| ಬಿ.ಎಂ. ಹೆಗ್ಡೆ

ಸಾಧನೆಯ ವೈದ್ಯ ಡಾ| ಬಿ.ಎಂ. ಹೆಗ್ಡೆ

Untitled-5

ಶೌರ್ಯ ಪ್ರಶಸ್ತಿ ಗೌರವಧನ : ಎರಡು ವರ್ಷಗಳಿಂದ ಚಿಕ್ಕಾಸೂ ಇಲ್ಲ !

102 ಸಾಧಕರ ಮುಕುಟಕ್ಕೆ ಪದ್ಮಶ್ರೀ ಕಿರೀಟ

102 ಸಾಧಕರ ಮುಕುಟಕ್ಕೆ ಪದ್ಮಶ್ರೀ ಕಿರೀಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.