ಸಾಗರ-ತಾಳಗುಪ್ಪಕ್ಕೆ ರೈಲು ಸಂಚಾರ ಆರಂಭಿಸಿ

ಸುರಕ್ಷಿತ ಪ್ರಯಾಣಕ್ಕಾಗಿ ಜನರ ಒಕ್ಕೊರಲ ಒತ್ತಾಯ

Team Udayavani, Oct 28, 2020, 6:05 PM IST

ಸಾಗರ-ತಾಳಗುಪ್ಪಕ್ಕೆ ರೈಲು ಸಂಚಾರ ಆರಂಭಿಸಿ

ಸಾಗರ: ದಶಕಗಳ ಕಾಲ ನ್ಯಾರೋಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಬದಲಾಗದ ರೈಲ್ವೆ ಮಾರ್ಗದಲ್ಲಿ ರೈಲು ಬಿಡುವಂತೆ ಆಗ್ರಹಿಸಿ ತಾಲೂಕಿನಲ್ಲಿ ನಡೆದ ಚಳುವಳಿ ಮತ್ತೂಮ್ಮೆ ಆರಂಭಿಸಬೇಕು ಎಂಬಂಥಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮತ್ತೂಮ್ಮೆ ಸಾಗರದಿಂದ ಬೆಂಗಳೂರಿಗೆ ರೈಲು ಬಿಡಿ ಎಂದು ವ್ಯಾಪಕವಾಗಿ ಆಗ್ರಹಿಸಲಾರಂಭಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ, ಜಿಲ್ಲೆಯಲ್ಲಿ ಶಿವಮೊಗ್ಗಕ್ಕೆ ಜನ್ಮಶತಾಬ್ಧಿ ರೈಲು ಬಂದುಹೋಗಲಾರಂಭಿಸಿದ್ದರೂ ಸಾಗರ, ತಾಳಗುಪ್ಪಕ್ಕೆ ಮಾತ್ರ ಈವರೆಗೆ ರೈಲು ಸಂಚಾರ ಆರಂಭವಾಗಿಲ್ಲ.

ಕೋವಿಡ್  ಕಾರಣಕ್ಕೆ ಕಳೆದ ಮಾರ್ಚ್‌ ತಿಂಗಳ ಮೂರನೇ ವಾರದಿಂದ ಸ್ಥಗಿತಗೊಂಡಿರುವ ತಾಳಗುಪ್ಪ-ಬೆಂಗಳೂರು ನಡುವೆ ಕೊನೆಪಕ್ಷ ರಾತ್ರಿಯ ಒಂದು ರೈಲನ್ನಾದರೂ ಆರಂಭಿಸಿದರೆ ಜನರಿಗೆ ವಿವಿಧ ರೀತಿಯಲ್ಲಿ ಅನುಕೂಲಗಳಾಗುತ್ತವೆಎಂದು ಪ್ರಸ್ತಾಪಿಸಲಾಗಿದೆ. ಈಗಲೂ ರೈಲು ಪ್ರಯಾಣ ದರ ಕಡಿಮೆಯಿರುವುದು, ಬಸ್‌ಗಳಿಗಿಂತಸುಲಭವಾಗಿ ಭೌತಿಕ ಅಂತರ ಕಾಪಾಡಿಕೊಂಡುಪ್ರಯಾಣ ಮಾಡಲು ಸಾಧ್ಯವಿರುವುದರ ಹಲವರುಬೆರಳು ಮಾಡಿ ತೋರಿಸುತ್ತಿದ್ದು, ಖಾಸಗಿ ವಾಹನ ಅಥವಾ ಬಸ್‌ ಪ್ರಯಾಣ ಸೋಂಕಿನ ಪ್ರಮಾಣವನ್ನು ಹೆಚ್ಚಿಸಬಹುದು. ಆದರೆ ರೈಲಿನಲ್ಲಿ ಹೆಚ್ಚು ಸುರಕ್ಷಿತವಾಗಿ ಪ್ರಯಾಣ ಮಾಡಬಹುದು ಎಂದು ವಾದಿಸುತ್ತಿದ್ದಾರೆ.

ಈ ಹಿಂದೆ ರೈಲ್ವೆ ಬ್ರಾಡ್‌ಗೆàಜ್‌ ನಿರ್ಮಾಣದಲ್ಲಿ ಮಹತ್ವದ ಆಂದೋಲನವನ್ನು ಹಮ್ಮಿಕೊಂಡಿದ್ದ ರೈಲ್ವೆ ಹೋರಾಟ ಸಮಿತಿಯ ಪ್ರಮುಖ ಕುಮಾರಸ್ವಾಮಿ “ಉದಯವಾಣಿ’ ಜೊತೆ ಮಾತನಾಡಿ, ಈಗಲೂ ರೈಲ್ವೆ ಇಲಾಖೆ ಜನರಲ್‌ ಬೋಗಿಯನ್ನು ರದ್ದುಗೊಳಿಸಿ, ಭೌತಿಕ ಅಂತರವನ್ನು ಕಾಪಾಡಬಹುದಾದ ಸ್ಲಿàಪರ್‌, ಎಸಿ ಕೋಚ್‌ಗಳನ್ನು ಬಿಡಬಹುದು. ರೈಲು ಹೊರಡುವ ಮುನ್ನ ಹಾಗೂ ತಲುಪಿದ ಮೇಲೆ ಸ್ಯಾನಿಟೈಸೇಷನ್‌ ಮಾಡುವುದು ಕೂಡ ಕಷ್ಟವಲ್ಲ.

ಮುಖ್ಯವಾಗಿ, ಹೃದಯದ ಚಿಕಿತ್ಸೆ ಸೇರಿದಂತೆ ಪ್ರಮುಖ ಆಪರೇಷನ್‌ ಮಾಡಿಸಿಕೊಂಡ ನಾಗರಿಕರು ನಂತರ ತಿಂಗಳು ತಿಂಗಳಿನ ಪರೀಕ್ಷೆಗಳಿಗೆ ಬಸ್‌ನಲ್ಲಿ ಪಯಣಿಸಲಾಗುವುದಿಲ್ಲ. ಅವರ ದೇಹ ಹೆಚ್ಚಿನ ಕುಲುಕಾಟದ ಪ್ರಯಾಣವನ್ನು ತಡೆದುಕೊಳ್ಳುವುದಿಲ್ಲ. ಖಾಸಗಿ ವಾಹನ ಮಾಡಿಕೊಂಡು ಹೋಗುವುದು ಮಧ್ಯಮ ವರ್ಗಕ್ಕೂ ದುಬಾರಿಯಾಗುತ್ತದೆ.ಇದರಿಂದ ಅನಾರೋಗ್ಯ ಕ್ಕೊಳಗಾದವರು ಪರೀಕ್ಷೆಗೆಹೋಗುವುದನ್ನೇ ತಪ್ಪಿಸುವ ನಿರ್ಧಾರ ಮಾಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಬೆಂಗಳೂರು- ಕಾರವಾರ, ಬೆಂಗಳೂರು- ಹುಬ್ಬಳ್ಳಿ ಮಾರ್ಗದ ರೈಲುಗಳ ಸಂಚಾರ ಆರಂಭವಾಗಿದೆ. ಲಾಕ್‌ಡೌನ್‌ ನಂತರ ಮತ್ತೆ ಸಂಚಾರ ಆರಂಭಿಸಿರುವ ರೈಲುಗಳಲ್ಲಿ ಸಾಮಾನ್ಯ ದರ್ಜೆಯ ಬೋಗಿಗಳನ್ನು ಕಡಿಮೆ ಮಾಡಿ ಆಸನಗಳನ್ನು ಕಾಯ್ದಿರಿಸುವ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಈ ಮೂಲಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ರೈಲ್ವೆ ಆದಾಯ ಕೂಡ ಸುಧಾರಿಸುತ್ತದೆ. ಜನರಿಗೂ ಅನುಕೂಲವಾಗುತ್ತದೆ. ತಾಳಗುಪ್ಪ-ಬೆಂಗಳೂರು ಮಾರ್ಗದ ರೈಲಿಗೂ ಇದೇ ಮಾನದಂಡ ಅನುಸರಿಸಿ ಮತ್ತೆ ರೈಲು ಸಂಚಾರ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು. ರೈಲ್ವೆ ಇಲಾಖೆಯ ಮೇಲೆ ರಾಜ್ಯದ ಜನಪ್ರತಿನಿಧಿಗಳ

ಪ್ರಭಾವ ಕಡಿಮೆ. ಈ ಮಾರ್ಗಗಳ ಪುನರ್ಚಾಲನೆಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಮನಸ್ಸು ಮಾಡಬೇಕು. ಈ ನಿಟ್ಟಿನಲ್ಲಿ ಅವರ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.

ಸಾಗರಕ್ಕೆ ಒಂದೇ ರೈಲು ಕೊಟ್ಟರೂ ಸಾಕು! :  ಈ ಮೊದಲು ರಾತ್ರಿ 8.15ಕ್ಕೆ ತಾಳಗುಪ್ಪದಿಂದ ಹೊರಟು ಬೆಳಗಿನ ಜಾವ 4.30ಕ್ಕೆ ಬೆಂಗಳೂರು ತಲುಪಿ ನಂತರ 8.30ಕ್ಕೆ ಮೈಸೂರು ತಲುಪುತ್ತಿದ್ದ ರಾತ್ರಿಯ ಎಕ್ಸ್‌ಪ್ರೆಸ್‌ ರೈಲು ಬಿಟ್ಟರೂ ಸಾಕು. ಈ ರೈಲು ಪುನಃ ರಾತ್ರಿ 7.30ಕ್ಕೆ ಮೈಸೂರಿನಿಂದ ಹೊರಟು, ಬೆಂಗಳೂರಿನಿಂದ ರಾತ್ರಿ 11ಕ್ಕೆ ಬಿಟ್ಟು ಬೆಳಗ್ಗೆ 6.45ಕ್ಕೆ ತಾಳಗುಪ್ಪ ತಲುಪುತ್ತಿತ್ತು. ಈ ರೈಲಿನ ಸಂಚಾರದಿಂದ ತಾಲೂಕಿನ ಪ್ರಯಾಣಿಕರಿಗೆ ಮಾತ್ರವಲ್ಲದೆ ಸೊರಬ, ಹೊಸನಗರ ಹಾಗೂ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ಭಾಗದ ಜನರಿಗೂ ಅನುಕೂಲಕರವಾಗಿತ್ತು.

ತಾಳಗುಪ್ಪ ಶಿವಮೊಗ್ಗ ನಡುವಿನ ರೈಲು  ಮಾರ್ಗ ಈ ಕೋವಿಡ್‌ ಕಾಲದಲ್ಲಿ ಮೂರು ಬಾರಿ ಪರೀಕ್ಷೆಗೊಳಪಟ್ಟಿದ್ದು ಸುವ್ಯವಸ್ಥಿತವಾಗಿದೆ. ಈಗಲೂ ವಾರದಲ್ಲಿ ಕೆಲವು ಅಧಿಕಾರಿಗಳು ಪರೀಕ್ಷಾರ್ಥ ರೈಲು ಓಡಿಸುತ್ತಿದ್ದಾರೆ. ತಾಳಗುಪ್ಪದಲ್ಲಿ ರಾಷ್ಟ್ರೀಯ ಹೆದ್ದಾರಿ 206ರ ರೈಲ್ವೆ ಕ್ರಾಸಿಂಗ್‌ನ ದುರಸ್ತಿ ಕೆಲಸ ಕೊನೆಗೊಂಡಿದೆ. ಇನ್ನೂ ವಿಳಂಬ ಮಾಡಬಾರದು. – ಕುಮಾರಸ್ವಾಮಿ, ರೈಲ್ವೆ ಹೋರಾಟ ಸಮಿತಿ ಸಾಗರ

ಕೋವಿಡ್‌ ಕಾಲದಲ್ಲಿ ಜನರ ಆರೋಗ್ಯ ಸುಧಾರಿಸಿದೆ ಎಂಬ ಮಾತುಗಳಿವೆ. ಆದರೆ ಸೋಂಕಿನ ಭಯದಿಂದ ಕ್ಯಾನ್ಸರ್‌ ಮೊದಲಾದ ಅಪಾಯಕ್ಕೊಳಗಾದವರು ಮೊದಲಿನ ಹಂತದಲ್ಲಿಯೇ ಪರೀಕ್ಷೆಗೊಳಗಾಗುವುದನ್ನುರೈಲಿನಂತಹ ಸೌಲಭ್ಯ ಇಲ್ಲದ ಕಾರಣಕ್ಕೂ ಮುಂದೂಡುತ್ತಿದ್ದಾರೆ. ಇದರಿಂದ ಕಾಯಿಲೆ ಮೂರು ನಾಲ್ಕನೇ ಹಂತಕ್ಕೆ ಮುಟ್ಟುವ ಅಪಾಯವಿದೆ. ಬಸ್‌ ಸಂಚಾರಕ್ಕಿಂತ ರೈಲು ಮಾರ್ಗಗಳು ತೆರೆದುಕೊಳ್ಳಬೇಕಾಗಿದೆ.  -ಡಾ| ಶ್ರೀಪಾದ ರಾವ್‌, ರೈಲ್ವೆ ಪ್ರಯಾಣಿಕರು

ಟಾಪ್ ನ್ಯೂಸ್

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

Param-Bir-Singh

ಐಪಿಎಸ್‌ ಅಧಿಕಾರಿ ಪರಂಬೀರ್‌ ಸಿಂಗ್‌ ವಿರುದ್ಧ ಶಿಸ್ತಿನ ಕ್ರಮ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪವಿಭಾಗೀಯ ಮಟ್ಟದ ಕಚೇರಿ ರದ್ದು ಚರ್ಚೆ ಅಗತ್ಯ: ಬಿಎಸ್‌ವೈ

ಉಪವಿಭಾಗೀಯ ಮಟ್ಟದ ಕಚೇರಿ ರದ್ದು ಚರ್ಚೆ ಅಗತ್ಯ: ಬಿಎಸ್‌ವೈ

“ಬಿಜೆಪಿ ಸರ್ಕಾರದಿಂದ ಜನ ವಿರೋಧಿ ನೀತಿ’

“ಬಿಜೆಪಿ ಸರ್ಕಾರದಿಂದ ಜನ ವಿರೋಧಿ ನೀತಿ’

25clean

ಶೌಚಾಲಯ ಸ್ವಚ್ಛಗೊಳಿಸಿದ ಬಿಇಒ ತಳವಾರ

1ddsd

ತೀರ್ಥಹಳ್ಳಿ: ಸರ್ಕಾರಿ ರಜೆಯಲ್ಲಿ ಹಂಚು ಸಾಗಾಟ; ಅಧಿಕಾರಿಗಳು ಗಮನಿಸಲಿ!

ಅಧಿಕಾರಶಾಹಿಯಿಂದ ವ್ಯಕ್ತಿ ಸ್ವಾತಂತ್ರ್ಯ ನಾಶ

ಅಧಿಕಾರಶಾಹಿಯಿಂದ ವ್ಯಕ್ತಿ ಸ್ವಾತಂತ್ರ್ಯ ನಾಶ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.