ಹುಡುಗಿ ವಿಚಾರಕ್ಕೆ ಘರ್ಷಣೆ ; ಶಿವಮೊಗ್ಗದಲ್ಲಿ ವಿದ್ಯಾರ್ಥಿಗೆ ಇರಿತ!
Team Udayavani, Sep 6, 2018, 3:35 PM IST
ಶಿವಮೊಗ್ಗ : ಸಹ್ಯಾದ್ರಿ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳ ನಡುವಿನ ಘರ್ಷಣೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಇರಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಹುಡುಗಿಯೊಬ್ಬಳಿಗೆ ಚುಡಾಯಿಸಬೇಡ ಎಂದಿದ್ದ ಕಾರಣಕ್ಕೆ ಅವಿನಾಶ್ ಎಂಬ ವಿದ್ಯಾರ್ಥಿಗೆ ಗೆ ಗೋಕುಲ್ ಎಂಬಾತ ಇರಿದಿರುವ ಬಗ್ಗೆ ವರದಿಯಾಗಿದೆ.
ಬುಧವಾರ ಸಂಜೆಯೂ ಈ ವಿಚಾರಕ್ಕೆ ವಿದ್ಯಾರ್ಥಿಗಳ ಗುಂಪುಗಳ ನಡುವೆ ಜಗಳವಾಗಿದ್ದು, ಇಂದು ಬೆಳಗ್ಗೆ ಗಲಾಟೆ ವೇಳೆ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಗುಂಪು ಕೃತ್ಯ ಎಸಗಿದೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡಿರುವ ತೃತೀಯ ಬಿಎಸ್‌ಸಿ ವಿದ್ಯಾರ್ಥಿ ಅವಿನಾಶ್‌ಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.