Udayavni Special

ದಕ್ಷಿಣದ ಪ್ರಥಮ ರೈತ ಪಂಚಾಯತ್‌ಗೆ ವೇದಿಕೆ ಸಿದ್ಧ


Team Udayavani, Mar 19, 2021, 8:21 PM IST

ಹಗದಗದಹಗಹಗಹ

ಶಿವಮೊಗ್ಗ : ಹೋರಾಟದ ಜಿಲ್ಲೆ, ಚಳವಳಿಗಳ ಹುಟ್ಟೂರು ಎಂದೇ ಖ್ಯಾತಿ ಗಳಿಸಿರುವ ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಮೊದಲ ಮಹಾ ಪಂಚಾಯತ್‌ಗೆ ವೇದಿಕೆ ಸಿದ್ಧಗೊಂಡಿದೆ. ದೆಹಲಿಯಲ್ಲಿ 100ಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರಾಕೇಶ್‌ ಟಿಕಾಯತ್‌ ಮಾ.20ರಂದು ರೈತರಿಗೆ ಸಂದೇಶ ನೀಡಲಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋ  ಧಿಸಿ 100ಕ್ಕೂ ಹೆಚ್ಚು ದಿನಗಳಿಂದ ಪಂಜಾಬ್‌, ಹರಿಯಾಣ, ದೆಹಲಿ ಭಾಗದ ರೈತರು ಬೃಹತ್‌ ಹೋರಾಟ ನಡೆಸುತ್ತಿದ್ದು, ಅದರ ಕಾವು ಉತ್ತರ ಭಾರತದ ರಾಜ್ಯಗಳಿಗೆ ಸೀಮಿತವಾಗಿದೆ. ಇದನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ವಿಸ್ತರಿಸಲು ರೈತ ಸಂಘಟನೆಗಳು ತೀರ್ಮಾನಿಸಿದ್ದು, ಅದರ ಮೊದಲ ಭಾಗವಾಗಿ ಸಿಎಂ ತವರು ಕ್ಷೇತ್ರ ಶಿವಮೊಗ್ಗದಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದೆ.

ಶಿವಮೊಗ್ಗ ಅಷ್ಟೇ ಅಲ್ಲ ಅಕ್ಕಪಕ್ಕದ ಜಿಲ್ಲೆಗಳ ಸುಮಾರು 50 ಸಾವಿರ ಜನ ಸಮಾವೇಶಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ರೈತರ ಹೋರಾಟ ಬೆಂಬಲಿಸಲು ದೆಹಲಿಗೆ ಹೋಗಿದ್ದ ರೈತ ಮುಖಂಡರಿಗೆ ರಾಕೇಶ್‌ ಟಿಕಾಯತ್‌ ಹೋರಾಟವನ್ನು ದೇಶವ್ಯಾಪಿ ವಿಸ್ತರಿಸಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಶಿವಮೊಗ್ಗದಲ್ಲಿ ದಕ್ಷಿಣ ರಾಜ್ಯಗಳ ಮೊದಲ ಸಭೆ ನಡೆಯಲಿದೆ. ಇದರ ಉಸ್ತುವಾರಿಯನ್ನು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್‌, ರೈತಸಂಘಗಳ ವರಿಷ್ಠರಾದ ಕೆ.ಟಿ. ಗಂಗಾಧರ್‌, ಎಚ್‌.ಆರ್‌. ಬಸವರಾಜಪ್ಪ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಕೆ.ಪಿ. ಶ್ರೀಪಾಲ್‌, ಕೆ.ಎಲ್‌. ಅಶೋಕ್‌,  ಎಸ್‌ನ ಎಂ. ಗುರುಮೂರ್ತಿ, ಹಾಲೇಶಪ್ಪ ವಹಿಸಿಕೊಂಡಿದ್ದು, ಒಂದು ತಿಂಗಳಿಂದ ಹಳ್ಳಿ ಹಳ್ಳಿ ಸುತ್ತಿ ಸಂಘಟನೆ ಮಾಡುತ್ತಿದ್ದಾರೆ. ಇವರಿಗೆ ಕೆ.ಎಲ್‌. ಅಶೋಕ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಎಸ್‌. ಸುಂದರೇಶ್‌, ಮಧು ಬಂಗಾರಪ್ಪ, ಕಿಮ್ಮನೆ ರತ್ನಾಕರ್‌ ಸೇರಿದಂತೆ ನೂರಾರು ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೆಲವು ಸಂಘಟನೆಗಳೂ ಸಾಥ್‌ ನೀಡಿವೆ. ಸಾಹಿತ್ಯ, ರಾಜಕೀಯ, ಸಂಸ್ಕೃತಿ ಸೇರಿ ಎಲ್ಲ ಕ್ಷೇತ್ರಗಳಲ್ಲೂ ದೇಶದಲ್ಲೇ ಹೆಸರುವಾಸಿಯಾಗಿರುವ ಶಿವಮೊಗ್ಗ ಜಿಲ್ಲೆ ರಾಜ್ಯದ ಕ್ರಾಂತಿಗಳ ಹುಟ್ಟೂರು ಕೂಡ ಆಗಿದೆ. ಸಮಾಜವಾದಿ, ಕಾಗೋಡು, ಭೂ ಸುಧಾರಣೆ, ರೈತ, ದಲಿತ ಚಳವಳಿಗಳು ಇಲ್ಲಿಂದಲೇ ಆರಂಭವಾಗಿ ರಾಜ್ಯವ್ಯಾಪಿ ವ್ಯಾಪಿಸಿ ಸರ್ಕಾರಗಳ ಬದಲಾವಣೆಗೂ ಕಾರಣವಾಗಿದ್ದವು. ಇಂತಹ ಕ್ರಾಂತಿಯ ನೆಲದಲ್ಲಿ ಮತ್ತೂಂದು ಹೋರಾಟಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ.

ಟಾಪ್ ನ್ಯೂಸ್

dthrtre

ಕೋವಿಡ್ ಪ್ರಕರಣಗಳ ಉಲ್ಬಣ : ತಮಿಳುನಾಡು-ಬಿಹಾರಿನಲ್ಲಿ ರಾತ್ರಿ ಕರ್ಫ್ಯೂ ಜಾರಿ

ಮಂಡ್ಯ : ಒಂದೇ ದಿನ ಮುನ್ನೂರರ ಗಡಿ ದಾಟಿದ ಕೋವಿಡ್ ಪಾಸಿಟಿವ್ ಪ್ರಕರಣ, ಓರ್ವ ಸಾವು

ಮಂಡ್ಯ : ಒಂದೇ ದಿನ 300ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢ, ಓರ್ವ ಸಾವು

ಐಸಿಯು ಬೆಡ್ ಗಾಗಿ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಆಟೋದಲ್ಲಿ ಅಲೆದಾಡಿದ ಮಹಿಳೆ

ಐಸಿಯು ಬೆಡ್ ಗಾಗಿ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಆಟೋದಲ್ಲಿ ಆಸ್ಪತ್ರೆಗೆ ಅಲೆದಾಡಿದ ಮಹಿಳೆ

ಹವಾಮಾನ ವೈಪರೀತ್ಯ ಕಡಿವಾಣಕ್ಕೆ ಅಮೆರಿಕ- ಚೀನಾ ಜಂಟಿ ಹೆಜ್ಜೆ

ಹವಾಮಾನ ವೈಪರೀತ್ಯ ಕಡಿವಾಣಕ್ಕೆ ಅಮೆರಿಕ- ಚೀನಾ ಜಂಟಿ ಹೆಜ್ಜೆ

hghfdsa

ಕೋವಿಡ್ ರಣಕೇಕೆ : ರಾಜ್ಯದಲ್ಲಿಂದು 19067 ಮಂದಿಗೆ ಸೋಂಕು, 81 ಸಾವು!

ನಗಬವಬಬ

45 ವರ್ಷ ಮೇಲ್ಪಟ್ಟ ಪೊಲೀಸರಿಗೆ ಕೋವಿಡ್ ಲಸಿಕೆ ಕಡ್ಡಾಯ : ಪ್ರವೀಣ್ ಸೂದ್

PM Modi should resign owning responsibility for COVID-19 surge: Mamata

ಕೋವಿಡ್ ಸೋಂಕು ನಿಯಂತ್ರಣದಲ್ಲಿ ಕೇಂದ್ರ ವಿಫಲ : ಮೋದಿ ರಾಜಿನಾಮೆಗೆ ದೀದಿ ಒತ್ತಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-26

ಕೋವಿಡ್‌ ತಡೆಗೆ ಮುನ್ನೆಚ್ಚರಿಕೆ ಅಗತ್ಯ

18-25

ಕೊರೊನಾ ತಡೆಗೆ ಸಕಲ ಪ್ರಯತ್ನ: ಈಶ್ವರಪ್ಪ

18-24

ದೇವರ ದಾಸಿಮಯ್ಯ ಮಹಾನ್‌ ಸಾಧು

ಗ್‍‍ದಸ

ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲು ಆಗ್ರಹ

ಗಹಬ್ಗ್ತರಗ್ದ

ಕೋವಿಡ್‌ ಲಸಿಕೆ ಕೊರತೆ ಇಲ್ಲ-ಆತಂಕ ಪಡಬೇಕಿಲ್ಲ

MUST WATCH

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

ಹೊಸ ಸೇರ್ಪಡೆ

ಜಹಹಹಗ

ಕರ್ತವ್ಯದಲ್ಲಿದ್ದ ಅಂಗರಕ್ಷಕ -ಚಾಲಕರಿಂದ ಮತದಾನ

ಮನಬವ್‍‍ರ

ಇನ್ನೇನಿದ್ದರೂ ಫಲಿತಾಂಶದತ್ತ ಎಲ್ಲರ ಚಿತ್ತ

ಹ್ಜಜ

ಜನಾಕರ್ಷಿಸಿದ “ಸಖೀ’ ಮತಗಟ್ಟೆ ಕೇಂದ್ರ

Give Kannada Node Service a chance

ಕನ್ನಡ ನುಡಿ ಸೇವೆಗೆ ಅವಕಾಶ ನೀಡಿ: ನಿರಗುಡಿ

dthrtre

ಕೋವಿಡ್ ಪ್ರಕರಣಗಳ ಉಲ್ಬಣ : ತಮಿಳುನಾಡು-ಬಿಹಾರಿನಲ್ಲಿ ರಾತ್ರಿ ಕರ್ಫ್ಯೂ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.