ತುಂಗಾ ಏತ ನೀರಾವರಿ ಯೋಜನೆಗೆ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ


Team Udayavani, Sep 1, 2017, 2:28 PM IST

01-DVVV-4.jpg

ಶಿವಮೊಗ್ಗ: ತುಂಗಾ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿ ಗ್ರಾಮಾಂತರ ಕ್ಷೇತ್ರ ಶಾಸಕಿ ಶಾರದಾ ಪೂರ್ಯನಾಯ್ಕ ನೇತೃತ್ವದಲ್ಲಿ ತುಂಗಾ ಮೇಲ್ದಂಡೆ ಯೋಜನೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಕಾಮಗಾರಿ ಕುಂಟುತ್ತಾ ಸಾಗಿದೆ. ರೈತರಿಗೆ ನೀರು ಸಿಗದಂತಾಗಿದೆ. ಯೋಜನೆ ಪೂರ್ಣಗೊಂಡಿದ್ದರೆ ಈ ವೇಳೆಗೆ ಕಾಲುವೆಯಲ್ಲಿ ನೀರು ಹರಿಯಬೇಕಿತ್ತು ಎಂದು ತಿಳಿಸಿದರು.

ಗುತ್ತಿಗೆ ಒಪ್ಪಂದದ ಪ್ರಕಾರ 2015ರ ಆಗಸ್ಟ್‌ನಲ್ಲಿ ಯೋಜನೆ ಪೂರ್ಣಗೊಳಿಸಿ ನೀರು ಹಾಯಿಸಬೇಕಿತ್ತು. 7310 ಎಕರೆ ಪ್ರದೇಶಕ್ಕೆ ನೀರಾವರಿ ಅನುಕೂಲ ಪಡೆಯುವ ಈ ಭಾಗದ ಗೌಡನಕೆರೆ, ಹಾರನಹಳ್ಳಿ ಮತ್ತು ಆಯನೂರು ಹೋಬಳಿಯ ಹಾಯ್‌ಹೊಳೆ, ಬಾರೆಹಳ್ಳ ಕೆರೆಗಳ ಸುತ್ತಲಿನ ಗ್ರಾಮಗಳು ಶಾಶ್ವತ ಬರಪೀಡಿತ ವಾಗಿದ್ದು, ನೀರು ಕೊಟ್ಟರೆ ಜನ, ಜಾನುವಾರುಗಳಿಗೆ ಅನುಕೂಲವಾಗುತ್ತಿತ್ತು ಎಂದರು.

ಅಧಿಕಾರಿಗಳ ನಿರ್ಲಕ್ಷದಿಂದಾಗಿಯೇ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ. ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಕೇವಲ ಭರವಸೆ ನೀಡುತ್ತಾರೆಯೇ ವಿನಃ ಕಾಮಗಾರಿ ಪೂರ್ಣಗೊಳಿಸುವಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಆ.31ರೊಳಗೆ ಕಾಮಗಾರಿ ಪೂರ್ಣಗೊಳಿಸಿ ಕಾಲುವೆಗಳಲ್ಲಿ ನೀರು ಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರಿಲ್ಲ. ಈ ಕುರಿತು ಪ್ರಶ್ನೆ ಮಾಡಿದರೆ ಸೆ.31ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಹಾರಿಕೆಯ ಉತ್ತರ ನೀಡತೊಡಗಿದ್ದಾರೆ. ಬೆಳೆ ಬೆಳೆದ ರೈತರು ಆತಂಕಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಇ.ಬಿ. ಜಗದೀಶ್‌, ನರಸಿಂಹಮೂರ್ತಿ ಮತ್ತಿತರರು ಇದ್ದರು. 

ಟಾಪ್ ನ್ಯೂಸ್

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

ಕೋವಿಡ್‌ ಲಸಿಕೆ ಪಡೆದ ತತ್‌ಕ್ಷಣ ಪ್ರಮಾಣಪತ್ರ: ಕೇಂದ್ರ ಸರಕಾರ

ಕೋವಿಡ್‌ ಲಸಿಕೆ ಪಡೆದ ತತ್‌ಕ್ಷಣ ಪ್ರಮಾಣಪತ್ರ: ಕೇಂದ್ರ ಸರಕಾರ

ನಾರಾವಿಯಲ್ಲಿ ಮುರಿದುಬಿತ್ತು ಅದ್ದೂರಿ ಮದುವೆ

ನಾರಾವಿಯಲ್ಲಿ ಮುರಿದುಬಿತ್ತು ಅದ್ದೂರಿ ಮದುವೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shivmogga

ಮಳೆಹಾನಿ ಮರುಕಳಿಸದಂತೆ ಮುನ್ನೆಚ್ಚರಿಕೆ ಕೈಗೊಳ್ಳಿ

outrage

ಪಪಂ ಸಿಬ್ಬಂದಿ ಕಾರ್ಯ ವೈಖರಿಗೆ ಆಕ್ರೋಶ

ಕೆ.ಎಸ್.ಈಶ್ವರಪ್ಪ

ಮುಸಲ್ಮಾನರ ಮನಸ್ಥಿತಿ ಬದಲಾಗಬೇಕು, ಇಲ್ಲವಾದರೆ ನಾವು ಒಪ್ಪಲ್ಲ: ಕೆ.ಎಸ್.ಈಶ್ವರಪ್ಪ

layout1

ಮಳೆ ಬಂದರೆ ಶಾಂತಮ್ಮ ಲೇಔಟ್‌ ಮಂದಿಗೆ ಭೀತಿಯೋ ಭೀತಿ!

kirloskar

ಕಿರ್ಲೋಸ್ಕರ್‌ ಕಂಪನಿ ಜತೆ ಕುವೆಂಪು ವಿವಿ ಒಪ್ಪಂದ

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.