ನಿವೃತ್ತಿ ದಿನ ಚಾಲಕನಿಗೆ ತಾವೆ ವಾಹನ ಚಲಾಯಿಸಿ ಮನೆಗೆ ಬಿಟ್ಟು ಬಂದ ಆರ್ ಟಿ ಓ
ಅಧಿಕಾರಿ ಕಾರ್ಯಕ್ಕೆ ಮೆಚ್ಚುಗೆ
Team Udayavani, Jul 1, 2022, 8:21 PM IST
ಶಿವಮೊಗ್ಗ: ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಸ್ವಾಮಿಗೌಡರು ನಿವೃತ್ತರಾಗಿದ್ದು, ಅವರನ್ನು ಸಾರಿಗೆ ಅಧಿಕಾರಿ ದೀಪಕ್ ಎಲ್. ಅವರು ಮನೆಗೆ ತಮ್ಮ ವಾಹನದಲ್ಲಿಯೇ ತಾವೇ ಚಾಲನೆ ಮಾಡಿಕೊಂಡು ಹೋಗಿಬಿಟ್ಟು ಬಂದ ಹೃದಯಸ್ಪರ್ಶಿ ಘಟನೆ ನಡೆದಿದೆ.
ಸಾರಿಗೆ ಕಚೇರಿಯಲ್ಲಿ ಸ್ವಾಮಿಗೌಡರು ಹಲವು ವರ್ಷಗಳಿಂದ ವಾಹನ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ನಿನ್ನೆ ಅವರು ನಿವೃತ್ತರಾಗಿದ್ದು, ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಅವರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ, ಆರೋಗ್ಯವಾಗಿರಲಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾರೈಸಿದರು.
ನಂತರ ಸ್ವಾಮಿ ಗೌಡ ಅವರನ್ನು ಆರ್ ಟಿ ಓ ದೀಪಕ್ ಅವರೇ ವಾಹನ ಚಾಲನೆ ಮಾಡಿಕೊಂಡು ಹೋಗಿ ಮನೆಗೆ ಬಿಟ್ಟು ಬಂದಿದ್ದಾರೆ. ಈ ಸಂದರ್ಭದಲ್ಲಿ ಮೋಟಾರು ವಾಹನ ನಿರೀಕ್ಷಕ ಮಲ್ಲೇಶಪ್ಪ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ: ವಿಡಿಯೋ ವೈರಲ್
ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಪ್ರಕ್ಷುಬ್ಧಗೊಂಡಿದ್ದ ಶಿವಮೊಗ್ಗ ಸಹಜ ಸ್ಥಿತಿಗೆ
ಧರ್ಮ ಸಂಘರ್ಷ ಶೀಘ್ರ ಇನ್ನಷ್ಟು ಉಲ್ಬಣ, ರಾಜಕೀಯ ಪಕ್ಷಗಳು ಇಬ್ಭಾಗ: ಕೋಡಿಮಠ ಶ್ರೀ
ಗರಿಕೆ ಹುಲ್ಲಿನ ಗಂಡಾಂತರ: ಸಾವಿನ ದವಡೆಯಿಂದ ಪಾರಾದ ಮಗು!
ಚಾಕು ಇರಿತ ಪ್ರಕರಣ: ಸಿದ್ದರಾಮಯ್ಯ ಹೇಳಿಕೆ ಇಂತಹ ಗಲಭೆಗಳಿಗೆ ಕುಮ್ಮಕ್ಕು- ಬಿ.ವೈ.ರಾಘವೇಂದ್ರ
MUST WATCH
ಹೊಸ ಸೇರ್ಪಡೆ
ಪಶ್ಚಿಮ ಬಂಗಾಳದಲ್ಲಿ ಅಲ್ ಖೈದಾ ಶಂಕಿತ ಸದಸ್ಯರಿಬ್ಬರ ಬಂಧನ
ಪೆನ್ಚಾಕುವಿನಿಂದ ಇರಿದು ವಿದ್ಯಾರ್ಥಿ ಕೊಲೆ: ಆರೋಪಿಗಳ ಬಂಧನ
Boycott ಎಫೆಕ್ಟ್: 7 ದಿನದಲ್ಲಿ 50 ಕೋಟಿ ರೂ. ಗಳಿಸಲು ವಿಫಲವಾದ “ಲಾಲ್ ಸಿಂಗ್ ಚಡ್ಡಾ”
ಆಲಮಟ್ಟಿ ಶಾಸ್ತ್ರೀ ಜಲಾಶಯದ ಪ್ರವಾಹ ನಿರ್ವಹಣೆಗೆ ಮಹಾ ಸಿ.ಎಂ. ಶ್ಲಾಘನೆ : ಕೋಳಕೂರ
ನಕಲಿ ಸುದ್ದಿ ಹರಡುತ್ತಿದ್ದ ಭಾರತದ 7 ಮತ್ತು ಪಾಕ್ ನ 1 ಯೂಟ್ಯೂಬ್ ಚಾನೆಲ್ ನಿಷೇಧಿಸಿದ ಕೇಂದ್ರ