ಅಂಗಾಂಶ ಕೃಷಿ ಪ್ರಯೋಗಾಲಯದಲ್ಲಿಬಾಳೆ ಸಸಿ, ಅಣಬೆ ಉತ್ಪಾದನೆ
Team Udayavani, Jul 9, 2018, 5:34 PM IST
ಶಿವಮೊಗ್ಗ: ಸಮೀಪದ ವಿದ್ಯಾನಗರದಲ್ಲಿ ನಿರ್ಮಿಸಲಾಗಿರುವ ತೋಟಗಾರಿಕಾ ಇಲಾಖೆಯ ಜೈವಿಕ ಕೇಂದ್ರದ ಅಂಗಾಂಶ ಕೃಷಿ ಪ್ರಯೋಗಾಲಯದಲ್ಲಿ ಉತ್ಕೃಷ್ಟ ಗುಣಮಟ್ಟದ (ಪಚ್ಚೆಬಾಳೆ) ಬಾಳೆಸಸಿಗಳನ್ನು ಉತ್ಪಾದಿಸಲಾಗುತ್ತಿದೆ. ಇದುವರೆಗೆ ಲಕ್ಷಕ್ಕೂ ಅಧಿಕ ಅಂಗಾಂಶ ಬಾಳೆ ಸಸಿಗಳು, 3250 ಕೆಜಿ ಅಣಬೆ ಬೀಜ, 15 ಸಾವಿರ ಸಿದ್ಧ ಹಣ್ಣಿನ ಚೀಲಗಳನ್ನು ಹಾಗೂ 100 ಕೆಜಿ ಅಣಬೆ ಮಾರಾಟ ಮಾಡಲಾಗಿದೆ ಎಂದು ಜೈವಿಕ ಕೇಂದ್ರದ ಸಹಾಯಕ ತೋಟಗಾರಿಕೆ ನಿರ್ದೇಶಕಿ ಪ್ರತಿಭಾ ವೈ.ಬಿ. ತಿಳಿಸಿದ್ದಾರೆ.
ಅಂಗಾಂಶ ಕೃಷಿ ಪ್ರಯೋಗಾಲಯದಲ್ಲಿ ಬಾಳೆಸಸಿಗಳನ್ನು ಗಿಡ ಒಂದಕ್ಕೆ 11 ರೂ.ನಂತೆ ಮಾರಾಟ ಮಾಡಲಾಗುತ್ತದೆ. ಒಂದೇ ಗುಣಮಟ್ಟದ, ಏಕಕಾಲದಲ್ಲಿ ಫಸಲು ಬರುವಂತಹ ಸಸಿಗಳು ಇದಾಗಿದ್ದು ರೈತರು ಖಚಿತ ವರಮಾನವನ್ನು ಇದರಿಂದ ನಿರೀಕ್ಷಿಸಬಹುದಾಗಿದೆ. ಅಣಬೆ ಪ್ರಯೋಗಾಲಯದಲ್ಲಿ ಉತ್ತಮ ಗುಣಮಟ್ಟದ ವಿವಿಧ ತಳಿಗಳ ಅಣಬೆ ಬೀಜಗಳನ್ನು ಉತ್ಪಾದಿಸಿ ಬೆಳೆಗಾರರಿಗೆ ವಿತರಿಸಲಾಗುತ್ತಿದೆ. ಪ್ರತಿ ಕೆಜಿ ಅಣಬೆ ಬೀಜವನ್ನು 60 ರೂ.ನಂತೆ ಹಾಗೂ ಸಿದ್ಧ ಹಣ್ಣಿನ ಚೀಲಗಳನ್ನು ಪ್ರತಿ ಬ್ಯಾಗ್‌ಗೆ 20 ರೂ.ನಂತೆ ಮಾರಾಟ ಮಾಡಲಾಗುತ್ತಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿಗೆ ಅಗತ್ಯವಾದ ಜೈವಿಕ ತಂತ್ರಜ್ಞಾನಗಳನ್ನು ರೈತರಿಗೆ, ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಂಶೋಧನಾ ಸಂಸ್ಥೆಗಳಿಗೆ ಒಂದೇ ಸೂರಿನಡಿ ಒದಗಿಸುವ ಕಾರ್ಯವನ್ನು ಜೈವಿಕ ಕೇಂದ್ರದಲ್ಲಿ ಮಾಡಲಾಗುತ್ತಿದೆ. ಜಿಲ್ಲೆಯ ಮಾತ್ರವಲ್ಲದೆ ದಕ್ಷಿಣ ಕನ್ನಡ, ಉಡುಪಿ ಹಾಗೂ ದಾವಣಗೆರೆ ಜಿಲ್ಲೆಯ 309 ಅಧಿಕಾರಿಗಳಿಗೆ ಅಣಬೆ ಬೆಳೆ ಕುರಿತು ತರಬೇತಿ ನೀಡಲಾಗಿದೆ ಎಂದು ಜೈವಿಕ ಕೇಂದ್ರದ ತೋಟಗಾರಿಕಾ ನಿರ್ದೇಶಕ ಎಚ್.ಎಸ್. ರಾಮಕೃಷ್ಣ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ: 08182-240004, 240422ನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!
ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ
ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ
ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ
ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ
ಹೊಸ ಸೇರ್ಪಡೆ
ಪ್ರತಿಯೊಂದು ಸಮುದಾಯವನ್ನು ಸಂಘಟನೆ ತಲುಪಬೇಕು: ಶಾಸಕ ಸಿದ್ದು ಸವದಿ
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವು ನಿಖರವಾಗಿ ಎಲ್ಲಿ ಕಂಡುಬಂದಿದೆ ?: ವಿವರ ಕೇಳಿದ ಸುಪ್ರೀಂ
ದೇವದುರ್ಗ ತಾಲೂಕಲ್ಲಿ 193 ಶಿಥಿಲಗೊಂಡ ಕಟ್ಟಡ: ಮಕ್ಕಳಿಗೆ ಬಯಲಲ್ಲೇ ಪಾಠ
ಮುಂಬೈ-ಪುಣೆ ಎಕ್ಸ್ಪ್ರೆಸ್ವೇ: ಬಸ್ಗೆ ಕಾರು ಢಿಕ್ಕಿ; ಎನ್ಸಿಪಿ ಶಾಸಕ ಸಂಗ್ರಾಮ್ ಪಾರು
ಜ್ವರ ಇದ್ದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ