ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ


Team Udayavani, Sep 8, 2021, 6:32 PM IST

ಚಿಕ್ಕಮಗಳೂರು : ವಿಘ್ನವಿನಾಶಕ ಮನೆ- ಮನೆಯಲ್ಲಿ ಪ್ರತಿಷ್ಠಾಪನೆಗೊಳ್ಳಲು ಕೆಲವೇ ದಿನಗಳು ಬಾಕಿ ಇದ್ದು ಜಿಲ್ಲಾದ್ಯಂತ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ. ಗಣೇಶ ಮೂರ್ತಿಗಳಿಗೆ ಅಂತಿಮ ಟಚ್‌ ನೀಡುವ ಕಾರ್ಯವೂ ಕಲಾವಿದರಿಂದ ನಡೆಯುತ್ತಿದೆ.

ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುತ್ತದೋ ಇಲ್ಲವೋ ಎಂಬ ಭಯ ಎಲ್ಲರನ್ನೂ ಕಾಡುತ್ತಿತ್ತು. ಹಬ್ಬ ಸಮೀಪಿಸುತ್ತಿದ್ದಂತೆ ಸರ್ಕಾರ ನಿರ್ಬಂಧಗಳನ್ನು ವಿಧಿಸಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿರುವುದರಿಂದ ಈ ವರ್ಷ ಗಣಪತಿ ಮೂರ್ತಿಗೆ ಬೇಡಿಕೆ ಕುಸಿಯಲು ಕಾರಣವಾಗಿದೆ.

ಸರ್ಕಾರ ನಿರ್ಬಂಧಗಳನ್ನು ವಿಧಿಸಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದ ಬಳಿಕ ಬೇಡಿಕೆ ಬರುತ್ತಿದ್ದು ಗಣೇಶ ಮೂರ್ತಿಗಳನ್ನು ಬೇಡಿಕೆ ತಕ್ಕಷ್ಟು ಸಿದ್ಧಪಡಿಸಿ ನೀಡಲು ಕಲಾವಿದರಿಗೆ ಸಾಧ್ಯವಾಗುತ್ತಿಲ್ಲ. ಹಂಸ, ಮಯೂರಿ, ಸುಬ್ರಹ್ಮಣ್ಯ, ಅಂಬಾರಿ, ಬಾಲಗಣಪತಿ, ವಿಷ್ಣು, ದರ್ಬಾರ್‌ ಗಣಪತಿಗಳು ಸೇರಿದಂತೆ ವಿವಿಧ ಆಯಾಮಗಳಲ್ಲಿ ತಯಾರಾಗಿರುವ ಗಣೇಶ ಮೂರ್ತಿಗಳಿಗೆ ಅಂತಿಮ ಟಚ್‌ ನೀಡಲಾಗುತ್ತಿದೆ.

ಇದನ್ನೂ ಓದಿ : ಮೃತ ವ್ಯಕ್ತಿಯೇ ಎದ್ದು ಬಂದು ಆಸ್ತಿ ಮಾರಿದ :ಇಲ್ಲೊಂದು ವಿಚಿತ್ರ ಪ್ರಕರಣ

ಕೆಲವೇ ದಿನಗಳಲ್ಲಿ ಮನೆ- ಮನೆಗಳಲ್ಲಿ, ಬಡಾವಣೆ- ಬಡಾವಣೆಗಳಲ್ಲಿ ಪ್ರತಿಷ್ಠಾಪನೆಗೊಳ್ಳಲಿವೆ. ನಗರದ ಬೋಳ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಪೆಂಡಾಲ್‌ ನಲ್ಲಿ ಪ್ರತಿಷ್ಠಾಪನೆಗೆ 4 ಅಡಿಗಳ ಗಣೇಶ ಮೂರ್ತಿ ಸಿದ್ಧಗೊಂಡಿದೆ. ಇನ್ನೂ 1 ಅಡಿಯಿಂದ ಹಿಡಿದು 4 ಅಡಿಯವರೆಗಿನ ವಿವಿಧ ಗಣೇಶ ಮೂರ್ತಿಗಳನ್ನು ತಯಾರು ಮಾಡಲಾಗಿದೆ. 100 ರೂ. ನಿಂದ 15 ಸಾವಿರ ರೂ. ವರೆಗಿನ ಗಣೇಶ ಮೂರ್ತಿಗಳು ಸಿದ್ಧಗೊಂಡಿವೆ. ಹಿರಿಯ ಕಲಾವಿದ ಏಕಾಂತ ರಾಮು ಮತ್ತು ಅವರ ಪುತ್ರ ಚೇತನ್‌ ಕುಮಾರ್‌ ಕೈಯಲ್ಲಿ ನಾಣ್ಯದ ಗಣಪತಿ ರೂಪುಗೊಂಡಿದೆ. 60ನೇ ದಶಕ ಹಾಗೂ ಈಗಿನ 5 ರೂ. 10 ರೂ. ನಾಣ್ಯಗಳನ್ನು ಒಳಗೊಂಡ 2 ಕೆ. ಜಿ. ನಾಣ್ಯಗಳನ್ನು ಬಳಸಿಕೊಂಡು ಸುಂದರ ಗಣೇಶ ಮೂರ್ತಿಯನ್ನು ರೆಡಿ ಮಾಡಲಾಗಿದೆ. ಹಾಗೆಯೇ ಇಲ್ಲಿ ತಯಾರಾದ ಗಣೇಶ ಮೂರ್ತಿಗಳು ಮಂಗಳೂರಿನಲ್ಲಿ ಪ್ರತಿಷ್ಠಾಪನೆಗೆ ಈಗಾಗಲೇ ಕಳಿಸಿ ಕೊಡಲಾಗಿದೆ. ಕಲಾವಿದ ಚೇತನ್‌ ಕುಮಾರ್‌ ಮಾತನಾಡಿ, ಚಿಕ್ಕಮಗಳೂರು ನಗರದ ಸುತ್ತಮುತ್ತ ಹಳ್ಳು ವಳ್ಳಿ, ನಲ್ಲೂರು, ಕೋಟೆ, ಉದ್ದೇಬೋರನಹಳ್ಳಿ, ಹೊಸ ಕೋಟೆ ಭಾಗಗಳಿಗೆ ಗಣೇಶ ಮೂರ್ತಿ ಕಳಿಸಿಕೊಡಲಾಗುತ್ತಿದೆ ಎಂದರು.

100 ರೂ.ನಿಂದ 15ಸಾವಿರ ರೂ. ಬೆಲೆಯ ಗಣೇಶಮೂರ್ತಿಗಳನ್ನು ತಯಾರು ಮಾಡಲಾಗಿದೆ. ಕುಂಬಾರ ಬೀದಿಯಲ್ಲಿ 13 ಕುಟುಂಬಗಳು ಗಣಪತಿ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದು, ಏಕಾಂತ ರಾಮು, ಚೇತನ, ದಿನೇಶ್‌, ಸಣ್ಣಪ್ಪ, ರಾಜಣ್ಣ, ಪರ ಮೇಶ್ವರಪ್ಪ, ಸಿದ್ದೇಶ್‌, ಬಿ. ಎಸ್‌. ರೇಣುಕಾ, ಸಾಗರ್‌, ರಾಕೇಶ್‌, ದೇವರಾಜ್‌, ಸುಪ್ರಿತ್‌ ಅವರ ಕರದಲ್ಲಿ ಪರಿಸರ ಸ್ನೇಹಿ ಗಣಪತಿಗಳು ಸುಂದರವಾಗಿ ಮೂಡಿಬಂದಿವೆ ಎಂದರು.

ಸರ್ಕಾರ ಕೊನೆ ಘಳಿಗೆಯಲ್ಲಿ ಅನುಮತಿ ನೀಡಿದ್ದು ಈ ಬಾರೀ ಬೇಡಿಕೆ ಕುಸಿಯಲು ಕಾರಣವಾಗಿದೆ. ಕಳೆದ ವರ್ಷ 80-85 ಗಣಪತಿ ಮೂರ್ತಿಗಳನ್ನು ನಿರ್ಮಿಸಿದ್ದು ಈ ವರ್ಷ 100 ಗಣಪತಿ ಮೂರ್ತಿಗಳನ್ನು ಆರ್ಡರ್‌ ಪಡೆದುಕೊಳ್ಳಲಾಗಿದೆ. ಪ್ರತೀವರ್ಷ 100 ಗಣಪತಿ ತಯಾರಿಸಲಾಗುತ್ತಿತ್ತು. ಆದರೆ, ಕೋವಿಡ್‌ ನಿಂದ ಕಳೆದ ವರ್ಷ 40 ಗಣಪತಿ ಹಾಗೂ ಈ ವರ್ಷ 50 ಗಣಪತಿ ತಯಾರಿಸಲಾಗಿದೆ. ಸರ್ಕಾರ ಪರವಾನಗಿ ನೀಡೋದು ತಡಮಾಡಿದ್ದರಿಂದ ಆರ್ಡರ್‌ ಕೊಟ್ಟು ಗಣಪತಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಕುಂಬಾರ ಬೀದಿಯಲ್ಲಿ ಪ್ರತೀವರ್ಷ 2 ಸಾವಿರ ಗಣಪತಿ ಮೂರ್ತಿಗಳನ್ನು ತಯಾರು ಮಾಡಲಾಗುತ್ತಿತ್ತು ಆದರೆ, ಕೋವಿಡ್‌ ನಿಂದ ಕಳೆದ ವರ್ಷಗಳಿಂದ ಗಣೇಶ ಮೂರ್ತಿಗಳಿಗೆ ಬೇಡಿಕೆ ಕುಸಿದಿದೆ. ನಗರದ ಸುತ್ತಮುತ್ತಲ ಗ್ರಾಮೀಣಗಳಿಗೆ ಗಣಪತಿ ರೆಡಿ ಮಾಡಲಾಗಿದೆ. ಕೊನೇ ಘಳಿಗೆಯಲ್ಲಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಬರುತ್ತಿದೆ. ಈಗ ಮೂರ್ತಿ ತಯಾರಿಸಲು ಸಾಧ್ಯವಿಲ್ಲ ಎಂದು ಕಲಾವಿದ ದಿನೇಶ್‌ ಬೇಸರ ವ್ಯಕ್ತಪಡಿಸಿದರು.

ಕೋವಿಡ್‌ ಸೋಂಕಿನ ಹಿನ್ನಲೆಯಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಗಣಪತಿ ವಿಸರ್ಜನೆಗೆ ಅವಕಾಶ ಇಲ್ಲದಿರುವುದರಿಂದ ವಿಘ್ನೇಶ್ವರನಿಗೆ ಬೇಡಿಕೆ ಕುಸಿಯಲು ಪ್ರಮುಖ ಕಾರಣವಾಗಿದೆ. ಆದರೂ ಕಲಾವಿದರ ಕೈಯಲ್ಲಿ ಬಣ್ಣ- ಬಣ್ಣದ ವಿವಿಧ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೆ ರೆಡಿಯಾಗಿವೆ.

ಇದನ್ನೂ ಓದಿ : ಲಿಂಗಾಯತ ಮೀಸಲಾತಿ ಸಿಗದಿದ್ದರೆ ಮತ್ತೆ ಸತ್ಯಾಗ್ರಹ : ಬಸವ ಜಯಮೃತ್ಯುಂಜಯ ಸ್ವಾಮೀಜಿ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.