Udayavni Special

ಸಾರ್ವಜನಿಕರಿಗೆ ಲಸಿಕೆ ನೀಡಲು ಆಗ್ರಹ


Team Udayavani, Jun 5, 2021, 3:08 PM IST

ಸಾರ್ವಜನಿಕರಿಗೆ ಲಸಿಕೆ ನೀಡಲು ಆಗ್ರಹ

ಸೊರಬ: ಕೋವಿಡ್ ನಿಯಂತ್ರಣಕ್ಕೆ ನೀಡುತ್ತಿರುವ ಲಸಿಕೆ ಸಾರ್ವತ್ರಿಕವಾಗಿ ಎಲ್ಲರಿಗೂ ದೊರೆಯುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆನವಟ್ಟಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಸಿ. ಪಾಟೀಲ್‌ ಆಗ್ರಹಿಸಿದರು.

ಆನವಟ್ಟಿ ಗ್ರಾಮದ ನಾಡ ಕಚೇರಿ ಮುಂಭಾಗ ಆನವಟ್ಟಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಉಪತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಯುವಜನರಿಗೆ,

ಗ್ರಾಮೀಣ ಪ್ರದೇಶದ ಜನತೆಗೆ, ಬಡವರಿಗೆ ಕೋವಿಡ್ ಲಸಿಕೆ ದೊರೆಯುತ್ತಿಲ್ಲ. ಬಿಜೆಪಿ ಸರ್ಕಾರ ಕೇವಲ ಉಳ್ಳವರಿಗೆ ಮಾತ್ರ ಲಸಿಕೆ ಪೂರೈಸುವ ನೀತಿಯನ್ನು ಅನುಸರಿಸುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ದರದಲ್ಲಿ ಲಸಿಕೆ ನೀಡಲಾಗುತ್ತಿದೆ. ಜನವಿರೋಧಿ  ಲಸಿಕೆನೀತಿ ಹೊಂದಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಯೊಬ್ಬ ನಾಗರಿಕರು ಜಾಗೃತರಾಗಬೇಕು ಎಂದರು.

ದೇಶದಲ್ಲಿ ಕೋವಿಡ್ ಎರಡನೇ ಅಲೆಯೂ ಹೆಚ್ಚಿನ ಸಂಕಷ್ಟವನ್ನು ಉಂಟು ಮಾಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಲಸಿಕೆ ನೀತಿಯೇ ಕಾರಣವಾಗಿದೆ. ಸಕಾಲದಲ್ಲಿ ಲಸಿಕೆ ಉತ್ಪಾದನೆಗೆ ಅನುದಾನ ಮತ್ತು ಉತ್ತೇಜನ ನೀಡದೆ ವಿಫಲವಾಗಿರುವುದರಿಂದ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದು, ಇದರ ಜವಾಬ್ದಾರಿಯನ್ನು ಯಾರು ಹೊರುತ್ತಾರೆ ಎಂದು ಪ್ರಶ್ನಿಸಿದ ಅವರು, ಸುಮಾರು 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ನಿತ್ಯ 1ಕೋಟಿ ಜನರಿಗೆ ಲಸಿಕೆ ನೀಡಬೇಕು. ಪ್ರಸ್ತುತ ಕೇವಲ ಸರಾಸರಿ 16 ಲಕ್ಷ ಜನರಿಗೆ ಲಸಿಕೆ ನೀಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದರು.

ಆನವಟ್ಟಿ ಭಾಗದಲ್ಲಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಕೋವಿಡ್ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ. ವೃತ್ತಿಯನ್ನೇ ಆಧರಿಸಿ ಬದುಕು ಕಟ್ಟಿಕೊಂಡಿದ್ದ ಮಡಿವಾಳ, ಸವಿತಾ ಹಾಗೂ ಹಡಪದ ಸೇರಿದಂತೆ ಇತರೆ ಸಮಾಜದವರನ್ನು ಗುರುತಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಜತೆಗೆ ದಿನಸಿ ವಸ್ತುಗಳ ಕಿಟ್‌ ನೀಡಲಾಗುತ್ತಿದೆ. ಇದರ ಜತೆಗೆ ಕೊರೊನಾ ಹರಡುವಿಕೆ ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಆಶಾ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಗೌರವಿಸುವ ಕೆಲಸವನ್ನು ಬ್ಲಾಕ್‌ ಕಾಂಗ್ರೆಸ್‌ ಮಾಡುತ್ತಿದೆ ಎಂದರು.

ಆನವಟ್ಟಿ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಹವಾಲ್ದಾರ್‌, ಬ್ಲಾಕ್‌ ಕಿಸಾನ್‌ ಘಟಕದ ಅಧ್ಯಕ್ಷ ರೇವಣಪ್ಪ ಟಿಜಿಕೊಪ್ಪ, ಅಲ್ಲಾಭಕ್ಷ, ಅಕ್ರಂಪಾಷಾ, ಶಿವಪ್ಪ ಮಲ್ಲಾಪುರ, ಮುಹಮ್ಮದ್‌ ಅನ್ಸರ್‌, ರವಿ ಮಡಿವಾಳರ, ರಘುವೀರ್‌ ಕುಮಾರ್‌, ಅಭಿಷೇಕ್‌ ಸೇರಿದಂತೆ ಇತರರಿದ್ದರು.

ಟಾಪ್ ನ್ಯೂಸ್

ನಾಯಕತ್ವ ಬದಲಾವಣೆ ಬೇಡ ಆದರೆ ಸಂಪುಟ ಪುನಾರಚನೆ ಮಾಡಿ: ಅರುಣ್ ಸಿಂಗ್ ಗೆ ಕೆಲ ಶಾಸಕರ ಬೇಡಿಕೆ

ನಾಯಕತ್ವ ಬದಲಾವಣೆ ಬೇಡ ಆದರೆ ಸಂಪುಟ ಪುನಾರಚನೆ ಮಾಡಿ: ಅರುಣ್ ಸಿಂಗ್ ಗೆ ಕೆಲ ಶಾಸಕರ ಬೇಡಿಕೆ

s r vishwanth

ಹೆಚ್ ವಿಶ್ವನಾಥ್ ಒಬ್ಬ‌ ಹುಚ್ಚ…  ಅವರ ಆರೋಗ್ಯ ತಪಾಸಣೆ ಮಾಡಿಸಬೇಕು: ಎಸ್ .ಆರ್. ವಿಶ್ವನಾಥ್

98

ಗರಿಗೆದರಿದ ಸಿನಿ ಚಟುವಟಿಕೆಗಳು: ಭರ್ಜರಿಯಾಗಿ ನಡೆಯಿತು ‘ಲಗಾಮು’ ಫೋಟೊ ಶೂಟ್

ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ

ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ

h vishwanath

ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಚಾರ ಹೆಚ್ಚಾಗಿದೆ. ಸಿಎಂ ಬದಲಾವಣೆ ಮಾಡಬೇಕು: ವಿಶ್ವನಾಥ್

ನಾಳೆಯಿಂದ ಹೊಸ ಯಡಿಯೂರಪ್ಪ ಬರುತ್ತಾರೆ: ಬಿಎಸ್‌ವೈ ಪರ ಸಾಹುಕಾರ್ ಬ್ಯಾಟಿಂಗ್

ನಾಳೆಯಿಂದ ಹೊಸ ಯಡಿಯೂರಪ್ಪ ಬರುತ್ತಾರೆ: ಬಿಎಸ್‌ವೈ ಪರ ಸಾಹುಕಾರ್ ಬ್ಯಾಟಿಂಗ್

ಕೋವಿಡ್ ಎರಡನೇ ಅಲೆಯಿಂದ 2 ಲಕ್ಷ ಕೋಟಿ ಆರ್ಥಿಕ ನಷ್ಟ ಸಾಧ್ಯತೆ: ಆರ್ ಬಿಐ ವರದಿ

ಕೋವಿಡ್ ಎರಡನೇ ಅಲೆಯಿಂದ 2 ಲಕ್ಷ ಕೋಟಿ ಆರ್ಥಿಕ ನಷ್ಟ ಸಾಧ್ಯತೆ: ಆರ್ ಬಿಐ ವರದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋರ್ ವೆಲ್ ರಿಪೇರಿ ಮಾಡಲು ಹೋದ ಇಬ್ಬರು ವಿದ್ಯುತ್ ಆಘಾತದಿಂದ ಸಾವು

ಬೋರ್ ವೆಲ್ ರಿಪೇರಿ ಮಾಡಲು ಹೋದ ಇಬ್ಬರು ವಿದ್ಯುತ್ ಆಘಾತದಿಂದ ಸಾವು

16-22

ಹುಲಿಕಲ್‌ ಘಾಟ್‌ ರಸ್ತೆ ಮಾರ್ಗಕ್ಕೆ ಚಾಲನೆ

Shivamogga

ಮಲೆನಾಡಲ್ಲೂ ವಿಜಯ ಸಂಚಾರ…

15-21

ಗುತ್ತಿಗೆದಾರರ ವಿರುದ್ಧ ಕ್ರಮ : ಹಾಲಪ್ಪ

15-20

ಪರಿಹಾರ ಮಧ್ಯವರ್ತಿಗಳ ಪಾಲಾಗದಂತೆ ಕ್ರಮ ಕೈಗೊಳ್ಳಿ

MUST WATCH

udayavani youtube

ಕೃಷ್ಣ ನದಿ ಪಾತ್ರದಲ್ಲಿ ಹಸುವನ್ನು ಬಲಿ ಪಡೆದ ಮೊಸಳೆ ಅ ಅ

udayavani youtube

2 ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ, : ಕಟೀಲ್

udayavani youtube

ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ : ನಟಿ ರಾಗಿಣಿ

udayavani youtube

ಬೋರ್ ವೆಲ್ ಪಂಪ್ ಹೊಡೆದು ದಾಹ ನೀಗಿಸಿಕೊಂಡ ಮರಿ ಆನೆ

udayavani youtube

ಹೈನುಗಾರಿಕೆಯಲ್ಲಿ ಖುಷಿ ಕಂಡ ರಾಜಕಾರಣಿ

ಹೊಸ ಸೇರ್ಪಡೆ

ನಾಯಕತ್ವ ಬದಲಾವಣೆ ಬೇಡ ಆದರೆ ಸಂಪುಟ ಪುನಾರಚನೆ ಮಾಡಿ: ಅರುಣ್ ಸಿಂಗ್ ಗೆ ಕೆಲ ಶಾಸಕರ ಬೇಡಿಕೆ

ನಾಯಕತ್ವ ಬದಲಾವಣೆ ಬೇಡ ಆದರೆ ಸಂಪುಟ ಪುನಾರಚನೆ ಮಾಡಿ: ಅರುಣ್ ಸಿಂಗ್ ಗೆ ಕೆಲ ಶಾಸಕರ ಬೇಡಿಕೆ

s r vishwanth

ಹೆಚ್ ವಿಶ್ವನಾಥ್ ಒಬ್ಬ‌ ಹುಚ್ಚ…  ಅವರ ಆರೋಗ್ಯ ತಪಾಸಣೆ ಮಾಡಿಸಬೇಕು: ಎಸ್ .ಆರ್. ವಿಶ್ವನಾಥ್

98

ಗರಿಗೆದರಿದ ಸಿನಿ ಚಟುವಟಿಕೆಗಳು: ಭರ್ಜರಿಯಾಗಿ ನಡೆಯಿತು ‘ಲಗಾಮು’ ಫೋಟೊ ಶೂಟ್

anivasi kannadiga

“ಮೀನುಗಾರರ ಸಮಸ್ಯೆಗಳಿಗೆ ತತ್‌ಕ್ಷಣ ಕ್ರಮ”

Anjata – Ellora Open

ಅಂಜತಾ -ಎಲ್ಲೋರಾ ಓಪನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.