Udayavni Special

ಲಿಂಗೈಕ್ಯ ರೇವಣಸಿದ್ಧ ಸ್ವಾಮೀಜಿ ಭಕ್ತರ ಕಾಮಧೇನು


Team Udayavani, Mar 27, 2021, 8:29 PM IST

ಜುಕಗಹಜಹ

ಶಿಕಾರಿಪುರ: ನಾಡಿನ ವಿವಿಧ ಭಾಗಗಳಿಂದ ನೊಂದು-ಬೆಂದು ಬಂದಂತಹ ಅನೇಕ ಭಕ್ತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸಿ ಸರ್ವತೋಮುಖ ಅಭಿವೃದ್ಧಿಗೆ ಆಶೀರ್ವದಿಸಿದ ಮಹಾಪುರುಷರು ಲಿಂಗೈಕ್ಯ ಶ್ರೀ ರೇವಣಸಿದ್ಧ ಮಹಾಸ್ವಾಮಿಗಳು ಎಂದು ತಿಪ್ಪಾಯಿಕೊಪ್ಪ ಶ್ರೀ ಮ.ನಿ.ಪ್ರ. ವಿರೂಪಾಕ್ಷ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ತಾಲೂಕಿನ ಕಾಳೇನಹಳ್ಳಿ ಗ್ರಾಮದ ಶಿವಯೋಗಾಶ್ರಮದಲ್ಲಿ ಕಾಯಕಯೋಗಿ, ಮಹಾಪ್ರಸಾದಿ ಲಿಂಗೈಕ್ಯ ಶ್ರೀ ರೇವಣಸಿದ್ಧ ಮಹಾಸ್ವಾಮಿಗಳವರ ಪ್ರಥಮ ಪುಣ್ಯರಾಧನೆ ಹಾಗೂ ನೂತನ ಗುರುಗಳಾದ ಮಹಾ ತಪಸ್ವಿ ಡಾ.ಸಿದ್ದಲಿಂಗ ಮಹಾಸ್ವಾಮಿಗಳ ಪಟ್ಟಾಧಿಕಾರ ಸಮಾರಂಭದಲ್ಲಿ ನೂತನ ಶ್ರೀಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ಕಾಯಕಯೋಗಿ ಹಾಗೂ ಮಹಾ ತಪಸ್ವಿ ಶ್ರೀ ರೇವಣಸಿದ್ಧ ಮಹಾಸ್ವಾಮಿಗಳು ಕಾಳೆನಳ್ಳಿಯ ಶಿವಯೋಗಾಶ್ರಮದಲ್ಲಿ ಸುಮಾರು ನಲವತ್ತು ವರ್ಷಗಳ ಕಾಲ ಸುದೀರ್ಘ‌ ಸೇವೆ ಸಲ್ಲಿಸುವ ಮೂಲಕ, ನೂರಾರು ಭಕ್ತರಿಗೆ ಪ್ರತಿನಿತ್ಯ ದಾಸೋಹ ಹಾಗೂ ಅವರ ಕಷ್ಟ-ನಷ್ಟ, ಸುಖ-ಸಂತೋಷ ಹಾಗೂ ನೊಂದು-ಬೆಂದ ಅನೇಕ ಭಕ್ತರಿಗೆ ಸಾಂತ್ವನ ಹೇಳಿದರು.

ಅಲ್ಲದೇ, ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಿವಯೋಗಾಶ್ರಮದಲ್ಲಿದ್ದ ನೂರು ಎಕರೆ ಜಮೀನಿಗೆ ಇನ್ನೂ ಹತ್ತಾರು ಎಕರೆ ಜಮೀನು ಸೇರಿಸುವ ಮೂಲಕ ಆಶ್ರಮದ ಅಭಿವೃದ್ಧಿ ಮಾಡಿದರು ಎಂದು ಸ್ಮರಿಸಿದರು. ಶ್ರೀಗಳು ಲಿಂಗೈಕ್ಯರಾಗುವ ಮೊದಲು ಅನಾರೋಗ್ಯ ಪೀಡಿತರಾಗಿದ್ದಾಗ ಮುಂದಾಲೋಚನೆ ಇಟ್ಟುಕೊಂಡು ಆಶ್ರಮದ ಉತ್ತರಾಧಿಕಾರಿಯಾಗಿ ಡಾ. ಸಿದ್ದಲಿಂಗ ಮಹಾಸ್ವಾಮಿಗಳಿಗೆ ಮಠದ ಸಮಸ್ತ ಆಸ್ತಿಯನ್ನು ವಿಲ್‌ ಬರೆದಿರುವುದು ತುಂಬಾ ಅನುಕೂಲಕರವಾಗಿದೆ. ನೂತನ ಶ್ರೀಗಳು ಮಠದ ಸಮಸ್ತ ಆಸ್ತಿಯನ್ನು ಕಾಪಾಡಿಕೊಂಡು, ಇಲ್ಲಿಗೆ ಆಗಮಿಸುವ ಭಕ್ತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ ಎಂದು ತಿಳಿಸಿದರು.

ಹುಬ್ಬಳ್ಳಿ ಮೂರುಸಾವಿರ ಮಠಾಧೀಶ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ರೇವಣಸಿದ್ಧ ಮಹಾಸ್ವಾಮಿಯವರೊಂದಿಗೆ ತಮ್ಮದು ಅವಿನಾಭಾವ ಸಂಬಂಧವಿತ್ತು.1975 ರಿಂದಲೂ ಅವರೊಡನೆ ಒಡನಾಟ ಹೊಂದಿದ್ದೆ. ಅವರು ನನಗೆ ತಾಯಿಗಿಂತಲೂ ಹೆಚ್ಚಿನ ಪ್ರೀತಿ ನೀಡಿ, ಪಟ್ಟಾಭಿಷೇಕ ಸಂದರ್ಭದಲ್ಲಿ ಆಶೀರ್ವಾದ ಮಾಡಿದ್ದರು. 10ನೇ ತರಗತಿಯಲ್ಲಿ ಓದುತ್ತಿದ್ದ ನನಗೆ ರುದ್ರಮುನಿ ಸ್ವಾಮೀಜಿಯವರು ಇಲ್ಲಿಗೆ ಕಳಿಸಿದ್ದರು. ಅಂದಿನಿಂದ ಅವರು ಲಿಂಗೈಕ್ಯರಾಗುವವರೆಗೂ ನಿರಂತರವಾಗಿ ಅವರ ಸಲಹೆ-ಸಹಕಾರದಿಂದ ಮೂರುಸಾವಿರ ಮಠದ ಪೀಠಾಧಿಪತ್ಯವನ್ನು ಮುನ್ನಡೆಸಿಕೊಂಡು ಬಂದಿದ್ದೇನೆ ಎಂದರು.

ಶಿವಯೋಗಾಶ್ರಮದ ಪೀಠಕ್ಕೆ ಸುಮಾರು ನಾನೂರು ಎಕರೆ ಜಮೀನು ಇತ್ತು. ಅದರಲ್ಲಿ ಮುನ್ನೂರು ಎಕರೆ ಜಮೀನು ಕಂದಾಯ ಕಟ್ಟಲಾಗದೆ, ತಾಲೂಕಿನ ಕಪ್ಪನಹಳ್ಳಿ ಕಾಳೇನಹಳ್ಳಿ ಹಾಗೂ ಕೊಟ್ಟ ಗ್ರಾಮದ ಮಠದ ಭಕ್ತರಿಗೆ ದಾನ ಹಾಗೂ ಟೆನೆನ್ಸಿ ಕಾಯ್ದೆ ಮೂಲಕ ನೀಡಲಾಯಿತು ಎಂದರು.

ಟಾಪ್ ನ್ಯೂಸ್

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

ಪೆರಂಪಳ್ಳಿ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟ!

ಪೆರಂಪಳ್ಳಿ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟ!

“ಡಿವೈಡರ್‌ ಕ್ರಾಸಿಂಗ್‌, ಸರ್ವೀಸ್‌ ರಸ್ತೆಗಾಗಿ ಹೋರಾಟ’

“ಡಿವೈಡರ್‌ ಕ್ರಾಸಿಂಗ್‌, ಸರ್ವೀಸ್‌ ರಸ್ತೆಗಾಗಿ ಹೋರಾಟ’

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?

ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?

ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ

ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-26

ಕೋವಿಡ್‌ ತಡೆಗೆ ಮುನ್ನೆಚ್ಚರಿಕೆ ಅಗತ್ಯ

18-25

ಕೊರೊನಾ ತಡೆಗೆ ಸಕಲ ಪ್ರಯತ್ನ: ಈಶ್ವರಪ್ಪ

18-24

ದೇವರ ದಾಸಿಮಯ್ಯ ಮಹಾನ್‌ ಸಾಧು

ಗ್‍‍ದಸ

ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲು ಆಗ್ರಹ

ಗಹಬ್ಗ್ತರಗ್ದ

ಕೋವಿಡ್‌ ಲಸಿಕೆ ಕೊರತೆ ಇಲ್ಲ-ಆತಂಕ ಪಡಬೇಕಿಲ್ಲ

MUST WATCH

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

ಹೊಸ ಸೇರ್ಪಡೆ

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

ಪೆರಂಪಳ್ಳಿ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟ!

ಪೆರಂಪಳ್ಳಿ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟ!

ಈಗಲೇ ಸಮುದ್ರವನ್ನು ಬಯಸಬೇಕು

ಈಗಲೇ ಸಮುದ್ರವನ್ನು ಬಯಸಬೇಕು

“ಡಿವೈಡರ್‌ ಕ್ರಾಸಿಂಗ್‌, ಸರ್ವೀಸ್‌ ರಸ್ತೆಗಾಗಿ ಹೋರಾಟ’

“ಡಿವೈಡರ್‌ ಕ್ರಾಸಿಂಗ್‌, ಸರ್ವೀಸ್‌ ರಸ್ತೆಗಾಗಿ ಹೋರಾಟ’

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.