ನಾವು ಶ್ರೀರಾಮನ ಮಕ್ಕಳೇ… ಅದೇ ಸಂಸ್ಕೃತಿಯಲ್ಲಿ ಬೆಳೆದು ಬಂದವರು: ಡಿ.ಕೆ ಶಿವಕುಮಾರ್
Team Udayavani, Mar 13, 2021, 3:58 PM IST
ಶಿವಮೊಗ್ಗ: ನಾವು ಶ್ರೀರಾಮನ ಮಕ್ಕಳೇ. ಅದೇ ಸಂಸ್ಕೃತಿಯಲ್ಲಿ ಬೆಳೆದು ಬಂದವರು. ನಾನು ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್, ರಮೇಶ್ ಕುಮಾರ್ ಎಂದು ಎಲ್ಲರೂ ಹೆಸರಿಟ್ಟುಕೊಂಡಿದ್ದೇವೆ. ನಮ್ಮದೂ ಹಿಂದುತ್ವವೇ, ಜೊತೆಗೆ ಮಾನವತ್ವವೂ ನಮ್ಮಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಶಿವಮೊಗ್ಗದ ಕಾಂಗ್ರೆಸ್ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರ ಹಾಗೂ ಅಧಿಕಾರಿಗಳನ್ನು ಬಳಸಿಕೊಂಡು ಕೇಸ್ ಹಾಕುತ್ತಿದೆ. ಇದನ್ನು ವಿರೋಧಿಸಿ, ನಾವು ಎಲ್ಲರೂ ಇಲ್ಲಿಗೆ ಬಂದಿದ್ದೇವೆ. ಪ್ರತಿಯೊಬ್ಬ ಕಾರ್ಯಕರ್ತರ ರಕ್ಷಣೆಗೆ ಕಾಂಗ್ರೆಸ್ ಪಕ್ಷದ ಇದೆ. ಇದೇ ಸಂದೇಶ ಕೊಡಲು ನಾವು ಶಿವಮೊಗ್ಗಕ್ಕೆ ಬಂದಿದ್ದೇವೆ ಎಂದರು.
ಇದನ್ನೂ ಓದಿ:ಹೀಗೂ ಉಂಟಾ : ಬ್ರೇಕ್ ಅಪ್ ತಡೆಯಲು 3 ತಿಂಗಳು ಕೈ ಕಟ್ಟಿಕೊಂಡ ಪ್ರೇಮಿಗಳು..!
ಎಸ್ಐಟಿ ತನಿಖೆ ವಿಚಾರವಾಗಿ ಮಾತನಾಡಿದ ಅವರು. ಮೊದಲು ಸಿಡಿ ಸತ್ಯವೋ- ಸುಳ್ಳೋ ಎನ್ನುವುದು ದೃಢವಾಗಲಿ. ಆನಂತರ ಯಾರನ್ನು ಬೇಕಾದರೂ ಬಂಧಿಸಲಿ ಎಂದರು.