ಮುಂದಿನ ಬಾರಿ ಮೋದಿಯವರನ್ನು ಶಿವಮೊಗ್ಗಕ್ಕೆ ಕರೆಸುತ್ತೇವೆ: ಯಡಿಯೂರಪ್ಪ ಹೇಳಿಕೆ
Team Udayavani, Sep 3, 2022, 11:55 AM IST
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನಂತರ ಮತ್ತಷ್ಟು ಶಕ್ತಿ ಬಂದಿದೆ. ಮುಂದಿನ ಬಾರಿ ಮೋದಿ ಅವರನ್ನು ಶಿವಮೊಗ್ಗಕ್ಕೂ ಕರೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಸಮಯ ಕೊಟ್ಟರೆ ಶಿವಮೊಗ್ಗ ಕರೆಯಿಸಿ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ಮುದ್ದುಹನುಮೇಗೌಡ ಈಗಾಗಲೇ ನನ್ನ ಜೊತೆ ಮಾತನಾಡಿದ್ದಾರೆ. ಪಕ್ಷಕ್ಕೆ ಸೇರುವುದಾಗಿ ತಿಳಿಸಿದ್ದಾರೆ. ಅವರು ಅಷ್ಟೇ ಅಲ್ಲ, ಇನ್ನಷ್ಟು ಮುಖಂಡರು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸೇರಲಿದ್ದಾರೆ ಎಂದರು.
ಇದನ್ನೂ ಓದಿ:ಪ್ರಧಾನಿ ಮೋದಿ ರೋಡ್ ಶೋ: ಸನಿಹದಲ್ಲೇ ವೀಕ್ಷಿಸಿ ಜೈಕಾರ ಹಾಕಿದ ಜನತೆ
ಮುರುಘಾ ಶ್ರೀ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ಮುರುಘಾ ಶ್ರೀ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಆ ಬಗ್ಗೆ ಹೆಚ್ಚು ಏನು ಮಾತನಾಡುವುದಿಲ್ಲ ಎಂದರು.