ಸರ್ಕಾರಿ ಶಾಲೆಗಳ ದುರಸ್ತಿಗೆ ಅನುದಾನ: ಈಶ್ವರಪ್ಪ

Team Udayavani, Nov 2, 2019, 6:09 PM IST

November-20

ಶಿವಮೊಗ್ಗ: ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಶೌಚಾಲಯಗಳ ನಿರ್ಮಾಣಕ್ಕಾಗಿ ಇದೇ ಮೊದಲ ಬಾರಿಗೆ ಸರ್ಕಾರ 14.61 ಕೋಟಿ ರೂ. ಅನುದಾನ ಒದಗಿಸಿದ್ದು, ಮೂರು ತಿಂಗಳ ಒಳಗಾಗಿ ಎಲ್ಲಾ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ತಿಳಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಕುರಿತಾಗಿ ಅಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.

ನಗರ ವ್ಯಾಪ್ತಿಯಲ್ಲಿ 86 ಶಾಲೆಗಳಲ್ಲಿ ಕೊಠಡಿ ದುರಸ್ತಿಗಾಗಿ 9.67 ಕೋಟಿ ರೂ. ಹಾಗೂ 47 ಶೌಚಾಲಯ ಬ್ಲಾಕ್‌ಗಳ ನಿರ್ಮಾಣಕ್ಕಾಗಿ 4.94 ಕೋಟಿ ರೂ. ಕಾಮಗಾರಿಗಳಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಮೂರು ತಿಂಗಳಲ್ಲಿ ಹಂತ ಹಂತವಾಗಿ ಕಾಮಗಾರಿಗಳು ಪೂರ್ಣಗೊಂಡು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯಗಳು ಸಿದ್ಧವಾಗಲಿದೆ.

ಈ ಎಲ್ಲಾ ಶಾಲೆಗಳಿಗೆ ಅಗತ್ಯ ಪೀಠೊಪಕರಣ ಒದಗಿಸಲು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮುಂದೆ ಬಂದಿದೆ ಎಂದು ಸಚಿವರು ತಿಳಿಸಿದರು.

ದುರಸ್ತಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ನಡೆಯುವಂತೆ ಆಯಾ ಶಾಲಾಭಿವೃದ್ಧಿ ಸಮಿತಿಯವರು ನೋಡಿಕೊಳ್ಳಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಬಾರದು. ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಇರಬೇಕು. ಈ ಶೌಚಾಲಯಗಳ ಸ್ವಚ್ಛತೆಗೆ ಆಯಾ ಶಾಲಾಭಿವೃದ್ಧಿ ಸಮಿತಿಯವರು ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಿಸಿ ಕ್ರಮ ಕೈಗೊಳ್ಳಬೇಕು. ಮಕ್ಕಳಿಂದ ಶೌಚಾಲಯ ಸ್ವಚ್ಛತೆಯನ್ನು ಮಾಡಿಸಬಾರದು ಎಂದು ಅವರು ತಿಳಿಸಿದರು.

ರಜಾದಿನಗಳಲ್ಲಿ ಹಾಗೂ ಶಾಲಾ ಅವಧಿಯ ಬಳಿಕ ಶಾಲೆಗಳ ವಠಾರದಲ್ಲಿ ಜೂಜಾಟ ಮುಂತಾದ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು. ಈ ಕುರಿತು ಸೂಕ್ತ ನಿಗಾ ವಹಿಸಲು ಪೊಲೀಸ್‌ ಇಲಾಖೆಗೆ ಸೂಚನೆ ನೀಡಲಾಗಿದೆ. ಅಂತಹ ಕೃತ್ಯಗಳು ನಡೆಯುತ್ತಿದ್ದರೆ ನೇರವಾಗಿ ಎಸ್ಪಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಾಂತಕುಮಾರ್‌, ಮೇಯರ್‌ ಲತಾ ಗಣೇಶ್‌, ಉಪ ಮೇಯರ್‌ ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ ಅನುರಾಧಾ ಮತ್ತಿತರ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಸಭೆಯಲ್ಲಿ ಇದ್ದರು.

ಟಾಪ್ ನ್ಯೂಸ್

Indian Navy rescues 23 Pakistani nationals attacked by pirates

Indian Navy; ಕಡಲ್ಗಳ್ಳರಿಂದ ದಾಳಿಗೊಳಗಾದ 23 ಪಾಕ್ ಪ್ರಜೆಗಳನ್ನು ರಕ್ಷಿಸಿದ ನೌಕಾಪಡೆ

IPL 2024: ಹೀಗೆ ಆದರೆ ಆರ್ ಸಿಬಿ ಐಪಿಎಲ್ ಗೆಲ್ಲಲು ಸಾಧ್ಯವಿಲ್ಲ…: ಮೈಕಲ್ ವಾನ್

IPL 2024: ಹೀಗೆ ಆದರೆ ಆರ್ ಸಿಬಿ ಐಪಿಎಲ್ ಗೆಲ್ಲಲು ಸಾಧ್ಯವಿಲ್ಲ…: ಮೈಕಲ್ ವಾನ್

Actor daniel balaji passes away

Daniel Balaji; ಕಿರಾತಕ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದ ಡ್ಯಾನಿಯಲ್ ಬಾಲಾಜಿ ಇನ್ನಿಲ್ಲ

ಸೋತು ಸೋತು ಸಾಕಾಗಿದೆ, ನನ್ನ ಗೆಲ್ಲಿಸಿ ಮುಖ್ಯಮಂತ್ರಿಯ ಕೊರಗು ನಿವಾರಿಸಿ: ಎಂ.ಲಕ್ಷ್ಮಣ್‌

ಸೋತು ಸೋತು ಸಾಕಾಗಿದೆ, ನನ್ನ ಗೆಲ್ಲಿಸಿ ಮುಖ್ಯಮಂತ್ರಿಯ ಕೊರಗು ನಿವಾರಿಸಿ: ಎಂ.ಲಕ್ಷ್ಮಣ್‌

1-24-saturday

Daily Horoscope: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ, ದಿನವಿಡೀ ಬಿಡುವಿಲ್ಲದ ಚಟುವಟಿಕೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Lok Sabha Election: ಕಾಂಗ್ರೆಸ್‌ ಸೋಲಿಸಿ, ಸಿದ್ದರಾಮಯ್ಯ ಗರ್ವಭಂಗ ಮಾಡಿ: ದೇವೇಗೌಡ

Lok Sabha Election: ಕಾಂಗ್ರೆಸ್‌ ಸೋಲಿಸಿ, ಸಿದ್ದರಾಮಯ್ಯ ಗರ್ವಭಂಗ ಮಾಡಿ: ದೇವೇಗೌಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-davangere

Lok Sabha Election: ಮೋದಿ ಕೈ ಬಲಪಡಿಸಲು ಬಿಜೆಪಿಗೆ ಮತ ಹಾಕಿ

ಸೋತು ಸೋತು ಸಾಕಾಗಿದೆ, ನನ್ನ ಗೆಲ್ಲಿಸಿ ಮುಖ್ಯಮಂತ್ರಿಯ ಕೊರಗು ನಿವಾರಿಸಿ: ಎಂ.ಲಕ್ಷ್ಮಣ್‌

ಸೋತು ಸೋತು ಸಾಕಾಗಿದೆ, ನನ್ನ ಗೆಲ್ಲಿಸಿ ಮುಖ್ಯಮಂತ್ರಿಯ ಕೊರಗು ನಿವಾರಿಸಿ: ಎಂ.ಲಕ್ಷ್ಮಣ್‌

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Mysore: ಮುಖ್ಯಮಂತ್ರಿ, ಕಾಂಗ್ರೆಸ್‌ ಬಗ್ಗೆ ಮಾತನಾಡಲಾರೆ: ಯದುವೀರ್‌

Mysore: ಮುಖ್ಯಮಂತ್ರಿ, ಕಾಂಗ್ರೆಸ್‌ ಬಗ್ಗೆ ಮಾತನಾಡಲಾರೆ: ಯದುವೀರ್‌

PUC Result: ಇಂದು ಪ್ರಥಮ ಪಿಯು ಫ‌ಲಿತಾಂಶ

PUC Result: ಇಂದು ಪ್ರಥಮ ಪಿಯು ಫ‌ಲಿತಾಂಶ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

2-davangere

Lok Sabha Election: ಮೋದಿ ಕೈ ಬಲಪಡಿಸಲು ಬಿಜೆಪಿಗೆ ಮತ ಹಾಕಿ

Indian Navy rescues 23 Pakistani nationals attacked by pirates

Indian Navy; ಕಡಲ್ಗಳ್ಳರಿಂದ ದಾಳಿಗೊಳಗಾದ 23 ಪಾಕ್ ಪ್ರಜೆಗಳನ್ನು ರಕ್ಷಿಸಿದ ನೌಕಾಪಡೆ

IPL 2024: ಹೀಗೆ ಆದರೆ ಆರ್ ಸಿಬಿ ಐಪಿಎಲ್ ಗೆಲ್ಲಲು ಸಾಧ್ಯವಿಲ್ಲ…: ಮೈಕಲ್ ವಾನ್

IPL 2024: ಹೀಗೆ ಆದರೆ ಆರ್ ಸಿಬಿ ಐಪಿಎಲ್ ಗೆಲ್ಲಲು ಸಾಧ್ಯವಿಲ್ಲ…: ಮೈಕಲ್ ವಾನ್

Actor daniel balaji passes away

Daniel Balaji; ಕಿರಾತಕ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದ ಡ್ಯಾನಿಯಲ್ ಬಾಲಾಜಿ ಇನ್ನಿಲ್ಲ

ಸೋತು ಸೋತು ಸಾಕಾಗಿದೆ, ನನ್ನ ಗೆಲ್ಲಿಸಿ ಮುಖ್ಯಮಂತ್ರಿಯ ಕೊರಗು ನಿವಾರಿಸಿ: ಎಂ.ಲಕ್ಷ್ಮಣ್‌

ಸೋತು ಸೋತು ಸಾಕಾಗಿದೆ, ನನ್ನ ಗೆಲ್ಲಿಸಿ ಮುಖ್ಯಮಂತ್ರಿಯ ಕೊರಗು ನಿವಾರಿಸಿ: ಎಂ.ಲಕ್ಷ್ಮಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.