ದೇಹಕ್ಕಿಂತ ಮನದ ಕೊಳೆ ನಿವಾರಣೆ ಅಗತ್ಯ

Team Udayavani, Apr 24, 2019, 5:28 PM IST

ಶಿರಹಟ್ಟಿ: ಪಟ್ಟಣದ ಶೆಟ್ಟರ ಓಣಿಯಲ್ಲಿ ನಡೆದ ಅಕ್ಕ ಮಹಾದೇವಿ ಜಯಂತಿ ಹಾಗೂ ಶರಣ ಪೌರ್ಣಿಮೆ-44 ಕಾರ್ಯಕ್ರಮದಲ್ಲಿ ಪ್ರೊ| ಸುಧಾ ಹುಚ್ಚಣ್ಣವರ ಮಾತನಾಡಿದರು.

ಶಿರಹಟ್ಟಿ: 12ನೇ ಶತಮಾನದಲ್ಲಿನ ಆಚಾರ-ವಿಚಾರಗಳು ಕ್ರಾಂತಿಯ ಕಾಲ ಘಟ್ಟವನ್ನು ಇಂದಿನ ಲೋಕಕ್ಕೆ ಹೋಲಿಸಿದರೆ ಸಾಕಷ್ಟು ವ್ಯತ್ಯಾಸಗಳು ಕಂಡು ಬರುತ್ತಿವೆ. ಅಂದು ನೆಮ್ಮದಿ ಹಾಗೂ ಸುಖಮಯ ಜೀವನ ನಡೆಸುತ್ತಿದ್ದ ವ್ಯಕ್ತಿ ಇಂದು ಸಾಕಷ್ಟು ಒತ್ತಡಗಳ ಮಧ್ಯ ಬದುಕಿ ತನ್ನ ಮನಸ್ಸನ್ನು ಕಲ್ಮಶಗೊಳಿಸಿಗೊಂಡು ನೆಮ್ಮದಿ ಹಾಳು ಮಾಡಿಕೊಂಡಿದ್ದಾರೆ. ಆದ್ದರಿಂದ ಇಂದು ಮುಖದ ಕೊಳೆ ನಿವಾರಣೆ ಮಾಡುವುದಕ್ಕಿಂತ ಮನದ ಕೊಳೆಯನ್ನು ನಿವಾರಣೆ ಮಾಡುವುದು ಅವಶ್ಯವಾಗಿದೆ ಎಂದು ಎಫ್‌.ಎಂ. ಡಬಾಲಿ ಪಪೂ ಮಹಾವಿದ್ಯಾಲಯದ ಪ್ರೊ| ಸುಧಾ ಹುಚ್ಚಣ್ಣವರ ಹೇಳಿದರು.

ಪಟ್ಟಣದ ಶೆಟ್ಟರ ಓಣಿಯಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ತಾಲೂಕು ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ತಾಲೂಕು ಆಶ್ರಯದಲ್ಲಿ ಚನ್ನವೀರ ಶೆಟ್ಟರ ಮಹಾಮನೆಯಲ್ಲಿ ನಡೆದ ಅಕ್ಕ ಮಹಾದೇವಿ ಜಯಂತಿ ಹಾಗೂ ಶರಣ ಪೌರ್ಣಿಮೆ-44ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಕ್ಕ ಮಹಾದೇವಿ ತನ್ನ ಇಪ್ಪತ್ತನೇ ವಯಸ್ಸಿನಲ್ಲಿಯೇ ವೀರಾಗಿಣಿಯಾಗಿ ಮನೆ ತೊರೆದು ಕಲ್ಯಾಣಕ್ಕೆ ಬಂದು ತನ್ನ ಪ್ರತಿಭೆಯಿಂದ ಅನೇಕ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯದಲ್ಲಿ ಅಗ್ರಮಾನ್ಯ ವಚನಕಾರ್ತಿಯಾಗಿ ಮೆರೆದಿದ್ದಾರೆ. ತನವಿನೊಳಗಿದ್ದು ತನುವ ಗೆದ್ದಳು, ಮನವಿನೊಳಗಿದ್ದು ಮನವನ್ನು ಗೆದ್ದವಳು ಎನ್ನುವ ವಚನದಂತೆ ತನ್ನ ನಿಷ್ಠೆಯ ನಿಗ್ರತೆಯಿಂದ ಮನಸ್ಸಿನ ಎಲ್ಲ ಅರಿಷ್ಟವರ್ಗಗಳನ್ನು ಗೆದ್ದು ಬೆತ್ತೆಲೆಯಾಗಿ ನಾವು ಹುಟ್ಟುವಾಗ ಯಾವ ರೀತಿಯಿಂದ ಬಂದನೋ ಅದೇ ರೀತಿಯಲ್ಲಿ ಬದುಕುವೆ ಎಂದು ಬದುಕಿ ತೋರಿಸಿಕೊಟ್ಟ ದಿಟ್ಟ ಮಹಿಳೆ ಅಕ್ಕ ಮಹಾದೇವಿ. ಈ ಶಿವಶರಣೆ ಅಲ್ಪ ಸುಖಕ್ಕಾಗಿ ಜೀವನ ಸುಟ್ಟುಕೊಳ್ಳಬೇಡ. ದೈವತ್ವದ ಸಾಧನೆಯನ್ನು ಪ್ರತಿಯೊಬ್ಬರೂ ಸಾಧನೆ ಮಾಡಿಕೊಳ್ಳುವುದು ಅವಶ್ಯ ಎಂದು ಹೇಳಿದ್ದಾರೆ. ನಮ್ಮೆಲ್ಲ ಸದ್ಗತಿಗಳಿಗೆ ವಚನಗಳ ಪಾಲನೆ ಅವಶ್ಯ ಎಂದು ಹೇಳಿದರು.

ಶಿಕ್ಷಕ ಕೆ.ಎ. ಬಳಿಗೇರ ಕಾರ್ಯಕ್ರಮ ಉದ್ಘಾಟಿಸಿ, ಹುಟ್ಟು-ಸಾವು ದೇವರನ್ನು ನಿಶ್ಚಯ ಮಾಡಿದ ಹಾಗೆ ಆಗುತ್ತದೆ. ಮಧ್ಯದಲ್ಲಿನ ಜೀವನ ನಮ್ಮದಾಗಿರುತ್ತದೆ. ಅದನ್ನು ಸದುಪಯೋಗ ಪಡಿಸಕೊಳ್ಳಬೇಕಾದರೆ ಕಲ್ಯಾಣದ ವಿಚಾರಗಳನ್ನು ನಾವೆಲ್ಲ ಅಳವಡಿಸಿಕೊಳ್ಳುವುದು ಅವಶ್ಯ. ಬದುಕಿನುದ್ದಕ್ಕೂ ಹೋರಾಟ ಮಾಡುವ ನಾವು ನಮ್ಮೆಲ್ಲರ ನೆಮ್ಮದಿಗಾಗಿ ಏಕೆ ಚಿಂತಿಸುವುದಿಲ್ಲ. ಮಾಯಾ ಲೋಕದಲ್ಲಿ ಬದುಕುವುದಕ್ಕಿಂತ ವಾಸ್ತವ ಲೋಕದಲ್ಲಿ ಬದುಕುವುದು ಅವಶ್ಯ ಎಂದರು.

ಕ‌ಸಾಪ ಅಧ್ಯಕ್ಷ ಪ್ರೊ| ಫಕ್ಕಿರೇಶ್‌ ಅಕ್ಕಿ ಮಾತನಾಡಿದರು. ಪಪಂ ಮಾಜಿ ಅಧ್ಯಕ್ಷ ಹಾಗೂ ಕದಳಿ ವೇದಿಕೆ ತಾಲೂಕು ಅಧ್ಯಕ್ಷ ವಿಮಲಕ್ಕ ಕಪ್ಪತ್ತನವರ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಂ. ದೇವಗೇರಿ, ಭಾನುಮತಿ ಚನ್ನವೀರಶೆಟ್ಟರ, ಜಿ.ಬಿ. ಚನ್ನವೀರಶೆಟ್ಟರ, ವಿನಾಯಕ ಹಣಗಿ, ನಂದಾ ಕಪ್ಪತ್ತನವರ, ಸರೋಜಾ ಕಟ್ಟಿಮನಿ, ಶಾಂತಾ ಪಾಟೀಲ್, ಬಿ.ಎಸ್‌. ಹಿರೇಮಠ, ಬಸವರಾಜ ಭೋರಶೆಟ್ಟರ, ಹಾಲಪ್ಪ ಬಿಡನಾಳ, ಅಶೋಕ ಸಂಕದಾಳ, ಸಿದ್ದಲಿಂಗಯ್ಯ ಕಳ್ಳಿಮಠ, ನೀಲಮ್ಮ ನಾರ್ಶಿ, ರೇಣುಕಾ ಕಪ್ಪತ್ತನವರ, ಶಾರವ್ವ ಸಂಕದಾಳ, ಸುನಿತಾ ಪಾಟೀಲ್, ಶೇಖವ್ವ ಮುಧೋಳ, ಗೌರವ್ವ ದಂಡೆಣ್ಣವರ, ಸುಧಾ ಜಿಗನಹಳ್ಳಿ, ಜ್ಯೋತಿ ಗುಡಿ, ವಿನಾಯಕ ವಡಕಣ್ಣವರ, ಕಾರ್ತಿಕ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ