ಆರೇ ತಿಂಗಳಲ್ಲಿಡಾಂಬರು ರಸ್ತೆ ಡಮಾರ್‌!

Team Udayavani, Oct 3, 2019, 6:29 PM IST

ಶಿರಸಿ: ನಿರ್ಮಾಣಗೊಂಡ ಆರೇ ತಿಂಗಳಲ್ಲಿ ಸಂಪೂರ್ಣ ಕಿತ್ತುಹೋದ ಕೂಡು ಸಂಪರ್ಕ ರಸ್ತೆಯೊಂದು ಕಾಮಗಾರಿ ಗುಣಮಟ್ಟಕ್ಕೆ ಕನ್ನಡಿಯಾದ ಉದಾಹರಣೆ ವರದಿಯಾಗಿದೆ.

ಕಳೆದ ಮಾರ್ಚ್‌ನಲ್ಲಿ ಡಾಂಬರೀಕರಣಗೊಂಡಿದ್ದ ಪಡಂಬೈಲ್‌, ತೆರಕನಳ್ಳಿ, ಕುಳವೆ, ಮಾರ್ಗವಾಗಿ ಉಗ್ರೇಮನೆ ಕೊಪ್ಪ ರಸ್ತೆಗೆ ಸಂಪರ್ಕ ಕಲ್ಪಿಸುವ 7ಕಿ.ಮೀ ರಸ್ತೆ ಈಗ ಭಾಗಶಃ ಕಿತ್ತುಹೋಗಿ ಜಲ್ಲಿ ರಸ್ತೆ ತುಂಬೆಲ್ಲ ಹರಡಿಕೊಂಡಿದೆ.

ಜೆಲ್ಲಿ ಕಲ್ಲುಗಳು ಎದ್ದು ಹೋಗಿದ್ದು, ಬೈಕ್‌, ಸೈಕಲ್‌ ಸವಾರರು ಜಾರಿ ಬಿದ್ದು ಕೈಕಾಲು ಮುರಿದುಕೊಳ್ಳುವ ಸಾಧ್ಯತೆಯಿದೆ. ಈ ರಸ್ತೆಯನ್ನು ಕೇವಲ ಒಂದು ವಾರದಲ್ಲಿ ಡಾಂಬರೀಕರಣಗೊಳಿಸಲಾಗಿತ್ತು ಎಂಬುದೇ ಕಳಪೆ ಕಾಮಗಾರಿಗೆ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯ ಪ್ರಮುಖ ರಾಘವೇಂದ್ರ ನಾಯ್ಕ ಉಂಚಳ್ಳಿ.

ಈ ರಸ್ತೆಯಲ್ಲಿ ಹರೀಶಿ- ಚಂದ್ರಗುತ್ತಿಗೆ ನಿತ್ಯ ಬಸ್‌ ಸಂಚರಿಸುತ್ತದೆ. ಈಗ ಗುತ್ತಿಗೆದಾರನ ಸುಳಿವೂ ಇಲ್ಲ ಅಧಿಕಾರಿಗಳೂ ಗಮನ ಹರಿಸಿಲ್ಲ. ಈಗ ಎಲ್ಲಿಂದಲೋ ಡಾಂಬರ್‌ ಮಿಕ್ಸ್‌ ಮಾಡಿ ಟಿಪ್ಪರ್‌ನಲ್ಲಿ ತಂದು ರಸ್ತೆ ನಿರ್ಮಿಸುತ್ತಾರೆ. ಇದರಲ್ಲಿ ಕ್ವಾಲಿಟಿ ಚೆಕಿಂಗ್‌ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇವರನ್ನು ಪ್ರಶ್ನಿಸುವರೇ ಇಲ್ಲದಂತಾಗಿದೆ.ಯಾರನ್ನು ಕೇಳುವುದು? ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ನಾಗರಿಕರು.

ಆಯಿಲ್‌ ಮಿಕ್ಸ್‌ ದಂಧೆ ಪ್ರತಿಯೊಂದು ರಸ್ತೆ ನಿರ್ಮಾಣದಲ್ಲೂ ಎಗ್ಗಿಲ್ಲದಂತೆ ನಡೆಯುತ್ತಿದೆ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಇದಕ್ಕೆ ಕಡಿವಾಣ ಹಾಕುವರೆ ಇಲ್ಲವಾಗಿದೆ. ಇದು ಜನನಾಯಕರ ಗಮನಕ್ಕೆ ಬಂದರೂ ಹೆಚ್ಚೆಂದರೆ ಈಗ ರಸ್ತೆ ಕಿತ್ತಿರುವ ಜಾಗಕ್ಕೆ ಒಂದಿಷ್ಟು ಪ್ಯಾಚ್‌ ಹಾಕಿ ಜನರ ಬಾಯಿ ಮುಚ್ಚಿಸುತ್ತಾರೆ ಎಂಬುದು ಕೆಲವರ ಆರೋಪವಾಗಿದೆ. ಕಾಮಗಾರಿ
ಗುಣಮಟ್ಟದ ಕೆಲಸ ಆಗಬೇಕು ಎಂಬುದು ನಾಗರಿಕರ ಹಕ್ಕೊತ್ತಾಯವಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕಾರವಾರ: ರಾಜ್ಯದ ಏಕೈಕ ಕಪ್ಪು ಮರಳಿನ ಕಡಲತೀರ ಎನ್ನುವ ಖ್ಯಾತಿ ಪಡೆದಿರುವ ಕಾರವಾರ ತಾಲೂಕಿನ ಮಾಜಾಳಿಯ ತೀಳ್‌ ಮಾತಿ ಬೀಚ್‌ ಪ್ರವಾಸೋದ್ಯಮ ಪಟ್ಟಿಗೆ ಸೇರುವ ಭಾಗ್ಯದಿಂದ...

  • ಕಾರವಾರ: ಬೇಸಿಗೆ ಆರಂಭಕ್ಕೆ ಇನ್ನೇನು 75 ದಿನ ಬಾಕಿಯಿದೆ. ಆದರೆ, ಕಾರವಾರ ನಗರದ ನಿವಾಸಿಗಳಿಗೆ ಈಗಲೇ ಕುಡಿಯುವ ನೀರಿನ ಬರ ಎದುರಾಗುವ ಆತಂಕ ಕಾಡುತ್ತಿದೆ. ಜೊತೆಗೆ...

  • ಶಿರಸಿ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಹೆಬ್ರೆ, ಹುಸೂರು, ಬುಗುಡಿ ಗ್ರಾಮಗಳ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವಂತೆ ಆಗ್ರಹಿಸಿ ಜಿಲ್ಲಾ...

  • ಹಳಿಯಾಳ: ಅಪ್ರತೀಮ ವೀರ ಛತ್ರಪತಿ ಶಿವಾಜಿ ಮಹಾರಾಜರು ದೇಶದ ಭವಿಷ್ಯಕ್ಕಾಗಿ ಹೋರಾಡಿದ ಅಗ್ರಗಣ್ಯ ನಾಯಕರಾಗಿದ್ದು ಸರ್ವರನ್ನು ಒಂದೂಗೂಡಿಸಿಕೊಂಡು ಹೋಗುತ್ತಿದ್ದ...

  • ಕಾರವಾರ: ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಜನಸಂಖ್ಯೆ ಆಧರಿಸಿ ಶೇ.15 ರಿಂದ ಶೇ. 22.5ಗೆ ಹೆಚ್ಚಿಸಬೇಕು ಹಾಗೂ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಶೇ.3ರಿಂದ ಶೇ.7.5 ಕ್ಕೆ...

ಹೊಸ ಸೇರ್ಪಡೆ