ಸಮಾಜ ವಿಜ್ಞಾನದಲ್ಲಿ ಸಂಶೋಧನೆಯಾಗಲಿ

Team Udayavani, Aug 23, 2019, 4:16 PM IST

ವಮೊಗ್ಗ: ಪ್ರೊ| ಎಸ್‌.ಎ. ಜಾವೇದ್‌ ರಚಿಸಿರುವ ಪುಸ್ತಕವನ್ನು ಪ್ರೊ| ಬಿ ಪಿ ವೀರಭದ್ರಪ್ಪ ಬಿಡುಗಡೆ ಮಾಡಿದರು.

ಶಿವಮೊಗ್ಗ: ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ಸಮಾಜ ವಿಜ್ಞಾನಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಿದೆ. ಇಲ್ಲವಾದರೆ ಈಗಾಗಲೇ ಬೇಡಿಕೆ ಕಳೆದುಕೊಳ್ಳುತ್ತಿರುವ ಕಲಾ ವಿಷಯಗಳು ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಲಿವೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಜೆ. ಎಸ್‌. ಸದಾನಂದ ಎಚ್ಚರಿಸಿದರು.

ಕುವೆಂಪು ವಿವಿಯ ಪ್ರೊ| ಹಿರೇಮs್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರೊ| ಎಸ್‌. ಎ. ಜಾವಿದ್‌ ಅವರು ರಚಿಸಿರುವ ‘ಫಂಡಮೆಂಟಲ್ಸ್ ಆಫ್‌ ಸೈಂಟಿಫಿಕ್‌ ಸೋಷಿಯಲ್ ರಿಸರ್ಚ್‌’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೂಲಭೂತ ವಿಜ್ಞಾನಗಳ ಅಧ್ಯಯನ ವಿಧಾನಗಳನ್ನು ಸಮಾಜ ವಿಜ್ಞಾನಿಗಳು ಅಳವಡಿಸಿಕೊಂಡರೆ ಸಾಲದು. ಭಾರತದಂತಹ ದೇಶಗಳು ಇಂದಿಗೂ ಎದುರಿಸುತ್ತಿರುವ ಬಡತನ, ನಿರುದ್ಯೋಗ, ಆರ್ಥಿಕ ಹಿನ್ನಡೆಯಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆಯನ್ನೂ ನೀಡಬೇಕಿದೆ ಎಂದರು.

ಇಂದು ಅತ್ಯಧಿಕ ಯುವಜನತೆಯನ್ನು ಹೊಂದಿರುವ ಭಾರತ ಕೆಲವೇ ವರ್ಷಗಳಲ್ಲಿ ಅತಿ ಹೆಚ್ಚು ವೃದ್ಧರನ್ನು ಹೊಂದುವ ಸಮಸ್ಯೆಗಳನ್ನು ಎದುರಿಸಲಿದೆ. ಅಂತಹ ಸಂಧರ್ಭದಲ್ಲಿ ಉತ್ಪಾದಕತೆಯ ಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ದೇಶದ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿಡುವುದರ ಬಗ್ಗೆ ಸಮಾಜ ವಿಜ್ಞಾನಗಳ ಸಂಶೋಧನೆಗಳು ಉತ್ತರ ಹುಡುಕಬೇಕಿದೆ. ಇಂತಹ ಮುನ್ನೋಟದ ಲಕ್ಷಣ ತೋರದಿದ್ದರೆ, ಮುಂಬರುವ ದಿನಗಳಲ್ಲಿ ಸಮಾಜ ವಿಜ್ಞಾನ ಅಧ್ಯಯನಗಳಿಗೆ ಅನುದಾನ ಯಾಕೆ ನೀಡಬೇಕೆಂದು ಸಾರ್ವಜನಿಕರು ಪ್ರಶ್ನಿಸಿದರೆ ಆಶ್ಚರ್ಯಪಡಬೇಕಿಲ್ಲ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ| ಬಿ. ಪಿ. ವೀರಭದ್ರಪ್ಪ, ಸಂಶೋಧನಾ ಚಟುವಟಿಕೆಗಳಲ್ಲಿ ವಿವಿಯ ವಿದ್ಯಾರ್ಥಿ ಮತ್ತು ಅಧ್ಯಾಪಕರು ಮುಂದಿದ್ದು, ಬೇಡಿಕೆಗನುಗುಣವಾಗಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ವಿಶೇಷವಾಗಿ ಸಮಾಜ ವಿಜ್ಞಾನಿಗಳ ಸಂಶೋಧನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದರು.

ವಿವಿಯ ಕುಲಸಚಿವ ಪ್ರೊ| ಭೋಜ್ಯಾನಾಯ್ಕ, ಪ್ರೊ| ಜಾವಿದ್‌, ಪ್ರೊ| ಚಂದ್ರಶೇಖರ್‌, ಪ್ರೊ| ವೆಂಕಟೇಶ್‌ ಮತ್ತಿತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಹಾನಗರ: ನಗರಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು. ನಗರದ ಶಿವ ದೇವಸ್ಥಾನಗಳಿಗೆ ಬೆಳಗ್ಗೆಯಿಂದಲೇ...

  • ಎಲ್ಇಡಿ ದೀಪಗಳು ಕೇವಲ ಕಾರುಗಳಲ್ಲಿ ಹೆಚ್ಚಿನ ಬಳಕೆಯಲ್ಲಿರುತ್ತವೆ. ಆದರೆ ವಾಸ್ತವದಲ್ಲಿ ಈ ಬಲುºಗಳು ವರ್ಣರಂಜಿತ ಮನೆಗೆ ಹೆಚ್ಚಿನ ಅಂದವನ್ನು ನೀಡುವುದರಲ್ಲಿ...

  • ಮನೆ ಸುಂದರವಾಗಿರಬೇಕು ಎನ್ನುವವರು ಮನೆಯ ಪ್ರತಿ ಅಂಶಗಳ ಮೇಲೂ ಗಮನ ಹರಿಸುತ್ತಾರೆ. ಪ್ರತಿಯೊಂದು ವಸ್ತು ವ್ಯವಸ್ಥಿವಾಗಿರಬೇಕು, ಆಕರ್ಷಕವಾಗಿರಬೇಕು ಎಂದು ಬಯಸುತ್ತಾರೆ....

  • ಮನೆಯ ಹೃದಯಭಾಗವಾದ ಲಿವಿಂಗ್‌ ರೂಮ್‌ನಲ್ಲಿ ಬಹುತೇಕ ಸಮಯವನ್ನು ಕಳೆಯಲಾಗುತ್ತದೆ. ಊಟ, ಹರಟೆ, ಮಾತುಕತೆ ಸಹಿತ ಮತ್ತಿತರ ಸಂಗತಿಗಳು ಜರಗುವುದು ಲಿವಿಂಗ್‌ ರೂಮ್‌ನಲ್ಲಿ....

  • ಬೆಂಗಳೂರು: ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಆಧುನಿಕ ಸ್ಪರ್ಶ ಕೊಟ್ಟು, ಅವುಗಳನ್ನು ಓದುಗ ಸ್ನೇಹಿ ಮತ್ತು ಜನಸ್ನೇಹಿ ಜ್ಞಾನ ಕೇಂದ್ರಗಳನ್ನಾಗಿ ಮಾಡಲು ಗ್ರಾಮೀಣಾಭಿವೃದ್ಧಿ...