ಸರಕು ಸಾಗಣೆ ವಾಹನ ಸಂಚಾರ ಪರಿಶೀಲನೆ

•ರಾತ್ರಿ ಮಾತ್ರವಲ್ಲದೆ ಹಗಲು ಹೊತ್ತು ಅನುಮತಿ ನೀಡಲು ಚಿಂತನೆ: ಎಸ್ಪಿ

Team Udayavani, Jul 17, 2019, 5:30 PM IST

ಶಿವಮೊಗ್ಗ: ಜಿಲ್ಲಾ ಕೈಗಾರಿಕಾ ಸಂಘದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ: ಸವರ್‌ಲೈನ್‌ ರಸ್ತೆ, ಗಾರ್ಡನ್‌ ಏರಿಯಾ, ಓಟಿರಸ್ತೆ ಮುಂತಾದ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ದೊಡ್ಡ ಗಾತ್ರದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ರಾತ್ರಿ ಮಾತ್ರವಲ್ಲದೇ ಹಗಲಿನ ಕೆಲ ಹೊತ್ತು ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಎಂ. ಅಶ್ವಿ‌ನಿ ಭರವಸೆ ನೀಡಿದ್ದಾರೆ.

ಸೋಮವಾರ ತಮ್ಮನ್ನು ಭೇಟಿಯಾದ ಲಾರಿ ಮಾಲೀಕರ ಸಂಘ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಪದಾಧಿಕಾರಿಗಳ ನಿಯೋಗದೊಂದಿಗೆ ಚರ್ಚಿಸಿದ ಅವರು, ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಹಗಲಿನ ವೇಳೆ ಭಾರೀ ಗಾತ್ರದ ಸರಕು ಸಾಗಣೆ ವಾಹನಗಳಿಗೆ ಕೆಲವೆಡೆ ಪ್ರವೇಶ ನೀಡುತ್ತಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ವಲ್ಪ ಮಟ್ಟಿನ ವಿನಾಯಿತಿ ನೀಡಲು ಸಾಧ್ಯವೇ? ಎಂಬ ಬಗ್ಗೆ ಪರಿಶೀಲಿಸುತ್ತೇನೆ ಎಂದರು.

ಆದರೆ ಲಘು ಸರಕು ಸಾಗಣೆ ವಾಹನದಲ್ಲಿ ಹಮಾಲರನ್ನು ಕರೆದೊಯ್ಯಲು ಅನುಮತಿ ನೀಡುವುದು ಸಾಧ್ಯವಿಲ್ಲ. ಇದಕ್ಕೆ ಸುಪ್ರೀಂ ಕೋರ್ಟ್‌ ಆದೇಶ ಅವಕಾಶ ನೀಡುವುದಿಲ್ಲ. ನಾವು ಅನುಮತಿ ನೀಡಿ ನಂತರ ಏನಾದರೂ ಅವಘಡ ಸಂಭವಿಸದರೆ ಅದರ ಪರಿಣಾಮ ತೀರಾ ಗಂಭೀರವಾಗುತ್ತದೆ ಎನ್ನುವ ಮೂಲಕ ಲಾರಿ ಮಾಲೀಕರ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿದರು.

ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಿಗಳೂ ತಮ್ಮ ಉದ್ಯಮದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಅದು ರಾತ್ರಿ ಸಮಯದಲ್ಲೂ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇದರಿಂದ ಅಪರಾಧಗಳನ್ನು ತಡೆಗಟ್ಟುವ ಇಲ್ಲವೇ ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದರು.

ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಎಸ್‌.ಎಸ್‌. ಜ್ಯೋತಿಪ್ರಕಾಶ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿ.ಆರ್‌. ವಾಸುದೇವ್‌, ವಿಆರ್‌ಎಲ್ ಶಿವಮೊಗ್ಗ ವಿಭಾಗದ ಎ.ಜಿ.ಎಂ. ಆನಂದ್‌, ಪ್ರಮುಖರಾದ ಟಿ.ಆರ್‌. ಅಶ್ವತ್ಥನಾರಾಯಣ ಶೆಟ್ಟಿ, ಜಿ.ವಿಜಯಕುಮಾರ್‌, ವಸಂತ್‌ ಹೋಬಳಿದಾರ್‌, ಸಂದೀಪ್‌, ಲಕ್ಷ್ಮೀಕಾಂತ್‌, ಉಪಾಧ್ಯಕ್ಷ ಎಸ್‌.ಎಸ್‌. ಉದಯಕುಮಾರ್‌, ಡಿ.ಎಸ್‌. ಅರುಣ್‌, ಡಿ.ಎಂ. ಶಂಕರಪ್ಪ ಮತ್ತಿತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕುರುಗೋಡು: ಐಹಾಸಿಕ ಕ್ಷೇತ್ರ ಎಂಬ ಖ್ಯಾತಿ ಪಡೆದ ಕುರುಗೋಡು ನೂತನ ತಾಲೂಕಿನಲ್ಲಿ ಸರಿಯಾದ ಬಸ್‌ ನಿಲ್ದಾಣದ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಹಾಗೂ ಶಾಲಾ - ಕಾಲೇಜು...

  • ಬೀಳಗಿ: ಶೈಕ್ಷಣಿವಾಗಿ ಎತ್ತರಕ್ಕೆ ಬೆಳೆದರೂ ಕೂಡ, ಸಂಸ್ಕೃತಿ, ಪರಂಪರೆ ಮರೆಯಬಾರದು. ಅಕ್ಷರ ಜ್ಞಾನದ ಜತೆಗೆ ನೀತಿಯುತ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳು ಮುಖ್ಯವಾಗಿದೆ...

  • ಯಾದಗಿರಿ: ಜಿಲ್ಲಾಡಳಿತ ವತಿಯಿಂದ ಕಾಯಕ ಶರಣರ ಜಯಂತ್ಯೋತ್ಸವ ಕಾರ್ಯಕ್ರಮ ಫೆ. 21ರಂದು ಬೆಳಗ್ಗೆ 11:00ಕ್ಕೆ ಜಿಲ್ಲಾಡಳಿತ ಭವನದಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ ...

  • ರಾಯಚೂರು: ನಗರದಲ್ಲಿ ರವಿವಾರ ನಡೆದ ಚಿತ್ರಸಂತೆ ಉರಿಬಿಸಿಲಲ್ಲಿಯೂ ಕಲಾಸಕ್ತರ ಕಣ್ಮನ ತಣಿಸಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ತಮ್ಮ ಚಿತ್ರಕಲೆಗಳನ್ನು...

  • ವಿಜಯಪುರ: ವಿಜಯಪುರದಲ್ಲಿ ಸ್ಯಾಟ್‌ ಲೈಟ್‌ ಬಸ್‌ ನಿಲ್ದಾಣದಿಂದ ಸಂಚಾರ ದಟ್ಟಣೆ ಅತ್ಯಂತ ಕಡಿಮೆಯಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರದ...

ಹೊಸ ಸೇರ್ಪಡೆ