ಮಳೆ: ನದಿಗಳ ಹರಿವಿನಲ್ಲಿ ಹೆಚ್ಚಳ

Team Udayavani, Jul 7, 2019, 12:38 PM IST

ಶಿವಮೊಗ್ಗ: ಕೋರ್ಪಲಯ್ಯ ಮಂಟಪದ ಬಳಿ ತುಂಬಿ ಹರಿಯುತ್ತಿರುವ ತುಂಗಾ ನದಿ.

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 355.40 ಮಿಮೀ ಮಳೆಯಾಗಿದ್ದು, ಸರಾಸರಿ 50.77 ಮಿಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 687.87 ಮಿಮೀ ಇದ್ದು, ಇದುವರೆಗೆ ಸರಾಸರಿ 150.90 ಮಿಮೀ ಮಳೆ ದಾಖಲಾಗಿದೆ.

ಶಿವಮೊಗ್ಗ 34.20 ಮಿಮೀ, ಭದ್ರಾವತಿ 16.60 ಮಿಮೀ, ತೀರ್ಥಹಳ್ಳಿ 62.40 ಮಿಮೀ, ಸಾಗರ 37.00 ಮಿಮೀ, ಶಿಕಾರಿಪುರ 15.80 ಮಿಮೀ, ಸೊರಬ 27.00 ಮಿಮೀ ಹಾಗೂ ಹೊಸನಗರ 162.40 ಮಿಮೀ ಮಳೆಯಾಗಿದೆ.

ಶುಕ್ರವಾರದಿಂದ ಎಡಬಿಡದೆ ಜಿಲ್ಲಾದ್ಯಂತ ಮಳೆ ಸುರಿಯುತ್ತಿದ್ದು ಬಿತ್ತನೆ ಕಾರ್ಯ ಸ್ಥಗಿತಕೊಂಡಿದೆ. ಭತ್ತ ಸಸಿ ಮಡಿ ಬಿಡುವವರಿಗೆ ಅನುಕೂಲವಾಗಿದೆ. ಭದ್ರಾ, ತುಂಗಾ, ಮಾಲತಿ, ಶರಾವತಿ ನದಿಗಳಲ್ಲಿ ಒಳಹರಿವು ಹೆಚ್ಚಾಗಿದ್ದು ಶನಿವಾರ ಸಂಜೆ ತುಂಗಾ ನದಿಯಿಂದ 20 ಸಾವಿರ ಕ್ಯೂಸೆಕ್ಸ್‌ ಹೆಚ್ಚು ನೀರು ಹೊರಬಿಡಲಾಗಿತ್ತು.

ಹೊಸನಗರ ತಾಲೂಕಿನ ಮತ್ತೆಮನೆ ಗ್ರಾಪಂ ವ್ಯಾಪ್ತಿಯಲ್ಲಿ 70 ಮಿಮೀ, ಸಾಗರ ತಾಲೂಕಿನ ಕೆಳದಿ 64.50 ಮಿಮೀ, ಶಂಕರ್‌ ಶಾನ್‌ಭೋಗ್‌ 68 ಮಿಮೀ, ತೀರ್ಥಹಳ್ಳಿ ದೇಮಲಾಪುರ 64.50 ಮಿಮೀ, ಹೊಸನಗರ ನಿಟ್ಟೂರು ಗ್ರಾಪಂ 129 ಮಿಮೀ, 124 ಮಿಮೀ, ಆಗುಂಬೆ 71 ಮಿಮೀ, ಮೇಗರವಳ್ಳಿ 65.50 ಮಿಮೀ, ಆರಗ 66 ಮಿಮೀ, ನೆರತೂರು 65.50 ಮಿಮೀ ನೊಣಬೂರು 67.50 ಮಿಮೀ, ತೀರ್ಥಹಳ್ಳಿ 64.50 ಮಿಮೀ, ದೇವಂಗಿ 65 ಮಿಮೀ, ಹೊಸನಗರ ಹೆದ್ದಾರಿಪುರ 64.50 ಮಿಮೀ, ಸಿರಿವಂತೆ 65.50 ಮಿಮೀ, ಸಿರಿಗೆರೆ 66.50 ಮಿಮೀ, ಬೆಳ್ಳೂರು 65 ಮಿಮೀ, ಮೇಲಿನಬೆಸಿಗೆ 103 ಮಿಮೀ, ರಾಮಚಂದ್ರಾಪುರ 103 ಮಿಮೀ, ಕೊಡೂರು 70 ಮಿಮೀ, ಅಮೃತ 80.50 ಮಿಮೀ, ಹಾರೊಗುಳಿಗೆ 68 ಮಿಮೀ, ನಗರ 99.50 ಮಿಮೀ ಮಳೆಯಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ