ಕೂಡಲಿ ಮಠ ಅಭಿವೃದ್ಧಿಗೆ ಶ್ರಮ

ಮರುಕಳಿಸಿದ ಮೂಲ ಶಾರದಾಂಬಾ ಪೀಠದ ವೈಭವ: ವಿದ್ಯಾರಣ್ಯ ಸ್ವಾಮೀಜಿ

Team Udayavani, Jun 24, 2019, 4:40 PM IST

ಶಿವಮೊಗ್ಗ: ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್‌ ಅವರಿಂದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅಧಿಕಾರ ಪಡೆದರು.

ಶಿವಮೊಗ್ಗ: ಮುಂದಿನ ದಿನಗಳಲ್ಲಿ ಮಠದ ಅಭಿವೃದ್ಧಿಗೆ ಸರ್ಕಾರಗಳು ಕೈ ಜೋಡಿಸಿದರೆ ರಾಜ್ಯದಲ್ಲಿಯೇ ಒಂದು ಅತ್ಯುತ್ತಮ ಮಠವನ್ನಾಗಿ ನಿರ್ಮಿಸಲು ಶ್ರಮಿಸುವುದಾಗಿ ಕೂಡಲಿ- ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನದ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ತಿಳಿಸಿದರು.

ಶನಿವಾರ ಸಮೀಪದ ಕೂಡಲಿ ಮಠದಲ್ಲಿ ಸರ್ಕಾರದ ವತಿಯಿಂದ ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್‌ ಅವರಿಂದ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

ಈ ಮಠದಲ್ಲಿ ಮಾಡಬೇಕಾಗಿರುವ ಸಾಕಷ್ಟು ಅಭಿವೃದ್ಧಿ ಕೆಲಸಗಳಿದ್ದು, ಇಲ್ಲಿ ಪ್ರತಿನಿತ್ಯ ಅನ್ನದಾಸೋಹ ನಡೆಸಲು ಮೂರು ಮಹಲ್ನಲ್ಲಿ ಅನ್ನದಾನ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಈ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ಪ್ರವಾಸಿಗರಿಗೆ ತೊಂದರೆಯಾಗದಂತೆ ಪ್ರವಾಸಿ ಮಂದಿರವನ್ನು ನಿರ್ಮಾಣ ಮಾಡಲಾಗುವುದು. ಶಾರದಾಂಬೆಯ ಸನ್ನಿಧಿಗೆ ಅಕ್ಷರಾಭ್ಯಾಸಕ್ಕೆ ಬರುವ ಜನರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಹಿರಿಯ ಸ್ವಾಮೀಜಿ ಆಡಳಿತ ನಡೆಸುತ್ತಿದ್ದಾಗ ಕೆಲವರು ಇವರ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ಕಡತದಲ್ಲಿ ಸಹಿ ಹಾಕಿಸಿಕೊಂಡರು. ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ನಮ್ಮ ಸ್ವಾಧಿಧೀನದಲ್ಲಿರುವ ಮಠವನ್ನು ಸರ್ಕಾರಕ್ಕೆ ವಹಿಸುವ ಕೆಲಸವನ್ನು ಮಾಡಲಾಯಿತು. ಇದರಿಂದ ಕೋರ್ಟ್‌ಗೆ ಅಲೆಯುವಂತಾಯಿತು ಎಂದು ತಿಳಿಸಿದರು.

5 ರಿಂದ 6 ವರ್ಷಗಳ ಕಾಲ ಅಲೆದ ನಂತರ ಹೈಕೋರ್ಟ್‌ ನಮ್ಮ ಪರ ತೀರ್ಪು ನೀಡಿತು. ಆ ನಂತರ ಪುನಃ ಅವರು ಮೇಲ್ಮನವಿ ಸಲ್ಲಿಸಿದರು. ಒಂದು ವರ್ಷದ ಕಾಲದ ನಂತರ ಸರ್ಕಾರಕ್ಕೆ ವಹಿಸಲಾಯಿತು. ನಂತರ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಠವನ್ನು ತಮಗೆ ನೀಡುವಂತೆ ಅದೇಶಿಸಿದರು. ಹಿರಿಯ ಸ್ವಾಮೀಜಿ ನಿಧನ ಹೊಂದಿದ ಕಾರಣ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಬಹಳ ದಿನದ ಕನಸು ಯೋಗಾಯೋಗದಿಂದ ಈ ಕೆಲಸ ಸಿಕ್ಕಿದೆ. 13ನೇ ವಯಸ್ಸಿನಲ್ಲಿಯೇ ಇರುವಾಗಲೇ ನಾನು ಇಲ್ಲಿ ಬಂದು ಈ ಮಠದ ಉದ್ಧಾರಕ್ಕೆ ಶ್ರಮಿಸಬೇಕು ಎಂಬುದು ಹಿರಿಯ ಸ್ವಾಮೀಜಿ ಕನಸಾಗಿತ್ತು. ಅದು ಇಂದಿಗೆ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಮಠದ ಉದ್ಧಾರಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.

ಮೂಲ ಶಾರಾದಾಂಬಾ ಪೀಠದ ವೈಭವ ಮತ್ತೆ ಮರುಕಳಿಸಲಿದೆ. ಶಾರಾದಾಂಬ ದೇವಾಲಯದ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದೆ. ಸುಸಜ್ಜಿತ ಭೋಜನ ಶಾಲೆಯ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಯಾತ್ರಿ ನಿಲಯ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಂದಾಯ ನಿರೀಕ್ಷಕ ಎಚ್. ಸುರೇಶ್‌, ಭಾಗ್ಯ, ಮಂಜುನಾಥ, ಶ್ರೀನಿವಾಸ್‌ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಂಪ್ಲಿ: ತೀವ್ರ ಕುತೂಹಲ ಕೆರಳಿಸಿದ್ದ ಕಂಪ್ಲಿ ಪುರಸಭೆ ಫಲಿತಾಂಶ ಗುರುವಾರ ಹೊರಬಿದ್ದಿದ್ದು ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿ ಪುರಸಭೆ ಗದ್ದುಗೆಯನ್ನು ತನ್ನದಾಗಿಸಿಕೊಂಡರೆ,...

  • ಬೆಳಗಾವಿ: ಬಿಜೆಪಿ ಅಭ್ಯರ್ಥಿ ರಮೇಶ್‌ ಜಾರಕಿಹೊಳಿ ಕುತಂತ್ರಕ್ಕೆ ಬೆಳಗಾವಿ ಜಿಲ್ಲೆ ಬಲಿಯಾಗಿದೆ. ಅವನೊಬ್ಬ ಅವಕಾಶವಾದಿ ರಾಜಕಾರಣಿ ಎಂದು ಯಮಕನಮರಡಿ ಶಾಸಕ ಸತೀಶ್‌...

  • ಸುರಪುರ: ಸಮಾಜದಲ್ಲಿ ಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯ ಲೈಂಗಿಕ ಕಿರುಕುಳ, ಕಳ್ಳ ಸಾಗಾಟ ಅವ್ಯಾಹತವಾಗಿ ನಡೆದಿವೆ. ಇದನ್ನು ತಡೆಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ....

  • ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೈಗೊಂಡ ಕಾಮಗಾರಿಗಳ ಮಾಹಿತಿಯನ್ನು ಮಂಡಳಿ ವೆಬ್‌ಸೈಟ್‌ಗೆ ಕಾಲಕಾಲಕ್ಕೆ ಅಪ್‌ಡೇಟ್‌ ಮಾಡದಿದ್ದಲ್ಲಿ...

  • ಮಂಗಳೂರು: ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮವು ಕುದ್ಮುಲ್  ರಂಗರಾವ್ ಪುರಭವನದಲ್ಲಿ...

ಹೊಸ ಸೇರ್ಪಡೆ