ಬಿಎಸ್‌ವೈಗೆ ತಾಲೂಕಿನ ಅಭಿವೃದ್ಧಿಗೇ ಸಮಯವಿಲ್ಲ: ಎಚ್‌ಡಿಕೆ

Team Udayavani, Apr 18, 2019, 4:31 PM IST

ಶಿಕಾರಿಪುರ: ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರದ ಸಭೆಯನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು.

ಶಿಕಾರಿಪುರ: ತಾಲೂಕು ಸೇರಿದಂತೆ ಜಿಲ್ಲೆ ಬರಗಾಲದಿಂದ ತತ್ತರಿಸಿ ರೈತರ ಕಷ್ಟ ಪರಿಹಾರ ಮಾಡವ ಬದಲು ಮೈತ್ರಿ ಸರ್ಕಾರ ಕೆಡವಿ ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿಯಾಗುವ ಕನಸು ಹೊಂದಿ ಮುಂಬಯಿಯಲ್ಲಿ ಖಾಸಗಿ ಹೊಟೇಲ್‌ಗ‌ಳಲ್ಲಿ ರಾಜ್ಯದ ಶಾಸಕರನ್ನು ಮೂವತ್ತರಿಂದ ನಲವತ್ತು ಕೋಟಿ ರೂ. ಕೊಟ್ಟು ಖರೀದಿಸುವುದಕ್ಕೆ ಕೊಟ್ಟ ಸಮಯ ಯಡಿಯೂರಪ್ಪನವರಿಗೆ ಈಗ
ಶಿಕಾರಿಪುರ ತಾಲೂಕಿನ ಶಾಶ್ವತ ನೀರಾವರಿ ಅಭಿವೃದ್ಧಿ ವಿಚಾರದಲ್ಲಿ ಸಮಯ ಕೊಡುವುದಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.

ತಾಲೂಕು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರತೆಯಿಂದ ಕೂಡಿದೆ. ಯಡಿಯೂರಪ್ಪನವರು ನಮ್ಮ ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಸರ್ಕಾರಕ್ಕೆ ಕಿರುಕುಳ ನೀಡುತ್ತಿದ್ದಾರೆ. ರಾಜ್ಯದ ರೈತರ ಪರ ಕೆಲಸ ಮಾಡಲು ಅಡ್ಡಗಾಲು ಹಾಕುತ್ತಿದ್ದಾರೆ. ನಮ್ಮ ಮೈತ್ರಿ ಸರ್ಕಾರ ರಚನೆಯಾದ 24 ಗಂಟೆಯೊಳಗೆ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದೇವೆ.

ನಮ್ಮ ಸರ್ಕಾರ ರೈತರ ಪರವಾಗಿದೆ. ನಾನು ಈ ಬಾರಿ ಸಾಲಮನ್ನಾ ಮಾಡಿದ್ದರಲ್ಲಿ ಶಿಕಾರಿಪುರ ತಾಲೂಕಿನ ಸಹಕಾರಿ ಹಾಗೂ ನ್ಯಾಶನಲ್‌ ಬ್ಯಾಂಕ್‌ ಗಳ ರೈತರ ಸಾಲದ ಮೊತ್ತ 85 ಕೋಟಿ ರೂ.ಗಳು. ಆದರೆ ಯಡಿಯೂರಪ್ಪನವರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗೊಬ್ಬರ ಕೇಳಲು ಬಂದ ರೈತರ ಮೇಲೆ ಗೋಲೀಬಾರ್‌ ನಡೆಸಿದ ಕುಖ್ಯಾತಿ ಹೊಂದಿದ್ದು ಈಗ ನಮ್ಮ ವಿರುದ್ಧ ಆರೋಪಿಸುತ್ತಿದ್ದಾರೆ ಎಂದರು.

ನಾವು ರಾಜ್ಯಸರ್ಕಾರದ ಖಜಾನೆ ಖಾಲಿ ಮಾಡಿದ್ದೆವೆಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಇವರು ಶಿವಮೊಗ್ಗ ಜಿಲ್ಲೆ ಹಾಗೂ
ಶಿಕಾರಿಪುರ ತಾಲೂಕು ಅಭಿವೃದ್ಧಿಪಡಿಸಿದ್ದು ಇವರು ಅಭಿವೃದ್ಧಿಯಾಗಲು. ಈಗ ಮತ್ತೆ ಮುಖ್ಯಮಂತ್ರಿಯಾಗಲು ಹಂಬಲಿಸುತ್ತಿರುವುದು ಮತ್ತೆ ಅವರ ಕುಟುಂಬ ಅಭಿವೃದ್ಧಿಯಾಗಲು. ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ತಾಲೂಕಿನ ನೀರಾವರಿ ವಿಚಾರವಾಗಿ ಡಿ.ಕೆ. ಶಿವಕುಮಾರ್‌ ಬಳಿ
ಮನವಿ ಮಾಡಿದ್ದೇನೆಂದು ಸುಳ್ಳು ಹೇಳುತ್ತಾರೆ.

ಯಡಿಯೂರಪ್ಪನವರು ಡಿ.ಕೆ. ಶಿವಕುಮಾರ ಮನೆಗೆ ತೆರಳಿದಾಗ ಡೈರಿಯಲ್ಲಿನ ಮಾಹಿತಿಯನ್ನು ಪ್ರಸ್ತಾಪ ಮಾಡಬೇಡಿ ಎಂದು ತಿಳಿಸಿದ್ದರು ಎಂದು ಆರೋಪಿಸಿದರು. ತಾಲೂಕಿನ ಜನತೆಗೆ ಕೇಂದ್ರ ಸರ್ಕಾರದ ಹಣ ಮಂಜೂರು ಮಾಡಿಸಿ ನೀರಾವರಿ ಮಾಡಿಸುವುದಾಗಿ ಸುಳ್ಳು ಹೇಳುವ ನೀವು ತಾಲೂಕಿನ ಜನತೆಯಲ್ಲಿ
ಗೊಂದಲ ಮೂಡಿಸುತ್ತಿದ್ದೀರಿ. ಚುನಾವಣೆ ಮುಗಿದ ನಂತರ 6 ತಿಂಗಳ ಒಳಗೆ ಸಂಪೂರ್ಣ ನೀರಾವರಿ ಕಾಮಗಾರಿ ಮುಗಿಸಿ ಕೊಡುವುದಾಗಿ ಹೇಳಿದರು . ನಮ್ಮ ಸರ್ಕಾರದಿಂದ ಕೇವಲ ರೈತರಿಗಷ್ಟೇ ಅಲ್ಲದೆ ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದೇವೆ. ಸಿದ್ದರಾಮಯ್ಯನವರ ಸರ್ಕಾರದ ಯೋಜನೆಗಳು ಹಾಗೂ ನಮ್ಮ ಮೈತ್ರಿ ಸರ್ಕಾರದ ಯೋಜನೆಗಳು ಉತ್ತಮವಾಗಿದ್ದು ಅದನ್ನು ರಾಜ್ಯದ ಜನತೆ ಸದುಪಯೋಗ ಪಡೆಯಬೇಕು ಎಂದರು.

ಮಾಜಿ ಶಾಸಕರೊಬ್ಬರ ಹೇಳಿಕೆಗೆ ಪತ್ರಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಹೌದು ನಾವು ಮೋದಿಯವರ ತರಹ ಮುಖಕ್ಕೆ ವ್ಯಾಕ್ಸಿನ್‌, ಸೇಂಟ್‌, ಪೌಡರ್‌ ಮುಂತಾದವುಗಳನ್ನು
ಬಳಸುವುದಿಲ್ಲ. ನಾವು ಮುಟ್ಟಿ ಮಾತನಾಡುವ ಸಾರ್ವಜನಿಕರ ಕೈಗಳ ಬೇವರು ನಮಗೆ ಆಶೀರ್ವಾದವಿದ್ದಂತೆ. ಬೇರೆಯವರು
ಮುಟ್ಟಿದರೆ ಡೆಟಾಲ್‌ನಿಂದ ಕೈ ತೊಳೆಯುತ್ತಾರೆ ಎಂದು ಎದುರೇಟು ನೀಡಿದರು. ರಾಜ್ಯದಲ್ಲಿ ಮೇ 23ಕ್ಕೆ ಫಲಿತಾಂಶ 24 ಕ್ಕೆ ಯಡಿಯೂರಪ್ಪ ಸರ್ಕಾರ ರಚನೆಯೆಂದು ಯಾವ ಜೋತಿಷ್ಯಗಳ
ಬಳಿ ಸಮಯ ನಿಗದಿಪಡಿಸಿದ್ದಾರೆಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಉಚಿತ ಕರೆಂಟ್‌ ನೀಡಿದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವ ಪುತ್ರರಾದ ಮಧು ಬಂಗಾಪ್ಪನವರಿಗೆ ಈ ಬಾರಿ
ಆಶೀರ್ವದಿಸಿ ಎಂದು ಮನವಿ ಮಾಡಿದರು.

ನಂತರ ಮಾತನಾಡಿದ ಅಭ್ಯರ್ಥಿ ಮಧು ಬಂಗಾರಪ್ಪ, ತಾಲೂಕಿನಲ್ಲಿ ಬಂಗಾರಪ್ಪ ಅಭಿಮಾನಿಗಳು ಇದ್ದು ಈ ಬಾರಿ ನನಗೆ ಆಶೀವಾದ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯವರ
ಸಹಿ ಸುಳ್ಳು ನಡೆಯುವುದಿಲ್ಲ. ಕಳೆದ ಬಾರಿ 3.50.000 ಅಂತರದಿಂದ ಕೇವಲ 52 ಸಾವಿರಕ್ಕೆ ತಂದ ಜಿಲ್ಲೆಯ ಜನ ಈ ಬಾರಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು. ನನ್ನನ್ನು ಇಂಪೋರ್ಟೆಡ್‌ ಎಂದು ಹೇಳುವ ರಾಘವೇಂದ್ರ ಅವರನ್ನು ತಾಲೂಕಿನ ಜನ ಎಕ್ಸ್‌ಪೋರ್ಟ್‌ ಮಾಡಿ ಎಂದು ಹೇಳಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌. ಎಂ. ಮಂಜುನಾಥ ಗೌಡ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ. ಸುಂದರೇಶ್‌, ಕಾಡಾ ಮಾಜಿ ಅಧ್ಯಕ್ಷ ಮಹಾದೇವಪ್ಪ, ಮಾಜಿ ಶಾಸಕರಾದ ಶಾಂತವೀರಪ್ಪ ಗೌಡ, ಮಹಾಲಿಂಗಪ್ಪ, ಮುಖಂಡರಾದ ಗೋಣಿ ಮಾಲತೇಶ್‌,
ಎಚ್‌. ಟಿ. ಬಳಿಗಾರ್‌, ಮಾರವಳ್ಳಿ ಉಮೇಶ್‌, ಉಳ್ಳಿ ದರ್ಶನ್‌ ಮತ್ತಿತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

 • ಬೆಂಗಳೂರು: ಸಮಸ್ಯೆಗೆ ಸೂಚಿಸಿದ ಪರಿಹಾರವೇ ಸಮಸ್ಯೆಯಾಗಿ ಪರಿಣಮಿಸಿದರೆ ಏನಾಗಬಹುದು? ಇದನ್ನು ತಿಳಿಯಲು ನೀವು ಒಮ್ಮೆ ಕೆ.ಆರ್‌.ಪುರದ ಟಿನ್‌ ಫ್ಯಾಕ್ಟರಿ ರಸ್ತೆಯಲ್ಲಿ...

 • ಬೆಂಗಳೂರು: ರೈತರ ಸಮಸ್ಯೆ, ನೆಲ, ಜಲಕ್ಕೆ ಸಂಬಂಧಿಸಿದ ಕನ್ನಡ ಪರ ಹೋರಾಟಗಳ ಸಂದರ್ಭದಲ್ಲಿ ಚಿತ್ರರಂಗ ಒಂದಾಗುತ್ತದೆ ಎಂದು ಚಿತ್ರನಟ ಶಿವರಾಜ್‌ಕುಮಾರ್‌ ಹೇಳಿದರು. ಕನ್ನಡ...

 • ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲೂ ಪಕ್ಷ ಇಟ್ಟುಕೊಂಡಿದ್ದ ಗುರಿ ತಲುಪಲು ಶ್ರಮಿಸಿದ...

 • ಬೆಂಗಳೂರು: ಚುನಾವಣೆ ಫ‌ಲಿತಾಂಶ ಹೊರ ಬಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರ ಹಿಡಿದಿದೆ. ಈ ಸಂದರ್ಭದಲ್ಲಿ ದೇಶ, ರಾಜ್ಯ ಹಾಗೂ ನನ್ನ ಕ್ಷೇತ್ರದ...

 • ಬೆಂಗಳೂರು: ಬಿಬಿಎಂಪಿ ವತಿಯಿಂದ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವಷ್ಟರಲ್ಲಿ ಪೂರ್ಣಗೊಳಿಸುವಂತೆ ಮೇಯರ್‌ ಗಂಗಾಂಬಿಕೆ ಅಧಿಕಾರಿಗಳಿಗೆ...

ಹೊಸ ಸೇರ್ಪಡೆ

 • ಬ್ರಾಂಡ್‌ ಮೋದಿ..: ಮೋದಿ ಹೆಸರಲ್ಲಿ ದೇಶದಲ್ಲಿ ಏನು ಬೇಕಾದರೂ ಓಡುತ್ತದೆ ಎಂಬುದಕ್ಕೆ ಈ ಚುನಾವಣೆ ಮತ್ತೊಂದು ಉದಾಹರಣೆ. 2014ಕ್ಕಿಂತಲೂ ಈ ಬಾರಿ ದೇಶದ ಮತದಾರ ಹೆಚ್ಚಿನ...

 • ಭಾರತದ ರಾಜಕೀಯ ರಂಗದಲ್ಲಿ ಹೊಸ ಆಶಾಭಾವ ಮೂಡಿಸುವ ಮೂಲಕ 2013ರಲ್ಲಿ ಅಸ್ತಿತ್ವಕ್ಕೆ ಬಂದ ಆಮ್‌ ಆದ್ಮಿ ಪಕ್ಷ (ಎಎಪಿ), ಈ ಬಾರಿ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದೆ. 2013ರಲ್ಲಿ...

 • ಪ್ರಧಾನಿ ನರೇಂದ್ರ ಮೋದಿ ಭಾರತದ ಜನಮೆಚ್ಚಿದ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆ ವೈಯಕ್ತಿಕ ವರ್ಚಸ್ಸು ಹಾಗೂ ಜನಪ್ರಿಯತೆಯನ್ನು ರಾಜಕೀಯ ಜಯಭೇರಿಯಾಗಿ...

 • ಲೋಕಸಭೆ ಚುನಾವಣೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಕೆಲವು ಕಡೆ ಅನಿರೀಕ್ಷಿತ ಹಾಗೂ ಆಘಾತಕಾರಿ ಫ‌ಲಿತಾಂಶ ನೀಡಿದ್ದು, ರಾಜಕೀಯವಾಗಿ ಎಚ್ಚರಿಕೆ ಸಂದೇಶ ನೀಡಿದೆ....

 • ತುಮಕೂರು: ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರು, ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜ್‌ಗೆ...

 • ಚಾಮರಾಜನಗರ: ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸಂಸದ ಆರ್‌.ಧ್ರುವನಾರಾಯಣ ಅವರು ಅಭಿವೃದ್ಧಿ ಕೆಲಸಗಳಲ್ಲಿ ದೇಶದ ಮೂರನೇ ಮತ್ತು ರಾಜ್ಯದ ಮೊದಲನೇ ಸಂಸದ ಎಂಬ ಹೆಗ್ಗಳಿಕೆ...