15ರಲ್ಲಿ 8 ತಿಂಗಳು ಬರೀ ನೀತಿ ಸಂಹಿತೆ!

ಒಂದೂವರೆ ವರ್ಷದಲ್ಲಿ 5 ಚುನಾವಣೆ ಎದುರಿಸಿದ ಜಿಲ್ಲೆ  ನೀತಿ ಸಂಹಿತೆ ಅವಧಿಯಲ್ಲಿ ಕೆಲಸವೇ ಆಗಿಲ್ಲ

Team Udayavani, Apr 21, 2019, 10:18 AM IST

Udayavani Kannada Newspaper

ಶಿವಮೊಗ್ಗ: ಜಿಲ್ಲೆಯು 15 ತಿಂಗಳ ಅವಧಿಯಲ್ಲಿ ನಾಲ್ಕು ಚುನಾವಣೆಗೆ ಸಾಕ್ಷಿಯಾಗಿದೆ. ಪ್ರತಿ ಚುನಾವಣೆಯಲ್ಲೂ ಕನಿಷ್ಟ ಒಂದೂವರೆ ಎರಡು ತಿಂಗಳು ನೀತಿ ಸಂಹಿತೆ ಜಾರಿಯಾಗಿದ್ದರಿಂದ ಜಿಲ್ಲೆಯ
ಅಭಿವೃದ್ಧಿಗೆ ಗರ ಬಡಿದಿದೆ. ಈಗ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆಯು ಮೇ. 25ರವರೆಗೆ ಇರುವುದರಿಂದ ಒಟ್ಟು 15 ತಿಂಗಳ ಅವಧಿಯಲ್ಲಿ ಜಿಲ್ಲೆ 8 ತಿಂಗಳು ನೀತಿ ಸಂಹಿತೆ ಒಳಪಟ್ಟಿದೆ.

2018ನೇ ಮಾರ್ಚ್‌ ಕಡೇ ವಾರ ವಿಧಾನಸಭೆ ಚುನಾವಣೆಯಿಂದ ಆರಂಭವಾದ ನೀತಿ ಸಂಹಿತೆ ಜೂನ್‌ 13ಕ್ಕೆ ವಿಧಾನ ಪರಿಷತ್‌ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆವರೆಗೆ ಜಾರಿಯಲ್ಲಿತ್ತು. ಅದಾಗಿ ಒಂದೇ ತಿಂಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆಯ ನೀತಿ ಸಂಹಿತೆಯು ಜುಲೈ ಕಡೇ ವಾರದಿಂದ ಆಗಸ್ಟ್‌ ಕಡೆಯವರೆಗೆ ಜಾರಿಯಲ್ಲಿತ್ತು. ಅನಿರೀಕ್ಷಿತವಾಗಿ ಬಂದ ಲೋಕಸಭೆ ಚುನಾವಣೆಯ ನೀತಿ ಸಂಹಿತೆಯು ಅಕ್ಟೋಬರ್‌ ಮೊದಲ ವಾರದಿಂದ ನ.7ರವರೆಗೆ ಜಾರಿಯಲ್ಲಿತ್ತು. ನಾಲ್ಕು ತಿಂಗಳ ಬಳಿಕ ಮತ್ತೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆಯು ಮಾ.10ರಿಂದ ಜಾರಿಯಾಗಿದ್ದು ಮೇ 25ರವರೆಗೆ ಇರಲಿದೆ.

ನೀತಿ ಸಂಹಿತೆ ಅವ ಧಿಯಲ್ಲಿ ಯಾವುದೇ ಯೋಜನೆ ಘೋಷಣೆ, ಉದ್ಘಾಟನೆ, ಶಂಕುಸ್ಥಾಪನೆಗಳು ಇರುವುದಿಲ್ಲ. ಜತೆಗೆ ಯಾವುದೇ ಸ್ಥಳೀಯ ಸಂಘ-ಸಂಸ್ಥೆಗಳ ಸಭೆಗಳನ್ನು ನಡೆಸಲು ಅವಕಾಶ ಇರುವುದಿಲ್ಲ. ತುರ್ತು ಅವಶ್ಯಕತೆಗಳಾದ ಕುಡಿಯುವ ನೀರು, ಆರೋಗ್ಯ ವಿಷಯಗಳಿಗೆ ಮಾತ್ರ ನಿರ್ಧಾರ ಕೈಗೊಳ್ಳಲು ಜನಪ್ರತಿನಿಧಿಗಳಿಗೆ ಅವಕಾಶವಿರುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ಕುಂಠಿತಗೊಂಡಿವೆ. 2018ನೇ ಫೆಬ್ರವರಿಯಿಂದ ಇಲ್ಲಿವರೆಗೆ ತಾಪಂಗಳು ಮತ್ತು ಜಿಪಂನಲ್ಲಿ ಸಾಮಾನ್ಯ ಸಭೆಗಳು ಮತ್ತು ಕೆಡಿಪಿ ಸಭೆಗಳು ನಡೆದದ್ದು ಬಹಳ ಕಡಿಮೆ. ಪ್ರತಿ ತಿಂಗಳು ನಡೆಯಬೇಕಾದ ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಗಳನ್ನು ನಡೆಸಬೇಕಾದ ತಾಪಂ ಮತ್ತು ಜಿಪಂನಲ್ಲಿ ಈ ವರ್ಷ ಕನಿಷ್ಟ 5 ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಗಳನ್ನು ನಡೆಸಲಾಗಿಲ್ಲ. ಮಹಾನಗರ ಪಾಲಿಕೆ ಚುನಾವಣೆ ನಂತರ ಲೋಕಸಭೆ ಉಪಚುನಾವಣೆ ಬಂದಿದ್ದರಿಂದ ಅಧಿ ಕಾರ ಸ್ವೀಕಾರಕ್ಕೆ ಮೂರು ತಿಂಗಳು ಕಾಯಬೇಕಾಯಿತು. ಈಗ ಪಾಲಿಕೆ ಬಜೆಟ್‌ ಮಂಡನೆ ಮಾಡಿದ್ದು ಅದರ ಕಾಮಗಾರಿಗಳು ಏಪ್ರಿಲ್‌ನಿಂದ ಅನುಷ್ಠಾನಗೊಳ್ಳಬೇಕಿದೆ. ಅದಕ್ಕೂ ಮೇ 25ರವರೆಗೂ ಕಾಯಬೇಕಿದೆ!

ಈ ಮಧ್ಯೆ ಜಿಪಂನಲ್ಲಿ ಸ್ಥಾಯಿ ಸಮಿತಿ ಅಧಿಕಾರಕ್ಕಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆದು ಸುಮಾರು 9 ತಿಂಗಳ ಅಂದರೆ ನವೆಂಬರ್‌ ಕಡೆಯವರೆಗೆ ಸಾಮಾನ್ಯ ಸಭೆಯೇ ನಡೆದಿರಲಿಲ್ಲ. ಕಳೆದ 14 ತಿಂಗಳಲ್ಲಿ ಜಿಪಂನಲ್ಲಿ ನಡೆದಿರುವುದು ಕೇವಲ 3 ಸಾಮಾನ್ಯ ಸಭೆ. ಈಗ ಇನ್ನೂ ಮೂರು ತಿಂಗಳ ಸಭೆ ನಡೆಸಲು ಅವಕಾಶ ಇಲ್ಲದಂತಾಗಿದೆ.

ವಿಐಎಸ್‌ಎಲ್‌ ಗುತ್ತಿಗೆ ಕಾರ್ಮಿಕರಿಗೆ ತಿಂಗಳು ಪೂರ್ತಿ ಕೆಲಸ ಕೊಡಲು ಈಚೆಗೆ ಕೇಂದ್ರ ಉಕ್ಕು ಪ್ರಾಧಿಕಾರದಿಂದ ಅನುಮತಿ ದೊರೆತಿತ್ತು. ಆದರೆ ಅದು ಸಹ ಅನುಷ್ಠಾನವಾಗುವ ಲಕ್ಷಣಗಳಿಲ್ಲ. ನಗರ ಅನೇಕ ಕಡೆ ಆರಂಭವಾಗಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಸಹ ಸ್ಥಗಿತಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಬರ ಪರಿಹಾರ ಕಾಮಗಾರಿಗಳಿಗೆ ತುರ್ತು ಅನುಮೋದನೆ ಕೊಡುವಂತೆ ಜಿಪಂ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆದರೂ ಬಹುತೇಕ ಕಾಮಗಾರಿಗಳು ಇನ್ನೂ ಆರಂಭವಾಗಿರಲಿಲ್ಲ. ನೀತಿ ಸಂಹಿತೆ ಮುಗಿಯವವರೆಗೂ ಯಾವುದೇ ಯೋಜನೆಗಳು ಅನುಷ್ಠಾನಗೊಳ್ಳುವುದು ಅನುಮಾನ.

ಬರಲಿದೆ ಸ್ಥಳೀಯ ಸಂಸ್ಥೆ ಕದನ
ಲೋಕಸಭೆ ಚುನಾವಣೆ ನಂತರ ಶಿವಮೊಗ್ಗ ಮಹಾನಗರ ಪಾಲಿಕೆ ಹೊರತುಪಡಿಸಿ ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ ನಗರಸಭೆ, ಪುರಸಭೆ, ಪಪಂಗಳಿಗೆ ಚುನಾವಣೆ ಘೋಷಣೆಯಾಗಲಿದೆ. ಹಾಗಾಗಿ ಮುಂದಿನ 5 ತಿಂಗಳು ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ.

ಅಧಿಕಾರಿಗಳ ಚೆಲ್ಲಾಟ!
ಸರ್ಕಾರಿ ಯೋಜನೆಗಳ ಕುರಿತಂತೆ ನೀತಿಸಂಹಿತೆ ಅಡ್ಡಿಯಾದರೂ ಸಾರ್ವಜನಿಕರ ಕೆಲಸಗಳಿಗೂ ನೀತಿ ಸಂಹಿತೆ ಬಿಸಿ ತಾಗುತ್ತಿದೆ. ಅರ್ಜಿಗಳನ್ನು ಹಿಡಿದು ಕಚೇರಿಗೆ ಹೋಗುವ ಸಾರ್ವಜನಿಕರಿಗೆ ‘ಸಾಹೇಬರು ಚುನಾವಣಾ ಕರ್ತವ್ಯಕ್ಕೆ ಹೋಗಿದ್ದಾರೆ ನಾಳೆ ಬನ್ನಿ’ ಎಂಬ ಸಿದ್ಧ ಉತ್ತರ ಸಿಗುತ್ತಿವೆ. ಅನೇಕ ಅಧಿಕಾರಿಗಳು ಇದನ್ನೇ ನೆಪವಾಗಿಟ್ಟುಕೊಂಡು ಚುನಾವಣಾ ಕೆಲಸ
ಮುಗಿದರೂ ಕಚೇರಿಗೆ ಹಾಜರಾಗುತ್ತಿಲ್ಲ ಎಂಬ ದೂರುಗಳಿವೆ.

ಶರತ್‌ ಭದ್ರಾವತಿ

ಟಾಪ್ ನ್ಯೂಸ್

1-sdsadsa

ಕಂಚು ಗೆದ್ದರೂ ಕ್ಷಮೆಯಾಚಿಸಿದ ಪೂಜಾಗೆ ಪ್ರಧಾನಿ ಮೋದಿ ಸಾಂತ್ವನ

750

ಶಾಸಕ ಜಮೀರ್‌ ಅಹಮದ್‌ ವಿದೇಶಿ ಹೂಡಿಕೆ ಕೆದಕುತ್ತಿರುವ ಎಸಿಬಿ

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಕಾಮನ್‌ವೆಲ್ತ್‌ ಗೇಮ್ಸ್‌ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ

ಕಾಮನ್‌ವೆಲ್ತ್‌ ಗೇಮ್ಸ್‌ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ

22-gavanil

ಕಾಮನ್‌ವೆಲ್ತ್‌ ಗೇಮ್ಸ್‌ : 10,000 ಮೀ. ನಡಿಗೆ:  ಸಂದೀಪ್‌ಗೆ ಕಂಚು

21-meeting

ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಿರಲಿ; ನೀತಿ ಆಯೋಗದ ಸಭೆಯಲ್ಲಿ ಸಿಎಂಗಳ ಆಗ್ರಹ

ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್‌ ರಂಜನ್‌ ಸಿಂಗ್‌

ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್‌ ರಂಜನ್‌ ಸಿಂಗ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sad-ad

ಕೊರಟಗೆರೆ: ಅನಿಲ್‌ಕುಮಾರ್ ಸ್ಪರ್ಧಿಸದಂತೆ 2 ವರ್ಷ ನಿರ್ಬಂಧಕ್ಕೆ ಆಪ್ ಆಗ್ರಹ

18-visit

ಆರ್‌ಟಿಪಿಎಸ್‌ಗೆ ಕೆಪಿಸಿ ಎಂಡಿ ಶ್ರೀಕರ ಭೇಟಿ-ಪರಿಶೀಲನೆ

17-praveen

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

16DC

ಮಂಗಳೂರು: ಆ. 14ರ ವರೆಗೆ ಸೆಕ್ಷನ್‌ 144 ಮುಂದುವರಿಕೆ

15-loan

ಬೀದಿಬದಿ ವರ್ತಕರು ಸಾಲ ಸೌಲಭ್ಯ ಬಳಸಿಕೊಳ್ಳಿ

MUST WATCH

udayavani youtube

NEWS BULLETIN 08-08-2022

udayavani youtube

ಕಾಮನ್‌ವೆಲ್ತ್‌ ಪದಕ ವೀರ ಗುರುರಾಜ್‌ ಗೆ ಉಡುಪಿ ಜಿಲ್ಲಾಡಳಿತದಿಂದ ಸನ್ಮಾನ

udayavani youtube

ಮೈಸೂರು ದಸರಾ : ಮಳೆಯ ನಡುವೆಯೇ ಗಜ ಪಯಣಕ್ಕೆ ಸಂಭ್ರಮದ ಚಾಲನೆ…

udayavani youtube

ಮಳೆಗಾಲದಲ್ಲಿ ಇಲ್ಲಿ ಸತ್ತವರ ಅಂತಿಮ ಯಾತ್ರೆ ಮಾತ್ರ ನರಕಯಾತನೆ..

udayavani youtube

ಒಂದು ಮೂಟೆಯ ಗೊಬ್ಬರದ ದುಡ್ಡಿನಲ್ಲಿ ೧ವರ್ಷದ ಜೀವಾಮೃತ ತಯಾರು ಮಾಡಬಹುದು!

ಹೊಸ ಸೇರ್ಪಡೆ

1-asd-da-dsa

ಇಸ್ರೇಲ್‌ ಕಾರ್ಯಾಚರಣೆ: ಕ್ಷಿಪಣಿ ಹಾರಿಸಿ ಉಗ್ರ ಕಮಾಂಡರ್‌ ಹತ್ಯೆ

1-sdsadsa

ಕಂಚು ಗೆದ್ದರೂ ಕ್ಷಮೆಯಾಚಿಸಿದ ಪೂಜಾಗೆ ಪ್ರಧಾನಿ ಮೋದಿ ಸಾಂತ್ವನ

750

ಶಾಸಕ ಜಮೀರ್‌ ಅಹಮದ್‌ ವಿದೇಶಿ ಹೂಡಿಕೆ ಕೆದಕುತ್ತಿರುವ ಎಸಿಬಿ

1-adsdsa

ಪ್ಯಾರಾ ಟಿಟಿ: ಭವಿನಾ ಪಟೇಲ್‌ಗೆ ಚಿನ್ನ; ಸೋನಾಲ್‌ ಬೆನ್‌ಗೆ ಕಂಚು

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.