ಉಪಚುನಾವಣೆಯೆಂಬ ಟೆಸ್ಟ್‌ ಮ್ಯಾಚ್ ಆಡಿ ಒನ್‌ ಡೇ ಗೆದ್ದ ಕಮಲ ಪಾಳಯ!

ಉಪ ಚುನಾವಣೆ ನಡೆದ ಮೂರೂ ಕ್ಷೇತ್ರಗಳೂ ಈಗ ಬಿಜೆಪಿ ತೆಕ್ಕೆಗೆ

Team Udayavani, May 27, 2019, 2:58 PM IST

Udayavani Kannada Newspaper

ಶರತ್‌ ಭದ್ರಾವತಿ
ಶಿವಮೊಗ್ಗ:
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 25 ಕ್ಷೇತ್ರಗಳಲ್ಲಿ ಬಿಜೆಪಿಯ ಪ್ರಚಂಡ ಬಹುಮತಕ್ಕೆ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಿಗೆ 2018ರ ಅಕ್ಟೋಬರ್‌ ತಿಂಗಳಲ್ಲಿ ನಡೆದ ಉಪ ಚುನಾವಣೆಗಳೇ ಅಡಿಪಾಯವಾಯಿತೆ? ಇಂತಹದ್ದೊಂದು ವಿಶ್ಲೇಷಣೆ ಈಗ ನಡೆಯುತ್ತಿದೆ. ಉಪಚುನಾವಣೆಯೆಂಬ ಈ ಟೆಸ್ಟ್‌ ಮ್ಯಾಚ್‌ಗಳೇ ಬಿಜೆಪಿಗೆ ವರದಾನವಾಗಿದೆ. 2014ರಲ್ಲಿ 17 ಸ್ಥಾನ ಗೆದ್ದಿದ್ದ ಬಿಜೆಪಿ ಈಗ 25 ಸ್ಥಾನ ಗೆದ್ದು ದಾಖಲೆ ನಿರ್ಮಿಸಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಸಾರ್ವತ್ರಿಕ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗ ಉಪಚುನಾವಣೆ ಬೇಕಿತ್ತೇ ಎಂಬ ಪ್ರಶ್ನೆ ಮೂಡಿತ್ತು. ಅಲ್ಲದೆ ಇದಕ್ಕೆ ಆಕ್ಷೇಪವೂ ವ್ಯಕ್ತವಾಗಿತ್ತು. ಆದರೆ ಬಿಜೆಪಿ ಇದರ ಸಂಪೂರ್ಣ ಲಾಭ ಪಡೆಯಿತು. ಉಪ ಚುನಾವಣೆ ನಡೆದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಎರಡರಲ್ಲಿ ಮೈತ್ರಿಕೂಟ ಜಯ ಗಳಿಸಿತ್ತು. ಒಂದರಲ್ಲಿ ಬಿಜೆಪಿ ಗೆದ್ದಿತ್ತು. (ಗೆಲುವಿನ ಅಂತರ ಕಡಿಮೆಯಾಗಿತ್ತು). ಆದರೆ ಪ್ರಸ್ತುತ ಮೂರು ಕ್ಷೇತ್ರಗಳೂ ಬಿಜೆಪಿ ಪಾಲಾಗಿವೆ. ಉಪ ಚುನಾವಣೆಯಲ್ಲಿ 2 ಲಕ್ಷಕ್ಕೂ ಅಧಿಕ ಅಂತರದಿಂದ ಗೆದ್ದ ಕ್ಷೇತ್ರಗಳಲ್ಲಿ ಮೈತ್ರಿಕೂಟ ಹೀನಾಯವಾಗಿ ಸೋತಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ 52 ಸಾವಿರ ಅಂತರದಿಂದ ಗೆದ್ದಿದ್ದರೆ ಈಗ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದೆ. ಕೇವಲ ಆರು ತಿಂಗಳಲ್ಲಿ ಇಂತಹ ಗಮನಾರ್ಹ ಬದಲಾವಣೆ ಆಗಲು ಬಿಜೆಪಿಯ ಕಾರ್ಯತಂತ್ರವೇ ಕಾರಣವಾಗಿದೆ. ಉಪ ಚುನಾವಣೆ ನಡೆಯುವ ಬಗ್ಗೆ ಬಿಜೆಪಿಗೆ ಮೊದಲೇ ತಿಳಿದಿತ್ತು. ಹೀಗಾಗಿ ಶಿವಮೊಗ್ಗದಲ್ಲಿ ಉಪ ಚುನಾವಣೆ ಘೋಷಣೆಗೂ ಮುನ್ನವೇ ಪೂರ್ವತಯಾರಿ ನಡೆದಿದ್ದವು.

ತಳಮಟ್ಟದ ಕಾರ್ಯತಂತ್ರ: ಉಪ ಚುನಾವಣೆ ಎಂಬ ಕಾರಣಕ್ಕೆ ಯುವ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿರಲಿಲ್ಲ. ಜತೆಗೆ ಕಾರ್ಯಕರ್ತರಿಗೆ ಸಮಯ ಸಿಕ್ಕಿರಲಿಲ್ಲ. ಆದರೆ ಉಪ ಚುನಾವಣೆ ಫಲಿತಾಂಶ ಹೊರ ಬಿದ್ದ ದಿನದಿಂದಲೇ ಬಿಜೆಪಿ ಸಂಘಟನೆಗೆ ಒತ್ತು ನೀಡಿತ್ತು. ಆದರೆ ಎರಡು ಕ್ಷೇತ್ರ ಗೆದ್ದ ಹುಮ್ಮಸಿನಲ್ಲಿದ್ದ ಮೈತ್ರಿಕೂಟ ಮತ್ತೆ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಮೇಲೆ ಕ್ಷೇತ್ರದತ್ತ ಗಮನಹರಿಸಿತು.

ಯುವ ಮತದಾರರು ಮೋದಿಪರ ಒಲವು ಇಟ್ಟುಕೊಂಡಿದ್ದನ್ನು ಅರಿತ ಬಿಜೆಪಿ ಕಡ್ಡಾಯ ಮತದಾನಕ್ಕಾಗಿ ಹಗಲಿರುಳು ಶ್ರಮಿಸಿತು. ಬೆಂಗಳೂರಿನಲ್ಲಿ ನೆಲೆಸಿರುವ ಕ್ಷೇತ್ರದ ಮತದಾರರಿಗಾಗಿಯೇ ಸಮಾವೇಶವನ್ನೂ ಮಾಡಿ ಮತ ಯಾಚನೆ ಮಾಡಿತ್ತು. ಮತ ಹಾಕಲು ಬರುವವರಿಗೆ ಉಚಿತ ಬಸ್‌ ವ್ಯವಸ್ಥೆ ಸಹ ಮಾಡಿತ್ತು. ಪೇಜ್‌ ಪ್ರಮುಖರು ಕಡಿಮೆ ಮತ ಬಿದ್ದ ಬೂತ್‌ಗಳಲ್ಲಿ ಹೆಚ್ಚಿನ ಕೆಲಸ ಮಾಡಿ, ಕಳೆದ ಬಾರಿಗಿಂತ 10-20 ಮತ ಹೆಚ್ಚಿಗೆ ಬರುವಂತೆ ಕೆಲಸ ಮಾಡಿದೆ. ಜತೆಗೆ ಮೋದಿ ಟೀಮ್‌ ಸಹ ಮೂರು ತಿಂಗಳು ಮೊದಲೇ ಕ್ಷೇತ್ರದಲ್ಲಿ ಬೀಡುಬಿಟ್ಟು ಕೆಲಸ ಮಾಡಿತ್ತು. ಬಹಿರಂಗ ಸಮಾವೇಶಗಳಿಗೆ ಹೆಚ್ಚಿನ ಆದ್ಯತೆ ನೀಡದೆ ತಳಮಟ್ಟದ ಕಾರ್ಯತಂತ್ರಗಳಿಗೆ ಹೆಚ್ಚಿನ ಸಮಯ ನೀಡಿದ್ದು ನಿರೀಕ್ಷೆಗೂ ಮೀರಿ ಮತಗಳು ಬಿಜೆಪಿ ಪಾಲಾಗಿವೆ. ಟೆಸ್ಟ್‌ ಮ್ಯಾಚ್ ಬಿಜೆಪಿಗೆ ಯಾವ ಕಾರ್ಯತಂತ್ರ ಅನುಸರಿಸಬೇಕೆಂಬ ಸ್ಪಷ್ಟತೆ ನೀಡಿತ್ತು.

ಆಗ- ಈಗ: ಆರು ತಿಂಗಳ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ 543306 ಮತ ಪಡೆದು 52148 ಮತ ಅಂತರದಿಂದ ಗೆದ್ದಿದ್ದರು. ಬಳ್ಳಾರಿಯಲ್ಲಿ ಉಗ್ರಪ್ಪ 628635 ಮತ ಪಡೆದು 243161 ಮತ ಅಂತರದಿಂದ ಗೆದ್ದಿದ್ದರು. ಮಂಡ್ಯದಲ್ಲಿ ಜೆಡಿಎಸ್‌ನ ಶಿವರಾಮೇಗೌಡ 569347 ಮತ ಪಡೆದು 324943 ಮತಗಳ ಅಂತರದಿಂದ ಗೆದ್ದಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ರಾಘವೇಂದ್ರ 7.29,872 ಮತ ಪಡೆಯುವ ಮೂಲಕ 223360 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಳ್ಳಾರಿಯಲ್ಲಿ ಬಿಜೆಪಿಯ ವೈ. ದೇವೇಂದ್ರಪ್ಪ 616388 ಮತ ಪಡೆಯುವ ಮೂಲಕ 55707 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ 703660 ಮತ ಪಡೆಯುವ ಮೂಲಕ 125876 ಮತಗಳ ಅಂತರದಿಂದ ಗೆದ್ದಿದ್ದಾರೆ.

ನಾಯಕರ ಕಟ್ಟಿ ಹಾಕಲು ಯಶಸ್ವಿ
ಉಪ ಚುನಾವಣೆಯಲ್ಲಿ ಸಿಎಂ ಕುಮಾರಸ್ವಾಮಿ ಶಿವಮೊಗ್ಗ, ಮಂಡ್ಯ. ಡಿ.ಕೆ. ಶಿವಕುಮಾರ್‌ ಬಳ್ಳಾರಿ ಚುನಾವಣೆಯ ಪೂರ್ಣ ಜವಾಬ್ದಾರಿ ಹೊತ್ತಿದ್ದರು. ಆದರೆ ಈ ಬಾರಿ ಈ ಇಬ್ಬರೂ ನಾಯಕರು ಮಂಡ್ಯಕ್ಕೆ ಹೆಚ್ಚು ಸಮಯ ಕೊಟ್ಟಿದ್ದು ಸಹ ಬಿಜೆಪಿಗೆ ಪ್ಲಸ್‌ ಆಯಿತು. ಈ ಬಾರಿ ಡಿ.ಕೆ. ಶಿವಕುಮಾರ್‌ ಮಧು ಬಂಗಾರಪ್ಪ ಗೆಲ್ಲಿಸುವ ಜವಾಬ್ದಾರಿಯನ್ನು ಹೊತ್ತಿದ್ದರು. ಆದರೆ ಅವರಿಗೆ ಮಂಡ್ಯದ ಜತೆ ಶಿವಮೊಗ್ಗ, ಬಳ್ಳಾರಿಗೂ ಹೋಗಬೇಕಾದ್ದರಿಂದ ಹೆಚ್ಚು ಸಮಯ ಸಿಗಲಿಲ್ಲ. ಮಂಡ್ಯ ಚುನಾವಣೆ ಮೊದಲನೇ ಹಂತದಲ್ಲಿ ಇದ್ದಿದ್ದರಿಂದ ಅಲ್ಲಿನ ಚುನಾವಣೆ ಮುಗಿಸಿ ಇತ್ತ ಕಾಲಿಟ್ಟರು. ಆದರೆ ಅಷ್ಟರಲ್ಲಿ ಬಿಜೆಪಿ ತನ್ನ ಕೆಲಸ ಪೂರ್ಣಗೊಳಿಸಿತ್ತು. ಕೊನೆಯ ಎರಡು ದಿನ 15ಕ್ಕೂ ಹೆಚ್ಚು ಶಾಸಕರು, ಸಚಿವರು ಬಂದ ಕಾರಣ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರೆಲ್ಲ ಅವರ ಬೆನ್ನ ಹಿಂದೆ ಓಡಾಡಿಕೊಂಡು ಕಾಲ ಕಳೆದರು. ಜನರ ಮೂಡ್‌ ತಿಳಿಯುವಷ್ಟರಲ್ಲಿ ಮತದಾನವೇ ಮುಗಿದಿತ್ತು. ಕುಮಾರಸ್ವಾಮಿ ಕೊನೆ ಎರಡು ದಿನ ಶಿವಮೊಗ್ಗದಲ್ಲೇ ಉಳಿದರಾದರೂ ಬಹಿರಂಗ ಪ್ರಚಾರ ಮಾಡಲಿಲ್ಲ. ತಾಲೂಕುವಾರು ಮುಖಂಡರ ಸಭೆ ನಡೆಸಿದ್ದರು. ಅವರ ಕಾರ್ಯತಂತ್ರಗಳು ತಳ ತಲುಪಲು ಸಮಯವೇ ಇರಲಿಲ್ಲ.

ಟಾಪ್ ನ್ಯೂಸ್

jagadish shettar

ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್

ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿ ಹೋಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿ ಹೋಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

3yakshagana

ಯಕ್ಷಗಾನ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್ ನಿಧನ

2gold

ಮಂಗಳೂರು ವಿಮಾನ ನಿಲ್ದಾಣದಲ್ಲಿ 29,14,160 ಮೌಲ್ಯದ ಚಿನ್ನ ವಶ

thavarchand gahlot

ಸಮಾಜದ ದುರ್ಬಲ ವರ್ಗಗಳ ಏಳಿಗೆಗೆ ನನ್ನ ಸರ್ಕಾರ ಬದ್ಧ: ರಾಜ್ಯಪಾಲರ ಗಣರಾಜ್ಯೋತ್ಸವ ಸಂದೇಶ

1fire2

ಚಾರ್ಮಾಡಿ ಅರಣ್ಯದಲ್ಲಿ ಅಗ್ನಿ ಆಕಸ್ಮಿಕ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

ಬಿ.ಸಿ.ಪಾಟೀಲ್

ಸೆಲ್ಯೂಟ್ ಹೊಡೆಯುತ್ತಿದ್ದ ಮೈದಾನದಲ್ಲಿ ಗೌರವ ಸ್ವೀಕರಿಸಿದ್ದು ನನ್ನ ಭಾಗ್ಯ: ಬಿ.ಸಿ.ಪಾಟೀಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5democracy

ಮತದಾರರ ಕೈಯಲ್ಲಿದೆ ಸುಭದ್ರ ಪ್ರಜಾಪ್ರಭುತ್ವ

jagadish shettar

ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್

4——–

ಕಲಬುರಗಿ-ಬೆಂಗಳೂರು ರೈಲು ಶೀಘ್ರ ಆರಂಭ

3yakshagana

ಯಕ್ಷಗಾನ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್ ನಿಧನ

2gold

ಮಂಗಳೂರು ವಿಮಾನ ನಿಲ್ದಾಣದಲ್ಲಿ 29,14,160 ಮೌಲ್ಯದ ಚಿನ್ನ ವಶ

MUST WATCH

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

udayavani youtube

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

udayavani youtube

ಅಭಿಮಾನದಿಂದ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ ! ದಂಗಾದ ಅಭಿಮಾನಿ

udayavani youtube

ಮುತ್ತಿನ ಪ್ರಕರಣ : ಶಿಲ್ಪಾ ಶೆಟ್ಟಿಯನ್ನು ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್

udayavani youtube

ವಾಹನ ಸವಾರರ ಗೋಳು ಕೇಳುವವರು ಯಾರು

ಹೊಸ ಸೇರ್ಪಡೆ

ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ: ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ

ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ: ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ

5democracy

ಮತದಾರರ ಕೈಯಲ್ಲಿದೆ ಸುಭದ್ರ ಪ್ರಜಾಪ್ರಭುತ್ವ

jagadish shettar

ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್

4——–

ಕಲಬುರಗಿ-ಬೆಂಗಳೂರು ರೈಲು ಶೀಘ್ರ ಆರಂಭ

Untitled-1

ದೇಶದ ಉನ್ನತಿಗಾಗಿರುವ ಕಾನೂನುಗಳಿಗೆ ವಿರೋಧ ವಿಷಾಧನೀಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.