ಮಾಧ್ಯಮ ಮೌಲ್ಯ ಬೆಳೆಸಿ: ಪ್ರೊ| ಪಾಟೀಲ್

ಮಾಧ್ಯಮಗಳು ಋಣಾತ್ಮಕ ವಿಷಯಕ್ಕಿಂತ ಧನಾತ್ಮಕ ಅಂಶಗಳಿಗೆ ಆದ್ಯತೆ ನೀಡಲಿ

Team Udayavani, Jul 13, 2019, 4:01 PM IST

ಶಿವಮೊಗ್ಗ: ಕಾರ್ಯಾಗಾರವನ್ನು ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ| ಎಸ್‌.ಎಸ್‌. ಪಾಟೀಲ್ ಉದ್ಘಾಟಿಸಿದರು.

ಶಿವಮೊಗ್ಗ: ಮಾಧ್ಯಮ ಮೌಲ್ಯ ಬೆಳೆಸಬೇಕು ಎಂದು ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ| ಎಸ್‌.ಎಸ್‌. ಪಾಟೀಲ್ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಯುನಿಸೆಫ್‌, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಆಯೋಜಿಸಿದ್ದ ಅಭಿವೃದ್ಧಿ ಪತ್ರಿಕೋದ್ಯಮ ಹಾಗೂ ಹದಿ ಹರೆಯದ ಸಮಸ್ಯೆಗಳ ಕುರಿತ ವರದಿಗಾರಿಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹದಿ ಹರೆಯದ ವಯಸ್ಸೇ ವಿಚಿತ್ರವಾದದ್ದು. ಬೇಕು ಬೇಡವಾದದುನೆಲ್ಲಾ ಬಯಸುತ್ತವೆ. ಹದಿ ಹರಯದವರು ದೃಶ್ಯ ಮಾಧ್ಯಮದತ್ತ ಆಕರ್ಷಿತರಾಗುತ್ತಿದ್ದಾರೆ. ಮಾಧ್ಯಮಗಳು ಅವರನ್ನು ದಾರಿ ತಪ್ಪಿಸಬಾರದು. ಋಣಾತ್ಮಕ ವಿಷಯಕ್ಕಿಂತ ಧನಾತ್ಮಕ ವಿಷಯಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಮೌಲ್ಯಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ಮಾಧ್ಯಮಗಳಷ್ಟೇ ಅಲ್ಲದೇ ಪೋಷಕರ ಪಾತ್ರವು ಬಹಳ ಮುಖ್ಯ. ಮಕ್ಕಳ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಎಂತಹ ಚಲನಚಿತ್ರಗಳನ್ನು ನೋಡಬೇಕು ಮತ್ತು ಯಾವುದನ್ನು ನೋಡಬಾರದು ಎಂವ ಮಾರ್ಗದರ್ಶನ ಅತಿ ಮುಖ್ಯ. ಹದಿ ಹರೆಯದ ಮಕ್ಕಳಲ್ಲಿ ನೆಗೆಟಿವ್‌ ಚಿಂತನೆಗಳು ಬೇಗ ತಲುಪುತ್ತವೆ. ಹಾಗಾಗಿ ತುಂಬ ಎಚ್ಚರ ಅಗತ್ಯ. ಮಾಧ್ಯಮ ಕೂಡ ಇಂತಹ ಸಂದರ್ಭದಲ್ಲಿ ತನ್ನ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡು ಮಕ್ಕಳನ್ನು ಸತøಜೆಯನ್ನಾಗಿ ರೂಪಿಸಬೇಕು ಎಂದರು.

ಹೈದರಾಬಾದಿನ ಯುನೆಸೆಫ್‌ ದಕ್ಷಿಣಾ ಭಾರತ ನಿರ್ದೇಶಕ ಪ್ರಫುಲ್ ಸೇನ್‌ ಮಾತನಾಡಿ, ಹದಿಹರೆಯದ ಮಕ್ಕಳಲ್ಲಿ ಸಮಸ್ಯೆಗಳು ಹೆಚ್ಚು. ಪ್ರತಿಶತ 6ರಲ್ಲಿ ಒಬ್ಬರು ಹದಿಹರಯದವರು ಇರುತ್ತಾರೆ. ಶಿಕ್ಷಣಕ್ಕೆ ಆದ್ಯತೆ ನೀಡಲೇಬೇಕು. ಶಾಲೆಯಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಜೊತೆಗೆ ಆರೋಗ್ಯದ ಕಡೆ ಗಮನ ಹರಿಸಬೇಕು. ಹದಿಹರಯದ ಸಾಕಷ್ಟು ಮಕ್ಕಳು ಪೌಷ್ಟಿಕ ಆಹಾರದಿಂದ ವಂಚಿತರಾಗಿರುತ್ತಾರೆ ಎಂದ ಅವರು, ಬಾಲ್ಯ ವಿವಾಹ ಕೂಡ ಒಂದು ಶಾಪವಾಗಿದೆ. ಇದು ನಿಲ್ಲಬೇಕು ಎಂದರು.

ಕುವೆಂಪು ವಿವಿ ಸಹಾಯಕ ಪ್ರಾಧ್ಯಾಪಕ ಡಾ| ಸತ್ಯಪ್ರಕಾಶ್‌, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್‌. ಶಿವಕುಮಾರ್‌, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ, ಸಂಪನ್ಮೂಲ ವ್ಯಕ್ತಿ ವಾಸುದೇವ ಶರ್ಮ, ಪ್ರೀತಿ ನಾಗರಾಜ್‌, ವಿ.ಟಿ. ಅರುಣ್‌ ಮತ್ತಿತರರು ಇದ್ದರು.

ಸಂಯೋಜಕಿ ಡಾ| ಸ್ವಪ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯ ವಂದಿಸಿದರು. ನಂತರ ನಡೆದ ಕಾರ್ಯಾಗಾರದಲ್ಲಿ ಡಾ| ಶುಭ್ರತ್ತ, ಪ್ರೀತಿ ನಾಗರಾಜ್‌, ವಾಸುದೇವ ಶರ್ಮ ಉಪನ್ಯಾಸ ನೀಡಿದರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ