ಶರಾವತಿ ನೀರು ಬೆಂಗಳೂರಿಗೆ ಹರಿಸಲು ವ್ಯಾಪಕ ವಿರೋಧ

ಮಲೆನಾಡಿನ ಜೀವನದಿಗೆ ಕುತ್ತು ತಂದರೆ ಹುಷಾರ್‌: ಪ್ರತಿಭಟನಾಕಾರರ ಎಚ್ಚರಿಕೆ

Team Udayavani, Jul 6, 2019, 3:30 PM IST

ಶಿವಮೊಗ್ಗ: ಶರಾವತಿ ನೀರು ಬೆಂಗಳೂರಿಗೆ ಹರಿಸುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಪ್ರತಿಭಟನೆ ನಡೆಸಿತು.

ಶಿವಮೊಗ್ಗ: ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಹರಿಸುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಶುಕ್ರವಾರ ಕೂಡ ಮುಂದುವರಿಯಿತು. ಭಾರತೀಯ ವೈದ್ಯಕೀಯ ಸಂಘ ಮತ್ತು ಆಯುಷ್‌ ಫೆಡರೇಷನ್‌ ಆಫ್‌ ಇಂಡಿಯಾದ ವೈದ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಿದರು.

ಯಾವುದೇ ಕಾರಣಕ್ಕೂ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸಬಾರದು. ಈ ಯೋಜನೆಯೇ ಅವೈಜ್ಞಾನಿಕವಾಗಿದೆ. ಪರಿಸರದ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ. 12,500 ಕೋಟಿ ರೂ.ವೆಚ್ಚದ ಈ ಯೋಜನೆಯಿಂದ ಹೊರೆಯೂ ಆಗಲಿದೆ ಎಂದರು.

ಇದರ ಬದಲು ಬೆಂಗಳೂರಿನಲ್ಲಿಯೇ ಕೆರೆಗಳನ್ನು ಉಳಿಸಿ ಮಳೆ ನೀರು ಕೊಯ್ಲಿಗೆ ಆದ್ಯತೆ ನೀಡಿ. ಅಶುದ್ದ ನೀರು ಪರಿಷ್ಕರಣಾ ಘಟಕಗಳನ್ನು ಸ್ಥಾಪಿಸಿ ನೀರು ಕೊಡಲಿ. ಬೆಂಗಳೂರು ಬೆಳೆಯುವುದನ್ನು ತಪ್ಪಿಸಲಿ. ಅದು ಬಿಟ್ಟು ಮಲೆನಾಡಿನ ಜನರ ಬದುಕುವ ಹಕ್ಕನ್ನೇ ಕಸಿದುಕೊಂಡು ನೀರು ಕೊಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಡಾ| ಪಿ.ಕೆ. ಪೈ, ಡಾ| ಮಲ್ಲಿಕಾರ್ಜುನ ಕೊಪ್ಪದ್‌, ಡಾ| ಅರುಣ್‌, ಡಾ| ಶ್ರೀಧರ್‌ ಮತ್ತು ಆಯುಷ್‌ ಫೆಡರೇಷನ್‌ನ ಗುರುರಾಜ್‌, ಶಶಿಕಾಂತ್‌, ಶ್ರೀನಿವಾಸ ರೆಡ್ಡಿ, ಸಂತೋಷ್‌ ಕುಮಾರ್‌ ಮತ್ತಿತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ