ಜಡಿ ಮಳೆ: ಇಳಿದ ತುಂಗೆಯ ಅಬ್ಬರ

ಗ್ರಾಮಾಂತರ ಪ್ರದೇಶಗಳಲ್ಲಿ ಆಸ್ತಿ-ಪಾಸ್ತಿಗೆ ಹಾನಿ•ಪ್ರವಾಹಕ್ಕೆ ಕೊಚ್ಚಿ ಹೋದ ಕಾಲು ಸಂಕ

Team Udayavani, Aug 14, 2019, 2:57 PM IST

ಶೃಂಗೇರಿ: ಕಣ್‌ಕುಟ್ಲು ಅರುಣಕುಮಾರ್‌ ಮನೆ ಬಳಿ ಧರೆ ಕುಸಿದು ಮನೆಗೆ ಹಾನಿಯಾಗಿದೆ.

ಶೃಂಗೇರಿ: ಆಶ್ಲೇಷ ಮಳೆ ಎರಡು ದಿನ ಬಿಡುವು ನೀಡಿದ್ದು, ಸೋಮವಾರ ರಾತ್ರಿಯಿಂದ ಜಡಿ ಮಳೆ ಆರಂಭವಾಗಿದೆ.

ಮಂಗಳವಾರ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಆದರೆ, ಮೊದಲಿನ ಅಬ್ಬರ ಇಲ್ಲವಾಗಿದ್ದು, ತುಂಗಾ ನದಿಯ ನೀರು ಸಾಮಾನ್ಯ ಮಟ್ಟಕ್ಕೆ ಹರಿಯುತ್ತಿದ್ದು, ಮಳೆಯ ಪ್ರಮಾಣ ಹೆಚ್ಚಾದಲ್ಲಿ ಮತ್ತೆ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.

ನಿರಂತರ ಮಳೆಯಿಂದ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಕೆರೆ ಗ್ರಾಪಂನ ಬಾಳಗೆರೆ ಉಡ್ತಾಳ್‌ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾನಿಯಾಗಿದೆ. 40ಕ್ಕೂ ಹೆಚ್ಚು ಮನೆಗಳಿಗೆ ರಸ್ತೆ ಸಂಪರ್ಕ, ವಿದ್ಯುತ್‌ ಇಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಬಪ್ಪನಮಕ್ಕಿ, ಉಡ್ತಾಳ್‌, ಹಾರಂಗಲ್, ಕೋಳಿಬಿಳಲು, ಹೊಲ್ಮ, ಮಂಡಗಾರು ಹಳ್ಳಿಗಳ ಜನರು ಸಂಪರ್ಕ ಕಳೆದುಕೊಂಡಿದ್ದಾರೆ. ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯ ಕಣ್‌ಕುಟ್ಲು ಅರುಣಕುಮಾರ ಎಂಬುವವರ ಮನೆಗೆ ಧರೆ ಕುಸಿದು ಹಾನಿಯಾಗಿದೆ.

ಕೆರೆ ಗ್ರಾಪಂ ವ್ಯಾಪ್ತಿಯ ಹೊರಣೆ ಹಳ್ಳಕ್ಕೆ ಗ್ರಾಮಸ್ಥರೇ ನಿರ್ಮಿಸಿದ್ದ ಕಾಲು ಸಂಕ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದೆ. ಮಿನಿ ವಿಧಾನಸೌಧದ ಗುಡ್ಡ ಕುಸಿದಿದೆ. ಮಣ್ಣಿನೊಂದಿಗೆ ಗಿಡ-ಮರಗಳು ನೆಲಸಮವಾಗಿವೆ. ಚೀಪಗೋಡು ಕೃಷ್ಣಪ್ಪ ಅವರ ಮನೆಯ ಕೊಟ್ಟಿಗೆ ಗೋಡೆ ಭಾರೀ ಮಳೆಗೆ ಕುಸಿದಿದೆ. ಕೂತಗೋಡು ಗ್ರಾಪಂ ವ್ಯಾಪ್ತಿಯ ಕೊಡ್ತಲು ಅಂಗನವಾಡಿ ಕೇಂದ್ರದ ಮೇಲೆ ಮರ ಬಿದ್ದು ಮೇಲ್ಚಾವಣಿಗೆ ಹಾನಿಯಾಗಿದೆ. ಮಾರನಕೊಡಿಗೆ ರಸ್ತೆಯಿಂದ ಚೀಪಗೋಡು ರಸ್ತೆಗೆ ತೀವ್ರ ಹಾನಿಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ