Udayavni Special

ಗುತ್ತಿಗೆದಾರರಿಗೆ ಹಣ ನೀಡದೇ ದುರ್ಬಳಕೆ

ಎರಡು ತಿಂಗಳಿಗೊಮ್ಮೆ ಸಭೆ ಕರೆಯುವಂತೆ ತಾಪಂ ಜೆಡಿಎಸ್‌ ಸದಸ್ಯರ ಆಗ್ರಹ • ಪ್ರಗತಿ ಪರಿಶೀಲನಾ ಸಭೆ ಬಹಿಷ್ಕಾರ

Team Udayavani, Aug 1, 2019, 3:51 PM IST

1-Agust-38

ಶ್ರೀನಿವಾಸಪುರ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜೆಡಿಎಸ್‌ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು

ಶ್ರೀನಿವಾಸಪುರ: ಎರಡು ತಿಂಗಳಿಗೊಮ್ಮೆ ಸಭೆ ನಡೆಸು ವುದಾದರೆ ನಡೆಸಿ, ವರ್ಷಕ್ಕೊಮ್ಮೆ ಮಾಡುವು ದಾದ್ರೆ ನಾವು ಬರಲ್ಲ, ಗುತ್ತಿಗೆದಾರರಿಗೆ ನೀಡದೇ ಅಧಿಕಾರಿ ಗಳು ದುರುಪಯೋಗ ಮಾಡಿರುವ ಹಣ ವಾಪಸ್‌ ಕಟ್ಟಿಸಿ, ಸಭೆ ನಿಗದಿ ಮಾಡಿದರೆ ಮಾತ್ರ ಈಗಿನ 2 ಕೋಟಿ ರೂ. ಕ್ರಿಯಾಯೋಜನೆಗೆ ಸಮ್ಮತಿಸುತ್ತೇವೆ ಎಂದು ಪ್ರತಿಪಕ್ಷ ಸದಸ್ಯರು ತಾಪಂ ಪ್ರಗತಿ ಪರಿಶೀಲನಾ ಸಭೆ ಬಹಿಷ್ಕರಿಸಿದ ಘಟನೆ ನಡೆಯಿತು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧ ವಾರ ಅಧ್ಯಕ್ಷ ಕೆ.ಎಂ.ನರೇಶ್‌ ಅಧ್ಯಕ್ಷತೆಯಲ್ಲಿ 11 ಗಂಟೆಗೆ ಕರೆದಿದ್ದ ಪ್ರಗತಿ ಪರಿಶೀಲನೆ ಮತ್ತು ಸಾಮಾನ್ಯ ಸಭೆಗೆ, 12 ಗಂಟೆಗೆ ಜೆಡಿಎಸ್‌ ಉಪಾಧ್ಯಕ್ಷರು ಮತ್ತು ಸದಸ್ಯರು ಬಂದರು. ಬಂದ ತಕ್ಷಣ ಸದಸ್ಯ ಎಸ್‌.ಎನ್‌.ಮಂಜುನಾಥ್‌ ನಾವು 10 ಸದಸ್ಯರು ಇದ್ದೇವೆ. ಅಧ್ಯಕ್ಷರು ಸಭೆಗೆ ನೀವು ಒಬ್ಬರು ಬನ್ನಿ ಎಂದು ಕರೆದಿ ದ್ದೀರಲ್ಲಾ ನಾವು ಅಗತ್ಯವಿಲ್ಲದಿದ್ದರೆ ನಮಗಾಗಿ ಸಭೆ ಯಲ್ಲಿ ಕಾಯುವುದೇನಿದೆ ಎಂದು ಅಧ್ಯಕ್ಷ ಕೆ.ಎಂ. ನರೇಶ್‌ರನ್ನು ತರಾಟೆಗೆ ತೆಗೆದುಕೊಂಡರು. ಆಗ ನಾನು ಎಲ್ಲರಿಗೂ ಕರೆ ಮಾಡಿದ್ದೇನೆ. ನಾನು ಯಾರನ್ನೂ ಬಿಟ್ಟಿಲ್ಲ ಎಂದು ಅಧ್ಯಕ್ಷರು ಸಮುಜಾಯಿಷಿ ನೀಡಿ ಸಮಾಧಾನ ಮಾಡಿದರು.

ಸುಳ್ಳು ಮಾಹಿತಿ ನೀಡಬೇಡಿ: ತಾಪಂ ಇಒ ಆನಂದ್‌ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಈ ಹಿಂದೆ ನಡೆದಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ 97 ನಡೆದು 85.5 ಲಕ್ಷ ರೂ. ವೆಚ್ಚವಾಗಿ, 12.50 ಲಕ್ಷ ರೂ. ಉಳಿದಿದೆಯೆಂದು ತಿಳಿಸಿದರು. ಇದೇ ವೇಳೆ ಪ್ರತಿಪಕ್ಷ ಸದಸ್ಯ ಮಂಜುನಾಥರೆಡ್ಡಿ, ಜಿಪಂ ಎಇಇ ಅಪ್ಪಿರೆಡ್ಡಿ ಅವರಿಂದ ಮಾಹಿತಿ ಪಡೆದು, ಇನ್ನು 4.50 ಲಕ್ಷ ರೂ. ಮಾತ್ರ ಉಳಿದಿದೆ. ನೀವು ನೋಡಿದರೆ 12.50 ಲಕ್ಷ ರೂ. ಎಂದು ಸುಳ್ಳು ಮಾಹಿತಿ ನೀಡಲಾಗುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಗುಮಾಸ್ತಗೆ ತರಾಟೆ: ಮಧ್ಯೆ ಪ್ರವೇಶಿಸಿದ ಗುಮಾಸ್ತ ಮಂಜುನಾಥ್‌, ಅಷ್ಟೇ ಉಳಿದಿದೆ ಎಂದು ಸಮರ್ಥಿಸಿಕೊಂಡಾಗ ಕಾಮಗಾರಿಗಳು ಮುಗಿಸಿದ್ದರೂ ಗುತ್ತಿಗೆದಾರರಿಗೆ 2 ತಿಂಗಳಿಂದ ಹಣ ಕೊಡದೇ ಸತಾಯಿಸಲಾಗುತ್ತಿದೆ. ಇರುವ ಹಣವೆಲ್ಲ ಖಾಲಿಯಾಗಿದೆ. ಗುತ್ತಿಗೆದಾರರಿಗೆ ಮಾತ್ರ ಹಣ ಸೇರಿಲ್ಲ, ನೀವೇ ಡ್ರಾ ಮಾಡಿ ಮುಗಿಸಿದ್ದೀರೆಂದು ಗುಮಾಸ್ತ ಮಂಜುನಾಥ್‌ರನ್ನು ತರಾಟೆಗೆ ತೆಗೆದುಕೊಂಡಾಗ, ಆಗಿನ ಇಒ 10 ಲಕ್ಷ ರೂ.ಒಂದೇ ಗ್ರಾಮದ ಹೆಸರಲ್ಲಿ ಡ್ರಾ ಮಾಡಿಸಿದ್ದಾರೆಂದು ಸಮಜಾಯಿಷಿ ನೀಡಿದರು.

ಅನುದಾನ ಕೊಟ್ಟಿಲ್ಲ: ಪಶು ಸಂಗೋಪನ ಇಲಾಖೆಯ ಮಾಹಿತಿ ಪ್ರಗತಿ ಪರಿಶೀಲನಾ ಕೈಪಿಡಿಯಲ್ಲಿ ಮೊದಲ ಪೇಜ್‌ನಲ್ಲಿ ಮುದ್ರಣವಾಗಿದ್ದ ಮಾಹಿತಿಯನ್ನು ಪಡೆದ ಆಡಳಿತ ಪಕ್ಷ ಸದಸ್ಯ ಶ್ರೀನಿವಾಸ್‌, ನಿಮ್ಮನ್ನು ಎಷ್ಟು ಸಲ ಕೇಳಿದರೂ ಮೂರ್ನಾಲ್ಕು ಮಂದಿಗೆ ಮಾತ್ರ ಅನುದಾನ ಬಂದಿದೆ ಎಂದು ಹೇಳಿ ವಿವಿದ ಯೋಜನೆಗಳಿಂದ ಕುರಿ, ಹಂದಿ, ಮೇಕೆ, ಜಾನುವಾರುಗಳ ಅಭಿವೃದ್ಧಿಗೆ 6 ಕೋಟಿ ರೂ. ವಿನಿಯೋಗವಾಗಿದೆ. ಅದರಲ್ಲೂ ನಿಮ್ಮ ಸ್ವಂತ ಗ್ರಾಮ ಗೌಡದೇನಹಳ್ಳಿಗೆ ಹೆಚ್ಚು ಫ‌ಲಾನುಭವಿಗಳನ್ನು ಆಯ್ಕೆ ಮಾಡಿ ಅನುದಾನ ನೀಡಲಾಗಿದೆ ಎಂದು ಡಾ.ಸತ್ಯನಾರಾಯಣ ಅವರನ್ನು ತರಾಟೆಗೆ ತೆಗೆದುಕೊಂಡಾಗ, ಶಾಸಕರು ಹೇಳಿದವರಿಗೆ ಕೊಟ್ಟಿದ್ದೇನೆಂದು ಹಾರಿಕೆ ಉತ್ತರ ನೀಡಿದರು. ಇದಕ್ಕೆ ಕುಪಿತಗೊಂಡ ವಿರೋಧ ಪಕ್ಷದ ಸದಸ್ಯ ಕೃಷ್ಣಾರೆಡ್ಡಿ, ನಾವು ಜನಪ್ರತಿನಿಧಿಗಳೇ ಆಗಿದ್ದೇವೆ. ನಮ್ಮ ಮನೆಗಳಿಗೆ ಕೇಳಿಲ್ಲ. ನಾವು ಕೇಳಿದಾಗ ಯಾಕೆ ತಿಳಿಸಿಲ್ಲವೆಂದು ಪ್ರಶ್ನಿಸಿ ಕಿಡಿಕಾರಿದರು. ಇದಕ್ಕೆ ಅಧ್ಯಕ್ಷರು ದನಿಗೂಡಿಸಿ ಸದಸ್ಯರ ಗಮನಕ್ಕೆ ತರಬೇಕೆಂದು ಸಲಹೆ ನೀಡಿದರು.

ಉಳಿಕೆ ಹಣ ವಾಪಸ್‌ ತರಿಸಿ: ಅಧ್ಯಕ್ಷರು ಕ್ರಿಯಾ ಯೋಜನೆಗೆ ಪಟ್ಟು ಹಿಡಿದಾಗ ಹಿಂದಿನ ಬಾಕಿ ಬಿಲ್ಲು ಗಳು ಬಿಡುಗಡೆ ಮಾಡಿ, ಉಳಿಕೆ ಹಣದ ಚೆಕ್‌ಗಳನ್ನು ವಾಪಸ್‌ ತರಿಸಿ ನಂತರ ಸಭೆ ಕರೆಯಿರಿ. ನನಗೆ 3 ವರ್ಷದಿಂದ ಗೌರವಧನ ಕೊಟ್ಟಿಲ್ಲ. ನಾವು ಸುತುರಾಂ ಸಭೆಗೆ ಬರುವುದಿಲ್ಲವೆಂದು ಖಡಕ್ಕಾಗಿ ಹೇಳಿ ಸಭೆ ಯಿಂದ ಹೊರನಡೆದು ವಿರೋಧ ಪಕ್ಷದ ಕಚೇರಿಯಲ್ಲಿ ಕುಳಿತುಕೊಂಡಾಗ ಅಲ್ಲಿಗೂ ಸಭೆಯ ಹಾಜರಾತಿ ಪುಸ್ತಕವನ್ನು ಗುಮಾಸ್ತ ತೆಗೆದುಕೊಂಡು ಹೋದಾಗ ಆಗಿರುವ ಲೋಪ ಸರಿಪಡಿಸಿ ಸಭೆ ಕರೆದರೆ ಮಾತ್ರ ನಾವು ಸಹಿ ಹಾಕುತ್ತೇವೆ. ಇಲ್ಲವಾದರೆ ನಿಮಗೆ ಬಹು ಮತ ಇದ್ದರೆ ಕ್ರಿಯಾಯೋಜನೆ ಅನುಮೋದನೆ ನೀಡಿ ಎಂದು ಹೇಳಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯದಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ‘ಧಮ್’ ಇದೆಯಾ? ನಿರ್ಮಲಾ, ನಳಿನ್ ಗೆ ಸಿದ್ದರಾಮಯ್ಯ

ರಾಜ್ಯದಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ‘ಧಮ್’ ಇದೆಯಾ? ನಿರ್ಮಲಾ, ನಳಿನ್ ಗೆ ಸಿದ್ದರಾಮಯ್ಯ

ಗುಡಿಸಲು ತೆರವು ಮಾಡಲು ಬಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ: ಆರೋಪಿ ಪರಾರಿ

ಗುಡಿಸಲು ತೆರವು ಮಾಡಲು ಬಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ: ಆರೋಪಿ ಪರಾರಿ

ಕೋವಿಡ್ ನಂತೆ ಜಾನುವಾರುಗಳಲ್ಲಿ ಹರಡುತ್ತಿದೆ ಸೋಂಕು: ಮಲೆನಾಡಿನಲ್ಲಿ ಚರ್ಮಗಂಟು ರೋಗ ಭೀತಿ

ಕೋವಿಡ್ ನಂತೆ ಜಾನುವಾರುಗಳಲ್ಲಿ ಹರಡುತ್ತಿದೆ ರೋಗ: ಮಲೆನಾಡಿನಲ್ಲಿ ಚರ್ಮಗಂಟು ರೋಗ ಭೀತಿ

ಹತ್ತು ವರ್ಷಗಳ ಕಾಲ ಬಿಹಾರ ಅಭಿವೃದ್ದಿಗೆ ಯುಪಿಎ ಸರ್ಕಾರದಿಂದ ಅಡ್ಡಿ: ಪ್ರಧಾನಿ ಮೋದಿ

ಹತ್ತು ವರ್ಷಗಳ ಕಾಲ ಬಿಹಾರ ಅಭಿವೃದ್ದಿಗೆ ಯುಪಿಎ ಸರ್ಕಾರದಿಂದ ಅಡ್ಡಿ: ಪ್ರಧಾನಿ ಮೋದಿ

ಕಾಲೇಜು ಆರಂಭಕ್ಕೆ ದಿನ ನಿಗದಿ: ನವೆಂಬರ್ 17ರಿಂದ ಕಾಲೇಜು ಆರಂಭಕ್ಕೆ ಸರ್ಕಾರ ಸಜ್ಜು

ಕಾಲೇಜು ಆರಂಭಕ್ಕೆ ದಿನ ನಿಗದಿ: ನವೆಂಬರ್ 17ರಿಂದ ಕಾಲೇಜು ಆರಂಭಕ್ಕೆ ಸರ್ಕಾರ ಸಜ್ಜು

BNG-TDY-1

ಆರ್‌.ಆರ್‌.ನಗರದಲ್ಲಿ ಮರ್ಡರ್‌ ಸಾಧ್ಯತೆ : ಬಿಜೆಪಿ ಅಭ್ಯರ್ಥಿ ಮುನಿರತ್ನ ಕಳವಳ

ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಚರ್ಚೆ: ಭಾರತದ ವಿರುದ್ಧ ಟ್ರಂಪ್ ಆರೋಪವೇನು?

ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಚರ್ಚೆ: ಭಾರತದ ವಿರುದ್ಧ ಟ್ರಂಪ್ ಆರೋಪವೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಡಿಸಲು ತೆರವು ಮಾಡಲು ಬಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ: ಆರೋಪಿ ಪರಾರಿ

ಗುಡಿಸಲು ತೆರವು ಮಾಡಲು ಬಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ: ಆರೋಪಿ ಪರಾರಿ

ಕೋವಿಡ್ ನಂತೆ ಜಾನುವಾರುಗಳಲ್ಲಿ ಹರಡುತ್ತಿದೆ ಸೋಂಕು: ಮಲೆನಾಡಿನಲ್ಲಿ ಚರ್ಮಗಂಟು ರೋಗ ಭೀತಿ

ಕೋವಿಡ್ ನಂತೆ ಜಾನುವಾರುಗಳಲ್ಲಿ ಹರಡುತ್ತಿದೆ ರೋಗ: ಮಲೆನಾಡಿನಲ್ಲಿ ಚರ್ಮಗಂಟು ರೋಗ ಭೀತಿ

bng-tdy-3

ಪುರಸಭೆ, ಪಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಹೈಕೋರ್ಟ್‌ ಅಸ್ತು

bng-tdy-2

ಸಮರ್ಥ ಎದುರಾಳಿ ಇದ್ದರೆ ಯುದ್ಧ

BNG-TDY-1

ಆರ್‌.ಆರ್‌.ನಗರದಲ್ಲಿ ಮರ್ಡರ್‌ ಸಾಧ್ಯತೆ : ಬಿಜೆಪಿ ಅಭ್ಯರ್ಥಿ ಮುನಿರತ್ನ ಕಳವಳ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

suchitra-tdy-5

ಶೂಟಿಂಗ್‌ ಮುಗಿದ ಬಳಿಕ ಕಾರ್ಮಿಕರಿಗೆ ವಿಶೇಷ ಉಡುಗೊರೆ ಕೊಟ್ಟ ಧನಂಜಯ್‌

suchitra-tdy-4

ಓಲ್ಡ್‌ ಮಾಂಕ್‌ ಬಹುತೇಕ ಪೂರ್ಣ

ರಾಜ್ಯದಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ‘ಧಮ್’ ಇದೆಯಾ? ನಿರ್ಮಲಾ, ನಳಿನ್ ಗೆ ಸಿದ್ದರಾಮಯ್ಯ

ರಾಜ್ಯದಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ‘ಧಮ್’ ಇದೆಯಾ? ನಿರ್ಮಲಾ, ನಳಿನ್ ಗೆ ಸಿದ್ದರಾಮಯ್ಯ

ಎವರು ಇವರು! ಥ್ರಿಲ್ಲರ್‌ ಕಥೆಯಲ್ಲಿ ದಿಗಂತ್‌-ಹರಿಪ್ರಿಯಾ

ಎವರು ಇವರು! ಥ್ರಿಲ್ಲರ್‌ ಕಥೆಯಲ್ಲಿ ದಿಗಂತ್‌-ಹರಿಪ್ರಿಯಾ

suchitra-tdy-2

ಕಿರುತೆರೆಯಿಂದ ಹಿರಿತೆರೆಗೆ ಮೇಘಾ ಸಿನಿ ರೈಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.